ನಿರ್ಭೀತಿ ಜಯಂತಿಗೆ ಅವಕಾಶ ಕೊಡಿ
Team Udayavani, Nov 11, 2017, 1:05 PM IST
ಕೆ.ಆರ್.ನಗರ: ಟಿಪ್ಪು ಜಯಂತಿಯನ್ನು ಆಚರಣೆ ಮಾಡಲು ನಿರ್ಧರಿಸಿರುವ ಸರ್ಕಾರ ಎಲ್ಲಾ ಜಯಂತಿಗಳಂತೆ ಸಾರ್ವಜನಿಕವಾಗಿ ನಿರ್ಭಯವಾಗಿ ಆಚರಿಸಲು ಅವಕಾಶ ಮಾಡಬೇಕು ಎಂದು ಸರ್ಕಾರವನ್ನು ಶಾಸಕ ಸಾ.ರಾ.ಮಹೇಶ್ ಒತ್ತಾಯಿಸಿದರು. ಟಿಎಪಿಸಿಎಂಎಸ್ ರೈತಸಮುದಾಯ ಭವನದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ತಾಲೂಕು ಆಡಳಿತ ಶುಕ್ರವಾರ ಆಯೋಜಿಸಿದ್ದ ಟಿಪ್ಪು ಜಯಂತಿಯಲ್ಲಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಇಂದು ರಾಜ್ಯದ ಎಲ್ಲೆಡೆ ಟಿಪ್ಪು ಜಯಂತಿಯನ್ನು ಭಯದ ವಾತಾವರಣ ಹಾಗೂ ವಿರೋಧದ ನಡುವೆ ಆಚರಣೆ ಮಾಡುತ್ತಿದ್ದೇವೆ. ಮೈಸೂರು ರಾಜ್ಯವಾಗಿದ್ದಾಗ ಮೈಸೂರು ಹುಲಿ ಎಂದು ಬಿರುದು ಪಡೆದಿದ್ದ ಅವರು ಈಗ ರಾಜ್ಯಕ್ಕೆ ಕರ್ನಾಟಕ ಎಂದು ನಾಮಕರಣ ಮಾಡಿರುವುದರಿಂದ ಕರ್ನಾಟಕ ಹುಲಿ ಎಂದರೆ ತಪ್ಪಾಗುವುದಿಲ್ಲ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಸರ್ಕಾರಕ್ಕೆ ಜಯಂತಿ ಆಚರಣೆ ಮಾಡಲು ತಾಕತ್ತಿಲ್ಲದಿದ್ದರೆ ಆಯಾ ಸಮುದಾಯದವರಿಗೆ ಬಿಡಿ. ಇಂತಹ ಭಯದ ವಾತಾವರಣ ಯಾಕೆ ಸೃಷ್ಟಿ ಮಾಡುತ್ತೀರ, ಮನಸ್ಸುಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತೀರಾ ಎಂದು ಸರ್ಕಾರವನ್ನು ತೀವ್ರ ತರಾಟೆಗೆ ತೆಗೆದುಕೊಂಡರು.
ವಿರೋಧ ಪಕ್ಷದ ನಾಯಕ ಡಿ.ರವಿಶಂಕರ್, ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ದಿವಾಕರ್ ಟಿಪ್ಪು ಕುರಿತು ಮಾತನಾಡಿದರು. ದಿವಾಕರ್‌ರನ್ನು ಸನ್ಮಾನಿಸಲಾಯಿತು. ಪುರಸಭಾಧ್ಯಕ್ಷೆ ಕವಿತಾ, ತಾಪಂ ಅಧ್ಯಕ್ಷ ಎಚ್.ಟಿ.ಮಂಜುನಾಥ್, ಡಾ.ಮೆಹಬೂಬ್ ಖಾನ್, ಪುರಸಭಾ ಸದಸ್ಯರಾದ ಶಿವಣ್ಣ, ಕುಮಾರ್, ಸಮಾಜದ ಮುಖಂಡರಾದ ಸಿರಾಜ್, ಜಾಬೀರ್, ಸೈಯದ್ ರಿಜಾನ್ ಮತ್ತಿತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.