ಅಂಬೇಡ್ಕರ್ ಅಂತ್ಯಸಂಸ್ಕಾರಕ್ಕೂ ಜಾಗ ನೀಡದ ಕಾಂಗ್ರೆಸ್
Team Udayavani, Jan 23, 2018, 12:25 PM IST
ನಂಜನಗೂಡು: ಅಂಬೇಡ್ಕರ್ ಪಾರ್ಥೀವ ಶರೀರದ ಅಂತ್ಯ ಸಂಸ್ಕಾರಕ್ಕೂ ಜಾಗ ನೀಡದ ಕಾಂಗ್ರೆಸ್ಸಿಗರಿಂದ ದಳಿತರ ಉದ್ಧಾರದ ಮಾತು ನಾಚಿಕೆಗೇಡಿನ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಟೀಕಿಸಿದರು. ನಗರದ ವಿದ್ಯಾವರ್ಧಕ ಮೈದಾನದಲ್ಲಿ ನಡೆದ ಪರಿವರ್ತನಾ ಯಾತ್ರೆ ಸಮಾವೇಶನ್ನುದ್ದೇಶಿ ಮಾತನಾಡಿದರು.
ಮೀನು, ಮಾಂಸ ತಿಂದು ದೇವಾಲಯ ಪ್ರವೇಶಿಸಿದ ಸಿಎಂ ಸಿದ್ದರಾಮಯ್ಯ ಅವರೇ ನಿಮ್ಮನ್ನು ರಾಜ್ಯದ ಆರೂವರೆ ಕೋಟಿ ಜನತೆ ಎಂದೂ ಕ್ಷಮಿಸಲಾರರು. ಅಂದು ಡಾ.ಬಿ.ಆರ್. ಅಂಬೇಡ್ಕರ್ ಅವರ ಪಾರ್ಥಿವ ಶರೀರದ ಅಂತ್ಯ ಸಂಸ್ಕಾರಕ್ಕೂ ದೆಹಲಿಯಲ್ಲಿ ಒಂದಿಂಚೂ ಜಾಗ ನೀಡದ ಕಾಂಗ್ರೆಸ್ಸಿಗರಿಗೆ ಈಗ ಅಂಬೇಡ್ಕರ್ ದಲಿತೋದ್ಧಾರ ಎನ್ನಲು ನಾಚಿಕೆಯಾಗಬೇಕು ಎಂದು ಕಾಂಗ್ರೆಸ್ಸಿಗರನ್ನು ತರಾಟೆಗೆ ತೆಗೆದುಕೊಂಡರು.
ಕೇಂದ್ರದಿಂದ 1 ಲಕ್ಷ ಕೋಟಿ ಅನುದಾನ ತಂದು ರಾಜ್ಯದಲ್ಲಿ ನೀರಾವರಿ ಯೋಜನೆ ಪೂರ್ಣಗೊಳಿಸಲು ಬಿಜೆಪಿ ಗೆಲ್ಲಿಸಿ ಎಂದ ಅವರು, ರಾಜ್ಯದಲ್ಲಿನ ಮೂಲ ನಿವೇಶನಗಳನ್ನು ಒತ್ತೆ ಇಟ್ಟು ಸಾಲ ಮಾಡುತ್ತಾ ರಾಜ್ಯವನ್ನು ದೀವಾಳಿ ಮಾಡುತ್ತಿರುವ ನಿಮಗೆ ಪೂರ್ಣ ಬಜೆಟ್ ಮಂಡಿಸುವ ಅಧಿಕಾರವಿಲ್ಲ ಎಂದರು.
ತುಘಲಕ್ ಸರ್ಕಾರ: ನಂಜನಗೂಡು-ಗುಂಡ್ಲುಪೇಟೆ ಉಪ ಚುನಾವಣೆಯ ನಂತರ ರಾಜ್ಯದಲ್ಲಿ ಸಿದ್ದರಾಮಯ್ಯನವರ ಸರ್ವಾಧಿಕಾರದ ತುಘಲಕ್ ದರ್ಭಾರ್ ಆರಂಭವಾಗಿದೆ. ಹಣ, ಹೆಂಡ, ಜಾತಿ ವೀಷ ಬೀಜ ಬಿತ್ತಿ ಗೆಲುವು ಸಾಧಿಸಬಹುದು ಎಂಬುದನ್ನ ನಂಜನಗೂಡು ಉಪ ಚುನಾವಣೆಯಲ್ಲಿ ಮನಗಂಡ ಮುಖ್ಯಮಂತ್ರಿ ಸಿದ್ದರಾಮಯ್ಯ ಈಗ ರಾಜ್ಯಾದ್ಯಂತ ಇದೇ ಪ್ರಯೋಗವನ್ನು ನಡೆಸುತ್ತಿದ್ದಾರೆ.
ಹಾಗಾಗಿಯೇ ತುಘಲಕ್ ದರ್ಭಾರ್ ಕಾಣುವಂತಾಗಿದೆ ಎಂದು ಬಿಎಸ್‌ವೈ ವಾಗ್ಧಾಳಿ ನಡೆಸಿದರು. ಗೆದ್ದ ಒಂದೇ ತಿಂಗಳಲ್ಲಿ ತಾಲೂಕಿನಾದ್ಯಂತ ಕಾಂಕ್ರೀಟ್ ರಸ್ತೆ ಮಾಡಲಿದ್ದೇವೆ ಎಂದು ಹೇಳಿದ ಮಾತು ಏನಾಗಿದೆ ಎಂದು ಪ್ರಶ್ನಿಸಿದ ಅವರು, ಚುನಾವಣೆಯ ಸಮೀಪದಲ್ಲಿ ಹಿಂದು, ದೇವಾಲಯ ಭೇಟಿ ಎನ್ನುವುದು ದೇವ್ವದ ಬಾಯಲ್ಲಿ ಭಗವದ್ಗೀತೆ ಹೊರ ಬರಲು ಆರಂಭಿಸಿದೆ ಎಂದು ಸಿದ್ದರಾಮಯ್ಯ ಅವರನ್ನು ಕುಟುಕಿದರು.
ಅನ್ನಭಾಗ್ಯದ ಅವ್ಯವಹಾರ ಕೇಂದ್ರಕ್ಕೆ ದೂರು: ಕೇಂದ್ರ ಸರ್ಕಾರ ನೀಡಿರುವ ಅನ್ನಭಾಗ್ಯದ ಅಕ್ಕಿ ಪಡಿತರವನ್ನು ಕಾಳಸಂತೆಯಲ್ಲಿ ಮಾರಿ ಕೊಳ್ಳುತ್ತಿರುವ ಹಗರಣದ ಕುರಿತು ತಾವೇ ಪ್ರಧಾನಿಗೆ ದೂರು ನೀಡುತ್ತೇನೆಂದು ತಿಳಿಸಿದ ಯಡಿಯೂರಪ್ಪ, ಬಿಜೆಪಿ ಅಧಿಕಾರದ ಗೆಲುವಿನಲ್ಲಿ ನಂಜನಗೂಡು ಪಾಲು ಇರಬೇಕು, ಉಪ ಚುನಾವಣೆಯ ಸ್ವಾಭಿಮಾನದ ಸೋಲನ್ನು ಮುಂದಿನ ಚುನಾವಣೆಯಲ್ಲಿ ತಿದ್ದಿಕೊಂಡು ಬಿಜೆಪಿಗೆ ಮತ ನೀಡಿ ಎಂದರು.
ಸಮಾವೇಶದಲ್ಲಿ ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಕೋಟೆ ಎಂ. ಶಿವಣ್ಣ, ಜಿಲ್ಲಾ ಗ್ರಾಮಾಂತರ ಉಪಾಧ್ಯಕ್ಷರಾದ ಎಸ್.ಮಹದೇವಯ್ಯ ಆರ್.ಆಶೋಕ್, ಕೆ.ಕೆ. ಜಯದೇವ್, ರಾಜ್ಯ ಯುವ ಮೋರ್ಚಾ ಉಪಾಧ್ಯಕ್ಷ ಹರ್ಷವರ್ಧನ್, ರಾಜ್ಯ ಹಿಂದುಳಿದ ವರ್ಗ ಮೋರ್ಚಾ ಅಧ್ಯಕ್ಷ ಪಿ.ಜೆ, ಪುಟ್ಟಸ್ವಾಮಿ, ಮುಖಂಡರಾದ ಅಪ್ಪಣ್ಣ, ಮೂಡಾ ಅಧ್ಯಕ್ಚರಾದ ಕೆ.ಆರ್.ಮೋಹನ್‌ಕುಮಾರ್, ಬಸವೇಗೌಡ, ಡಿ.ಎಸ್, ವೀರಯ್ಯ,
ರಾಜ್ಯ ಕಾರ್ಯಕಾರಿಣಿ ಸದಸ್ಯ ಹಾಗೂ ಕಾನೂನು ಹಾಗೂ ಸಂಸಧೀಯ ಮಂಡಳಿ ಸದಸ್ಯ ಎಸ್.ಅರುಣ್‌ಕುಮಾರ್, ಕಾರ್ಯಕಾರಿಣಿ ಸದಸ್ಯರಾದ ಕುಂಬ್ರಳ್ಳಿ ಸುಬ್ಬಣ್ಣ, ಎನ್.ಆರ್.ಕೃಷ್ಣಪ್ಪಗೌಡ, ರಾಮಕೃಷ್ಣಪ್ಪ, ಎಸ್.ಟಿ ಮೋರ್ಚಾ ಜಿಲ್ಲಾಧ್ಯಕ್ಷ ಸಿ.ಚಿಕ್ಕರಂಗನಾಯಕ, ತಾಲ್ಲೂಕು ಬಿಜೆಪಿ ಘಟಕ ಅಧ್ಯಕ್ಷ ಹೆಚ್,ಎಂ, ಕೆಂಡಗಣ್ಣಪ್ಪ, ನಗರಾಧ್ಯಕ್ಷ ಬಾಲಚಂದ್ರು, ಜಿ.ಪಂ,ಸದಸ್ಯರಾದ ಹೆಚ್,ಎಸ್,ದಯಾನಂದಮೂರ್ತಿ, ಮಂಗಳಾಸೋಮಶೇಖರ್, ನಗರಸಭಾ ಉಪಾಧ್ಯಕ್ಷ ಪ್ರದೀಪ್,
ಮಾಜಿ ತಾ.ಪಂ,ಸದಸ್ಯ ಹಗಿನವಾಳು ಸುರೇಶ್, ಹೆಚ್.ಎಸ್,ಗಿರೀಧರ್,ಸದಸ್ಯರಾದ ಕೆ.ಜಿ,ಆನಂದ, ಸುದಾ ,ಗಿರೀಶ್, ಹೆಚ್.ಎಸ್.ಮಹದೇವಸ್ವಾಮಿ, ತಾ.ಪಂ,ಸದಸ್ಯರಾದ ಸಿ,ಎಂ.ಮಹದೇವಯ್ಯ, ಶಿವಣ್ಣ, ಬಸವರಾಜು ಮಾಜಿ ಜಿ.ಪಂ,ಸದಸ್ಯ ಡಾ.ಕೆ,ಶಿವರಾಂ, ಎಸ್.ಎಂ.ಕೆಂಪಣ್ಣ, ಶೈಲಾಬಾಲ್‌ರಾಜ್, ಯುವ ಮೋರ್ಚಾ ಅಧ್ಯಕ್ಚ ಶ್ರೀಕಂಠ, ವಿಸ್ತಾರಕರಾದ ಜಯಪ್ರಕಾಶ್, ದೇವಿರಮ್ಮನಹಳ್ಳಿ ಬಸವರಾಜು, ಆಕಲ ಮಹದೇವಪ್ಪ ಶಿರಮಳ್ಳಿ ಮಹದೇವಸ್ವಾಮಿ,ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ
MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?
Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Maharaja: ಬಾಂಧವ್ಯವೃದ್ಧಿ ಬಳಿಕ 29ಕ್ಕೆ ಚೀನಾದಲ್ಲಿ ಮೊದಲ ಬಾರಿಗೆ ತಮಿಳು ಸಿನಿಮಾ ರಿಲೀಸ್!
Yadagiri: ವಕ್ಫ್ ಹೋರಾಟ ರೈತರ ಪರವಾಗಿದೆ: ಶಾಸಕ ಯತ್ನಾಳ
ಅಡಿಕೆ ಬೆಳೆಗಾರರ ಜೀವನಕ್ಕೆ ಆಘಾತವಿಕ್ಕಿದ ಡಬ್ಲ್ಯೂಎಚ್‌ಒ ವಿರುದ್ಧ ಕ್ರಮಕ್ಕೆ ಒತ್ತಾಯ
KFD Vaccine: ಮುಂಬರುವ ನವೆಂಬರ್‌ನಲ್ಲಿ ಮಂಗನ ಕಾಯಿಲೆಗೆ ಲಸಿಕೆ ಸಿದ್ಧ: ದಿನೇಶ್ ಗುಂಡೂರಾವ್
Actress: ಫ್ರೆಂಚ್ ಗೆಳೆಯನೊಂದಿಗೆ ಬ್ರೇಕ್‌ಅಪ್ ಆಗಿದೆ: ಮಲ್ಲಿಕಾ ಶೆರಾವತ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.