ತಾಲೂಕಾದ್ಯಂತ ಗರಿಗೆದರಿದ ಕೃಷಿ ಚಟುವಟಿಕೆ
Team Udayavani, May 2, 2017, 12:46 PM IST
ಪಿರಿಯಾಪಟ್ಟಣ: ತಾಲೂಕಿನಲ್ಲಿ ಬರದ ಛಾಯೆಯಿಂದ ತತ್ತರಿಸಿದ ರೈತರ ಮುಖದಲ್ಲಿ ಮಳೆಯಿಂದಾಗಿ ಕೊಂಚ ಮಂದಹಾಸ ಮೂಡಿ ಕೃಷಿ ಚಟುವಟಿಕೆಯಲ್ಲಿ ಸಕ್ರಿಯವಾಗಿ ರೈತರು ಕುಟುಂಬ ಸಮೇತರಾಗಿ ತೊಡಗಿಕೊಳ್ಳುತ್ತಿದ್ದಾರೆ.
ಕಳೆದ ವರ್ಷ ಮಳೆ ಉತ್ತಮವಾಗಿ ಬೀಳದೆ ರೈತರು ತಮ್ಮ ಜಮೀನಿನಲ್ಲಿ ಬಿತ್ತಿದ್ದ ಬೆಳೆಗಳು ಬತ್ತಿಹೋಗಿ ರೈತರು ಸಂಕಷ್ಟಕ್ಕೆ ಸಿಲುಕಿ, ಜಾನುವಾರುಗಳಿಗೆ ಮೇವಿಲ್ಲದೆ ತತ್ತರಿಸುವಂತಹ ಪರಿಸ್ಥಿತಿ ಬಂದೊದ ಗಿತು. ಇಂತಹ ಸಂದರ್ಭದಲ್ಲಿ ಈ ವರ್ಷ ತಾಲೂಕಾದ್ಯಂತ ಅತ್ಯುತ್ತಮ ಮಳೆಯಾಗಿದ್ದು, ಕೃಷಿ ಚಟುವಟಿಕೆಗೆ ಪುರ್ನಜೀವ ನೀಡಿದೆ.
ರೈತರು ಎತ್ತುಗಳು ಮತ್ತು ಟ್ರ್ಯಾಕ್ಟ್ರ್ ಮೂಲಕ ಜಮೀನನ್ನು ಉಳುಮೆ ಮಾಡಿ ಬೆಳೆ ಬಿತ್ತನೆ ಮಾಡಲು ಭೂಮಿಹದ ಮಾಡಿಕೊಂಡು ಮುಂಗಾರಿ ಪ್ರಾರಂಭದಲ್ಲೆ ಮಳೆಯು ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ತಾಲೂಕಾದ್ಯಂತ ಕಳೆದ 4-5 ದಿನಗಳಿಂದ ಮಳೆ ಬಿದ್ದಿದ್ದು, ಇದೇ ರೀತಿ ಉತ್ತಮ ಮಳೆಯಾದರೆ ರೈತರಿಗೆ ಯಾವುದೇ ರೀತಿಯ ಸಂಕಷ್ಟ ಎದುರಾಗುವುದಿಲ್ಲ.
ತಾಲೂಕಿನಲ್ಲಿ ಉತ್ತಮ ಮಳೆಯಾಗುತ್ತಿರು ವುದರಿಂದ ಸರ್ಕಾರ ರೈತರಿಗೆ ರಿಯಾಯಿತಿ ದರದಲ್ಲಿ ಬಿತ್ತನೆ ಬೀಜ ನೀಡಲು ಎಲ್ಲಾ ರೀತಿಯ ಕ್ರಮ ಕೈಗೊಂಡು ಈಗಾಗಲೇ ಕೃಷಿ ಇಲಾಖೆ ರೈತ ಸಂಪರ್ಕ ಕೇಂದ್ರಗಳು ಹಾಗೂ ಸಹಕಾರ ಸಂಘಗಳ ಮುಖಾಂತರ ಮುಸುಕಿನ ಜೋಳ, ಹಲಸಂದೆ, ಉದ್ದು, ನೆಲಗಡಲೆ ಬಿತ್ತನೆ ಬೀಜಗಳನ್ನು ವಿತರಿಸಲಾಗುತ್ತಿದೆ.
ರೈತರು ಮಳೆಯ ಆಧಾರದ ಬೆಳೆಯನ್ನು ಬೆಳೆಯಲು ಕೃಷಿ ಅಧಿಕಾರಿಗಳು ಸಹಾಯ ಪಡೆಯ ಬೇಕಾಗುತ್ತಿರುವುದರಿಂದ ಪ್ರತಿಯೊಬ್ಬ ರೈತರು ಬೆಳೆ ಮತ್ತು ರೋಗಗಳ ಬಗ್ಗೆ ಅರಿವು ಮೂಡಿಸಿ ಕೊಳ್ಳಬೇಕಾಗುತ್ತದೆ. ಹಾಗೆಯೇ ಉತ್ತಮ ಬೆಳೆ ಬೆಳೆಯಬೇಕಾಗುತ್ತದೆ. ಈ ಬಾರಿ ಮುಂಗಾರು ಉತ್ತಮ ಆರಂಭ ನೀಡಿದ್ದು, ಏಪ್ರಿಲ್ ತಿಂಗಳವರೆಗೆ 140 ಮಿ.ಮೀ. ಮಳೆಯಾಗಿದೆ.
ಏಪ್ರಿಲ್ ಅಂತ್ಯದ ವೇಳೆಗೆ 55.55 ಮಿ.ಮೀ.ಮಳೆಯಾಗಬೇಕಿತ್ತು ಹಾಗಾಗಿ ಈ ಬಾರಿ ಏಪ್ರಿಲ್ ತಿಂಗಳು ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ. ತಾಲೂಕಿನ ಪ್ರಮುಖ ಬೆಳೆಯಾದ ತಂಬಾಕನ್ನು ತಾಲೂಕಿನ ಅತಿ ಹೆಚ್ಚು ರೈತರು ಅವಲಂಭಿಸಿದ್ದು, ನಂತರ ಮೆಕ್ಕೆಜೋಳ, ರಾಗಿ ಮುಂತಾದ ಬೆಳೆಗಳನ್ನು ಬೆಳೆಯುತ್ತಾರೆ.
ಒಂದು ಅಂದಾಜಿನ ಪ್ರಕಾರ ತಾಲೂಕಿನಲ್ಲಿ ಬೆಳೆಯುವ ತಂಬಾಕು ಬೆಳೆಯಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳಿಗೆ ನೂರಾರು ಕೋಟಿ ರೂ. ವಿದೇಶಿ ವಿನಿಮಯ ಬರುತ್ತದೆ. ಇದೆಲ್ಲದರ ಮಧ್ಯೆ ಈ ಬಾರಿ ಉತ್ತಮ ಮುಂಗಾರು ಆರಂಭಗೊಂಡಿದ್ದು, ರೈತರು ಹರ್ಷಚಿತ್ತರಾಗಿದ್ದಾರೆ. ತಾಲೂಕಿನ 4 ಪ್ರಮುಖ ಹೋಬಳಿಗಳಾದ ರಾವಂದೂರು, ಬೆಟ್ಟದಪುರ, ಹಾರನಹಳ್ಳಿ, ಕಸಬಾ ಹಾಗೂ ಪಟ್ಟಣ ಸೇರಿದಂತೆ ಎಲ್ಲಾ ಕಡೆ ರೈತರು ಹೆಚ್ಚು ಕೃಷಿ ಚಟುವಟಿಕೆಯಲ್ಲಿ ತೊಡಗುವಂತಾಗಿದೆ.
* ರಾ.ಶ.ವೀರೇಶ್‌ಕುಮಾರ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.