ಜಾನಪದ ಕನ್ನಡ ಸಂಸ್ಕೃತಿಯ ಅವಿಭಾಜ್ಯ ಅಂಗ
Team Udayavani, Oct 23, 2017, 1:09 PM IST
ತಿ.ನರಸೀಪುರ: ಸಾಂಸ್ಕೃತಿಕ ಬದುಕಿನ ಐತಿಹಾಸಿಕತೆಯನ್ನು ಹಾಡಿನ ರೂಪದಲ್ಲಿ ಪ್ರಸ್ತುತಪಡಿಸುವ ಜಾನಪದ ಕನ್ನಡ ನಾಡಿನ ಸಂಸ್ಕೃತಿಯ ಅವಿಭಾಜ್ಯ ಅಂಗ ಎಂದು ವಿಧಾನ ಪರಿಷತ್ ಸದಸ್ಯ ಆರ್.ಧರ್ಮಸೇನಾ ಹೇಳಿದರು. ಪಟ್ಟಣದ ವಿದ್ಯೋದಯ ಪ್ರಥಮ ದರ್ಜೆ ಕಾಲೇಜು ಸಭಾಂಗಣದಲ್ಲಿ ಕನ್ನಡ ಜಾನಪದ ಪರಿಷತ್ ತಾಲೂಕು ಘಟಕ ಉದ್ಘಾಟಿಸಿ ಮಾತನಾಡಿದರು.
ಜಾಗತೀಕರಣದ ಪ್ರಭಾವದಲ್ಲೂ ಜಾನಪದ ಅಳಿಯದೆ ಉಳಿಯುವ ಮೂಲಕ ಗಟ್ಟಿತನ ಹೊಂದಿದೆ. ಕೃಷಿಯ ನಾಟಿಯಲ್ಲಿ ನಿರತರಾದ ಮಹಿಳೆಯರು, ಅಳುವ ಮಗುವನ್ನು ಮಲಗಿಸಲು ತಾಯಿ, ಒಕ್ಕಣೆ ಹಾಗೂ ರಾಗಿ ಬೀಸುವ ಕಲ್ಲಿನ ಮುಂದೆ ಕುಳಿತು ಹೇಳುವ ಹಾಡಿನ ಪದಗಳೇ ಜಾನಪದಗಳಾದವು ಎಂದರು.
ಪರಂಪರೆ ಉಳಿಸಿ: ಕನ್ನಡ ಧ್ವಜವನ್ನು ಹಾರಿಸಿಕೊಂಡು ಕನ್ನಡಪರ ಹೋರಾಟಗಳನ್ನು ಮಾಡಿದರಷ್ಟೇ ನಾಡು ನುಡಿಯ ಬೆಳವಣಿಗೆಯಾಗುವುದಿಲ್ಲ. ಗ್ರಾಮೀಣ ಜನರ ಜೀವನಾಡಿಯಾಗಿ ಸಂಸ್ಕೃತಿಯ ಪರಂಪರೆ ಮಡಿವಂತಿಕೆಯನ್ನು ಜೀವಂತವಾಗಿಟ್ಟಿರುವ ಜಾನಪದ ಕಲಿತು ಜೀವನ ಶೈಲಿಯಲ್ಲಿ ಅಳವಡಿಸಿಕೊಳ್ಳಬೇಕೆಂದರು.
ಉದ್ಯೋಗ ಮೀಸಲಾತಿಯಲ್ಲಿ ಪ್ರಾಂತ್ಯಾವಾರು ಭಾಷೆಗಳಿಗೆ ಪ್ರಾಮುಖ್ಯತೆ ನೀಡುವ ಸಾಧ್ಯತೆ ಇರುವುದರಿಂದ ವಿದ್ಯಾರ್ಥಿಗಳು ಕನ್ನಡವನ್ನು ಅಸಡ್ಡೆ ಭಾವನೆಯಿಂದ ನೋಡದೆ ಮಾತೃಭಾಷೆ ಶಿಕ್ಷಣ ಪಡೆಯಬೇಕೆಂದು ಕಿವಿಮಾತು ಹೇಳಿದರು.
20 ಲಕ್ಷ ರೂ.ಅನುದಾನ: ಕನ್ನಡ ಜಾನಪದ ಪರಿಷತ್ ಜಿಲ್ಲಾಧ್ಯಕ್ಷ ಕ್ಯಾತನಹಳ್ಳಿ ಎಚ್.ಪ್ರಕಾಶ್, ಜಾನಪದ ಆರಂಭಗೊಂಡ ನೆಲೆಯಿಂದಲೇ ಪರಿಷತ್ ಅನ್ನು ವಿದ್ಯುಕ್ತವಾಗಿ ಉದ್ಘಾಟಿಸಿದ ನಂತರ 11ನೇ ಶಾಖೆಯಾಗಿ ತಿ.ನರಸೀಪುರದಲ್ಲಿ ಉದ್ಘಾಟನೆಗೊಳ್ಳುತ್ತಿದೆ. ರಾಜ್ಯ ಸರ್ಕಾರ ಸುಮಾರು 20 ಲಕ್ಷ ರೂ.,ಗಳ ಅನುದಾನವನ್ನು ರಾಜ್ಯಮಟ್ಟದ ಜಾನಪದ ಪರಿಷತ್ ಆಚರಣೆಗೆ ನೀಡಿದೆ ಎಂದು ತಿಳಿಸಿದರು.
ಕನ್ನಡ ಜಾನಪದ ಪರಿಷತ್‌ನ ಬೆಂಗಳೂರು ಕಾರ್ಯಾಧ್ಯಕ್ಷ ಡಾ.ಎಸ್.ಬಾಲಾಜಿ, ತಲಕಾಡು ಜಿಪಂ ಸದಸ್ಯ ಟಿ.ಎಚ್.ಮಂಜುನಾಥನ್, ತಾಪಂ ಅಧ್ಯಕ್ಷ ಸಿ.ಚಾಮೇಗೌಡ, ಸಾಮಾಜಿಕ ನ್ಯಾಯ ಸ್ಥಾಯಿ ಸಮಿತಿ ಅಧ್ಯಕ್ಷ ರಾಮಲಿಂಗಯ್ಯ, ಬಸ್ ಮಾಲಿಕ ಹಾಗೂ ಖಾಸಗಿ ಬಸ್ ಏಜೆಂಟರ ಸಂಘದ ಅಧ್ಯಕ್ಷ ಪಿ.ಪುಟ್ಟರಾಜು,
-ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ಮರಿಸ್ವಾಮಿ, ವಿದ್ಯೋದಯ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ರಾಮಚಂದ್ರ, ಉಪನ್ಯಾಸಕ ಮೂಗೂರು ಕುಮಾರಸ್ವಾಮಿ, ಸಂಗೀತ ವಿದ್ವಾನ್ ಕಿರಗಸೂರು ರಾಜಪ್ಪ, ಹೊಸೂರುಹುಂಡಿ ಸೋಮೇಶ್, ಉಮೇಶ್, ಮಂಜುನಾಥ್ ಮತ್ತಿತರರಿದ್ದರು.
ಕನ್ನಡ ಜಾನಪದ ಪರಿಷತ್ ಪದಾಧಿಕಾರಿಗಳು: ಕನ್ನಡ ಜಾನಪದ ಪರಿಷತ್‌ನ ತಾಲೂಕು ಘಟಕದ ನೂತನ ಅಧ್ಯಕ್ಷರಾಗಿ ಹೊನ್ನನಾಯಕ, ಕಾರ್ಯದರ್ಶಿಯಾಗಿ ಮೂಗೂರು ಕುಮಾರಸ್ವಾಮಿ, ಜಂಟಿ ಕಾರ್ಯದರ್ಶಿಯಾಗಿ ಸತೀಶ್‌ನಾಯಕ ನೇಮಕವಾಗಿದ್ದಾರೆ.
ಪತ್ರಿಕಾ ಕಾರ್ಯದರ್ಶಿಯಾಗಿ ಕನ್ನಡ ಪುಟ್ಟಸ್ವಾಮಿ, ಸಂಘಟನಾ ಕಾರ್ಯದರ್ಶಿಗಳಾಗಿ ಟಿ.ಎಸ್.ಲೋಕೇಶ್, ಮಂಗಳ, ಸಂಚಾಲಕರಾಗಿ ಡಾ.ನಿಂಗರಾಜು, ನಿರ್ದೇಶಕರಾಗಿ ಕೆ.ಮರೀಗೌಡ, ತೊಂಟೇಶ್, ಕಿರಗಸೂರು ರಾಜಪ್ಪ, ನರಸಿಂಹಮಾದನಾಯಕ, ಅಂದಾನಿಗೌಡ ಹಾಗೂ ವಿಒ ಹುಂಡಿ ಬಸವರಾಜು ಅವರನ್ನು ಆಯ್ಕೆ ಮಾಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
MUST WATCH
ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !
ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ
ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಹೊಸ ಸೇರ್ಪಡೆ
Caught On Cam!;ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ: Video
2047 ರ ವೇಳೆಗೆ ದೇಶದ 50% ಜನ ನಗರ ಪ್ರದೇಶಗಳಲ್ಲಿ ವಾಸಿಸುತ್ತಾರೆ: ಸಚಿವ ಖಟ್ಟರ್
VIDEO: ಅಪ್ಪಿಕೊಳ್ಳಲು ಬಂದ ನಿರ್ದೇಶಕನನ್ನು ತಡೆದು ಕೆನ್ನೆಗೆ ಮುತ್ತು ಕೊಟ್ಟ ನಿತ್ಯಾ ಮೆನನ್
Dandeli: ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ಕಿರುಕುಳ : ಪೋಕ್ಸೋ ಪ್ರಕರಣದಡಿ ಓರ್ವನ ಬಂಧನ
Chhattisgarh: ಸ್ಫೋ*ಟದಲ್ಲಿ ಮೃ*ತಪಟ್ಟ 8 ಪೊಲೀಸರಲ್ಲಿ 5 ಮಂದಿ ಮಾಜಿ ನಕ್ಸಲೀಯರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.