ಪೊಲೀಸ್ ಬೀಟ್ಗೆ ಹೊಸ ವ್ಯವಸ್ಥೆ ಜಾರಿ
Team Udayavani, May 2, 2017, 12:39 PM IST
ಮೈಸೂರು: ಪೊಲೀಸರು ಜನಸ್ನೇಹಿಯಾಗಿ ಮತ್ತು ದಕ್ಷತೆಯಿಂದ ಕಾರ್ಯನಿರ್ವಹಿಸಲು ಅನುಕೂಲ ಕಲ್ಪಿಸುವ ಸಲುವಾಗಿ ಪರಿಣಾಮಕಾರಿಯಾಗಿ ಪೊಲೀಸ್ ಬೀಟ್ ವ್ಯವಸ್ಥೆ ಜಾರಿಗೊಳಿಸಲು ರಾಜ್ಯ ಸರ್ಕಾರ ಆದೇಶಿಸಿರುವ ಹಿನ್ನೆಲೆ ಪೊಲೀಸ್ ಬೀಟ್ ವ್ಯವಸ್ಥೆಯಲ್ಲಿ ಹಲವು ಬದಲಾವಣೆಗಳನ್ನು ಮಾಡಲಾಗಿದೆ.
ಹೊಸ ಬೀಟ್ವ್ಯವಸ್ಥೆಯ ಅನ್ವಯ ಪೊಲೀಸ್ ಠಾಣೆಯಲ್ಲಿರುವ ಎಲ್ಲಾ ಪೇದೆ ಹಾಗೂ ಮುಖ್ಯಪೇದೆಗಳಿಗೆ ಠಾಣಾ ವ್ಯಾಪ್ತಿಯ ಗ್ರಾಮಗಳನ್ನು ವಿಂಗಡಿಸ ಲಾಗಿದ್ದು, ಅದರಂತೆ ಪ್ರತಿ ಪ್ರದೇಶಕ್ಕೊಬ್ಬ ಪೊಲೀಸ್ ಎಂಬಂತೆ ಬೀಟ್ ವ್ಯವಸ್ಥೆಗೆ ಪೇದೆ ನೇಮಿಸಲಾಗಿದೆ. ಅಲ್ಲದೆ ಬೀಟ್ಗೆ ನಿಯೋಜನೆಗೊಂಡಿರುವ ಪೇದೆ ಪ್ರತಿ ವರ್ಷಕ್ಕೊಮ್ಮೆ ಬದಲಾವಣೆ ಮಾಡ ಲಾಗುವುದು. ಠಾಣೆಗಳಲ್ಲಿ ಕರ್ತವ್ಯ ನಿರ್ವಹಿಸುವ ಠಾಣಾ ಬರಹಗಾರರು, ತನಿಖಾ ಸಹಾಯಕರು, ಕೋರ್ಟ್ ಕೆಲಸ, ಗುಪ್ತ ಮಾಹಿತಿ ಸಿಬ್ಬಂದಿಯನ್ನು ಬೀಟ್ ಕೆಲಸಕ್ಕೆ ನೇಮಿಸಲಾಗಿದೆ.
ಇದಲ್ಲದೆ ಜನಸ್ನೇಹಿ ಪೊಲೀಸ್ ಶೀರ್ಷಿಕೆಯಲ್ಲಿ ಬೀಟ್ ಕೆಲಸಕ್ಕಾಗಿ ನೇಮಕಗೊಂಡ ಪೊಲೀಸ್ ಸಿಬ್ಬಂದಿ ಬೀಟ್ ಕೆಲಸಕ್ಕೆ ತೆರಳುವ ಗ್ರಾಮಗಳಲ್ಲಿ ಅರ್ಜಿ ವಿಚಾರಣೆ, ವಾರೆಂಟ್, ಸಮನ್ಸ್ ಜಾರಿ, ಅಕ್ರಮ ಚಟುವಟಿಕೆಗಳ ಬಗ್ಗೆ, ಗುಪ್ತ ಮಾಹಿತಿ ಸಂಗ್ರಹಣೆ, ಗನ್ಲೈಸೆನ್ಸ್, ಅಪರಾಧ ಪತ್ತೆ ಬಗ್ಗೆ ಮಾಹಿತಿ ಸಂಗ್ರಹಣೆ ಮತ್ತು ದಲಿತ ಬೀದಿಗಳಿಗೆ ಭೇಟಿ ನೀಡಿ ದಲಿತ ಸಭೆ ನಡೆಸುವುದು ಮತ್ತು ಗ್ರಾಮದ ಕುಂದುಕೊರತೆಗಳ ಬಗ್ಗೆ ಮಾಹಿತಿ ಸಂಗ್ರಹಿಸಬೇಕಿದೆ.
ಇನ್ನೂ ಬೀಟ್ ಕೆಲಸಕ್ಕೆ ಹೋಗುವ ಸಿಬ್ಬಂದಿ ಜನರು ಹಾಗೂ ಪೊಲೀಸರ ನಡುವೆ ಸೇತುವೆಯಾಗಿಯೂ ಕೆಲಸ ಮಾಡಲಿದ್ದು, ಇದರಿಂದ ಗ್ರಾಮಗಳಲ್ಲಿನ ಸಮಸ್ಯೆ, ಇನ್ನಿತರ ಮಾಹಿತಿಗಳು ಶೀಘ್ರವೇ ಇತ್ಯರ್ಥವಾಗುವ ಜತೆಗೆ ಜನರಿಗೆ ಪೊಲೀಸರ ಬಗ್ಗೆ ವಿಶ್ವಾಸ ಮೂಡಲಿದೆ. ಬೀಟ್ ಸಿಬ್ಬಂದಿಯನ್ನು ತಿಂಗಳಿಗೆ ಕನಿಷ್ಠ ಎರಡು ಬಾರಿ ಬೀಟ್ ನಿರ್ವಹಣೆ ಮಾಡಲಾಗುವುದು. ಠಾಣೆಯ ಎಎಸ್ಐ ಬೀಟ್ ಸಿಬ್ಬಂದಿ ಜತೆಗೆ ಗ್ರಾಮದ ನಾಗರಿಕ ಸಮಿತಿ ಸದಸ್ಯರನ್ನು ಆಯ್ಕೆ ಮಾಡುವ ಜತೆಗೆ ತಿಂಗಳಿಗೊಮ್ಮೆ ಸಭೆ ನಡೆಸುವ ಮೂಲಕ ಕುಂದು ಕೊರತೆ ನಿವಾರಿಸಲಾಗುವುದು.
ವಿಶೇಷ ಸಂದರ್ಭಗಳಲ್ಲಿ ರಾತ್ರಿ ಬೀಟ್ ವೇಳೆ, ಕಾನೂನು ಸುವ್ಯವಸ್ಥೆ ಕಾಪಾಡುವಾಗ, ನೈಸರ್ಗಿಕ ದುರಂತಗಳ ಸಂದರ್ಭದಲ್ಲಿ ಎರಡಕ್ಕಿಂತ ಹೆಚ್ಚಿನ ಸಿಬ್ಬಂದಿ ಒಗ್ಗೂಡಿಸಿ ಬೀಟ್ ನಿರ್ವಹಣೆ ಮಾಡಲಾಗುವುದು. ಬೀಟ್ ಸಿಬ್ಬಂದಿ ಮತ್ತು ನಾಗರಿಕ ಸಮಿತಿ ಸದಸ್ಯರುಗಳು ಸೇರಿ ಒಂದು ತಂಡವಾಗಿ ಕೆಲಸ ಮಾಡಬೇಕಿದೆ. ಈ ತಂಡದ ಸದಸ್ಯರು ಪ್ರತ್ಯೇಕ ಮಾಸಿಕ ಸಭೆ ಆಯೋಜಿಸುವಂತೆ ತಿಳಿಸಲಾಗಿದೆ.
ಈ ಸಭೆಗೆ ಎಎಸ್ಐ, ಠಾಣಾಧಿಕಾರಿ ಹಾಜರಾಗಿ ಸಭೆಯ ಮಾಹಿತಿ ಸಂಗ್ರಹಿಸಲಾಗುವುದು. ಹೊಸ ಸುಧಾರಿತ ಬೀಟ್ ವ್ಯವಸ್ಥೆಯ ನಿರ್ವಹಣೆಗಾಗಿ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿಗೆ ಬುನಾದಿ ತರಬೇತಿಯ ಸಂದರ್ಭದಲ್ಲಿ ಮತ್ತು ಕರ್ತವ್ಯ ನಿರ್ವಹಣೆಯ ವೇಳೆ ಅರಿವು ಮೂಡಿಸಲಾಗುವುದು. ಮುಖ್ಯವಾಗಿ ಪ್ರತಿ ಠಾಣೆಗಳಲ್ಲಿ ಬೀಟ್ ನಕ್ಷೆ, ಬೀಟ್ಗೆ ಸಂಬಂಧಿಸಿದ ಗ್ರಾಮಗಳು, ಬೀಟ್ಗೆ ನೇಮಿಸಲ್ಪಟ್ಟ ಅಧಿಕಾರಿ ಮತ್ತು ಸಿಬ್ಬಂದಿ ಅನುಕೂಲಕ್ಕೆ ಇಲಾಖೆಯಿಂದ ನೀಡಲಾದ ದೂರವಾಣಿ ಸಂಖ್ಯೆಯನ್ನು ಅವರ ಹೆಸರು, ಭಾವಚಿತ್ರ ಸಹಿತ ಫಲಕಗಳನ್ನು ಎಲ್ಲಾ ಗ್ರಾಮದ ಸಾರ್ವಜನಿಕ ಸ್ಥಳದಲ್ಲಿ ಅಳವಡಿಸಲಾಗುವುದು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mangaluru: ಹುಟ್ಟೂರಿನತ್ತ ಯೋಧ ಅನೂಪ್ ಪಾರ್ಥಿವ ಶರೀರ… ಸಂಸದರಿಂದ ಅಂತಿಮ ನಮನ
Shirva ಹಳೆವಿದ್ಯಾರ್ಥಿ ಸಂಘ; ಡಿ.29: ದಶಮಾನೋತ್ಸವ, ನೂತನ ಉಪಹಾರ ಗೃಹ ಸಮರ್ಪಣೆ
ಹುಬ್ಬಳ್ಳಿ ಸಿಲಿಂಡರ್ ಸ್ಫೋಟ ಪ್ರಕರಣ: ಚಿಕಿತ್ಸೆ ಫಲಿಸದೆ ಇಬ್ಬರು ಮಾಲಾಧಾರಿಗಳು ಮೃ*ತ್ಯು
MT Vasudevan Nair: ಮಲಯಾಳಂ ಸಾಹಿತಿ, ಜ್ಞಾನಪೀಠ ಪುರಸ್ಕೃತ ಎಂಟಿ ವಾಸುದೇವನ್ ನಾಯರ್ ನಿಧನ
Goa: ಕ್ಯಾಲಂಗುಟ್ ಬೀಚ್ನಲ್ಲಿ ಪ್ರವಾಸಿ ಬೋಟ್ ಮುಳುಗಿ ಓರ್ವ ಸಾ*ವು, 20 ಮಂದಿ ರಕ್ಷಣೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.