ಆದಿವಾಸಿಗಳಿಗೆ ಒಳಮೀಸಲು ಕಲ್ಪಿಸಿ
Team Udayavani, Dec 16, 2020, 3:52 PM IST
ಮೈಸೂರು: ಕಾಡಿನಿಂದ ಹೊರ ದಬ್ಬಿರುವ ಬುಡಕಟ್ಟು ಸಮುದಾಯದವರಿಗೆ ಒಳ ಮೀಸಲಾತಿ ನೀಡುವುದಲ್ಲದೇ, ಪ್ರೊ.ಮುಜಾಫರ್ ಅಸ್ಸಾದಿ ವರದಿಯನ್ನು ತಕ್ಷಣವೇ ಜಾರಿ ಮಾಡಬೇಕು ಎಂದು ದುಂಡು ಮೇಜಿನ ಸಭೆ ಒತ್ತಾಯಿಸಿತು.
ನಗರದ ಸ್ವಾತಂತ್ರ್ಯ ಹೋರಾಟಗಾರರಉದ್ಯಾನದಲ್ಲಿ ಬುಡಕಟ್ಟು ಮೂಲನಿವಾಸಿಗಳ ಜಾಗೃತ ವೇದಿಕೆ ವತಿಯಿಂದ ಮಂಗಳವಾರ ಆಯೋಜಿಸಿದ್ದ ಸಭೆಯಲ್ಲಿ ಬುಡುಕಟ್ಟು ಸಮುದಾಯಗಳ ಸಮಸ್ಯೆ ಕುರಿತು ಚರ್ಚಿಸಲಾಯಿತು.
ನಾಗರಹೊಳೆ ಉದ್ಯಾನದಿಂದ ಬುಡಕಟ್ಟು ಜನರ ಸ್ಥಳಾಂತರ ಹಾಗೂ ಪುನರ್ವಸತಿ ಸಂಬಂಧ ಹೈಕೋರ್ಟ್ ಆದೇಶದ ಮೇರೆಗೆ ರಚಿಸಿದ್ದ ಪ್ರೊ.ಅಸಾದಿ ಸಮಿತಿಯು ಈಗಾಗಲೇ ವರದಿಯನ್ನು ನೀಡಿ ವರ್ಷಗಳೇ ಗತಿಸಿದ್ದು, ಇನ್ನು ಜಾರಿ ಮಾಡಿಲ್ಲ. ಈ ಅಭ ಯಾರಣ್ಯದಿಂದ 3,418 ಗಿರಿಜನ ಕುಟುಂಬಗಳನ್ನು ಮೈಸೂರು ಮತ್ತು ಕೊಡಗು ಜಿಲ್ಲೆಗಳಲ್ಲಿ ಸ್ಥಳಾಂತರ ಮಾಡಲಾಗಿದೆ ಎಂದು ವರದಿಯಲ್ಲಿ ಉಲ್ಲೇಖೀಸಲಾಗಿದೆ. ಅವರಿಗೆ ಪುನರ್ವಸತಿ ಕಲ್ಪಿಸಲು ಸರ್ಕಾರ ತಕ್ಷಣವೇ ಕ್ರಮ ವಹಿಸಬೇಕು. ಜೊತೆಗೆ, ಇದಕ್ಕೆ ಅರ್ಹರಾಗಿರುವ ಗಿರಿಜನ ಕುಟುಂಬಗಳಿಗೆ ಅರಣ್ಯಇಲಾಖೆಯಿಂದ ದೊರೆಯುವ ಪರಿಹಾರ ಸೌಲಭ್ಯವನ್ನೂ ಕಲ್ಪಿಸಬೇಕು ಎಂದು ಸಭೆ ನಿರ್ಣಯಿಸಿದೆ.
ಸಾಹಿತಿ ಪ್ರೊ.ಕಾಳೇಗೌಡ ನಾಗವಾರ ಮಾತನಾಡಿ, ಬುಡಕಟ್ಟು ಸಮುದಾಯವನ್ನು ಸಮಾಜದ ಮುಖ್ಯವಾಹಿನಿ ತರಬೇಕಿದ್ದು, ಅದಕ್ಕಾಗಿ ವೈಜ್ಞಾನಿಕವಾಗಿ ಮತ್ತು ಜನಸಂಖ್ಯೆಅನುಗುಣವಾಗಿ ಈ ಸಮುದಾಯಕ್ಕೆ ಒಳಮೀಸಲಾತಿಯನ್ನು ಹಂಚಿಕೆ ಮಾಡಬೇಕು.ಆದರೆ, ಈ ಕುರಿತು ರಾಜಕೀಯ ಪಕ್ಷಗಳು ಮೌನವಾಗಿವೆ ಎಂದು ಬೇಸರ ವ್ಯಕ್ತಪಡಿಸಿದರು. ಬುಡಕಟ್ಟು ಸಮುದಾಯದ ಮೌಲ್ಯಯುತ ಸಂಸ್ಕೃತಿಯನ್ನು ಆಧುನಿಕ ಸಮಾಜ ಮುಕ್ತವಾಗಿ ಸ್ವೀಕರಿಸಬೇಕು. ಅದನ್ನುಅಳವಡಿಸಿಕೊಂಡು ಸಾಗಬೇಕು. ಇದರಿಂದ ಗಿರಿಜನರ ಪರಂಪರೆ, ಸಂಸ್ಕೃತಿ ಉಳಿಯಲು ಸಾಧ್ಯ ಎಂದು ತಿಳಿಸಿದರು.
ಸಭೆಯಲ್ಲಿ ನಿವೃತ್ತ ಪ್ರಾಧ್ಯಾಪಕ ಪ್ರೊ.ಬಿ.ಪಿ.ಮಹೇಶ್ ಚಂದ್ರಗುರು, ವೇದಿಕೆ ಅಧ್ಯಕ್ಷಕೆ.ಎಸ್.ಶಿವರಾಮು, ಎಚ್.ಡಿ.ಕೋಟೆಯಲ್ಯಾಂಪ್ಸ್ ಸೊಸೈಟಿಯ ನಿರ್ದೇಶಕ ಚಿಕ್ಕಣ್ಣ,ಗುಂಡ್ಲುಪೇಟೆ ಸಾಯಿ ಪ್ರಗತಿ ಫೌಂಡೇಷನ್ ಡಾ.ಎಸ್.ರತ್ನಮ್ಮ, ಪ್ರಗತಿಪರ ಕೃಷಿಕ ಕ್ಷೀರಸಾಗರ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಗ್ರಾಪಂ ಚುನಾವಣೆಯಲ್ಲೂ ಗೆದ್ದಿಲ್ಲ :
ಸಭೆಯಲ್ಲಿ ಮಾತನಾಡಿದ ಆದಿವಾಸಿ ಸಮಾಜದ ಮುಖಂಡ ಎಚ್.ಡಿ.ಕೋಟೆಯ ಸೋಮಣ್ಣ, ನಮ್ಮ ಸಮುದಾಯದ ಒಬ್ಬ ವ್ಯಕ್ತಿಕೂಡ ಈ ವರೆಗೆ ಗ್ರಾಮ ಪಂಚಾಯಿತಿ ಚುನಾವಣೆಯಲ್ಲಿ ಗೆಲ್ಲಲು ಸಾಧ್ಯವಾಗಿಲ್ಲ. ಇನ್ನು ಉಳಿದ ಅಧಿಕಾರ, ಸ್ಥಾನಮಾನ ಈಗಲೂ ಗಗನಕುಸುಮವಾಗಿದೆ. ಒಳ ಮೀಸಲಾತಿ ಸೌಲಭ್ಯ ದೊರೆಯದಿದ್ದರೆ ಬುಡಕಟ್ಟು ಜನರ ಅಸ್ತಿತ್ವ ಉಳಿಯುವುದುಕಷ್ಟಕರ ಎಂದು ಆತಂಕ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.