ಹದ ಮಳೆಗೆ ಕೃಷಿ ಚಟುವಟಿಕೆ ಬಿರುಸು
Team Udayavani, Apr 19, 2021, 4:19 PM IST
ಯಳಂದೂರು: ತಾಲೂಕಿನಲ್ಲಿ ಕಳೆದ 5 ದಿನಗಳಿಂದಸುರಿಯುತ್ತಿರುವ ಮಳೆಯಿಂದ ರೈತರ ಮೊಗದಲ್ಲಿಮಂದಹಾಸ ಮೂಡಿದ್ದು, ಭೂಮಿಯನ್ನುಹದಗೊಳಿಸಿ ಬಿತ್ತನೆ ಬೀಜ ಖರೀದಿಸುವ ಕಾರ್ಯದಲ್ಲಿನಿರತರಾಗಿದ್ದಾರೆ.
ತಾಲೂಕಿನಲ್ಲಿ 2,000 ಹೆಕ್ಟೇರ್‌ಗೂ ಹೆಚ್ಚು ಕೃಷಿಭೂಮಿ ಇದೆ. ಪೂರ್ವ ಮಂಗಾರು ಮಳೆ ಸುರಿದಕಾರಣ ರೈತರು ಕೃಷಿ ಚಟುವಟಿಕೆಗಳನ್ನುಪ್ರಾರಂಭಿಸಿದ್ದು, ಜಮೀನನ್ನು ಉಳುಮೆ ಮಾಡಿ ಹದಮಾಡುವ ಮೂಲಕ ಬಿತ್ತನೆ ಖರೀದಿಸುತ್ತಿರುವದೃಶ್ಯಗಳು ಕಂಡುಬರುತ್ತಿವೆ. ಕೆಲವು ರೈತರುಕಾಳುಗಳನ್ನು ಬಿತ್ತನೆ ಮಾಡುತ್ತಿದ್ದರೆ, ಮತ್ತೆ ಕೆಲವರುಚಂಬೆಯನ್ನು ಬಿತ್ತನೆ ಮಾಡಲು ಭೂಮಿಯನ್ನುಸಜ್ಜುಗೊಳಿಸುತ್ತಿದ್ದಾರೆ.
ಮುಂಗಾರು ಆರಂಭಗೊಳ್ಳುವ ಹಿನ್ನೆಲೆಯಲ್ಲಿ ಈಅವಧಿಯಲ್ಲಿ ಬಿತ್ತನೆ ಮಾಡುವ ಹೆಸರು, ಅಲಸಂದೆ,ಉದ್ದು ಸೇರಿದಂತೆ ಇನ್ನಿತರೆ ಬಿತ್ತನೆಗಳಿಗೆ ಹೆಚ್ಚಿನ ಬೇಡಿಕೆಇದ್ದು, ಕೃಷಿ ಇಲಾಖೆಗೆ ರೈತರು ಆಗಮಿಸಿ ಬಿತ್ತನೆ ಬೀಜಖರೀದಿಸುತ್ತಿದ್ದಾರೆ. ಕೃಷಿ ಇಲಾಖೆಯು ರೈತರಿಗೆ ಅಗತ್ಯಬಿತ್ತನೆ ಬೀಜಗಳನ್ನು ನೀಡುವ ವ್ಯವಸ್ಥೆ ಮಾಡಿದ್ದು,ರೈತರಿಗೆ ಯಾವುದೇ ಸಮಸ್ಯೆಯಾಗದಂತೆಮುಂಜಾಗ್ರತೆ ಕ್ರಮ ಕೈಗೊಂಡಿದೆ ಎಂದು ರೈತಸಂಪರ್ಕ ಕೇಂದ್ರ ಸಿಬ್ಬಂದಿ ಪ್ರಭು ತಿಳಿಸಿದರು.ತಾಲೂಕಿನ ಹೊನ್ನೂರು, ಕೆಸ್ತೂರು, ಯರಗಂಬಳ್ಳಿ,ಗೌಡಹಳ್ಳಿ, ದುಗ್ಗಹಟ್ಟಿ, ಮೆಳ್ಳಹಳ್ಳಿ, ವೈ.ಕೆ. ಮೋಳೆ,ಕಂದಹಳ್ಳಿ, ಉಪ್ಪಿನಮೋಳೆ, ಯರಿಯೂರು, ಅಗರ,ಕಿನಕಹಳ್ಳಿ, ಮಾಂಬಳ್ಳಿ, ಮಲ್ಲಿಗೆಹಳ್ಳಿ ಸೇರಿದಂತೆಇತರೆ ಗ್ರಾಮಗಳಲ್ಲಿ ರೈತರು ತಮ್ಮ ಜಮೀನುಗಳಲ್ಲಿಟ್ರಾಕ್ಟರ್ ಹಾಗೂ ಎತ್ತುಗಳ ಮೂಲಕ ಉಳುಮೆಮಾಡುತ್ತಿದ್ದಾರೆ.
ಭೂಮಿಯನ್ನು ಹದಗೊಳಿಸಿದ್ದು,ಮುಂದಿನ ಮಳೆಗೆ ಮುಂಗಾರು ಬೆಳೆಗಳನ್ನು ಬಿತ್ತನೆಮಾಡಲಿದ್ದಾರೆ.ರೈತ ಸಂಪರ್ಕ ಕೇಂದ್ರದಲ್ಲಿ 2021-22ನೇ ಸಾಲಿನಲ್ಲಿ80 ಕ್ವಿಂಟಲ್ ಉದ್ದು , 6 ಕ್ವಿಂಟಲ್ ಅಲಸಂದೆ, 10ಕ್ವಿಂಟಲ್ ಹೆಸರು ದಾಸ್ತಾನು ಮಾಡಲಾಗಿದ್ದು, ಅಗತ್ಯದಾಖಲಾತಿ ನೀಡಿ ಬಿತ್ತನೆ ಬೀಜ ಪಡೆದುಕೊಳ್ಳಬೇಕೆಂದುಕೃಷಿ ಅಧಿಕಾರಿ ವೆಂಕಟರಂಶೆಟ್ಟಿ ತಿಳಿಸಿದ್ದಾರೆ.
ರೈತರಿಗೆ ಈಗಾಗಲೇ ಬಿತ್ತನೆ ಬೀಜ ವಿತರಿಸಲಾಗುತ್ತಿದ್ದು, 4 ಕ್ವಿಂಟಲ್ ಉದ್ದು , 50 ಕೆ.ಜಿ.ಅಲಸಂದೆ,50 ಕೆ.ಜಿ. ಹೆಸರು ಬಿತ್ತನೆ ಬೀಜ ವಿತರಿಸಲಾಗಿದೆ.ರೈತರಿಗೆ ಬಿತ್ತನೆ ಬೀಜದ ಪೂರೈಕೆಯಲ್ಲಿಯಾವುದೇ ತೊಂದರೆಯಾಗದಂತೆ ವಿತರಿಸುವವ್ಯವಸ್ಥೆಯನ್ನು ಮಾಡಲಾಗಿದೆ. ಕಡ್ಡಾಯವಾಗಿಆರ್‌ಟಿಸಿ, ಆಧಾರ್ ಖಾರ್ಡ್, ಹಾಗೂ ಪರಿಶಿಷ್ಟಜಾತಿ, ಪಂಗಡದವರಿಗೆ ಜಾತಿ ಪ್ರಮಾಣ ಪತ್ರದಾಖಲಾತಿ ನೀಡಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.