ಸಮಾನತೆಯ ಸಂದೇಶ ಸಾರಿದ ಸಂವಿಧಾನ ಶಿಲ್ಪಿ
Team Udayavani, Apr 15, 2023, 4:22 PM IST
ಎಚ್.ಡಿ.ಕೋಟೆ: ಸಂವಿಧಾನದ ಪಿತಾಮಹ ಡಾ.ಬಿ.ಆರ್.ಅಂಬೇಡ್ಕರ್ ಜಯಂತಿ ಆಚರಣೆಗೆ ನೀತಿ ಸಂಹಿತಿ ಅಡ್ಡಿಪಡಿಸುವುದು ಸರಿಯಲ್ಲ ಎಂದು ತಾಲೂಕು ಆದಿಕರ್ನಾಟಕ ಮಹಾಸಭಾ ಅಧ್ಯಕ್ಷ ಎಚ್.ಸಿ.ನರಸಿಂಹಮೂರ್ತಿ ಅಭಿಪ್ರಾಯಪಟ್ಟರು.
ಪಟ್ಟಣದ ಅಂಬೇಡ್ಕರ್ ಸಮುದಾಯ ಭವನ ದಲ್ಲಿ ತಾ.ಆಡಳಿತದಿಂದ ಆಯೋಜಿಸಿದ್ದ ಡಾ.ಬಿ. ಆರ್.ಅಂಬೇಡ್ಕರ್ ಜಯಂತಿ ಸರಳ ಆಚರಣೆ ಸಮಾರಂಭ ಕುರಿತು ಮಾತನಾಡಿದ ಅವರು, ಈ ದೇಶವಷ್ಟೇ ಅಲ್ಲದೆ ಇಡೀ ವಿಶ್ವವೇ ಒಪ್ಪಿಕೊಳ್ಳುವಂತಹ ಮಹಾ ಮಾನವತಾವಾದಿ, ಸಮಾನತೆಯ ಸಂದೇಶ ಸಾರಿದ ಅಂಬೇಡ್ಕರ್ ಅವರ ಜಯಂತಿ ಆಚರಣೆಗೆ ತಾಲೂಕು ಆಡಳಿತ ನೀತಿ ಸಂಹಿತಿ ಅಡ್ಡತರುವುದು ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಡೆ ನೀಡುವುದು ಎಷ್ಟು ಸರಿ: ರಾಜಕೀಯ ಪಕ್ಷಗಳ ಅದ್ಧೂರಿ ಕಾರ್ಯ ಕ್ರಮಗಳಿಗೆ ಸಾವಿರಾರು ಮಂದಿ ಸೇರುವ ಕಾರ್ಯ ಕ್ರಮಗಳಿಗೆ ಅನುಮತಿ ನೀಡುತ್ತೀರಿ. ಆದರೆ ರಾಷ್ಟ್ರನಾಯಕ ಅಂಬೇಡ್ಕರ್ ಜಯಂತಿ ಅಚರಣೆ ಸರಳವಾಗಿ ಆಚರಣೆ ಮಾಡಬೇಕು, ನಿಗದಿತ ವೇಳೆಗೆ ಕಾರ್ಯಕ್ರಮ ಮುಕ್ತಾಯಗೊಳಿಸಬೇಕು ಅನ್ನುವ ನಿರ್ಬಂಧ ಏರುವುದು ಬೇಸರ ಮೂಡಿಸಿದೆ. ಅಂಬೇಡ್ಕರ್ ಹೆಸರಿನ ಭವನದಲ್ಲಿ ಜಯಂತಿ ಅಚರಣೆಗೆ ನಿರಾಕರಿಸಿ ಭವನದ ಬೀಗದ ಕೀಲಿ ನೀಡುವಲ್ಲಿ ತಾಲೂಕು ಆಡಳಿತ ತಡೆ ನೀಡುವುದು ಎಷ್ಟು ಸರಿ ಎಂದು ಪ್ರಶ್ನಿಸಿದರು.
ಅಧಿಕಾರಿಗಳು ಸಹಕರಿಸಬೇಕು: ಭಾರತ ದೇಶದ ಸರ್ವರ ಸಮಾನತೆಯ ಸವಿನೆನಪು ಡಾ.ಬಿ. ಆರ್. ಅಂಬೇಡ್ಕರ್, ಎಚ್.ಡಿ.ಕೋಟೆ ತಾಲೂಕಿನಲ್ಲಿ ಎಸ್ಸಿ-ಎಸ್ಟಿ ಸಮುದಾಯ ಬಹುಸಂಖ್ಯೆಯಲ್ಲಿದ್ದಾರೆ. ಅಂಬೇಡ್ಕರ್ ಜಯಂತಿ ಅಚರಣೆಗೆ ಚುನಾವಣೆ ನೀತಿ ಸಂಹಿತಿ ಹೆಸರಿನಲ್ಲಿ ಅಡ್ಡಿ ಪಡಿಸಬಾರದು, ಸಮಯ ನಿಗದಿ ಪಡಿಸಬಾರದು ಎಂದು ತಾಲೂಕು ತಹಶೀಲ್ದಾರ್ ಸೇರಿದಂತೆ ಅಧಿಕಾರಿಗಳು ಸಹಕರಿಸುವಂತೆ ಮನವಿ ಮಾಡಿಕೊಂಡರು.
ಉಸಿರಿರುವ ತನಕ ಸ್ಮರಿಸಬೇಕು: ಶಿಕ್ಷಣ ಇಲಾಖೆ ಕ್ಷೇತ್ರ ಸಂಪನ್ಮೂಲ ಸಮನ್ವಯಾಧಿಕಾರಿ ಕೃಷ್ಣಯ್ಯ ಮಾತನಾಡಿ, ಸಮಾಜದ ಎಲ್ಲಾವರ್ಗದ ಮೈತ್ರಿ ಜೀವನಕ್ಕೆ ಸಂವಿಧಾನ ಮತ್ತು ಅದರ ನೇತಾರ ಡಾ.ಬಿ.ಆರ್.ಅಂಬೇಡ್ಕರ್ ಕಾರಣ. ಏ.14ರಂದು ಪ್ರತಿವರ್ಷ ಜಗತ್ತಿನಾದ್ಯಂತ ಅಂಬೇಡ್ಕರ್ ಸ್ಮರಣೆ ದಿನವಾಗಿದೆ. ಆದರೆ ದೇಶಕ್ಕೆ ಅವಿಸ್ಮರಣೀಯ ಕೊಡುಗೆ ನೀಡಿದ ಅಂಬೇಡ್ಕರ್ ಸ್ಮರಣೆ 1 ದಿನಕಷ್ಟೇ ಸೀಮಿತವಾಗದೆ ಉಸಿರಿರುವ ತನಕ ಸ್ಮರಿಸಬೇಕು ಎಂದರು.
ಮಹಿಳೆಯರ ಸಮಾನತೆಯ ವಿಶೇಕ ಕಾಯ್ದೆ ಜಾರಿಗೆ ಸದನದಲ್ಲಿ ಅಂಗೀಕರ ದೊರೆಯದೇ ಇದ್ದಾಗ ಕಾನೂನು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ ಅಂಬೇಡ್ಕರ್ ಅವರ ದೂರ ದೃಷ್ಟಿಯ ಮಹಿಳ ಕಾಯ್ದೆ ಅಂದೇ ಅಂಗೀಕಾರವಾಗಿದ್ದರೆ ಮಹಿಳೆಯರ ಸಮಾನತೆ ಬಹುವರ್ಷಗಳ ಹಿಂದೇ ಅಂಗೀಕರಾಗುತ್ತಿತ್ತು. ಅವರ ಜೀವನದ ಪುಸ್ತಕಗಳು ಗ್ರಾಮೀಣ ಭಾಗದ ಯುವ ಪೀಳಿಗೆಗೆ ತಲುಪಬೇಕು. ಅವರ ಆದರ್ಶ ತತ್ವ ಸಿದ್ಧಾಂತಗಳನ್ನು ಮನನ ಮಾಡಿಕೊಳ್ಳಬೇಕು ಎಂದರು.
ತಹಶೀಲ್ದಾರ್ ಮಹೇಶ್, ಗ್ರೇಡ್-2 ತಹ ಶೀಲ್ದಾರ್ ಸಣ್ಣರಾಮಪ್ಪ, ತಾಪಂ ಇಒ ಜೆರಾಲ್ಡ್ ರಾಜೇಶ್, ಪುರಸಭೆ ಸದಸ್ಯರಾದ ಪ್ರೇಮ್ ಸಾಗರ್, ಮಧುಕುಮಾರ್, ಮಲಾರಪುಟ್ಟಯ್ಯ, ಚಾ. ನಂಜು ಂಡಮೂರ್ತಿ, ಎಂ.ಡಿ.ಮಂಚಯ್ಯ, ಶಿಕ್ಷಣ ಇಲಾಖೆ ಮಹದೇವಯ್ಯ, ಜೀವಿಕ ಸಂಘಟನೆ ಉಮೇಶ್, ಬಸವರಾಜು, ಅಂಬೇಡ್ಕರ್ ಸ್ವಾಭಿಮಾನಿ ಸೇನೆ ಸದಾನಂದ, ಲಾರಿ ಪ್ರಕಾಶ, ಸಣ್ಣಕುಮಾರ್, ನಿರ್ಮ ಲಾ, ಭಾಗ್ಯ, ಭಾನುಮತಿ, ಆನಗಟ್ಟಿ ದೇವರಾಜು, ಚೌಡಳ್ಳಿ ಜವರಯ್ಯ, ತಿಮ್ಮಯ್ಯ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Mandya:ಕನ್ನಡ ಸಾಹಿತ್ಯ ಸಮ್ಮೇಳನ-ಕನ್ನಡ ಸಂಕಷ್ಟದಲ್ಲಿದೆ ಎಂಬುದಕ್ಕೆ ಕಾರಣ ತಿಳಿಯಬೇಕು: ಸಿಎಂ
Belagavi: ಎಲ್ಲದಕ್ಕೂ ಪೂರ್ಣವಿರಾಮ ಬೀಳಲಿದೆ, ನನಗೂ ಒಂದು ಕಾಲ ಬರುತ್ತದೆ….. : ಸಿ.ಟಿ.ರವಿ
ಹಿಂದೂ ಮುಖಂಡರು ಮಂದಿರ-ಮಸೀದಿ ವಿವಾದ ಕೆದಕುವುದನ್ನು ನಿಲ್ಲಿಸಬೇಕು: ಮೋಹನ್ ಭಾಗ್ವತ್
Pavagada: ವಿಷ ಸೇವಿಸಿ ಗಂಡ-ಹೆಂಡತಿ ಆತ್ಮಹತ್ಯೆ
Kaup town: ಟ್ರಾಫಿಕ್ ಒತ್ತಡ, ಪಾರ್ಕಿಂಗ್ ಕಿರಿಕಿರಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.