ಖಾಸಗಿ ಬಡಾವಣೆ ಸಮಸ್ಯೆ ಇತ್ಯರ್ಥಕ್ಕೆ ಕ್ರಮ
Team Udayavani, Aug 1, 2023, 3:40 PM IST
ಮೈಸೂರು: ಚಾಮುಂಡೇಶ್ವರಿ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ 275 ಖಾಸಗಿ ಬಡಾವಣೆ ಗಳಿದ್ದು, ಇವುಗಳಲ್ಲಿ 175ರಲ್ಲಿ ಕನಿಷ್ಠ ಸೌಲಭ್ಯ ಗಳನ್ನು ಒದಗಿಸಿಲ್ಲ ಎಂದು ಶಾಸಕ ಜಿ.ಟಿ. ದೇವೇಗೌಡ ಅಸಮಾಧಾನ ವ್ಯಕ್ತಪಡಿಸಿದರು.
ನಗರದ ಬೋಗಾದಿ ಪಟ್ಟಣ ಪಂಚಾಯಿತಿ ಕಚೇರಿಗೆ ಸೋಮವಾರ ಭೇಟಿ ನೀಡಿ ಸಾರ್ವಜನಿಕರಿಂದ ಅಹವಾಲುಗಳನ್ನು ಸ್ವೀಕರಿಸಿ ಕೆಲವು ಸಮಸ್ಯೆಗಳಿಗೆ ಸ್ಥಳದಲ್ಲೇ ಪರಿಹಾರ ಕಲ್ಪಿಸಿದ ಬಳಿಕ ನಾಗರಿಕರನ್ನು ಉದ್ದೇಶಿಸಿ ಮಾತನಾಡಿದರು.
ಕ್ಷೇತ್ರದ ವ್ಯಾಪ್ತಿಯಲ್ಲಿ 275 ಖಾಸಗಿ ಬಡಾವಣೆಗಳಿವೆ. ಬಡಾವಣೆಗಳಿಗೆ ಮೂಲ ಸೌಕರ್ಯಗಳನ್ನು ಕಲ್ಪಿಸಿಕೊಟ್ಟ ಬಳಿಕ ಮುಡಾದವರು ಎನ್‌ಒಸಿ ಕೊಡುವ ಬದಲಿಗೆ ನಿವೇಶನಗಳನ್ನು ಹಸ್ತಾಂತರ ಮಾಡಿದ್ದಾರೆ. ನನಗೆ ಮಾಹಿತಿ ಇರುವ ಪ್ರಕಾರ 275 ಬಡಾವಣೆಗಳಲ್ಲಿ 100ರಲ್ಲಿ ಕನಿಷ್ಠ ಮೂಲ ಸೌಕರ್ಯದ ಕಾಮಗಾರಿಗಳನ್ನು ಮಾಡಲಾಗಿದೆ. ಉಳಿದ 175 ಬಡಾವಣೆಗಳಲ್ಲಿ ಕನಿಷ್ಠ ಸೌಲಭ್ಯಗಳನ್ನು ಒದಗಿಸಿಲ್ಲ ಎಂದು ದೂರಿದರು.
ಡೀಸಿಗೆ ಮನವಿ ಸಲ್ಲಿಸಿದ್ರೂ ಪ್ರಯೋಜನವಿಲ್ಲ: ಮುಡಾದವರು ಎನ್‌ಒಸಿ ಕೊಡದೆ ನಿವೇಶನಗಳನ್ನು ಬಿಡುಗಡೆ ಮಾಡದೆ ಇದ್ದರೆ ಮಾಲಿಕರು ಪೂರೈಸುತ್ತಿದ್ದರು. ಇದೀಗ ಈ ಎಲ್ಲಾ ಬಡಾವಣೆಗಳನ್ನು ಅಭಿವೃದ್ಧಿಪಡಿಸಬೇಕಾದರೆ ಎರಡು ಸಾವಿರ ಕೋಟಿ ರೂ.ಬೇಕಾಗುತ್ತದೆ. ಈ ಅನುದಾನವನ್ನು ಸರ್ಕಾರ ಕೊಡುವುದಿಲ್ಲ. ಮೂಲ ಸೌಕರ್ಯ ಕುರಿತು ಸರ್ಕಾರ ಮತ್ತು ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರೂ ಪ್ರಯೋಜನವಾಗಿಲ್ಲ ಎಂದು ಹೇಳಿದರು.
ಸರ್ಕಾರದ ಮೇಲೆ ಒತ್ತಡ: ಈ ಬಡಾವಣೆಗಳಿಗೆ ಕನಿಷ್ಠ ಮೂಲಸೌಕರ್ಯ ಒದಗಿಸಲು ಅಂದಾ ಜು 2 ಸಾವಿರ ಕೋಟಿ ರೂ. ಅನುದಾನ ಬೇಕಾ ಗಿದ್ದು, ನಿವಾಸಿಗಳಿಗೆ ಖಾತೆ ಮಾಡಿ ಕಂದಾಯ ಸಂಗ್ರಹಿಸಿ ಬಡಾವಣೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳಲಾಗುವುದು. ಖಾತೆ ಮಾಡಿಕೊಡುವ ಬಗ್ಗೆ ಸರ್ಕಾರದ ಮೇಲೆ ಒತ್ತಡ ಹೇರಲಾ ಗುವುದು. ಜತೆಗೆ ಮುಖ್ಯಮಂತ್ರಿಗಳು ಮೈಸೂರು ಜಿÇÉೆಯವರೇ ಆಗಿರುವ ಕಾರಣ ಮತ್ತೂಮ್ಮೆ ಮನವಿ ಮಾಡಿ ಅನುದಾನ ಬಿಡುಗಡೆಮಾಡುವಂತೆ ಒತ್ತಡ ಹೇರುತ್ತೇನೆ ಎಂದು ವಿವರಿಸಿದರು.
ಖಾತೆ ಮಾಡಿ ಕಂದಾಯ ಸಂಗ್ರಹಿಸಿ: ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ಬಡಾವಣೆ ಗಳಾದ ಎಸ್ಟಿಎಂ ಲೇಔಟ್, ಆಶ್ರಯ ಬಡಾವಣೆ, ಬೋಗಾದಿ, ಹಳ್ಳಿಬೋಗಾದಿ ಮೊದಲಾದ ಬಡಾವಣೆಗಳಿಗೆ ಸಾಕಷ್ಟು ಕೆಲಸಗಳಾಗಬೇಕಿದೆ. ಹಾಗಾಗಿ, ಈ ಬಡಾವಣೆಗಳ ನಿವಾಸಿಗಳಿಗೆ ಖಾತೆ ಮಾಡಿಕೊಟ್ಟು ಕಂದಾಯ ಸಂಗ್ರಹಿಸಿ ಅದರಿಂದ ಬರುವ ಆದಾಯದಿಂದ ಅಭಿವೃದ್ಧಿ ಕಾರ್ಯ ಮಾಡುವುದೇ ಈಗ ಉಳಿದಿರುವ ಪರಿಹಾರ ಮಾರ್ಗವಾಗಿದೆ ಎಂದು ಹೇಳಿದರು.
ಸಾರ್ವಜನಿಕರಿಂದ ಅಹವಾಲುಗಳ ಸುರಿಮಳೆ: ಇದಕ್ಕೂ ಮೊದಲು ಪಟ್ಟಣ ಪಂಚಾಯಿತಿ ವ್ಯಾಪ್ತಿಗೆ ಬರುವ ನಿವಾಸಿಗಳಿಂದ ಅಹವಾಲುಗಳ ಸುರಿಮಳೆಯಾಯಿತು. ಕುಡಿಯುವ ನೀರು ಸಮರ್ಪಕವಾಗಿ ನೀಡದೆ ಇರುವ ಜತೆಗೆ ವಿದ್ಯುತ್ ದೀಪಗಳ ಸಮಸ್ಯೆಯಾಗಿದೆ. ಪ್ರತಿನಿತ್ಯ ಘನತ್ಯಾಜ್ಯ ಸಂಗ್ರಹಿಸದೆ ಇರುವ ಕಾರಣ ರಸ್ತೆಬದಿಯಲ್ಲಿ ಸಾರ್ವಜನಿಕರು ರಸ್ತೆಬದಿಯಲ್ಲಿ ಸುರಿಯುವಂತಾಗಿದೆ ಎಂದು ದೂರಿದರು. ಕಸವಿಲೇವಾರಿ ಬಗ್ಗೆ ಅನೇಕ ಬಾರಿ ದೂರು ನೀಡಿದರೂ, ಯಾವುದೇ ಕ್ರಮಕೈಗೊಂಡಿಲ್ಲ. ರಸ್ತೆಗಳು ಸರಿಯಾಗಿ ಇಲ್ಲದೆ ರಾತ್ರಿ ಹೊತ್ತು ಸಂಚರಿಸುವ ವಾಹನಗಳು ಅಪಘಾತಕ್ಕೀಡಾಗಿ ಸವಾರರು ಗಾಯಗೊಳ್ಳುತ್ತಿದ್ದಾರೆ. ತಕ್ಷಣವೇ ರಸ್ತೆಗಳಿಗೆ ಡಾಂಬರೀಕರಣ ಮಾಡಿಸಬೇಕು ಎಂದು ಶಾಸಕರಲ್ಲಿ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಮುಖ್ಯಾಧಿಕಾರಿ ಜಗರೆಡ್ಡಿ, ಕಂದಾಯ ನಿರೀಕ್ಷಕ ಹರ್ಷಕುಮಾರ್ ಮೊದಲಾದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA: ಮಗಳ-ಅಳಿಯಗೆ ಮುಡಾ ಸೈಟ್: ಜಿ.ಟಿ.ದೇವೇಗೌಡ ವಿರುದ್ದ ಲೋಕಾಯುಕ್ತಗೆ ದೂರು
Actor Darshan: ಇಂದು ನಟ ದರ್ಶನ್ ಮೈಸೂರಿಗೆ ಆಗಮನ
JDS: 2028ಕ್ಕೆ ನಾನೇ ಮುಖ್ಯಮಂತ್ರಿ ಆಗುತ್ತೇನೆ ಎಂಬುದು ಭ್ರಮೆ: ಜಿ.ಟಿ.ದೇವೇಗೌಡ ಟಾಂಗ್
MUDA: 20 ವರ್ಷದಿಂದ ಶಾಸಕರಾಗಿ, ಮುಡಾ ಸದಸ್ಯರಾಗಿದ್ದೀರಿ, ಯಾಕೀ ಅವ್ಯವಸ್ಥೆ?: ಸಿಎಂ
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
MUST WATCH
ಹೊಸ ಸೇರ್ಪಡೆ
Bengaluru: ಏಳನೇ ಆವೃತ್ತಿಯ ಮಣಿಪಾಲ ಮ್ಯಾರಥಾನ್‌ಗೆ ಚಾಲನೆ
Cabinet: ಸಂಕ್ರಾಂತಿ ಬಳಿಕ ಸಂಪುಟ ವಿಸ್ತರಣೆ ಆಗುವುದಿಲ್ಲ: ಡಿ.ಕೆ.ಶಿವಕುಮಾರ್
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ; ರಾಕ್ಷಸಿ ಕೃತ್ಯ, ನೀಚತನದ ಪರಮಾವಧಿ ಎಂದ ವಿಪಕ್ಷ ನಾಯಕರು
Congress: ಕೆಪಿಸಿಸಿ ಅಧ್ಯಕ್ಷ ಸ್ಥಾನ ಸಿಕ್ಕಿದರೆ ನಿಭಾಯಿಸುವೆ: ಸಚಿವ ರಾಜಣ್ಣ
ಬದರೀನಾಥದಿಂದ ಶಬರಿಮಲೆಗೆ 8000 ಕಿ.ಮೀ ಪಾದಯಾತ್ರೆ; ಕಾಸರಗೋಡಿನ ಯುವಕರ ಸಾಧನೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.