ಪುನರ್ವಸತಿ ಕೇಂದ್ರದ ಆದಿವಾಸಿಗಳು ಬೀದಿಪಾಲು!
Team Udayavani, Sep 27, 2021, 4:45 PM IST
ಎಚ್.ಡಿ.ಕೋಟೆ: “ಎಲ್ಲಾ ಸೌಕರ್ಯ ಒದಗಿಸಿ ಕೊಡುವ ಭರವಸೆ ನೀಡಿ, ನಮ್ಮನ್ನು ಅರಣ್ಯದಿಂದ ಒಕ್ಕಲೆಬ್ಬಿಸಿ ಪುನರ್ವಸತಿ ಕೇಂದ್ರಕ್ಕೆ ಕರೆ ತಂದಿದ್ದು ಮೂಲ ಸೌಕರ್ಯ ಕಲ್ಪಿಸದೇ ಸರ್ಕಾರ ನಮ್ಮನ್ನು ಬೀದಿಪಾಲು ಮಾಡಿದೆ’.
ಇದು ಪುನರ್ವಸತಿ ಕೇಂದ್ರದ ಆದಿವಾಸಿಗಳ ಅಳಲು. ಕಳೆದ ಸುಮಾರು 4ವರ್ಷಗಳ ಹಿಂದೆ ಎಚ್.ಡಿ. ಕೋಟೆ, ಹುಣಸೂರು ಮತ್ತು ಪಿರಿಯಾಪಟ್ಟಣತಾಲೂಕುಗಳ ಅರಣ್ಯದಲ್ಲಿದ್ದ ಆದಿವಾಸಿಗರಿಗೆಪುನರ್ವಸತಿ ಕಲ್ಪಿಸುವ ಭರವಸೆ ನೀಡಿ, ಪ್ರತಿ ಕುಟುಂಬಕ್ಕೆ ತಲಾ 15ಲಕ್ಷ ರೂ. ಅಂದಾಜು ವೆಚ್ಚದಫ್ಯಾಕೇಜ್ ಘೋಷಣೆ ಮಾಡಿ 200ಕ್ಕೂ ಅಧಿಕಆದಿವಾಸಿ ಕುಟುಂಬಗಳನ್ನು ಎಚ್.ಡಿ.ಕೋಟೆ ತಾಲೂಕಿನ ಮಾಸ್ತಿಗುಡಿ ಪುನರ್ವಸತಿ ಕೇಂದ್ರಕ್ಕೆಸ್ಥಳಾಂತರಿಸಲಾಗಿದೆ.
ಮಾಸ್ತಿಗುಡಿ ಪುನರ್ವಸತಿ ಕೇಂದ್ರಕ್ಕೆ ಸ್ಥಳಾಂತರಗೊಂಡು 4ವರ್ಷ ಕಳೆಯುತ್ತಿದ್ದರೂ ಅಗತ್ಯಸೌಲಭ್ಯ ಒದಗಿಸಿಲ್ಲ. ಮನೆ ಮತ್ತು ಭೂಮಿಗೆ ಹಕ್ಕುಪತ್ರನೀಡಿಲ್ಲ. ಭೂಮಿ ಉಳುಮೆ ಮಾಡಿಸಿಲ್ಲ. ಒಟ್ಟಾರೆ ಹೇಳುವುದಾದರೆ ಅರಣ್ಯದಲ್ಲಿ ಇದ್ದಾಗ, ಹೇಗೋ ಗೆಡ್ಡೆ-ಗೆಣಸು ಸೇವಿಸಿ ಜೀವನ ನಡೆಸುತ್ತಿದ್ದ ನಾವೀಗ ಅತಂತ್ರ ಸ್ಥಿತಿ ತಲುಪಿದ್ದೇವೆ ಅನ್ನುತ್ತಾರೆ ಆದಿವಾಸಿಗರು.
ಕೂಲಿಗಾಗಿ ಗುಳೆ: ಸರ್ಕಾರದ ಭರವಸೆ ಮಾತು ಗಳಿಂದ ಕಾಡುಬಿಟ್ಟು ನಾಡಿಗೆ ಬಂದ ನಮ್ಮ ಸ್ಥಿತಿಶೋಚನೀಯವಾಗಿದೆ. ಜೀವನೋಪಾಯಕ್ಕಾಗಿ ಕೂಲಿಗಾಗಿ ಉದ್ಯೋಗ ಅರಸಿ ನೆರೆಯ ಕೊಡಗು, ಕೇರಳ ಜಿಲ್ಲೆಗೆ ಗುಳೆ ಹೋಗಬೇಕಾದ ಸ್ಥಿತಿ ಇದೆ. ಹೊಟ್ಟೆಪಾಡಿಗಾಗಿ ತಿಂಗಳುಗಟ್ಟಲೆ ಮಕ್ಕಳ ಜತೆ ಕೂಲಿಕೆಲಸ ಮಾಡುವ ಜಾಗದಲ್ಲಿಯೇ ತಂಗಬೇಕಾದ ಸ್ಥಿತಿಇದೆ. ಮಡದಿ, ಮಕ್ಕಳ ಸಮೇತ ಗುಳೆ ಹೋಗುವುದರಿಂದ ಮಕ್ಕಳ ಶೈಕ್ಷಣಿಕ ಪ್ರಗತಿಯೂ ಕುಂಠಿತವಾಗುತ್ತಿದೆ ಎನ್ನುತ್ತಾರೆ.
ಈ ಪುನರ್ವಸತಿ ಕೇಂದ್ರದಲ್ಲಿ ಎಲ್ಲಾ ರೀತಿಯ ಮೂಲಭೂತ ಸೌಲಭ್ಯ ಕಲ್ಪಿಸಬೇಕು, ಪ್ರತಿ ಕುಟುಂಬಕ್ಕೆ ತಲಾ 2ಎಕರೆ ಭೂಮಿ ನೀಡಬೇಕು, 3-4ವರ್ಷ ಭೂಮಿ ಉಳುಮೆ ಸೇರಿ ಕೃಷಿ ಚಟುವಟಿಕೆ ಸರ್ಕಾರಮಾಡಿಕೊಡಬೇಕು, ವಾಸಕ್ಕೆ ಸುಸಜ್ಜಿತ ಮನೆ ನಿರ್ಮಿಸಿಕೊಡಬೇಕು ಇತ್ಯಾದಿ ಷರತ್ತುಗಳಿದ್ದರೂ ಪಾಲನೆ ಆಗಿಲ್ಲ ಎಂದು ಆರೋಪಿಸಿದ್ದಾರೆ.
ಪಾಳು ಬಿದ್ದಿರುವ ಮನೆಗಳು:
ಪುನರ್ವಸತಿ ಕೇಂದ್ರದಲ್ಲಿನ ಬಹುತೇಕ ಮನೆಗಳು ಪಾಳುಬಿದ್ದಿವೆ. ಪಾಳುಬಿದ್ದ ಮನೆಗಳು ಆದಿವಾಸಿ ಮಕ್ಕಳ ಆಟದ ತಾಣದ ಜತೆಗೆ ಅನೈತಿಕ ತಾಣವಾಗುತ್ತಿದೆ. ಹಲವು ಮನೆಗಳಲ್ಲಂತೂ ಹೇಸಿಗೆ ಮಾಡಿ ಮನೆಯೊಳಗೆ ಪ್ರವೇಶಿಸಲೂ ಸಾಧ್ಯವಾಗದ ಸ್ಥಿತಿ ನಿರ್ಮಾಣಗೊಂಡಿದೆ. ಈ ಮನೆಗಳು ತೀರಾ ಕಿರಿದಾಗಿದ್ದು ಒಂದೊಂದುಮನೆಯಲ್ಲಿ ಕಿರಿದಾದ 1 ಬೆಡ್‌ರೂಂ, 1 ಹಾಲ್, ಅಡುಗೆ ಮನೆ,ಸ್ನಾನದ ಮನೆ ಮತ್ತು ಶೌಚಾಲಯ ಒಳಗೊಂಡಿದೆ. ಆದರೆ,ಅವೈಜ್ಞಾನಿಕವಾಗಿ ತೀರ ಕಿರಿದಾದ ಮನೆಗಳಲ್ಲಿ ಸುಮಾರು 5-6ಮಂದಿವಾಸಮಾಡಲು ಯೋಗ್ಯವಾಗಿದೆ. ಹೆಚ್ಚಿನ ಜನರಿದ್ದರೆ ಮನೆ ಹೊರ ಮಲಗಿ ದಿನ ಕಳೆಯಬೇಕಾದ ಸ್ಥಿತಿ ಇದೆ.
ಜಮೀನು ಸಮತಟ್ಟು ಮಾಡಿ ಉಳುಮೆಮಾಡಿಲ್ಲ. ಮನೆ ಮತ್ತು ಜಮೀನಿಗೆ ಹಕ್ಕುಪತ್ರ ನೀಡಿಲ್ಲ.ನಮ್ಮ ಪಾಡು ನಾಯಿಗಿಂತ ಕೀಳಾಗಿದೆ. ಗುಳೆ ಹೋಗಿ ಕೂಲಿ ಮಾಡಿ ತಿನ್ನುವ ನಾವು ಮೊದಲಿದ್ದ ಜಾಗದಲ್ಲೇ ಇರಬಹುದಿತ್ತು.-ನಿಂಗಮ್ಮ, ಪುನರ್ವಸತಿ ಮಹಿಳೆ
ಇಲ್ಲಿ ನಿರ್ಮಿಸಿರುವ ಮನೆಗಳು ಆದಿವಾಸಿಗರ ಸಂಪ್ರದಾಯ ದಂತೆ ನಿರ್ಮಾಣವಾಗಿಲ್ಲ. 2006ರ ಅರಣ್ಯ ಹಕ್ಕು ಕಾಯ್ದೆಯಂತೆ ಆದಿವಾಸಿಗರನ್ನು ಅರಣ್ಯದಲ್ಲೇ ಅಭಿವೃದ್ಧಿಮಾಡಬೇಕೆಂಬ ನಿಯಮವಿದ್ದರೂಬಲವಂತವಾಗಿ ಸ್ಥಳಾಂತರಿಸಿ ಸೌಲಭ್ಯಕಲ್ಪಿಸದೇ ಇರುವುದು ವಿಪರ್ಯಾಸ.-ನಂಜುಂಡಯ್ಯ, ನಿಸರ್ಗ ಸಂಸ್ಥೆ ನಿರ್ದೇಶಕ
-ಎಚ್.ಬಿ.ಬಸವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Arvind Kejriwal ವಾಗ್ದಾಳಿ: ತನಿಖೆಗೆ ಆದೇಶದ ಬಳಿಕ ಬಿಜೆಪಿ-ಕಾಂಗ್ರೆಸ್ ವಿರುದ್ಧ ಆಕ್ರೋಶ
‘I am single’; ಅರ್ಜುನ್ ಕಪೂರ್ ಕಾಮೆಂಟ್‌ಗೆ ಕೊನೆಗೂ ಮಲೈಕಾ ಅರೋರಾ ಪ್ರತಿಕ್ರಿಯೆ
Owaisi: ಮದ್ಯದಂಗಡಿ ತೆರೆಯಲು ಮಾತ್ರ ಹಣವಿದೆ: ಉತ್ತರಪ್ರದೇಶ ಸರ್ಕಾರದ ವಿರುದ್ಧ ಒವೈಸಿ ಆರೋಪ
ಕೊಪ್ಪಳದಲ್ಲಿ ಕ್ಯಾನ್ಸರ್ ಖಾಯಿಲೆಗಿಲ್ಲ ಚಿಕಿತ್ಸೆ -114 ಜನರಲ್ಲಿ ಕ್ಯಾನ್ಸರ್ ಪತ್ತೆ!
ಬೆಳಗಾವಿ: ಎರಡೂ ಅಧಿವೇಶನಗಳಿಗೆ ಕಾಡಿದ ಶೋಕ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.