ನಾಗರಹೊಳೆಯಲ್ಲಿ ಇನ್ನೆರಡು ದಿನ ಸೀಳುದಾರಿ ಗಣತಿ


Team Udayavani, Jan 12, 2018, 12:09 PM IST

Vedvyas kamath meets Mangaluru bishop 1.jpg

ಹುಣಸೂರು: ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ರಾಷ್ಟ್ರೀಯ ಹುಲಿ ಗಣತಿ ಕಾರ್ಯದಲ್ಲಿ ಗುರುವಾರ ಟ್ರ್ಯಾನ್ಸಾಕ್ಟ್ ಲೆನ್‌ ಸೆನ್ಸಸ್‌(ಸೀಳುದಾರಿ ಗಣತಿ) ಪ್ರಾರಂಭವಾಗಿದ್ದು, ಮುಂದಿನ ಎರಡು ದಿನಗಳ ಕಾಲ ಅಭಯಾರಣ್ಯದಲ್ಲಿ ವಾಸಿಸುವ ಸಸ್ಯಹಾರಿ ಪ್ರಾಣಿಗಳು ಹಾಗೂ ವನಸಂಪತ್ತಿನ ಗಣತಿ ಕಾರ್ಯವನ್ನು ಅರಣ್ಯ ಸಿಬ್ಬಂದಿಗಳು ಮತ್ತು ಸ್ವಯಂಸೇವಕರು ನಡೆಸಲಿದ್ದಾರೆ.

ಹುಲಿ ಪ್ರತ್ಯಕ್ಷ: ಕಳೆದ ಮೂರು ದಿನಗಳಿಂದ ಅಭಯಾರಣ್ಯದಲ್ಲಿ ಮಾಂಸಹಾರಿ ಪ್ರಾಣಿಗಳ ಗಣತಿಕಾರ್ಯ ಯಶಸ್ವಿಯಾಗಿ ನಡೆಯಿತು, ಮೂರನೇ ದಿನ ಬುಧವಾರ ಹುಣಸೂರು ವಲಯದಲ್ಲಿ ಎರಡು, ಡಿ.ಬಿ.ಕುಪ್ಪೆಯಲ್ಲಿ ಹಾಗೂ  ಅಂತರ ಸಂತೆವಲಯದಲ್ಲೂ ತಲಾ ಒಂದು ಹುಲಿ ಗಣತಿಕಾರರ ಮುಂದೆ ಪ್ರತ್ಯಕ್ಷವಾಗಿದ್ದರೆ, ಗುರುವಾರ ಅಂತರ ಸಂತೆ ವಲಯದಲ್ಲಿ ತಾಯಿ ಹಾಗೂ ಮೂರು ಹುಲಿ ಮರಿಗಳು ಹಾಗೂ ಡಿ.ಬಿ.ಕುಪ್ಪೆಯಲ್ಲಿ 3 ಚಿರತೆ ಕಾಣಿಸಿವೆ.

ಮೂರು ದಿನಗಳ ಕಾಲ ಅರಣ್ಯವ್ಯಾಪ್ತಿಯಲ್ಲಿ 30 ಸ್ವಯಂಸೇವಕರು, 24 ಪೊನ್ನಂಪೇಟೆ ಫಾರೆಸ್ಟ್ರಿ ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಅರಣ್ಯ ಸಿಬ್ಬಂದಿಗಳು ಇದೇ ಮೊದಲ ಬಾರಿಗೆ ಇಲಾಖೆ ಅಭಿವೃದ್ಧಿ ಪಡಿಸಿರುವ ಇಕೋಲಾಜಿಕಲ್‌ ಆ್ಯಪ್‌ ಮೂಲಕ ಹುಲಿ ಗಣತಿಯನ್ನು ಅತ್ಯಂತ ನಿಖರತೆಯಿಂದ ಹಾಗೂ ಯಶಸ್ವಿಯಾಗಿ ಮುಗಿಸಿದ್ದಾರೆ.

ಟ್ರ್ಯಾನ್ಸಾಕ್ಟ್ ಲೆನ್‌ ಗಣತಿ ಏಕೆ? : ಹುಲಿ ಗಣತಿಯೆಂದರೆ ಕಾಡಿನಲ್ಲಿ ಕೇವಲ ಹುಲಿ ಮಾತ್ರ ಇರುವುದಿಲ್ಲ. ಹುಲಿಯೊಂದಿಗೆ ಹುಲಿಯ ಆಹಾರ ಜಿಂಕೆಯಾದರೆ, ಜಿಂಕೆ ಹೇಗಿವೆ. ಜಿಂಕೆಜೀವಿಸಲು ಸಸ್ಯಪ್ರಬೇಧ ಹೇಗಿದೆ. ಇವೆಲ್ಲವೂ ಇಡೀ ಅಭಯಾರಣ್ಯದಲ್ಲಿ ಆಹಾರ ಸರಪಳಿ ಮತ್ತು ಪರಿಸರ ಸಮತೋಲನವನ್ನು ಅರಿತುಕೊಳ್ಳಲು ಇಂತಹ ಗಣತಿ ಕಾರ್ಯ ಮಾಡಲಾಗುತ್ತದೆ.

ಸಸ್ಯಹಾರಿ ಗಣತಿ ನಡೆಯುವುದು ಹೇಗೆ?: ಸಸ್ಯಾಹಾರಿ ಪ್ರಾಣಿಗಳು ಮತ್ತು ವಿವಿಧ ಸಸ್ಯಪ್ರಭೇದಗಳನ್ನು ಗುರುತಿಸುವ ಕಾರ್ಯ ಪ್ರತಿದಿನ ಬೆಳಗ್ಗೆ 6ರಿಂದ 8ರವರೆಗೆ ಮಾತ್ರ ಸಸ್ಯಹಾರಿಗಳ ಗಣತಿ ನಡೆಯುತ್ತದೆ. ಏಕೆಂದರೆ ಬೆಳಗಿನ ಜಾವದ ಸಮಯದಲ್ಲೇ ಸಸ್ಯಾಹಾರಿ ಪ್ರಾಣಿಗಳು ಅತ್ಯಂತ ಚಟುವಟಿಕೆಯಿಂದ ಇರುವ ಕಾಲವಾಗಿದೆ. ಸಸ್ಯಹಾರಿ ಪ್ರಾಣಿಗಳ ಗಣತಿಕಾರರು ಇಲಾಖೆ ನಿರ್ಮಿಸಿರುವ ಟ್ರ್ಯಾನ್ಸಾಕ್ಟ್ ಲೆನ್‌(ಸೀಳುದಾರಿ)ನಲ್ಲಿ ಸಾಗಬೇಕು.

ಪ್ರತಿ ಆಂಟಿ ಪೌಚಿಂಗ್‌ ಕ್ಯಾಂಪ್‌ವಾÂಪ್ತಿಯಲ್ಲಿ 2 ಕಿ.ಮೀ.ಉದ್ದದ ನೇರಮಾರ್ಗ ನಿರ್ಮಿಸಲಾಗಿರುತ್ತದೆ. ಇದರಲ್ಲಿ ಪ್ರತಿ  400 ಮೀಟರಿಗೆ ಒಂದು ವೃತ್ತವನ್ನು ಗುರುತಿಸಲಾಗಿರುತ್ತದೆ. ಮೂವರ ತಂಡದಲ್ಲಿ ಮೊದಲನೆಯವರು ದಿಕ್ಕು ಗುರುತಿಸಿಕೊಂಡು ಮುನ್ನಡೆದರೆ, ಅವರ ಹಿಂಬದಿಯ ಎರಡನೇ ಗಣತಿಕಾರ ಸುತ್ತಮುತ್ತಲ ಪರಿಸರ ಗಮನಿಸುತ್ತಾ ಪ್ರಾಣಿಗಳನ್ನು ಗುರುತಿಸುತ್ತಾರೆ.

ಎರಡನೆಯವರು ತಿಳಿಸಿದ ಪ್ರಾಣಿಗಳನ್ನು ಮೂರನೆಯವರು ಆ್ಯಪ್‌ಗೆ ಅಪ್‌ಲೋಡ್‌ ಮಾಡುವ ಕಾರ್ಯ ನಡೆಸುತ್ತಾರೆ. ಈ ಆ್ಯಪ್‌ನಲ್ಲಿ ಆ ಭೂಭಾಗದ ಹಾಗೂ ಪ್ರಾಣಿಯ ಭಾವಚಿತ್ರ ಸೆರೆಹಿಡಿಯುವ ಅವಕಾಶವನ್ನೂ ನೀಡಲಾಗಿದೆ. ಗಣತಿ ಕಾರ್ಯದ ವೇಳೆ ಕಾಡಿನ ಗಡಿಭಾಗದ ಹುಲ್ಲುಗಾವಲು, ಲಾಂಟೇನದಂತಹ ಕಳೆ ಬೆಳೆದಿರುವ ಪ್ರದೇಶ ಹಾಗೂ ಮಾನವನಿಂದಾಗುತ್ತಿರುವ ತೊಂದರೆಗಳು, ಸಮಸ್ಯೆಗಳನ್ನು ಗುರುತಿಸುವ ಕಾರ್ಯನಡೆಯುತ್ತದೆ.

* ಸಂಪತ್‌ ಕುಮಾರ್‌

ಟಾಪ್ ನ್ಯೂಸ್

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Raj-Thackrey

Election: ರಾಜ್‌ ಠಾಕ್ರೆ ಎಂಎನ್‌ಎಸ್‌ ಶೂನ್ಯ ಸಾಧನೆ: ಚಿಹ್ನೆ, ಮಾನ್ಯತೆ ನಷ್ಟದ ಭೀತಿ!

Delhi-School

Air Quality: ದಿಲ್ಲಿಯಲ್ಲಿ ಭೌತಿಕ ತರಗತಿ ಪುನಾರಂಭದ ಬಗ್ಗೆ ಗಮನ ಹರಿಸಿ: ಸುಪ್ರೀಂ ಕೋರ್ಟ್‌

President-Murmu

Indian Constitution: ಸಂವಿಧಾನ ಅಂಗೀಕರಿಸಿ 75 ವರ್ಷ: ಸದನದಲ್ಲಿಂದು ರಾಷ್ಟ್ರಪತಿ ಭಾಷಣ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

ಪರಿಸ್ಥಿತಿ ಆಧರಿಸಿ ರಾಜಕೀಯ ನಡೆ: ಸಿ.ಎಂ. ಇಬ್ರಾಹಿಂ

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

MUDA CASE: ತನಿಖೆಗೂ ಮುನ್ನವೇ ದಾಖಲೆ ನಾಪತ್ತೆ?

Kamsale-kumaraswami

Mysuru: ‘ಕೋಲು ಮಂಡೆ ಜಂಗಮ’ ಹಾಡು ನೃತ್ಯ ಸಂಯೋಜಕ ಕಂಸಾಳೆ ಕಲಾವಿದ ಕುಮಾರಸ್ವಾಮಿ ನಿಧನ

GTD

JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

Shiva-sene-Shinde

Election: ಶಿಂಧೆ ವಿರುದ್ಧ ಸೋತಿದ್ದ ಕಾಂಗ್ರೆಸ್‌ ಬಂಡಾಯ ಅಭ್ಯರ್ಥಿ ಶಿವಸೇನೆಗೆ

Khameni

warrant: ಇಸ್ರೇಲಿ ನಾಯಕರಿಗೆ ವಾರಂಟ್‌ ಬೇಡ, ಗಲ್ಲು ವಿಧಿಸಿ: ಇರಾನ್‌

GOLD2

Gold Price Decline: ಚಿನ್ನದ ದರ ಮತ್ತೆ 1,000 ರೂ.ಇಳಿಕೆ: 10 ಗ್ರಾಂಗೆ 78,550 ರೂ.

Ajith-Pawar

Assembly Election: ನಾನು ಪ್ರಚಾರ ಮಾಡದ್ದಕ್ಕೆ ನೀನು ಶಾಸಕನಾದೆ: ಸಂಬಂಧಿಗೆ ಅಜಿತ್‌

AAP–BJP

Scheme: ದಿಲ್ಲಿಯಲ್ಲಿ ಆಮ್‌ ಆದ್ಮಿ ಸರಕಾರ-ಬಿಜೆಪಿ ಮಧ್ಯೆ ವೃದ್ಧಾಪ್ಯ ವೇತನ ಕದನ!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.