ಕೋಟೆಯಲ್ಲಿ ಗರಿಗೆದರಿದ ಕೃಷಿ ಚಟುವಟಿಕೆ
Team Udayavani, May 16, 2023, 3:23 PM IST
ಎಚ್.ಡಿ.ಕೋಟೆ : ತಾಲೂಕಿನಾದ್ಯಂತ ಈಗಾಗಲೇ ಹಲವಾರು ಬಾರಿ ಮುಂಗಾರು ಮಳೆ ರೈತರ ನಿರೀಕ್ಷೆ ಪ್ರಮಾಣದಲ್ಲಿ ಬಿದ್ದ ಹಿನ್ನೆಲೆಯಲ್ಲಿ ಮೊದಲೇ ಭೂಮಿ ಉಳುಮೆ ಮಾಡಿಕೊಂಡಿದ್ದ ರೈತರೀಗ ಪೈರು ನಾಟಿ ಮಾಡಿ ಕೃಷಿ ಚಟುವಟಿಕೆಯಲ್ಲಿ ತಲ್ಲೀನರಾಗಿದ್ದಾರೆ.
ಕಳೆದ ಒಂದುವರೆ ತಿಂಗಳಿಂದ ಬೇಸಿಗೆ ಉರಿ ಬಿಸಿಲಿನ ಕಾವಿಗಿಂತ ರಾಜ್ಯಾದ್ಯಂತ ಚುನಾವಣಾ ಕಾವು ಸಹಿಸಲಾಗದ ಸ್ಥಿತಿಯಲ್ಲಿತ್ತು. ಕಳೆದ ವಾರದ ಹಿಂದೆ ವಿಧಾನಸಭಾ ಚುನಾವಣೆ ಮತದಾನ ಕೂಡ ಮುಗಿದು ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಬಹುಮತದೊಂದಿಗೆ ನೂತನ ಸರ್ಕಾರ ರಚನೆಗೆ ಸಿದ್ಧವಾಗುತ್ತಿದೆ. ಹೀಗಿರುವಾಗ ಪಕ್ಷಗಳ ನಾಯಕರು, ಮುಖಂಡರು ಅಷ್ಟೇ ಏಕೆ ಮಧ್ಯವರ್ತಿಗಳು ಸೇರಿದಂತೆ ಮತದಾರರೂ ಕೂಡ ಚುನಾವಣಾ ಬಿಸಿಯಲ್ಲಿ ಕಾಲಹರಣ ಮಾಡಿದ್ದರು. ಆದರೆ ಇದಾವುದನ್ನೂ ಲೆಕ್ಕಿಸದ ತಾಲೂಕಿನ ಬಹುಸಂಖ್ಯೆ ರೈತರು ರಾಜಕಾರಣಿಗಳಾಗಲಿ, ಮುಖಂಡ ರಾಗಲಿ ನಮಗೇನೂ ಕೊಡೊಲ್ಲ, ನಾವು ದುಡಿದರೆ ಮಾತ್ರ ನಮಗೆ ನಮ್ಮ ಕುಟುಂಬಕ್ಕೆ ಅಷ್ಟೇ ಏಕೆ ಇಡೀ ದೇಶಕ್ಕೆ ಅನ್ನ ಅನ್ನುವ ಸತ್ಯ ಮನಗಂಡು ಮತದಾನದ ದಿನವಷ್ಟೇ ಮತದಾನ ಮಾಡುವ ವೇಳೆಯನ್ನಷ್ಟೇ ಬಳಕೆ ಮಾಡಿಕೊಂಡ ಅನ್ನದಾತರು ಸದಾ ಜಮೀನಿನ ಕೃಷಿ ಚಟುವಟಿಕೆಯಲ್ಲೇ ತೊಡಗಿದ್ದರು. ಕಳೆದ ಹಲವು ದಿನಗಳ ಹಿಂದಿನಿಂದ ಹಲವಾರು ಬಾರಿ ತಾಲೂಕಾದ್ಯಂತ ರೈತರ ನಿರೀಕ್ಷೆಯಂತೆ ಕೃಷಿ ಚಟುವಟಿಕೆಗೆ ಅಗತ್ಯವಾಗಿ ಬಿದ್ದ ಮಳೆ ರೈತರ ಕೃಷಿಗೆ ವರದಾನವಾಗಿದೆ.
ಇದನ್ನೇ ಸದ್ಬಳಕೆ ಮಾಡಿಕೊಂಡ ಅನ್ನದಾತರು ತಾಲೂಕಾದ್ಯಂತ ಕುಟುಂಬ ಸಮೇತ ಜಮೀನುಗಳ ಕೃಷಿ ಚಟುವಟಿಕೆಯಲ್ಲಿ ತೊಡಗಿಸಿ ಕೊಂಡಿದ್ದಾರೆ. ಅಲ್ಲಲ್ಲಿ ಕಳೆ ತೆಗೆಯುವುದು, ತಂಬಾಕು ರಾಗಿ ಪೈರಿನ ನಾಟಿ, ಹತ್ತಿ ಮುಸುಕಿನ ಜೋಳ ಸೇರಿದಂತೆ ಇನ್ನಿತರ ಬಿತ್ತನೆ ಕಾರ್ಯ ಈಗಾಗಲೇ ಬಹುತೇಕ ಕಡೆಗಳಲ್ಲಿ ಪೂರ್ಣಗೊಳಿಸಿ ಬೆಳೆಗಳ ಜೊತೆಯಲ್ಲಿ ಬೆಳೆದಿರುವ ಕಳೆ ತೆರವುಗೊಳಿಸುವ ಕಾಯಕದಲ್ಲಿ ತಲ್ಲೀನರಾಗಿದ್ದಾರೆ.
ಕೂಲಿ ಕಾರ್ಮಿಕರ ಕೊರತೆ: ಬಿತ್ತನೆ ಕಾರ್ಯ ಮುಗಿದು ಪೈರುಗಳು ಕೂಡ ಹುಲುಸಾಗಿ ಬೆಳೆದಿವೆಯಾದರೂ ಪೈರಿನ ಜೊತೆಯಲ್ಲಿ ಅಷ್ಟೇ ಪ್ರಮಾಣದ ಕಳೆ ಕೂಡ ಬೆಳೆದಿರುವುದು ಕಂಡು ಬರುತ್ತಿದೆ. ಪೈರುಗಳ ಜೊತೆಗೆ ಬೆಳೆದಿರುವ ಕಳೆ ತೆಗೆಯಲು ಕೂಲಿ ಕಾರ್ಮಿಕರ ಅಗತ್ಯ ಇದೆ. ಆದರೆ ಈಗ ಕೂಲಿ ಕಾರ್ಮಿಕರ ಕೊರತೆ ಹೇಳತೀರ ದಾಗಿದೆ, ಹಣ ನೀಡಿದರೂ ಕೈಕೆಲಸಗಳ ಕೂಲಿ ಕಾರ್ಮಿ ಕರು ಲಭ್ಯವಾಗದೆ ರೈತರ ಪಾಡು ಹೇಳ ತೀರದಾಗಿದೆ.
ಮನೆ ಮಂದಿಯೊಂದಿಗೆ ಕೃಷಿ : ಈ ಹಿಂದೆ ಹಣ ನೀಡಿದರೆ ಸಾಕು ಸಾಕಷ್ಟು ಪ್ರಮಾಣದಲ್ಲಿ ಕೂಲಿ ಕಾರ್ಮಿ ಕರ ಲಭ್ಯತೆ ಇತ್ತು. ಹಲವು ವರ್ಷಗಳ ಹಿಂದಿನಿಂದ ಆಧುನಿಕ ಯಂತ್ರಗಳ ಬಳಕೆ ಹೆಚ್ಚಾಗುತ್ತಿದ್ದಂತೆಯೇ ಕೂಲಿ ಕಾರ್ಮಿಕರ ಕೊರತೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಕೃಷಿ ಚಟುವಟಿಕೆಯಲ್ಲಿ ಕೂಲಿ ಕಾರ್ಮಿಕರಿಲ್ಲದೆ ಮನೆ ಮಂದಿಯಲ್ಲಾ ಸೇರಿ ಕೃಷಿ ಚಟುವಟಿಕೆ ನಡೆಸಬೇಕಾದ ಅನಿವಾರತ್ಯತೆ ಒದಗಿದೆ. ಕೃಷಿ ತಿಳಿದಿರುವ ಕುಟುಂಬದ ಸದಸ್ಯರಾದರೆ ಪರವಾಗಿಲ್ಲ, ಅದೇ ಕೃಷಿ ತಿಳಿಯದೇ ಇರುವ ಮಂದಿ ಯಾದರೆ ಕೃಷಿ ನಡೆಸುವುದು ತುಂಬಾ ಕಷ್ಟಕವಾಗಿದೆ.
ಸಹಿಸಲಾಗದ ಬಿಸಿಲಿನ ತಾಪ : ಎಚ್.ಡಿ.ಕೋಟೆ ತಾಲೂಕು ಬಹುತೇಕ ನಾಗರಹೊಳೆ, ಗುಂಡ್ರೆ ಅರಣ್ಯ ಪ್ರದೇಶದಿಂದ ಆವರಿಸಿದ್ದು, ಇಡೀ ತಾಲೂಕಾದ್ಯಂತ ಇಷ್ಟು ವರ್ಷಗಳ ಕಾಲ ಯಾವುದೇ ಬೇಸಿಗೆಯಲ್ಲಿಯೂ ಅಷ್ಟಾಗಿ ತಾಪ ಮಾನ ಕಂಡು ಬರುತ್ತಿರಲಿಲ್ಲ. ಇದೇ ಪ್ರಪ್ರಥಮ ಬಾರಿ ತಾಲೂಕಾದ್ಯಂತ ಕಳೆದ ಸುಮಾರು ಒಂದುವರೆ ತಿಂಗಳಿನಿಂದ ಸಹಿಸಲಾಗದ ಬಿಸಿಲಿತ ತಾಪ ಕಾಡುತ್ತಿದೆ. ಬಹುಸಂಖ್ಯೆ ಮಂದಿ ಮನೆಯಿಂದ ಹೊರಬರಲು ಪ್ರಯಾಸ ಪಡುವಾಗ ಕೂಲಿ ಕಾರ್ಮಿ ಕರು ಬಿಸಿಲಿನ ಬೇಗೆ ಸಹಿಸಿಕೊಂಡು ಹೊಟ್ಟೆಪಾಡಿಗಾಗಿ ಇಡೀ ದಿನ ಕೂಲಿ ಕೆಲಸದಲ್ಲಿ ತಲ್ಲೀನರಾಗಿರುತ್ತಾರೆ.
ನಿರಂತರ ಮಳೆಯಾದರೂ ತಾಪ ಕ್ಷೀಣಿಸಿಲ್ಲ : ಕಳೆದ ಹಲವು ದಿನಗಳ ಹಿಂದಿನಿಂದ ಪ್ರತಿದಿನ ಇಲ್ಲವೆ ದಿನಬಿಟ್ಟು ದಿನ ಅಪಾರ ಪ್ರಮಾಣ ಮಳೆಯಾದರೂ ಬೇಸಿಗೆಯ ತಾಪಮಾನ ಕ್ಷೀಣಿಸಿಲ್ಲ. ರಾತ್ರಿ ತಣ್ಣನೆಯ ವಾತಾವರಣ ಇದ್ದರೂ ಬೆಳಗಾಗುತ್ತಿದ್ದಂತೆಯೇ ಬಿಸಿಲ ತಾಪ ಕಂಡು ಕೇಳರಿಯದ ಪ್ರಮಾಣದಲ್ಲಿ ಜನರನ್ನು ಕಾಡುತ್ತಿದೆ. ಈ ಬಾರಿಯ ಈ ಬಿಸಿಲಿತ ತಾಪಮಾನಕ್ಕೆ ಜನ ಕಂಗಾಲಾ ಗಿದ್ದು, ಈಗಲೇ ಹೀಗಾದರೆ ಮುಂಬರುವ ವರ್ಷ ಗಳಲ್ಲಿ ಪ್ರಕೃತಿ ವಾತಾವರಣದಲ್ಲಿ ಇನ್ನೇನು ಬದಲಾವಣೆ ಯಾಗುವುದೋ ಅನ್ನುವ ತವಕದಲ್ಲಿದ್ದಾರೆ.
ಬೇಡಿಕೆಗೆ ತಕ್ಕಂತೆ ಸಿಗದ ರಸಗೊಬ್ಬರ, ಬಿತ್ತನೆ ಬೀಜ: ತಾಲೂಕಿನ ಜನರ ಆರ್ಥಿಕ ಬೆಳೆ ಹತ್ತಿ, ತಾಲೂಕಿನ ಬಹುಸಂಖ್ಯೆ ರೈತರ ಮುಂಗಾರು ಮಳೆಯ ಮೊದಲ ಬೆಳೆ ಹತ್ತಿ. ಈ ಬಾರಿ ಮುಂಗಾರು ಮಳೆ ಆರಂಭಗೊಂಡರೂ ತಾಲೂಕಿನ ರೈತರಿಗೆ ಬೇಡಿಕೆಯ ಆರ್.ಸಿ.ಎಚ್ ಮತ್ತು ಡಿ.ಸಿ.ಎಚ್ ನಿರೀಕ್ಷೆ ಪ್ರಮಾಣದಲ್ಲಿ ಲಭ್ಯವಾಗಲಿಲ್ಲ. ಇದರಿಂದ ಅನ್ಯಮಾರ್ಗ ಕಾಣದ ರೈತರ ಡಿಸಿಎಚ್‌ಗೆ ಬದಲಾಗಿ ಆರ್.ಸಿ.ಎಚ್ ಸೇರಿದಂತೆ ಇನ್ನಿತರ ಕಂಪನಿಗಳ ಬೀಜ ಅವಲಂಭಿಸಬೇಕಾದ ಅನಿವಾರ್ಯತೆ ಇತ್ತು. ರಸಗೊಬ್ಬರಗಳ ಪೈಕಿ ಡಿಎಪಿ, 20-20 ಈ ರಸಗೊಬ್ಬರಗಳು ಸರಿಯಾದ ಪ್ರಮಾಣದಲ್ಲಿ ಲಭ್ಯವಾಗಲಿಲ್ಲ. ಸಿಕ್ಕರೂ ಮೊದಲು 700-800 ರೂ. ಇದ್ದ ಗೊಬ್ಬರ ಈಗ 1500 ರೂ. ಬೆಲೆ ಏರಿಕೆ ಮಾಡಿರುವುದು ರೈತರಿಗೆ ತೀವ್ರ ಹೊಡೆತ ಬೀಳುವಂತಾಗಿದೆ.
ರಾಜಕೀಯ ಬಿಸಿಲಿನ ತಾಪ ಅಷ್ಟೇ ಏಕೆ ಏನೇನೆ ಆದರೂ ಅನ್ನದಾತ ಮಾತ್ರ ಅದಾವುದಕ್ಕೂ ಸೊಪ್ಪು ಹಾಕದೆ ತನ್ನ ಕಾಯಕದಲ್ಲಿ ತಲ್ಲೀನರಾಗಿ ಬಿತ್ತಿ ಬೆಳೆಯುವ ಕಾಯಕದಲ್ಲಿ ತಲ್ಲೀನರಾಗಿದ್ದಾರೆ. ಬಿಸಿಲು ಮಳೆ ಬಿರುಗಾಳಿ ಚಳಿಯನ್ನು ಲೆಕ್ಕಿಸದೆ ದುಡಿಯುವ ರೈತರಿಗೆ ಮುಂದಿನ ದಿನಗಳಲ್ಲಿ ಆಳುವ ಸರ್ಕಾರಗಳು ಅಗತ್ಯ ಕೃಷಿ ಪರಿಕರಗಳು, ಬಿತ್ತನೆ ಬೀಜಗಳು, ರಸಗೊಬ್ಬರ ಸರಬರಾಜಿಗೆ ಮುಂದಾಗಲಿ.
ತಾಲೂಕಿನ ರೈತರು ಒಂದೇ ಕಂಪನಿ ಹತ್ತಿ ಬಿತ್ತನೆ ಬೀಜಕ್ಕೆ ಮುಗಿ ಬಿದಿದ್ದಾರೆ. ಇದರಿಂದ ಇಡೀ ತಾಲೂಕಿನ ರೈತರಿಗೆ ಒಂದೇ ಕಂಪನಿ ಬಿತ್ತನೆ ಬೀಜ ಸರಬರಾಜು ಕಷ್ಟಕರವಾಗುತ್ತದೆ. 31 ಕಂಪನಿಗಳ ಬಿತ್ತನೆ ಬೀಜ ಲಭ್ಯವಾಗುತ್ತಿದ್ದು ರೈತರ ಒಂದೇ ಕಂಪನಿ ಬೀಜಗಳಿಗೆ ಮಾರುಹೋಗಬಾರದು. ತಾಲೂಕಿನಲ್ಲಿ ರಸಗೊಬ್ಬರಕ್ಕೆ ಕೊರತೆ ಇಲ್ಲ. -ರಂಗಸ್ವಾಮಿ, ಸಹಾಯಕ ಕೃಷಿ ಅಧಿಕಾರಿ
ತಾಲೂಕಿನ ಅನ್ನದಾತರ ಅವಾಂತರ ಕೇಳ್ಳೋರಿಲ್ಲ. ಡಿಸಿಎಚ್ ಮತ್ತು ಆರ್ ಸಿಎಚ್ ಹತ್ತಿಬೀಜ ದೊರೆಯದೆ ರೈತರು ಅನ್ಯ ಹತ್ತಿಬೀಜ ಅವಲಂಬಿಸ ಬೇಕಾಯಿರು. ರಸಗೊಬ್ಬರಗಳಲ್ಲಿ ಡಿಎಪಿ, 20-20 ಹಾಗೂ ಯೂರಿಯಾ ಬಿತ್ತನೆ ಸಂದರ್ಭದಲ್ಲಿ ದೊರೆಯದೆ ದುಕೃಷಿ ಚಟುವಟಿಕೆಬಾರಿ ಹಣ ತೆತ್ತು ಗೊಬ್ಬರ ಖರೀದಿಸಬೇಕಾದ ಸ್ಥಿತಿ ಇತ್ತು. -ಮಲ್ಲೇಶ, ರೈತ ಕಟ್ಟೆಮನುಗನಹಳ್ಳಿ
-ಎಚ್.ಬಿ.ಬಸವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!
Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.