ಉತ್ತಮ ಸಂವಿಧಾನ ನೀಡಿದ ಅಂಬೇಡ್ಕರ್
Team Udayavani, Apr 15, 2017, 12:53 PM IST
ಮೂಗೂರು (ತಿ.ನರಸೀಪುರ ತಾ): ಸಂವಿಧಾನ ಶಿಲ್ಪಿ, ಭಾತರತ್ನ ಡಾ. ಅಂಬೇಡ್ಕರ್ 126ನೇ ಜಯಂತಿ ಕಾರ್ಯಕ್ರಮ ವನ್ನು ಗ್ರಾಮದ ಅಂಬೇಡ್ಕರ್ ಸಮು ದಾಯ ಭವನದಲ್ಲಿ ಆಚರಿಸಲಾಯಿತು.
ಗ್ರಾಮದ ಮುಖಂಡ ಎಂ.ಕೆ.ಸಿದ್ದರಾಜು ಅಂಬೇಡ್ಕರ್ ಪುಷ್ಪಾರ್ಚನೆ ಮಾಡಿ ಮಾತನಾಡಿದ ಅವರು ದೇಶದಲ್ಲಿ ಅಸಮಾನತೆ, ಜಾತಿಯತೇ ಅಸ್ಪೃಶ್ಯತೆ ಆಚರಣೆಯಲ್ಲಿ ಇರುವುದನ್ನು ಗಮನಿಸಿದ ಬಾಬಾ ಸಾಹೇಬರು ಇದನ್ನು ಹೋಗಾಲಾಡಿಸಬೇಕೆಂದು ಪಣ ತೊಟ್ಟು ದೇಶ, ವಿದೇಶಗಳಲ್ಲಿ ಉನ್ನತ ಶಿಕ್ಷಣ ಪಡೆದು, ವಿವಿಧ ದೇಶದ ಸಂವಿಧಾನವನ್ನು ಅಧ್ಯಾಯನ ಮಾಡಿ ಭಾರತಕ್ಕೆ ದೇಶಕ್ಕೆ ಸಂವಿಧಾನವನ್ನು ಅರ್ಪಿಸಿ ಎಲ್ಲರೂ ಒಂದೇ ಸರ್ವರಿಗೂ ಸಮಪಾಲು, ಸಮಬಾಳು ತತ್ವ ಸಿದ್ಧಾಂತ ಜಗತ್ತಿಗೆ ಸಾರಿದರು.
ಇಂತಹ ಮಹಾನ್ ಚೈತನ್ಯವನ್ನು ಇಂದಿನ ಯುವ ಪೀಳಿಗೆ ಆದರ್ಶ ತತ್ವಗಳನ್ನು ನಿತ್ಯ ಜೀವನದಲ್ಲಿ ಅಳವಡಿಸಿಕೊಂಡು ಉತ್ತಮ ಜೀವನ ನಡೆಸಬೇಕೆಂದು ಸಲಹೆ ನೀಡಿದರು. ಗ್ರಾಪಂ ಮಾಜಿ ಸದಸ್ಯ ಎಂ.ರಾಜು ಮಾತನಾಡಿ, ಬಾಲ್ಯದಿಂದಲೇ ಹೋರಾಟದ ಮನೋಭಾವ ಹೊಂದಿದ್ದ ಬಾಬಾ ಸಾಹೇಬ್ ಅವರು ಶಿಕ್ಷಣ, ಸಂಘಟನೆ, ಹೋರಾಟ ಎಂಬ ಅಸ್ತ್ರವನ್ನು ಬಳಸುವ ಮೂಲಕ ಸಮಾಜಕ್ಕೆ ಉತ್ತಮ ಸಂದೇಶ ನೀಡಿದರು.
ಎಂ.ಆರ್.ಪುಟ್ಟಯ್ಯ, ಗ್ರಾ.ಪಂ ಸದಸ್ಯ ದಿಲೀಪ್ ಕುಮಾರ್, ಶೇಷಣ್ಣ, ಭಾನು ಪ್ರಕಾಶ್, ಮಹದೇವಯ್ಯ, ನಿಂಗರಾಜು, ಎಂ.ಡಿ.ಮಹೇಶ್, ಶಿವಕುಮಾರ್, ಸಂಘದ ಪದಾಧಿಕಾರಿ ಹಾಗೂ ಗ್ರಾಮಸ್ಥರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.