ಕೋಮಲಾಪುರದಲ್ಲಿ ಅಂಬೇಡ್ಕರ್ ಪುತ್ಥಳಿ ಅನಾವರಣ
Team Udayavani, May 21, 2017, 12:01 PM IST
ಪಿರಿಯಾಪಟ್ಟಣ: ತಾಲೂಕಿನ ಕೋಮಲಾಪುರ ಗ್ರಾಮದಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಯುವಕ ಸಂಘದ ವತಿಯಿಂದ ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್‌ರ 126ನೇ ಜನ್ಮದಿನಾಚರಣೆ ಅಂಗವಾಗಿ ಅವರ ಪುತ್ಥಳಿ ಅನಾವರಣ ಮಾಡಲಾಯಿತು. ಮೈಸೂರಿನ ಉರಿಲಿಂಗಿ ಪೆದ್ದಿಮಠದ ಜಾnನಪ್ರಕಾಶ ಸ್ವಾಮೀಜಿ ಪುತ್ಥಳಿ ಅನಾವರಣ ಮಾಡಿ, ಮಾರ್ಲಾಪಣೆ ಮಾಡಿದರು.
ನಂತರ ವೇದಿಕೆ ಕಾರ್ಯಕ್ರಮ ಉದ್ಘಾಟಿಸಿದ ಶ್ರೀಗಳು, “ಅಂಬೇಡ್ಕರ್‌ರವರ ಪುತ್ಥಳಿಯು ಜಾnನದ ಸಂಕೇತ. ಬರೀ ಆಡಂಬರಕ್ಕೆ ಪುತ್ಥಳಿ ಸ್ಥಾಪನೆ ಮಾಡದೆ ಅಂಬೇಡ್ಕರ್‌ರವರ ಜೀವನ ತತ್ವ, ಆದರ್ಶಗಳನ್ನು ಯುವಕರು ಅಳವಡಿಸಿಕೊಳ್ಳಬೇಕು. ಆಗ ಮಾತ್ರ ಅಂಬೇಡ್ಕರ್‌ರವರ ಕನಸಿನ ಭಾರತ ಸಾಕಾರಗೊಳ್ಳುತ್ತದೆ. ಅಂಬೇಡ್ಕರ್ ಕೇವಲ ಒಂದು ವರ್ಗದ ವ್ಯಕ್ತಿಯಾಗದೆ ಸಮಾಜದ ಶಕ್ತಿಯಾಗಿ ಭಾರತದ ಸಂವಿಧಾನ ರಚಿಸಿ ಪ್ರತಿ ಪ್ರಜೆಗೂ ಮತದಾನದ ಹಕ್ಕು ನೀಡಿದರು.
ಅಲ್ಲದೇ, ಒಬ್ಬ ಉತ್ತಮ ನೀರಾವರಿ ಹಾಗೂ ಆರ್ಥಿಕ ತಜ್ಞರಾಗಿ ಮೌಡ್ಯಮುಕ್ತ ಭಾರತವನ್ನು ರೂಪಿಸುವ ಸಲುವಾಗಿ ಹಲವಾರು ಹೋರಾಟಗಳನ್ನು ಮಾಡಿದರು. ಅವರ ಪುತ್ಥಳಿಯಿಂದ ಯುವಕರು ಸ್ಫೂರ್ತಿ ಪಡೆದು ಅವರಂತೆಯೇ ಉನ್ನತ ವಿದ್ಯಾಭ್ಯಾಸ ಮಾಡಬೇಕು. ಅಂತೆಯೇ ಸಮಾಜದ ಉನ್ನತ ಸ್ಥಾನಕ್ಕೇರಿದಾಗ ಮಾತ್ರ ಅಂಬೇಡ್ಕರ್‌ರ ಕನಸುಗಳು ಸಾಕಾರಗೊಳ್ಳುತ್ತವೆ ಎಂದು ತಿಳಿಸಿದರು.
ಹಕ್ಕು ಎಲ್ಲರಿಗೂ ತಲುಪಲಿ: ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬೆಂಗಳೂರಿನ ನಾಗಸಿದ್ಧಾರ್ಥ ಬೌದ್ಧವಿಹಾರದ ಕಲ್ಯಾಣಸಿರಿ ಭಂಜೇಜಿ ಮಾತನಾಡಿ, ಅಂಬೇಡ್ಕರ್‌ರವರ ಪುತ್ಥಳಿಗಳು ವಿಜಯ ಹಾಗೂ ಜಾnನದ ಸಂಕೇತವಾಗಬೇಕು. ಹಿಂದಿನ ಕಾಲದಲ್ಲಿದ್ದ ಮೌಡ್ಯತೆಗೆ ಮರಣಶಾಸನ ಬರೆದ ಕೀರ್ತಿ ಡಾ.ಅಂಬೇಡ್ಕರ್‌ರಿಗೆ ಸಲ್ಲುತ್ತದೆ. ಭಾರತ ಉಳಿಯಲು ಅಂಬೇಡ್ಕರ್‌ರವರ ಸಂವಿಧಾನಬದ್ಧ ಮೂಲಭೂತ ಹಕ್ಕುಗಳು ಪ್ರತಿಯೊಬ್ಬರಿಗೂ ತಲುಪಬೇಕು.
ಪ್ರತಿ ಜನಾಂಗ ಉದ್ಧಾರವಾದಾಗ ಮಾತ್ರ ಪುತ್ಥಳಿಗೆ ನಿಜವಾದ ನ್ಯಾಯ ಸಲ್ಲಿಸಿದಂತಾಗುತ್ತದೆ ಎಂದರು. ತಾಪಂ ಸದಸ್ಯ ಪಂಕಜರವಿ, ಗ್ರಾಪಂ ಸದಸ್ಯ ಬಸಲಿಂಗಪ್ಪ, ಪುರಸಭೆ ಸದಸ್ಯ ಪಿ.ಮಹದೇವ್, ಪಿಡಿಒ ದೇವರಾಜ್, ಶಿಕ್ಷಕರಾದ ಎನ್.ಆರ್.ಕಾಂತರಾಜು, ಚೆನ್ನವೀರಯ್ಯ, ಈರಾಜು, ರೈತ ಸಂಘದ ಸ್ವಾಮಿಗೌಡ, ಈರೇಗೌಡ, ರಾಜಶೆಟ್ಟಿ ಇತರರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Mangaluru: ವೆನ್ಲಾಕ್ ಆಸ್ಪತ್ರೆ ಹೊರರೋಗಿ ವಿಭಾಗ ವಿಸ್ತರಣೆ
Bengaluru ಭಯೋ*ತ್ಪಾದಕ ಚಟುವಟಿಕೆ ಆರೋಪಿ, ಉ*ಗ್ರ ಖಾನ್ ರುವಾಂಡದಿಂದ ಭಾರತಕ್ಕೆ ಗಡಿಪಾರು!
Kundapura: ಹತ್ತೂರು ಸೇರುವ ಮುಳ್ಳಿಕಟ್ಟೆಗೆ ಬೇಕು ಬಸ್ ನಿಲ್ದಾಣ
IPL 2024: ನನಗೆ ಪ್ರೀತಿ ಗೌರವ ಕೊಡಿ ಸಾಕು..: ಡೆಲ್ಲಿ ಮಾಲಿಕರ ಮುಂದೆ ರಾಹುಲ್ ಬೇಡಿಕೆ
Tollywood: ಒಂದೇ ದಿನ ವಿವಾಹವಾಗಲಿದ್ದಾರಾ ಅಕ್ಕಿನೇನಿ ಸಹೋದರರು? ನಾಗಾರ್ಜುನ್ ಹೇಳಿದ್ದೇನು?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.