ಬನ್ನಿಮರಕ್ಕೆ ಬಾಳೆಗೊನೆ ಕಟ್ಟುವ ವಿಶಿಷ್ಟ ಊರಹಬ್ಬ
Team Udayavani, Jan 25, 2019, 6:45 AM IST
ಹುಣಸೂರು: ತಾಲೂಕಿನ ಬಿಳಿಕೆರೆ ಹೋಬಳಿಯ ಹೊಸರಾಮನಹಳ್ಳಿಯ ಈರಣ್ಣೇಶ್ವರ ಸ್ವಾಮಿಗೆ ಬಾಳೆಗೊನೆ ಅರ್ಪಿಸುವ ಊರು ಹಬ್ಬ ಶ್ರದ್ಧಾಭಕ್ತಿ, ವಿಜೃಂಭಣೆಯಿಂದ ಜರುಗಿತು.
ಬಿಳಿಕೆರೆ-ಕೆ.ಆರ್.ನಗರ ಹೆದ್ದಾರಿಯ ಮುಖ್ಯ ರಸ್ತೆ ಪಕ್ಕದಲ್ಲೇ ಇರುವ ಹೊಸ ರಾಮೇನಹಳ್ಳಿಯ ಈರಣ್ಣೇಶ್ವರಸ್ವಾಮಿ ದೇವಾಲಯದ ಬಳಿಯ ಮುಂಭಾಗದ ಆವರಣದಲ್ಲಿ ಒಂಭತ್ತು ಬನ್ನಿಮರದ ಕಂಬಗಳ ನಡುವೆ ನಿಂತಿರುವ ಶೂಲದಯ್ಯನೆನ್ನುವ ಹೆಸರಿನಿಂದಲೂ ಕರೆಯಿಸಿಕೊಳ್ಳುವ ಈರಣ್ಣೇಶ್ವರಸ್ವಾಮಿಗೆ ನಾಲ್ಕು ದಿನಗಳ ಕಾಲ ಸಂಪ್ರದಾಯ ಬದ್ಧವಾಗಿ ವಿವಿಧ ಪೂಜಾ ಕೈಂಕರ್ಯ ಗಳನ್ನು ನೆರವೇರಿಸಲಾಯಿತು.
ಬಾಳೆಗೊನೆ ಸಮರ್ಪಣೆ: ಭಕ್ತರು ತಮ್ಮ ಸಂಕಷ್ಟಗಳನ್ನು ಪರಿಹರಿಸಬೇಕೆಂದು ದೇವರಲ್ಲಿ ಕೋರಿಕೊಳ್ಳುವ ಹರಕೆ ಈಡೇರಿಕೆಗಾಗಿ ಬಾಳೆಗೊನೆಯನ್ನು ಕಟ್ಟುತ್ತಾರೆ. ಉತ್ಸವಕ್ಕೂ ಮುನ್ನಾ ದಿನ ಬನ್ನಿ ಮರದಿಂದ ತಯಾರಿಸಿರುವ ಕಂಬಗಳಿಗೆ ಕಟ್ಟುವ ಬಾಳೆಗೊನೆಯನ್ನು ಮೂರು ದಿನದ ನಂತರ ತೆಗೆದು ಪ್ರಸಾದವನ್ನಾಗಿ ಸ್ವೀಕರಿಸುವರು.
ಕಂಬದಯ್ಯ: ಗುಡಿಯ ಮುಂಭಾಗ ನಿರ್ಮಿಸಿರುವ ದೇವರ ಚಾವಡಿಯಲ್ಲಿ ದೊಡ್ಡ 9 ಬನ್ನಿಮರಗಳನ್ನು ಕಡಿದು ತಂದು ನೆಡುತ್ತಾರೆ. ಇದನ್ನು ಕಂಬದಯ್ಯನೆಂದೂ ಕರೆಯುತ್ತಾರೆ. ಹರಕೆ ಹೊತ್ತವರು ತಂದ ಸಾವಿರಾರು ಬಾಳೆಗೊನೆಗಳನ್ನು ಈ ಮರದಲ್ಲಿ ನೇತು ಹಾಕಲಾಗುತ್ತದೆ. ನಾಲ್ಕು ದಿನಗಳ ನಂತರ ಈ ಬಾಳೆಕಾಯಿಗಳು ಮಾಗಿದ್ದರೂ ಸಹ ಯಾವೊಂದು ಪಕ್ಷಿಯೂ ಬಾಳೆಗೊನೆಯನ್ನು ತಿನ್ನಲು ಬರದಿರುವುದು ಇಲ್ಲಿನ ದೇವರ ವೈಶಿಷ್ಟ್ಯ. ಹಬ್ಬದ ನಂತರ ಬಾಳೆಗೊನೆ ಪಡೆಯುವಾಗ ತಾವು ಯಾವ ಗೊನೆ ಹರಕೆಗಾಗಿ ಕಟ್ಟುತ್ತಾರೋ ಅದೇ ಗೊನೆಯನ್ನೇ ವಾಪಾಸ್ ಸಿಗುವುದು ಮತ್ತೂಂದು ವಿಶೇಷ.
ಈರಣ್ಣಸ್ವಾಮಿ ಗುಡಿಯ ಸುತ್ತ ಐದು ಗ್ರಾಮದೇವತೆ ಗುಡಿಗಳಿದ್ದು, ಇದರಲ್ಲಿ ಚೌಡೇಶ್ವರಿ, ಚಿಕ್ಮಮ್ಮತಾಯಿ, ಚಿಕ್ಕಮ್ಮ, ದಂಡಮ್ಮ, ಮಂಚಮ್ಮ ದೇವಾಲಯ ಗಳನ್ನೂ ದೀಪಾಲಂಕಾರಗಳಿಂದ ಸಿಂಗ ರಿಸಿ ವಿಶೇಷ ಪೂಜೆ ಸಲ್ಲಿಸಲಾಯಿತು.
ಲಕ್ಷದೀಪೋತ್ಸವ: ರಾತ್ರಿ ಭಕ್ತರು ಒಂಭತ್ತು ಕಂಬದಯ್ಯನಿಗೆ ಮಣ್ಣಿನ ಹಣತೆಯಲ್ಲಿ ಎಳ್ಳೆಣ್ಣೆ ದೀಪ ಹಚ್ಚಿ ಲಕ್ಷ ದೀಪೋತ್ಸವ ನೆರವೇರಿದರು. ಈ ವೇಳೆ ಸ್ಥಳೀಯ ಜಾನಪದ ಕಲಾತಂಡಗಳ ಗುಡ್ಡರ ಕುಣಿತ, ಮಾರಿ ಕುಣಿತ ಮುಂತಾದ ಕಲಾತಂಡಗಳು ಪ್ರದರ್ಶನ ನೀಡಿದ ನಂತರ ಮಾರನೆಯ ಮುಂಜಾನೆ ಹರಕೆಗೆ ಕಟ್ಟಿದ್ದ ಬಾಳೆಗೊನೆ ಗಳನ್ನು ಭಕ್ತರಿಗೆ ನೀಡಲಾಯಿತು.
ಹಬ್ಬಕ್ಕೆಂದು ದೂರದ ಉರುಗಳಿಂದ ಬಂದಿದ್ದ ನೆಂಟರಿಗೆ ಗ್ರಾಮದ ಮನೆ ಮನೆಗಳಲ್ಲಿ ಹಬ್ಬದ ಅಡುಗೆ ತಯಾರಿಸಿ ಉಣಬಡಿಸಿದರು.
ಪ್ರತಿವರ್ಷ ಗೆದ್ದಲು ಹಿಡಿದ ಮರ ವನ್ನು ಬದಲಿಸಿ ಹೊಸಮರ ತಂದು ನೆಡುವುದು ವಾಡಿಕೆ. ಕಳೆದ ಸಾಲಿನಲ್ಲಿ ನೆಟ್ಟ ಬನ್ನಿಮರವೊಂದು ಚಿಗುರಿದ್ದು, ಹಸಿರು ಎಲೆಗಳಿಂದ ಕಂಗೊಳಿಸುತ್ತಿರು ವುದು ಗ್ರಾಮಸ್ಥರಲ್ಲಿ ಹರ್ಷ ತಂದಿದೆ. ಇದು ಗ್ರಾಮದ ಜನರಿಗೆ ಶುಭ ಸಂಕೇತವೆಂದು ಭಾವಿಸುತ್ತಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ICC U19 ವನಿತಾ ಟಿ20 ವಿಶ್ವಕಪ್: ಭಾರತಕ್ಕೆ ನಿಕಿ ಪ್ರಸಾದ್ ನಾಯಕಿ
Maharashtra: ಬಾಸ್ ಜತೆ ಸೆ*ಕ್ಸ್ಗೆ ಒಪ್ಪದ ಪತ್ನಿಗೆ ಐಟಿ ಉದ್ಯೋಗಿ ತಲಾಖ್
PM Modi: ಇಂದು ಕೆನ್-ಬೆತ್ವಾ ನದಿ ಜೋಡಣೆಗೆ ಮೋದಿ ಶಂಕುಸ್ಥಾಪನೆ
A.B.Vajpayee Birth Century: ಅಜಾತಶತ್ರು, ಬಹುಮುಖಿ ವ್ಯಕ್ತಿತ್ವದ ಅಟಲ್ ಬಿಹಾರಿ ವಾಜಪೇಯಿ
Election Commission: ದಾಖಲಾದ ಮತದಲ್ಲಿಏರಿಕೆ ಆಗುವುದು ಸಾಮಾನ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.