ಜ್ಞಾನದ ಮೂಲಕವೇ ವಿಶ್ವ ಮಾನ್ಯರಾದ ಅಂಬೇಡ್ಕರ್
Team Udayavani, May 22, 2017, 1:03 PM IST
ಹುಣಸೂರು: ತಾಲೂಕಿನ ಹರಿಜನ ಕಾಲೋನಿಯಲ್ಲಿ ಶಾಸಕ ಎಚ್.ಪಿ.ಮಂಜುನಾಥ್ ಅಂಬೇಡ್ಕರ್ ಪುತ್ಥಳಿಯ ಅನಾವರಣಗೊಳಿಸಿದರು. ನಂತರ ದೇವಸ್ಥಾನದ ಆವರಣದಲ್ಲಿ ಯುವಕ ಸಂಘದವರು ಆಯೋಜಿಸಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿ, ಅಂಬೇಡ್ಕರ್ ಅಸಮಾನ್ಯವ್ಯಕ್ತಿಯಾಗಿದ್ದು, ತಮ್ಮ ಜ್ಞಾನದ ಮೂಲಕವೇ ವಿಶ್ವ ಮಾನ್ಯರಾದರು.
ಇಂತಹ ಮಹನೀಯನ ಪುತ್ಥಳಿ ಸ್ಥಾಪಿಸಿದರೆ ಸಾಲದು ಇದರೊಟ್ಟಿಗೆ ಅವರ ಹೋರಾಟದ ಬದುಕು, ಸಿದ್ಧಾಂತ, ಶಿಕ್ಷಣ ಪ್ರೀತಿ ಬಗ್ಗೆ ತಿಳಿಯಬೇಕು ಎಂದರು. ಅಂಬೇಡ್ಕರರನ್ನು ಒಂದು ಜಾತಿಗೆ ಸೀಮಿತಗೊಳಿಸದೆ ಅವರ ಜ್ಞಾನದ ಸಂಪತ್ತನ್ನು ಹಾಗೂ ಅವರ ಹೋರಾಟ ಹಾಗೂ ಸಂವಿಧಾನ ರಚನೆಯಿಂದ ದೊರಕಿರುವ ಮೀಸಲಾತಿ ಸೌಲಭ್ಯವನ್ನು ಪಡೆದಿರುವ ಎಲ್ಲರೂ ಇವರ ಜಯಂತಿ ಆಚರಿಸುವ ಮೂಲಕ ಗೌರವ ಸೂಚಿಸಬೇಕೆಂದು ಆಶಿಸಿದರು.
ದೇವಸ್ಥಾನಕ್ಕೆ ನೆರವು: ಗ್ರಾಮದ ಹರಿಜನ ಬಡಾವಣೆಯ ಮಾರಮ್ಮ ದೇವಸ್ಥಾನ ಜೀರ್ಣೋದ್ಧಾರಕ್ಕೆ ಅನೇಕ ವರ್ಷಗಳಿಂದ ಕೇಳಿದ್ದಿರಿ, ಆದರೆ ಇಲ್ಲಿಯವರೆವಿಗೂ ದೇವಾಲಯದ ಕಟ್ಟಡದ ನಕ್ಷೆ ನೀಡಿಲ್ಲ, ಇದನ್ನು ತಕ್ಷಣ ನೀಡಿದಲ್ಲಿ ದೇವಾಲಯ ನಿರ್ಮಾಣಕ್ಕೆ ನೆರವು ನೀಡುತ್ತೇನೆ. ಗ್ರಾಮಸ್ಥರು ಒಟ್ಟಾಗಿ ಕುಳಿತು ಚರ್ಚಿಸಿ ಎಂದರು.
ಹನಗೋಡು ಆಸ್ಪತ್ರೆ ವೈದ್ಯ ಡಾ.ಜೋಗೇಂದ್ರನಾಥ್ ಮಾತನಾಡಿ, ಡಾ.ಅಂಬೇಡ್ಕರ್ ಅವರ ಜಯಂತಿಯನ್ನು ವಿಶ್ವ ಸಂಸ್ಥೆಯೇ ಆಚರಿಸುತ್ತಿದೆ. ಇಂಥ ಮಹಾನ್ ವ್ಯಕ್ತಿಯ ಜಯಂತಿಯನ್ನು ದಲಿತರಲ್ಲಿ ಕೇವಲ ಹರಿಜನರು ಆಚರಿಸುತ್ತಿರುವುದು ನೋವಿನ ಸಂಗತಿ, ಇವರು ದೊರಕಿಸಿಕೊಟ್ಟ ಮೀಸಲಾತಿಯಿಂದ ಅಧಿಕಾರ ಅನುಭವಿಸುತ್ತಿರುವ ಹಿಂದುಳಿದವರ್ಗ, ಅಲ್ಪ ಸಂಖ್ಯಾತರೂ ಸೇರಿದಂತೆ ಎಲ್ಲರೂ ಸೇರಿ ಆಚರಿಸುವುದು ಅವರಿಗೆ ನೀಡುವ ದೊಡ್ಡ ಗೌರವ ಎಂದು ತಿಳಿಸಿದರು.
ಕಾಂಗ್ರೆಸ್ ಮುಖಂಡ ಹರಿಹರ ಆನಂದಸ್ವಾಮಿ ಮಾತನಾಡಿ, ಬುದ್ಧ, ಬಸವ, ಅಂಬೇಡ್ಕರ್ ರಂತಹ ಕ್ರಾಂತಿಕಾರಿ ಜ್ಞಾನಿಗಳನ್ನು ಜಾತಿ ಹೆಸರಿಲ್ಲಿ ಗುರುತಿಸುವುದು ಅಪಾಯಕಾರಿ, ಶೋಷಿತರಿಗೆ ಸ್ವಾಭಿಮಾನದ ಬದುಕನ್ನು ಕಟ್ಟಿಕೊಟ್ಟ ಅಂಬೇಡ್ಕರರು ದೇಶದ ಸ್ವತ್ತು, ಇಂತಹ ಸಾಧಕ ವ್ಯಕ್ತಿಯ ಜೀವನ ಚರಿತ್ರೆಯನ್ನು ಎಲ್ಲರೂ ಓದಿ ಅರಿಯಬೇಕು, ಶಿಕ್ಷಣಕ್ಕೆ ಹೆಚ್ಚು ಮಹತ್ವ ನೀಡಬೇಕು ಎಂದು ಹೇಳಿದರು.
ಗ್ರಾಪಂ ಅಧ್ಯಕ್ಷ ಮಧು ಕಾಲೋನಿಯ ದೇವಾಲಯ ಅಭಿವೃದ್ಧಿಗೆ ಗ್ರಾಪಂ ಸದಸ್ಯರುಗಳು ವೈಯಕ್ತಿಕವಾಗಿ 2 ಲಕ್ಷರೂ ನೆರವು ನೀಡುವುದಾಗಿ ಘೋಷಿಸಿದರು. ಗ್ರಾಪಂ ಸದಸ್ಯ ಚನ್ನಯ್ಯ, ಗ್ರಾಮದಲ್ಲಿ ಅನೇಕರಿಗೆ ಸಾಗುವಳಿ ಸಿಕ್ಕಿಲ್ಲ, ಸಿಕ್ಕಿದವರ ಭೂಮಿ ದುರಸ್ತಾಗಿಲ್ಲ, ಇನ್ನು ವಿವಿಧ ಯೋಜನೆಯಡಿ ಮನೆ ಮಂಜೂರಾಗಿದ್ದು, ಮರಳು ಸಮಸ್ಯೆ ಇದ್ದು ನದಿಯಿಂದ ಗಾಡಿಯಲ್ಲಿ ಮರಳು ಸಾಗಿಸಲು ಅವಕಾಶ ಕಲ್ಪಿಸಬೇಕೆಂದು ಕೋರಿದರು.
ಗ್ರಾಪಂ ಸದಸ್ಯ ಇಮಿ¤ಯಾಜ್ ಪಾಷಾ, ಸದಸ್ಯೆ ಮಂಗಳ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ನಾರಾಯಣ್, ಮಾಜಿ ಅಧ್ಯಕ್ಷ ಬಸವರಾಜು, ಅಂಬೇಡ್ಕರ್ ಸಂಘದ ಅಧ್ಯಕ್ಷ ಕಿಟ್ಟಿ, ಸ್ವಾಮಿ, ಸುರೇಶ ಸೇರಿದಂತೆ ಕಾಲೋನಿಯ ಯಜಮಾನರು ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
US: ಭಾರತದ ಮೇಲೆ ತೆರಿಗೆ ಇಲ್ಲ, ಕೆನಡಾ, ಚೀನಾಕ್ಕಷ್ಟೇ ತೆರಿಗೆ ವಿಧಿಸಿದ ಟ್ರಂಪ್!
Kumble: ಹೆತ್ತವರನ್ನೇ ಕೊಠಡಿಯಲ್ಲಿ ಕೂಡಿ ಹಾಕಿದ ಪುತ್ರಿ
Congress: ಗ್ಯಾರಂಟಿಗಳ ಹಿಂಭಾರ, ಮುಂಭಾರ ಹೆಚ್ಚಾಗಿ ಮುಗ್ಗರಿಸುತ್ತಿದೆ ಸರಕಾರ: ಸಿ.ಟಿ.ರವಿ
Higher Education: ಕಾಲೇಜು ಸಿಬಂದಿ ರಜೆ ಹಾಕದೆ ಕೇಂದ್ರ ಕಚೇರಿಗೆ ಬರುವಂತಿಲ್ಲ
Local Bodies: ಸ್ಥಳೀಯ ಸಂಸ್ಥೆ ಉಪಚುನಾವಣೆ: ಕಾಂಗ್ರೆಸ್ 8, ಬಿಜೆಪಿ 3, ಪಕ್ಷೇತರ 1
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.