ಪ್ರವಾಸಕ್ಕೆ ಬಂದು ಶವವಾಗಿ ಮರಳಿದ ಶಿಕ್ಷಕ


Team Udayavani, Dec 24, 2019, 3:00 AM IST

pravasakke

ಪಿರಿಯಾಪಟ್ಟಣ: ಪ್ರವಾಸಕ್ಕೆಂದು ಬಂದು ಪಿರಿಯಾಪಟ್ಟಣದ ಬಿ.ಎಂ. ರಸ್ತೆಯ ಮಲ್ಲಿನಾಥಪುರ ಗೇಟ್‌ ಬಳಿ ಅಫ‌ಘಾತದಲ್ಲಿ ಮೃತಪಟ್ಟ ಘಟನೆ ಭಾನುವಾರ ರಾತ್ರಿ ಜರುಗಿದೆ. ತಾಲೂಕಿನ ಬಿ.ಎಂ.ರಸ್ತೆಯ ಮಲ್ಲಿನಾಥಪುರ ಗೇಟ್‌ ಬಳಿಕ ಭಾನುವಾರ ತಡರಾತ್ರಿ ರಾಯಚೂರು ಜಿಲ್ಲೆಯ ಸಿಂಧನೂರು ತಾಲೂಕಿನ ವೀರಾಪುರ ಉನ್ನತಿಕರಿಸಿದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಶಿಕ್ಷಕ ಈರಣ್ಣ ನರಸಪ್ಪ ಅಗನೂರು (55) ಮೃತಪಟ್ಟ ಶಿಕ್ಷಕ.

ಮೂಲತಃ ಸಿಂಧನೂರು ತಾಲೂಕಿನ ಉಪ್ಪಳ ಗ್ರಾಮದವರಾಗಿದ್ದು, ವೀರಾಪುರ ಶಾಲೆಗೆ ಹತ್ತಿರದಲ್ಲಿರುವ ತಾವರೆಕೆರೆ ಎಂಬ ಗ್ರಾಮದಲ್ಲಿ ವಾಸವಾಗಿದ್ದಾರೆ. ಈರಣ್ಣ ಮತ್ತು ಶಾಲೆ ಮುಖ್ಯ ಶಿಕ್ಷಕ ಆಂಜನೇಯ, ಶಿಕ್ಷಕರಾದ ರಜಾಕ್‌ ಚೌಧರಿ, ಮಲ್ಲಯ್ಯ, ಮಲ್ಲಪ್ಪ ಬಳಿಗಾರ್‌, ಶ್ರೀಕಾಂತ್‌, ಶಂಕರಯ್ಯ ಅಮರೇಶ್‌ ಎಂಬುವರೊಡನೆ ಕರ್ನಾಟಕ ಸಾರಿಗೆ ಇಲಾಖೆ ಬಸ್‌ನಲ್ಲಿ ಕಳೆದ ಡಿ.19 ರಂದು ವೀರಾಪುರ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ 50 ಮಕ್ಕಳೊಂದಿಗೆ ಶೈಕ್ಷಣಿಕ ಪ್ರವಾಸಕ್ಕೆಂದು ಹೊರಟು ಶಿರಸಿ, ಕುಮುಟ, ಇಡಗುಂಜಿ, ಜೋಗ್‌ ಫಾಲ್ಸ್, ಮು‌ರುಡೆಶ್ವರ, ಉಡುಪಿ, ತಲಕಾವೇರಿ, ಭಾಗಮಂಡಲ, ಪ್ರವಾಸ ಮುಗಿಸಿ ಸೋಮವಾರ ಮೈಸೂರು ಅರಮನೆ, ಚಾಮುಂಡಿ ಬೆಟ್ಟ ಹಾಗೂ ಕಾರಂಜಿ ಕೆರೆ ಪ್ರವಾಸ ಮುಗಿಸಿ ಶಿಕ್ಷಕರು ಹಾಗೂ ವಿದ್ಯಾರ್ಥಿಗಳು ಊರಿಗೆ ತೆರಳುತ್ತಿದ್ದರು.

ಆಗಿದ್ದೇನು?: ಊರಿಗೆ ತೆರಳುವುದಕ್ಕಾಗಿ ಮಡಿಕೇರಿಯಿಂದ ಕುಶಾಲನಗರ ಮಾರ್ಗವಾಗಿ ಬೈಲುಕಪ್ಪೆ ಬಳಿ ಟೀ-ಕಾಫೀ ಕುಡಿಯಲೆಂದು ಮಲ್ಲಿನಾಥಪುರ ಗೇಟ್‌ ಬಳಿ ಬಸ್‌ ನಿಲ್ಲಿಸಲಾಗಿತ್ತು. ಚಹಾ-ಕಾಫಿ ಸೇವಿಸುವುದು ಮುಗಿದ ಮೇಲೆ ಮಕ್ಕಳನ್ನೆಲ್ಲ ಬಸ್‌ ಹತ್ತಿಸಿದ ಶಿಕ್ಷಕ ಈರಣ್ಣ, ತಾವು ಮೂತ್ರ ವಿಸರ್ಜನೆಗೆ ರಸ್ತೆ ದಾಟುವಾಗ ಕುಶಾನಗರಿದಂದ ಬಂದ ಸ್ಯಾಂಟೊ›à ಕಾರ್‌ ಡಿಕ್ಕಿ ಹೊಡೆದಿದೆ. ಪರಿಣಾಮ ಶಿಕ್ಷಕ ಈರಣ್ಣ ನರಸಪ್ಪ ಅಗನೂರು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಕೂಡಲೇ ಸಹ ಶಿಕ್ಷಕರು, ಸಾರ್ವಜನಿಕರ ನೆರವಿನಿಂದ ಶಿಕ್ಷಕ ಈರಣ್ಣ ಅವರ ದೇಹವನ್ನು ಸಾರ್ವಜನಿಕ ಆಸ್ಪತ್ರೆ ತಂದು, ಶವ ಪರೀಕ್ಷೆ ಬಳಿಕ ಕುಟುಂಬದವರಿಗೆ ಹಸ್ತಾಂತರಿಸಿದರು.

ಮುಗಿಲು ಮುಟ್ಟಿದ ಮಕ್ಕಳ ಆಕ್ರಂದನ: ರಸ್ತೆ ಅಫ‌ಘಾತದಲ್ಲಿ ಮೃತಪಟ್ಟ ಈರಣ್ಣ ನರಸಪ್ಪ ಅಗನೂರರನ್ನು ಕಳೆದುಕೊಂಡ ಮಕ್ಕಳು ಗೋಳಾಡಿ ಅತ್ತು ಬಿಟ್ಟರು. ತಮ್ಮ ನೆಚ್ಚಿನ ಶಿಕ್ಷಕರೊಬ್ಬರನ್ನು ತಮ್ಮ ಎದುರಲ್ಲೇ ಕಳೆದುಕೊಂಡ ಮಕ್ಕಳಿಗೆ ಅಘಾತ ಉಂಟಾಗಿ, ಆಕ್ರಂದನ ಹೆಚ್ಚಿತು. ಬಳಿಕ ಸ್ಥಳೀಯರು ಹಾಗೂ ಶಿಕ್ಷಕರು ತಡರಾತ್ರಿಯಲ್ಲೂ ಮಕ್ಕಳ ನೆರವಿಗೆ ಧಾವಿಸಿ, ಮಕ್ಕಳಿಗೆ ಊಟದ ವ್ಯವಸ್ಥೆ ಹಾಗೂ ಉಳಿದುಕೊಳ್ಳಲು ಸ್ಥಳಾವಕಾಶ ಕಲ್ಪಿಸಿದರು. ಬಳಿಕ ಮಕ್ಕಳಿಂದ ಮೃತ ಶಿಕ್ಷಕರ ಕುಟುಂಬದವರ ಫೋನ್‌ ನಂಬರ್‌ ಪಡೆದು ಮಾಹಿತಿ ತಿಳಿಸಲಾಯಿತು. ಈ ವಿಷಯ ತಾಲೂಕಿನಲ್ಲೆಲ್ಲ ಹಬ್ಬಿದ್ದರಿಂದ ಸ್ಥಳೀಯ ಶಿಕ್ಷಕರು, ಅಧಿಕಾರಿಗಳು ಕಂಬನಿ ಮಿಡಿದರು.

ನೋವಿನಿಂದಾಗಿ ಊಟ ಮಾಡದ ಮಕ್ಕಳು: ಪಟ್ಟಣದ ಮಹಾಲಕ್ಷ್ಮೀ ಕಲ್ಯಾಣ ಮಂಟಪದ ಮಾಲೀಕ ಸತೀಶ್‌, ಪ್ರವಾಸಕ್ಕೆ ಬಂದಿದ್ದ ಶಾಲಾ ಮಕ್ಕಳಿಗೆ ತಮ್ಮ ಛತ್ರದಲ್ಲೇ ವಸತಿ ಹಾಗೂ ಊಟದ ವ್ಯಸವೆ§ ಕಲ್ಪಿಸಲು ಮುಂದಾದರು. ಆದರೆ ಮೊದಲೇ ತಮ್ಮ ನೆಚ್ಚಿನ ಶಿಕ್ಷಕರ ಶವವನ್ನು ಕಂಡು ಆಂತಕ್ಕಕ್ಕೋಳಗಾಗಗಿದ್ದ ಮಕ್ಕಳು ಊಟ ಮಾಡಲು ನಿರುತ್ಸಹ ತೋರಿದರು. ಆಗ ಸ್ಥಳೀಯರು ಮಕ್ಕಳಿಗೆ ಬ್ರೆಡ್‌, ಬಿಸ್ಕತ್‌ ಹಾಗೂ ಬಾಳೆಹಣ್ಣು ಕೊಟ್ಟು ಕೂಡಲೇ ಅವರನ್ನು ಬಸ್‌ನಲ್ಲಿಯೇ ತಮ್ಮ ಊರಿಗೆ ಕಳುಹಿಸಿ ಎಂದು ಅವರ ಮುಖ್ಯ ಶಿಕ್ಷಕರಿಗೆ ವಿನಂತಿಸಿ, ಊರಿಗೆ ತೆರಳಲು ಮುಂದಾದರು.

ಮೃತ ಶಿಕ್ಷಕನ ಪುತ್ರನಿಗೆ ಇಂದು ಎಂಬಿಬಿಎಸ್‌ ಪರೀಕ್ಷೆ: ಅಫ‌ಘಾತದಲ್ಲಿ ಮೃತಪಟ್ಟ ಈರಣ್ಣ ನರಸಪ್ಪ ಅಗನೂರು ರವರಿಗೆ ಮೂವರು ಮಕ್ಕಳು. ಪುತ್ರ ನವೀನ್‌, ಕೊಪ್ಪಳದ ಮೆಡಿಕಲ್‌ ಕಾಲೇಜಿನಲ್ಲಿ ಎಂಬಿಬಿಎಸ್‌ ಅಂತಿಮ ವರ್ಷದ ವಿದ್ಯಾರ್ಥಿ. ನವೀನ್‌ಗೆ ಮಂಗಳವಾರ ಪರೀಕ್ಷೆಯಿದ್ದಿದ್ದರಿಂದ, ತಂದೆ ಹುಷಾರಿಲ್ಲ ಎಂದು ಹೇಳಿ ಕುಟುಂಬದವರು ಪಿರಿಯಾಪಟ್ಟಣಕ್ಕೆ ಬಂದಿದ್ದರು. ಉಳಿದಂತೆ, ಪುತ್ರಿ ಪೂಜಾ ಬಿಎಸ್‌ಸಿ, ಮತ್ತೂಬ್ಬ ಪುತ್ರ ಸಚೀನ್‌ ದ್ವಿತೀಯ ಪಿಯುಸಿ ಇದ್ದಾರೆ.

ಬಿಇಒ, ತಾಲೂಕು ಶಿಕ್ಷಕರು, ಸಾರ್ವಜನಿಕರಿಂದ ನೆರವು: ಶಿಕ್ಷಕ ಈರಣ್ಣ ನರಸಪ್ಪ ಅಗನೂರು ಮೃತಪಟ್ಟ ವಿಷಯ ತಿಳಿದ ಕೂಡಲೇ ತಾಲೂಕಿನ ಶಿಕ್ಷಕರು ಮತ್ತು ಸಾರ್ವಜನಿಕರು ತಡರಾತ್ರಿಯಲ್ಲೂ ನೆರವಿಗೆ ಧಾವಿಸಿ ಮಾನವೀಯತೆ ಮೆರೆದರು. ಮಕ್ಕಳು ಮತ್ತು ಜೊತೆಯಲ್ಲಿ ಬಂದಿದ್ದ ಶಿಕ್ಷಕರಿಗೆ ಸಾಂತ್ವನ ಹೇಳಿ, ಊಟ ಮತ್ತು ವಸತಿ ವ್ಯವಸ್ಥೆ ಕಲ್ಪಿಸಿದರು. ಮೃತರ ಶವ ಪರೀಕ್ಷೆ ನಡೆಸಲು ಡಿವೈಎಸ್‌ಪಿ ಸುಂದರ್‌ ರಾಜ್‌ ಮತ್ತು ಸಿಪಿಐ ಬಿ.ಆರ್‌. ಪ್ರದೀಪ್‌, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್‌ ಕುಮಾರ್‌ ಆಸ್ಪತ್ರೆಯ ವೈದ್ಯಾಧಿಕಾರಿಗಳನ್ನು ಸಂಪರ್ಕಿಸಿ ಕೂಡಲೇ ಶವ ಪರೀಕ್ಷೆ ಮಾಡಿದರೆ, ದೂರದ ರಾಯಚೂರಿಗೆ ಕಳುಹಿಸಲು ಸಾಧ್ಯವಾಗುತ್ತದೆ ಎಂದು ಮನವಿ ಮಾಡಿದಾಗ ಆಸ್ಪತ್ರೆಯ ವೈದ್ಯಾಧಿಕಾರಿ ಮೃತರ ಶವ ಪರೀಕ್ಷೆ ನಡೆಸಿ ಮೃತರ ಕುಟುಂಬದವರಿಗೆ ಹಸ್ತಾಂತರಿಸಿದರು.

ಮೃತರಿಗೆ ಶ್ರದ್ಧಾಂಜಲಿ: ಮೃತರ ಕುಟುಂಬದವರಿಗೆ ಶವವನ್ನು ಮೃತರ ಕುಟುಂಬಕ್ಕೆ ಹಸ್ತಾಂತರಿಸುವ ಮೊದಲು ತಾಲೂಕಿನ ಬಿಇಒ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ವತಿಯಿಂದ ಮೃತರಿಗೆ ಅಂತಿಮ ನಮನ ಸಲ್ಲಿಸಿ ಶ್ರದ್ಧಾಂಜಲಿ ಅರ್ಪಿಸಲಾಯಿತು. ಆರ್‌.ರಾಮಾರಾಧ್ಯ, ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಗಣೇಶ್‌ ಕುಮಾರ್‌, ಕಾರ್ಯದರ್ಶಿ ಗಾಯತ್ರಿ, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಶಿವಯೋಗಿ, ಕಾರ್ಯದರ್ಶಿ ಶಿವಕುಮಾರಯ್ಯ, ಖಜಾಂಚಿ ಅಣ್ಣೇಗೌಡ, ನಿರ್ದೇಶಕ ಪ್ರಕಾಶ, ಶಿಕ್ಷಕರಾದ ಎಸ್.ಬಿ.ಪುಟ್ಟರಾಜು, ಪಿ.ವಿ.ದೇವರಾಜು, ಹೆಚ್.ಟಿ.ಗಣೇಶ, ನಟರಾಜ ನಾಯ್ಕ, ನೌಕರರಾದ ಸೋಮಶೇರ್ಖ, ಪ್ರಕಾಶ್‌ ಉದ್ಯಮಿ ಸತೀಶ, ಸ್ಥಳೀಯ ಮುಖಂಡರಾದ ಮಲ್ಲಿಕಾರ್ಜುನ, ತೆಲುಗಿನಕುಪ್ಪೆ ಕಾಂತರಾಜು ಆಟೋ ಶಿವಣ್ಣ ಸೇರಿದಂತೆ ಮತ್ತಿತರರು ಹಾಜರಿದ್ದರು.

ಟಾಪ್ ನ್ಯೂಸ್

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

1-moi

Prime Minister Modi; ಗಯಾನಾ, ಡೊಮಿನಿಕಾ ಗೌರವ ಪ್ರದಾನ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

Dinesh Gundu Rao: ಅನರ್ಹರ ಕಾರ್ಡ್‌ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ

1-jaga

Waqf ಮಸೂದೆ ಕರಡು ವರದಿ ಸಿದ್ಧ: ಜೆಪಿಸಿ ಅಧ್ಯಕ್ಷ ಪಾಲ್‌ ಘೋಷಣೆ

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Court: ಮಾವೋವಾದಿ ಸೋಮನ್‌ ಕಾಸರಗೋಡು ಕೋರ್ಟಿಗೆ ಹಾಜರು

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Kasaragod: ಪತಿಯಿಂದ ಮಹಿಳಾ ಎಸ್‌ಐ ಹತ್ಯೆ

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು

Udupi: ಜಿಲ್ಲಾಧಿಕಾರಿ ಫೋಟೋ ದುರ್ಬಳಕೆ ಪೇಸ್‌ಬುಕ್‌ನಲ್ಲಿ ಹಣಕ್ಕೆ ಬೇಡಿಕೆ: ದೂರು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

1-GM

General Motors;1,000 ಉದ್ಯೋಗಿಗಳು ಕೆಲಸದಿಂದ ವಜಾ

1-wqewe

Tallest and shortest; ವಿಶ್ವದ ಅತೀ ಕುಬ್ಜ, ಅತೀ ಎತ್ತರದ ಮಹಿಳೆಯರ ಸಮಾಗಮ

sensex

Sensex ಪತನ, ರೂಪಾಯಿ ಮೌಲ್ಯ ಸಾರ್ವಕಾಲಿಕ ಕುಸಿತ

train-track

Train ಜನಶತಾಬ್ದಿ ಎಕ್ಸ್‌ಪ್ರೆಸ್‌ನಲ್ಲಿ ಹಾವು ಪ್ರತ್ಯಕ್ಷ: ತನಿಖೆಗೆ ಆದೇಶ

court

Himachal Pradesh;ನಷ್ಟದಲ್ಲಿರುವ ಹೊಟೇಲ್‌ ಮುಚ್ಚಲು ಹೈಕೋರ್ಟ್‌ ಆದೇಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.