ನಾಗರಹೊಳೆ ಅರಣ್ಯದ ಆರಂಭದಿಂದಲೇ ಸಫಾರಿಗೆ ಅವಕಾಶ

Team Udayavani, Jan 9, 2017, 12:21 PM IST

mys1.jpg

ಹುಣಸೂರು: ವಿಶ್ವ ವಿಖ್ಯಾತ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಜೀವ ವೈವಿಧ್ಯತೆಯನ್ನು ಕಣ್‌ ತುಂಬಿಕೊಳ್ಳಲು ಇನ್ನು ಮುಂದೆ ಅರಣ್ಯ ಇಲಾಖೆ ವತಿಯಿಂದ ವೀರನಹೊಸಹಳ್ಳಿ ಪ್ರವೇಶ ದ್ವಾರದಿಂದಲೇ ಸಫಾರಿ ಆರಂಭಿಸುವ ಸಲುವಾಗಿ ಭರದಿಂದ ಸಿದ್ಧತೆಗಳು ನಡೆದಿವೆ.

ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ವೀರನಹೊಸಹಳ್ಳಿ ಮುಖ್ಯದ್ವಾರದ ಕಚೇರಿ (ಗೇಟ್‌) ಬಳಿಯೇ ಸುಸಜ್ಜಿತ ಸ್ವಾಗತ ಕೇಂದ್ರಕ್ಕೆ ಪರಿಸರ ಪೂರಕವಾದ ಆಧುನಿಕ ಟಚ್‌ ನೀಡಲಾಗುತ್ತಿದೆ. ಇದೇ ರೀತಿ ಇರ್ಪು ಜಲಪಾತ ವೀಕ್ಷಿಸಿ ಕೊಡಗು ಜಿಲ್ಲೆ ಕಡೆಯಿಂದ ಬರುವ ಪ್ರವಾಸಿಗರಿಗಾಗಿ ಕುಟ್ಟ (ನಾಣಚ್ಚಿ) ಗೇಟ್‌ನಿಂದಲೂ ಸಫಾರಿಗೆ ಅವಕಾಶ ಕಲ್ಪಿಸಲು ಅಧಿಕಾರಿಗಳು ಚಿಂತಿಸಿದ್ದು, ಅಲ್ಲಿಯೂ ನವೀಕರಣ ಕಾಮಗಾರಿ ನಡೆಯುತ್ತಿದೆ.

ಏನೇನು ಪ್ರಯೋಜನ: ವೀರನಹೊಸಹಳ್ಳಿ ಗೇಟ್‌ನಿಂದಲೇ ಸಫಾರಿ ಆರಂಭವಾಗುವುದರಿಂದ ಇಲ್ಲಿಂದಲೇ ಪ್ರಾಣಿ, ಪಕ್ಷಿಗಳನ್ನು ವೀಕ್ಷಿಸಲು ಅನುಕೂಲ ವಾಗಲಿದೆ. ಈ ಹಿಂದಿನ 1 ಗಂಟೆ ಬದಲು 2 ಗಂಟೆಯ ಸಫಾರಿಗೆ ಅವಕಾಶ ಸಿಗಲಿದೆ. ಸಫಾರಿಗೆ ಬರುವ ವಾಹನಗಳನ್ನು ಒಳಗೆ ಬಿಡದಿರುವುದರಿಂದ ಪ್ರಾಣಿಗಳ ಸ್ವತ್ಛಂದ ಓಡಾಡಕ್ಕೆ ಅನುಕೂಲ ಜೊತೆಗೆ ಕೆಲ ಕಿಡಿಗೇಡಿ ಗಳು ಸಫಾರಿ ನೆಪದಲ್ಲಿ ವಾಹನ ನಿಲ್ಲಿಸಿ ಅರಣ್ಯದ ರಸ್ತೆಗಳಲ್ಲೇ ಅಡ್ಡಾಡುವುದು, ಮದ್ಯ ಸೇವಿಸುವುದು ಧೂಮಪಾನ ಮಾಡುವುದು ಹಾಗೂ ಇನ್ನಿತರೆ ಚಟುವಟಿಕೆಗಳಿಗೆ ಕಡಿವಾಣ ಬೀಳಲಿದೆ.

ವೀರನಹೊಸಹಳ್ಳಿ ಗೇಟ್‌ನಿಂದ ನಾಗರಹೊಳೆಗೆ 25 ಕಿ.ಮೀ ದೂರವಿದ್ದು, ಇಲ್ಲಿಂದ ಇಲಾಖೆಯ 4 ವಾಹನಗಳು ಮಾತ್ರ ಪ್ರವಾಸಿಗರನ್ನು ಹೊತ್ತೂಯ್ಯಲಿದೆ. ಪ್ರತಿ ವಾಹನ ಹೋಗಿಬರಲು 50 ಕಿ.ಮೀ ಆಗಲಿದ್ದು, ಖಾಸಗಿ ವಾಹನಗಳ ಇಂಧನ ಉಳಿತಾಯ ಹಾಗೂ ಪರಿಸರ ಹಾನಿ ತಗ್ಗಲಿದೆ.

ಆಕರ್ಷಕ ಸ್ವಾಗತ ಕೇಂದ್ರ: ವೀರನಹೊಸಹಳ್ಳಿ ಗೇಟ್‌ ಬಳಿ ಇದ್ದ ಸ್ವಾಗತ ಕೇಂದ್ರದ ನವೀಕರಣದ ಜವಾಬ್ದಾರಿಯನ್ನು ಈ ಹಿಂದೆ ಆಕರ್ಷಕವಾಗಿ ಗೇಟ್‌ ನಿರ್ಮಿಸಿ ಕೊಟ್ಟಿರುವ ಉರಗತಜ್ಞ ಬೆಂಗಳೂರಿನ ಹನೀಸ್‌ ವಹಿಸಿದ್ದು, ಅಂತಿಮ ಟಚ್‌ ನೀಡುತ್ತಿದ್ದಾರೆ. ಕಟ್ಟಡದ ಹೊರ ಆವರಣಕ್ಕೆ ಅರಣ್ಯವೆಂದೇ ಪ್ರತಿಬಿಂಬಿಸುವ ಹಸಿರು-ಮಂದ ಬಿಳಿ ಬಣ್ಣದ ಚಿತ್ತಾರ ಬಿಡಿಸಲಾಗಿದೆ. ಕೇಂದ್ರದ ಒಳ ಆವರಣದಲ್ಲಿ ಪ್ರವಾಸಿಗಳು ಕುಳಿತುಕೊಳ್ಳಲು ಆಕರ್ಷಕ ಆಸನ ವ್ಯವಸ್ಥೆ, ಪ್ರತ್ಯೇಕ ಶೌಚಾಲಯ, ಕುಡಿಯುವ ನೀರು ವ್ಯವಸ್ಥೆ ಕಲ್ಪಿಸಲಾಗಿದೆ.

ನಾಗರಹೊಳೆ ಪ್ರವೇಶಕ್ಕೂ ಮೊದಲೇ ಅರಣ್ಯ ಕಲ್ಪನೆಯಲ್ಲಿ ನಿರ್ಮಿಸಿರುವ ಗಮನ ಸೆಳೆವ ದ್ವಾರ, ಕಬ್ಬಿಣದ ಗೇಟ್‌ನಲ್ಲಿ ನಾಗರಹೊಳೆ ಸಂರಕ್ಷಿತ ಪ್ರದೇಶದ ಹೆಗ್ಗುರುತ್ತಾದ ಹುಲಿ ಚಿತ್ರ ನಿರ್ಮಿಸಲಾಗಿದೆ. ಬರುವ ಪ್ರವಾಸಿಗರಿಗೆ ಅರಣ್ಯ, ವನ್ಯಜೀವಿಗಳ ಪರಿಕಲ್ಪನೆಯನ್ನು ಪ್ರತಿಬಿಂಬಿಸಲಿದೆ, ಪ್ರವಾಸಿಗರು ಉಲ್ಲಾಸಿತರಾಗಿ ಒಳಪ್ರವೇಶಿಸುವಂತೆ ಎಲ್ಲಾ ವ್ಯವಸ್ಥೆಗಳನ್ನು ಕಲ್ಪಿಸಲಾಗುತ್ತಿದೆ.

ಅರಣ್ಯ ಮತ್ತು ವನ್ಯಜೀವಿಗಳ ಮೇಲಿನ ಒತ್ತಡ ಕಡಿಮೆ ಮಾಡಲು ನಾಗರಹೊಳೆ ಆರಂಭದಿಂದಲೇ ಸಫಾರಿ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಅಲ್ಲದೆ ಹೆಚ್ಚಿನ ಸಮಯವನ್ನು ಕಾಡಿನಲ್ಲೇ ಕಳೆಯುವ ಅವಕಾಶ ಸಿಗಲಿದೆ. 4 ವಾಹನಗಳ ಮೂಲಕ ಸಫಾರಿ ವ್ಯವಸ್ಥೆ ಮಾಡಲಾಗುತ್ತದೆ. ಸ್ವಾಗತ ಕೇಂದ್ರದಲ್ಲಿ ಎಲ್ಲಾ ಮೂಲ ವ್ಯವಸ್ಥೆಯೊಂದಿಗೆ, ನಾಗರ ಹೊಳೆ ಜೀವವೈವಿಧ್ಯತೆ ಕುರಿತು ವಿಡಿಯೋ ಪ್ರದರ್ಶನಕ್ಕೂ ಅವಕಾಶ ಕಲ್ಪಿಸಲಾಗುವುದು. ಇಲ್ಲಿ ಮಾಹಿತಿ ನೀಡಲು ನ್ಯಾಚುರಲಿಸ್ಟ್‌ ಸಹ ಇರುತ್ತಾರೆ.
-ಮಣಿಕಂಠನ್‌, ಕ್ಷೇತ್ರ ನಿರ್ದೇಶಕ, ನಾಗರಹೊಳೆ ಹುಲಿ ಯೋಜನೆ

* ಸಂಪತ್‌ಕುಮಾರ್‌

ಟಾಪ್ ನ್ಯೂಸ್

banner

Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

2-karkala

Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!

Zebra Movie Review: ಜೀಬ್ರಾ ಕ್ರಾಸ್‌ನಲ್ಲಿ ಕಣ್ಣಾ ಮುಚ್ಚಾಲೆ!

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 37,000 ಮತಗಳಿಂದ ಮುನ್ನಡೆ

Wayanad: ಪ್ರಿಯಾಂಕಾ ಗಾಂಧಿ ‘ಕೈ’ ಹಿಡಿಯಲಿದ್ದಾರಾ ಮತದಾರರು… 85,000 ಮತಗಳಿಂದ ಮುನ್ನಡೆ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

Yathindra Siddaramaiah: ಹಿಂದೂ ರಾಷ್ಟ್ರ ಮಾಡಲು ಬಿಡಬಾರದು

MUST WATCH

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

udayavani youtube

ಉಡುಪಿ ಶ್ರೀ ಕೃಷ್ಣ ಮಠದಲ್ಲಿ ಬೃಹತ್ ಗೀತೋತ್ಸವಕ್ಕೆ ಅದ್ದೂರಿ ಚಾಲನೆ|

udayavani youtube

ಲಾಭದಾಯಕ ಗುಲಾಬಿ ಕೃಷಿ ಮಾಡುವ ವಿಧಾನ

udayavani youtube

ಗೀತೋತ್ಸವ ತ್ರಿಪಕ್ಷ ಶತವೈಭವ ಕಾರ್ಯಕ್ರಮಕ್ಕೆ ಆಮಂತ್ರಿಸಿದ ಪರ್ಯಾಯ ಪುತ್ತಿಗೆ ಶ್ರೀಗಳು

ಹೊಸ ಸೇರ್ಪಡೆ

banner

Maharashtra: ಫಲಿತಾಂಶಕ್ಕೂ ಮೊದಲೇ ರಾರಾಜಿಸುತ್ತಿದೆ ಅಜಿತ್ ಪವಾರ್ ಗೆಲುವಿನ ಬ್ಯಾನರ್

Aaram Aravinda Swamy Movie Review

Aaram Aravinda Swamy Movie Review: ಪಕ್ಕದ್ಮನೆ ಹುಡುಗನ ಫ‌ನ್‌ರೈಡ್‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

Karnataka By Poll Results: ಮತಎಣಿಕೆ-ಚನ್ನಪಟ್ಟಣ, ಶಿಗ್ಗಾಂವಿ, ಸಂಡೂರು “ಕೈ” ಮುನ್ನಡೆ‌

By Election: CP Yogeshwar took the lead against Nikhil; Channapatna is curious

By Election: ನಿಖಿಲ್‌ ವಿರುದ್ದ ಮುನ್ನಡೆ ಸಾಧಿಸಿದ ಯೋಗೇಶ್ವರ್;‌ ಕುತೂಹಲದತ್ತ ಚನ್ನಪಟ್ಟಣ

2-karkala

Karkala: ಶಾಲಾ ವಾಹನಕ್ಕೆ ಢಿಕ್ಕಿ ಹೊಡೆದು ಬೈಕ್ ಸವಾರ ಸ್ಥಳದಲ್ಲೇ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.