ಶಾಲೆಯಲ್ಲಿ ಮಾತನಾಡುವ ಗೊಂಬೆ ಕಾರ್ಯಕ್ರಮ
Team Udayavani, Nov 18, 2021, 1:49 PM IST
ನಂಜನಗೂಡು: ತಾಲೂಕಿನ ಹಳ್ಳದಕೇರಿ ಸರ್ಕಾರಿ ಶಾಲೆಯಲ್ಲಿ ಮಕ್ಕಳ ದಿನಾಚರಣೆ ಪ್ರಯುಕ್ತ ಮಾತನಾಡುವ ಗೊಂಬೆ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಕಲಾವಿದೆ ಸುಮನ್ ಅವರ ಮಾತನಾಡುವ ಗೊಂಬೆಯ ಹಾವಭಾವ ಹಾಗೂ ಮಾತನಾಡುವ ವೈಖರಿಯನ್ನು ಕಂಡು ವಿದ್ಯಾರ್ಥಿಗಳು ಉಲ್ಲಾಸ ಭರಿತರಾದರು.
ಇದನ್ನೂ ಓದಿ:- ಹಾಳಾದ ರಸ್ತೆಗೆ ಜಲಜೀವನ್ ಪರಿಹಾರ!
ಕ್ಷೇತ್ರ ಶಿಕ್ಷಣಧಿಕಾರಿ ರಾಜು ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿ, ಈ ಪುಟ್ಟ ಶಾಲೆಯ ಮಕ್ಕಳಿಗೆ ಇಲ್ಲಿನ ಮುಖ್ಯೋಫಾಧ್ಯಾಯರಾದ ಸತೀಶ ದಳವಾಯಿ ಒಂದಿಲ್ಲೊಂದು ರಚನಾತ್ಮ ಕಾರ್ಯಕ್ರಮಗಳನ್ನು ಏರ್ಪಡಿಸುವುದರ ಮೂಲಕ ಮಾದರಿ ಶಿಕ್ಷಕರಾಗಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು. ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಧರ್ಮ ರತ್ನಾಕರ್ ಮಕ್ಕಳಿಗೆ ಶುಭ ಹಾರೈಸಿ ಮಂತ್ರಿ ಮಂಡಲವರಿಗೆ ಗುರುತಿನ ಚೀಟಿ ವಿತರಿಸಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.