8 ವರ್ಷ ಬಳಿಕ ಬಸವ ಪೀಠಕ್ಕೆ ಸ್ವಂತ ಕಟ್ಟಡದ ಭಾಗ್ಯ


Team Udayavani, May 10, 2019, 4:43 PM IST

mys-1

ಮೈಸೂರು: ಕಳೆದ ಏಳೆಂಟು ವರ್ಷಗಳಿಂದ ಮೂಲೆಗುಂಪಾಗಿದ್ದ ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರ ಸದ್ಯದಲ್ಲಿಯೇ ಸ್ವಂತ ಕಟ್ಟಡ ಹೊಂದುವ ನಿರೀಕ್ಷೆಯಲ್ಲಿದೆ.

ಸಮಾನತೆ ಮತ್ತು ಸಮಾಜಿಕ ಕ್ರಾಂತಿಯ ಹರಿಕಾರರಾದ ಬಸವಣ್ಣನವರ ತತ್ವ ಮತ್ತು ಸಿದ್ಧಾಂತ ಹಾಗೂ 12 ನೇ ಶತಮಾನದಲ್ಲಿ ಶರಣರು ವಚನ ಸಾಹಿತ್ಯಕ್ಕೆ ಕೊಟ್ಟ ಕೊಡುಗೆ, ವಚನ ಸಾಹಿತ್ಯದ ಮಹತ್ವ ಅರಿಯಲು, 2011ರಲ್ಲಿ ಮೈಸೂರು ವಿಶ್ವವಿದ್ಯಾಲಯದ ಮಾನಸಗಂಗೋತ್ರಿಯ ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ ಸಂಶೋಧನೆ ಮತ್ತು ವಿಸ್ತರಣಾ ಕೇಂದ್ರವನ್ನು ಆರಂಭಿಸಲಾಗಿತ್ತು. ಆದರೆ, ಸಮರ್ಪಕ ನಿರ್ವಹಣೆ, ಕ್ರಿಯಾಶೀಲತೆ ಹಾಗೂ ಸಮರ್ಥ ನೇತರರ ಕೊರತೆಯಿಂದ ಮೂಲೆಗುಂಪಾಗಿತ್ತು.

ಇತ್ತೀಚಿನ ದಿನಗಳಲ್ಲಿ ವಚನ ಸಾಹಿತ್ಯದ ಬಗ್ಗೆ ಅಧ್ಯಯನ ಹಾಗೂ ಸಂಶೋಧನೆ ಮಾಡಲು ಹೆಚ್ಚು ಆಸಕ್ತಿ ವಹಿಸುವವರ ಸಂಖ್ಯೆ ಹೆಚ್ಚಾಗಿದ್ದು, ಜಗತ್ತಿನ ಅಮೆರಿಕ, ಯುರೋಪ್‌ ದೇಶಗಳಲ್ಲಿ ವಚನ ಸಾಹಿತ್ಯ ಹೆಚ್ಚು ಪ್ರಖ್ಯಾತಿ ಪಡೆದುಕೊಂಡಿದೆ. ಈ ಹಿನ್ನೆಲೆ ರಾಜ್ಯ ಸರ್ಕಾರ ಮತ್ತು ವಿಶ್ವವಿದ್ಯಾಲಯ ಬಸವ ಅಧ್ಯಯನ ಪೀಠಕ್ಕೆ ನೂತನ ಕಟ್ಟಡವನ್ನು ನಿರ್ಮಿಸಲು ಮುಂದಾ ಗಿದೆ. ಇದೇ ತಿಂಗಳ ಮೇ 11ರಂದು ಶನಿವಾರ ಕಟ್ಟಡ ನಿರ್ಮಾಣಕ್ಕೆ ಭೂಮಿಪೂಜೆ ನಡೆಯಲಿದೆ.

ಒಂದು ಕೊಠಡಿಗೆ ಸೀಮಿತವಾಗಿದ್ದ ಕೇಂದ್ರ: ಕುವೆಂಪು ಕನ್ನಡ ಅಧ್ಯಯನ ಸಂಸ್ಥೆಯಲ್ಲಿ 2011ರಲ್ಲಿ ಬಸವ ಅಧ್ಯಯನ ಪೀಠ ಆರಂಭಿಸಲಾಗಿತ್ತಾದರೂ, ಅದು ಕೇವಲ ಒಂದು ಕೊಠಡಿಗೆ ಸೀಮಿತವಾಗಿತ್ತು. ಪುಸ್ತಕಗಳ ಪ್ರಕಟಣೆ ಮತ್ತು ವಿಶೇಷ ಉಪನ್ಯಾಸ ಹಾಗೂ ಸಂದರ್ಶನ ಕಾರ್ಯಕ್ರಮಗಳಿಗಷ್ಟೇ ಸೀಮಿತ ಎಂಬಂತಿತ್ತು.

ಸರ್ಕಾರದ ಅನುದಾನ: ಸಿದ್ದರಾಮಯ್ಯ ನೇತೃತ್ವದ ಸರ್ಕಾರ‌ 2018ರ ತನ್ನ ಕೊನೆಯ ಬಜೆಟ್‌ನಲ್ಲಿ ಮೈಸೂರು ವಿಶ್ವವಿದ್ಯಾಲಯದಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಬಸವ ಅಧ್ಯಯನ ಪೀಠ ತೆರೆಯಲು ಅನುಮೋದನೆ ನೀಡಿತ್ತು. ನಂತರ ಒಂದು ವರ್ಷದ ಬಳಿಕ ರಾಜ್ಯ ಸರ್ಕಾರ ವಿವಿಗೆ 2 ಕೋಟಿ ರೂ. ಅನುದಾನ ಜಾರಿಗೊಳಿಸಿದ್ದು, ಕಟ್ಟಡ ನಿರ್ಮಾಣಕ್ಕೆ ಸದ್ದಿಲ್ಲದೇ ಸಕಲ ಸಿದ್ಧತೆ ನಡೆಯುತ್ತಿದೆ.

ದಿನೇ ದಿನೆ ಹೆಚ್ಚು ಜನಪ್ರಿಯವಾಗುತ್ತಿರುವ ಶಿವಶರಣ ವಚನ ಸಾಹಿತ್ಯ ವಿಶ್ವದ ಎಲ್ಲಾ ಸಾಹಿತ್ಯಕ್ಕಿಂತ ತನ್ನದೇ ಆದ ವೈಶಿಷ್ಟ್ಯವನ್ನು ಪಡೆದುಕೊಂದೆ. ಯಾವುದೇ ದೇಶ, ಭಾಷೆಯಲ್ಲಿ ಇಂತಹ ಸಾಹಿತ್ಯ ಇಲ್ಲದಿರುವುದು ಕನ್ನಡ ಸಾಹಿತ್ಯ, ಕನ್ನಡಿಗರ ಹಮ್ಮೆಯ ವಿಚಾರ. ಆದರೆ, ಕರ್ನಾಟಕದ ಮೊದಲ ವಿಶ್ವ ವಿದ್ಯಾಲಯ ಎಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಮೈಸೂರು ವಿವಿಯಲ್ಲಿ ಸಾಮಾಜಿಕ ಹರಿಕಾರ ಬಸವಣ್ಣ ನವರ ಅಧ್ಯಯನ ಪೀಠವನ್ನು ಸ್ವತಂತ್ರವಾಗಿ ಆರಂಭಿ ಸಲು ಈವರೆಗೆ ಕೈ ಹಾಕದಿರುವುದು ಸಾಹಿತ್ಯಾಭಿಮಾನಿಗಳಲ್ಲಿ ಬೇಸರ ತರಿಸಿತ್ತು. ಜೊತೆಗೆ ಹಲವು ಬಾರಿ ಈ ಬಗ್ಗೆ ಖಂಡನೆಯನ್ನು ವ್ಯಕ್ತಪಡಿಸಿದ್ದರು.

ಮುಕ್ತ ಆಯ್ಕೆ ಕೋರ್ಸ್‌ ಆರಂಭ: 2018-19ರ ಶೈಕ್ಷಣಿಕ ವರ್ಷದಿಂದ ಸ್ನಾತ್ತಕೋತ್ತರ ವಿದ್ಯಾರ್ಥಿಗಳಿಗೆ ಮುಕ್ತ ಆಯ್ಕೆ (ಓಪನ್‌ ಎಲೆಕ್ಟಿವ್‌) ಪತ್ರಿಕೆಯನ್ನು ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ ಸಂಶೋಧನೆ ಮತ್ತು ವಿಸ್ತರಣಾ ಕೆಂದ್ರದಲ್ಲಿ ಪರಿಚಯಿಸಿದ್ದು, ಮೊದಲ ವರ್ಷವೇ 44 ವಿದ್ಯಾರ್ಥಿಗಳು ಅರ್ಜಿಸಿಲ್ಲಿಸಿ ತರಗತಿಯಲ್ಲಿ ಪಾಲ್ಗೊಂಡಿದ್ದಾರೆ. ಜೊತೆಗ ಮೇ-ಜೂನ್‌ನಲ್ಲಿ ಪರೀಕ್ಷೆಯನ್ನು ಬರೆಯಲಿದ್ದಾರೆ.

ಹೊಸ ಕಟ್ಟಡದಿಂದ ಪ್ರಯೋಜನಗಳು: ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ ಸಂಶೋಧನೆ ಮತ್ತು ವಿಸ್ತರಣಾ ಕೆಂದ್ರಕ್ಕೆ ಸ್ವಂತ ಕಟ್ಟಡ ಸಿಕ್ಕರೆ ಸ್ವತಂತ್ರವಾಗಿ ತರಗತಿಗಳನ್ನು ನಡೆಸಲು, ವಚನ ಸಾಹಿತ್ಯ ಮತ್ತು ಪರಂಪರೆ ಬಗ್ಗೆ ಅಧ್ಯಯನ ಹಾಗೂ ಸಂಶೋಧನೆಗೆ ಪೂರಕವಾಗಲಿದೆ. ಅಗತ್ಯ ತರಗತಿಗಳು, ಗ್ರಂಥಲಯ, ಸಭಾಂಗಣವೂ ಇರಲಿದೆ. ಈ ಎಲ್ಲದರಿಂದ ಶರಣ ಸಾಹಿತ್ಯವನ್ನು ಮುಂದಿನ ಪಿಳಿಗೆಗೂ ಕೊಂಡೊಯ್ಯಲು ಸಹಕಾರಿಯಾಗಬಲ್ಲದು ಎಂಬುದು ಕೇಂದ್ರದ ಸಂದರ್ಶಕ ಪ್ರಾಧ್ಯಾಪಕರ ಆಶಯ.

ಬಡ್ಡಿ ಹಣದಲ್ಲಿ ಕಾರ್ಯ ಚಟುವಟಿಕೆ: ಸರಕಾರ ಒಂದು ನಿರ್ದಿಷ್ಟ ಮೊತ್ತವನ್ನು ನೀಡಿದ್ದು, ಇದರಲ್ಲಿ ಬರುವ ಬಡ್ಡಿ ಹಣದಿಂದ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ ಸಂಶೋಧನೆ ಮತ್ತು ವಿಸ್ತರಣಾ ಕೆಂದ್ರದ ಕಾರ್ಯ ಚಟುವಟಿಕೆಗಳು ನಡೆಯುತ್ತದೆ. ಇದೇ ಹಣದಿಂದ ಹೊಸ ಕೋರ್ಸ್‌, ಅಧ್ಯಯನ, ಸಂಶೋಧನೆ ನಡೆಸಲು ಸಾಧ್ಯವಾಗುವುದಿಲ್ಲ. ಈ ಬಗ್ಗೆ ಸರಕಾರ ಹೆಚ್ಚು ಗಮನಹರಿಸಬೇಕಿದೆ ಎಂಬುದು ಪ್ರಾಧ್ಯಾಪಕರೋಬ್ಬರ ಅಭಿಪ್ರಾಯ.

ಶೀಘ್ರವೇ ಸರ್ಟಿಫಿಕೇಟ್ ಕೋರ್ಸ್‌
ಮೈಸೂರು ವಿವಿ ಅನುಮತಿ ಪಡೆದು ಶೀಘ್ರವೇ ಪದವಿ ಶಿಕ್ಷಣ ಪೂರೈಸಿದ ವಿದ್ಯಾರ್ಥಿಗಳಿಗೆ ಹಾಗೂ ಶರಣ ಸಾಹಿತ್ಯದ ಬಗ್ಗೆ ಆಸಕ್ತಿ ಇರುವವರಿಗೆ ಸರ್ಟಿಫಿಕೇಟ್ ಕೋರ್ಸ್‌ ಆರಂಭಿಸಲು ಚಿಂತನೆ ನಡಸಲಾಗಿದೆ. ವಿದೇಶದ ಸಾಕಷ್ಟು ವಿದ್ಯಾರ್ಥಿಗಳು ಇದರಲ್ಲಿ ಆಸಕ್ತಿ ವಹಿಸಿದ್ದು, ಇಂಗ್ಲಿಷ್‌ ಭಾಷೆಯಲ್ಲೂ ಬೋಧನೆ ನಡೆಸಲಾಗುವುದು. ಶರಣರ ವಿಚಾರಧಾರೆಗಳು, ತತ್ವ, ಸಿದ್ಧಾಂತಗಳು ಕೇವಲ 12ನೇ ಶತಮಾನಕ್ಕೆ ಸೀಮಿತವಲ್ಲ. ಇಂದಿಗೂ, ಮುಂದಿನ ಪೀಳಿಗೆಗೂ ಅಗತ್ಯವಿದೆ. ಈ ನಿಟ್ಟಿನಲ್ಲಿ ವಿಶ್ವಮಟ್ಟದಲ್ಲಿ ಬಸವಣ್ಣ ಮತ್ತು ಶರಣರ ವಚನ ಸಾಹಿತ್ಯದ ಬಗ್ಗೆ ಪಸರಿಸಲು ಆನ್‌ಲೈನ್‌ ಮೂಲಕ ಕಾರ್ಯಕ್ರಮ ಹಮ್ಮಿಕೊಳ್ಳುತ್ತೇವೆ ಎಂದು ಶ್ರೀ ಬಸವೇಶ್ವರ ಸಾಮಾಜಿಕ ಪರಿಷ್ಕರಣೆ ಸಂಶೋಧನೆ ಮತ್ತು ವಿಸ್ತರಣಾ ಕೆಂದ್ರದ ಸಂದರ್ಶಕ ಪ್ರಾಧ್ಯಾಪಕ ಡಾ.ಚಂದ್ರಶೇಖರಯ್ಯ ಹೇಳುತ್ತಾರೆ.
2018ರ ಬಜೆಟ್‌ನಲ್ಲಿ ಸರ್ಕಾರ ಬಸವ ಅಧ್ಯಯನ ಪೀಠಕ್ಕೆ ಹೊಸ ಕಟ್ಟಡ ನಿರ್ಮಾಣ ಮಾಡಲು 2 ಕೋಟಿ ರೂ. ಘೋಷಣೆ ಮಾಡಿತ್ತು. ವರ್ಷದ ಬಳಿಕ ಅನುದಾನವನ್ನು ನೀಡಿದೆ. ಈ ಹಿನ್ನೆಲೆ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆಯನ್ನು ಮೇ
11ರಂದು ಶನಿವಾರ ಮಾಡಲಿದ್ದೇವೆ. ಮಾನಸ ಗಂಗೋತ್ರಿ ಆವರಣದಲ್ಲಿರುವ ರೇಷ್ಮೆ ಕೃಷಿ ಅಧ್ಯಯನ ಸಂಸ್ಥೆಯ ಹಿಂಭಾಗ ಸ್ಥಳ ಗುರುತಿಸಲಾಗಿ¨
ಪ್ರೊ.ಹೇಮಂತ್‌ ಕುಮಾರ್‌, ಮೈಸೂರು ವಿವಿ ಕುಲಪತಿ

ಸತೀಶ್‌ ದೇಪುರ

ಟಾಪ್ ನ್ಯೂಸ್

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

naki

Naki Sumo: ಮಗುವನ್ನು ಅಳಿಸುವ ವಿಚಿತ್ರ ಆಚರಣೆ !; ನಡೆಯುವುದಾದರು ಎಲ್ಲಿ?

mohan bhagwat

RSS; ಹಿಂದೂ ಸಮಾಜ ದೇಶದ ಜವಾಬ್ದಾರಿಯುತ ಸಮುದಾಯ: ಮೋಹನ್ ಭಾಗವತ್

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

IPL 2025: ಐಪಿಎಲ್‌ ವೇಳಾಪಟ್ಟಿ ಪ್ರಕಟ; KKR vs RCB ಮೊದಲ ಮುಖಾಮುಖಿ- ಇಲ್ಲಿದೆ ಪಟ್ಟಿ

Lalu

Controversy; ಮಹಾಕುಂಭ ‘ಅರ್ಥಹೀನ’ ಎಂದ ಲಾಲು ಪ್ರಸಾದ್ ಯಾದವ್

1-sidda

Mahakumbh; ಸಿದ್ದರಾಮಯ್ಯನವರೇ 5 ವರ್ಷ ಸಿಎಂ ಆಗಿರಲಿ: ಅಭಿಮಾನಿಯ ಪ್ರಾರ್ಥನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು

Mys-Udgiri-1

Mob Attack: ಉದಯಗಿರಿ ಪೊಲೀಸ್‌ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ

24

80 ಸಾವಿರ ಲಂಚ ಸ್ವೀಕರಿಸುವಾಗ ಸಬ್‌ ಇನ್ಸ್‌ಪೆಕ್ಟರ್‌ ಲೋಕ ಬಲೆಗೆ

11

Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್‌’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್‌

MUST WATCH

udayavani youtube

ನಿಮ್ಮ ಅಚ್ಚುಮೆಚ್ಚಿನ ; ಆರೋಗ್ಯಕರ ಪಾನಿಪುರಿ ಸವಿಯಲು ಇಲ್ಲಿಗೆ ಬನ್ನಿ

udayavani youtube

ಭೀಕರ ಹಿಟ್ & ರನ್ ಸಂತ್ರಸ್ತರ ಪರ ನಿಂತ ಪುತ್ತೂರು ಶಾಸಕ ಅಶೋಕ್ ರೈ

udayavani youtube

ಶ್ರೀ ಬ್ರಹ್ಮಬೈದರ್ಕಳ ನೇಮೋತ್ಸವ, ಮಾಣಿಬಾಲೆ ನೇಮೋತ್ಸವ

udayavani youtube

ಸಾಹಿತ್ಯಾಸಕ್ತಿಯ ಚಹಾ ಅಂಗಡಿ

udayavani youtube

ಇಲ್ಲಿ ಪ್ರತಿಯೊಂದು ಗೋವುಗಳಿಗೂ ವಿಭಿನ್ನ ಹೆಸರಿದೆ

ಹೊಸ ಸೇರ್ಪಡೆ

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

Anekal: ಪತ್ನಿಯನ್ನು ಹೊತ್ತೂಯ್ದು 2ನೇ ಮಹಡಿಯಿಂದ ತಳ್ಳಿ ಕೊಂದ!

20

Udayavani-MIC ನಮ್ಮ ಸಂತೆ ಸಂಭ್ರಮ: ಜೇನುಗೂಡು, ಜೇನು ಹನಿ

Kuruburu-Shanta

Air Lift: ಪಂಜಾಬ್‌ನಲ್ಲಿ ರೈತ ಮುಖಂಡ ಶಾಂತಕುಮಾರ್‌ಗೆ ಅಪಘಾತ; ಬೆಂಗಳೂರಿಗೆ ಏರ್‌ಲಿಫ್ಟ್‌

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?

19

Bharamasagara: ವಿದ್ಯುತ್ ಕಿಡಿಗೆ ಎರಡು‌ ಮೇವಿನ ಬಣವೆ ಸಂಪೂರ್ಣ ಭಸ್ಮ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.