ಆರ್ಯವೈಶ್ಯರು ರಾಜಕೀಯ ಶಕ್ತಿ ಪಡೆಯಿರಿ
Team Udayavani, Jan 7, 2019, 6:04 AM IST
ಮೈಸೂರು: ಸಾಮಾಜಿಕ, ಆರ್ಥಿಕ ರಾಜಕೀಯ ಶಕ್ತಿಯನ್ನು ಆರ್ಯವೈಶ್ಯ ಸಮಾಜವು ಬಳಸಿಕೊಂಡು ಇತರ ಸಮಾಜಗಳಂತೆ ಮೇಲಕ್ಕೇರಬೇಕಾಗಿದೆ ಎಂದು ಕರ್ನಾಟಕ ಆರ್ಯವೈಶ್ಯ ಮಹಾಮಂಡಳಿ ರಾಜ್ಯಾಧ್ಯಕ್ಷ ಶಾಸಕ ಡಾ.ಟಿ.ಎ. ಶರವಣ ಸಲಹೆ ನೀಡಿದರು.
ನಗರದ ಜೆ.ಕೆ. ಮೈದಾನದ ಅಮೃತ ಮಹೋತ್ಸವ ಭವನದಲ್ಲಿ ಕರ್ನಾಟಕ ಆರ್ಯವೈಶ್ಯ ಮಹಾಮಂಡಳಿಯಿಂದ ಭಾನುವಾರ ನಡೆದ ಮೈಸೂರು- ಚಾಮರಾಜನಗರ ಜಿಲ್ಲೆಗಳ ಮಹಾಮಂಡಳಿ ಸಮಾವೇಶ ಉದ್ಘಾಟಿಸಿ ಅವರು ಮಾತನಾಡಿದರು.
ಆರ್ಯ ವೈಶ್ಯರು ಕೇವಲ ವ್ಯಾಪಾರ ಸೀಮಿತವಾಗದೇ ರಾಜಕೀಯ ಕ್ಷೇತ್ರದಲ್ಲಿಯೂ ಸಹ ಬೆಳೆಯುವ ಮೂಲಕ ರಾಜಕೀಯ ಶಕ್ತಿಯನ್ನು ಪಡೆಯಬೇಕು. ಆ ಮೂಲಕ ಸಮಾಜದ ಶಕ್ತಿಯನ್ನು ಹೆಚ್ಚಿಸಬೇಕು ಎಂದು ಸಲಹೆ ನೀಡಿದರು.
ಆರ್ಯವೈಶ್ಯ ಅಥವಾ ಶೆಟ್ಟಿಗಳು ಎಂದರೆ ವ್ಯಾಪಾರಿ ಮಾಡಿಕೊಂಡಿರುವವರು, ಸರ್ಕಾರಕ್ಕೆ ಪ್ರಾಮಾಣಿಕವಾಗಿ ತೆರಿಗೆ ಕಟ್ಟುವವರು ಎನ್ನುವ ರೂಢಿ ಮಾತಿದೆ. ಶೆಟ್ಟಿಗಳೆಲ್ಲಾ ಶ್ರೀಮಂತರಲ್ಲ, ಬಡವರೂ ಇದ್ದಾರೆ. ಅಂತವರಿಗಾಗಿ ಸರ್ಕಾರದ ಮಟ್ಟದಲ್ಲಿ ಹೋರಾಟ ನಡೆಸಲು ರಾಜಕೀಯಕ್ಕೆ ಬರಬೇಕು ಎಂದು ಹೇಳಿದರು.
ಮನೆ ಮನೆಗೆ ಆರೋಗ್ಯ ಸೇವೆ: ನಾನು ಶಾಸಕನಾದ ನಂತರ ಆರ್ಯವೈಶ್ಯ ನಿಗಮ ಮಂಡಳಿ ಸ್ಥಾಪಿಸಲು ಯಶಸ್ವಿಯಾಗಿದ್ದೇನೆ. ಜಾತಿ ಪಟ್ಟಿಯಲ್ಲಿ ಆರ್ಯ ವೈಶ್ಯ ಜನಾಂಗವನ್ನು ಕೈಬಿಡಲಾಗಿತ್ತು. ಈಗ ಮತ್ತೆ ಸೇರಿಸಲಾಗಿದೆ. ವಾಸವಿ ಜಯಂತಿ ಆಚರಣೆಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ.
ನಿಗಮ ಮಂಡಳಿಯಿಂದ ವರ್ಷಕ್ಕೆ ಶೇ. 4ರ ಬಡ್ಡಿ ದರದಲ್ಲಿ ಸಾಲ ನೀಡುವ ಯೋಜನೆ ತರಲಾಗುವುದು. ಆರ್ಯವೈಶ್ಯ ಮಂಡಳಿಯಿಂದ ಮನೆ ಮನೆಗೆ ಧಾವಿಸಿ ಅನಾರೋಗ್ಯ ಪೀಡಿತರನ್ನು ಕರೆ ತಂದು ಚಿಕಿತ್ಸೆ ಕೊಡಿಸಲು ಕಾಯಕ್ರಮ ರೂಪಿಸಲಾಗುತ್ತಿದೆ ಎಂದು ಹೇಳಿದರು.
ಪ್ರವಾಸೋದ್ಯಮ ಸಚಿವ ಸಾ.ರಾ. ಮಹೇಶ್ ಮಾತನಾಡಿ, ಸರ್ಕಾರ ಮಹನೀಯರ ಜಯಂತಿ ಆಚರಿಸುವುದಕ್ಕೆ ಅಡ್ಡಿಯಿಲ್ಲ, ಅವರ ಹೆಸರಿನಲ್ಲಿ ಸರ್ಕಾರ ರಜೆ ನೀಡಿ, ಸರ್ಕಾರಿ ನೌಕರರಿಗೆ ಅನುಕೂಲ ಮಾಡಿಕೊಡುವುದು ಬೇಡ. ಕಡ್ಡಾಯವಾಗಿ ರಜೆ ರದ್ದುಪಡಿಸಿ ಅಂದು ಹೆಚ್ಚುವರಿ 2 ಗಂಟೆ ಕೆಲಸ ಮಾಡಿಸಲು ಸರ್ಕಾರ ಕ್ರಮ ಕೈಗೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ವೈದ್ಯ ಡಾ. ರಾಘವೇಂದ್ರ ಶೆಟ್ಟಿ ಅವರಿಗೆ “ಜಿಲ್ಲಾ ಸಮಾಜ ಭೂಷಣ’ ಪ್ರಶಸ್ತಿ ನೀಡಲಾಯಿತು. ಕಾರ್ಯಕ್ರಮದಲ್ಲಿ ಪ್ರವಾಸೋದ್ಯಮ ಮತ್ತು ರೇಷ್ಮೆ ಸಚಿವ ಸಾ.ರಾ. ಮಹೇಶ್, ಶಾಸಕ ಎಲ್. ನಾಗೇಂದ್ರ, ಕರ್ನಾಟಕ ಆರ್ಯವೈಶ್ಯ ಮಹಾಮಂಡಳಿ ಕಾರ್ಯಾಧ್ಯಕ್ಷ ಗಿರೀಶ್ ಪೆಂಡಕೂರ್, ಮೈಸೂರು ವಿಭಾಗೀಯ ಉಪಾಧ್ಯಕ್ಷ ಎಚ್.ಎಸ್. ಮಂಜುನಾಥ ಶೆಟ್ಟಿ,
ಮಂಡಳಿಯ ಜಿಲ್ಲಾಧ್ಯಕ್ಷ ಕೆ.ಆರ್. ನಾರಾಯಣಮೂರ್ತಿ, ಪದಾಧಿಕಾರಿಗಳಾದ ರವೀಂದ್ರ, ರಾಮಪ್ರಸಾದ್, ಜಿ. ಲಕ್ಷ್ಮೀಪತಿ, ಡಿ.ವಿ. ಸತ್ಯನಾರಾಯಣ, ಸತ್ಯನಾರಾಯಣ ಶೆಟ್ಟಿ, ಜಿ.ವಿ. ರಾಜೇಶ್, ಸಚ್ಚಿನ್, ಪಿ.ಜೆ. ನಿವೇದಿತಾ, ಶೋಭಾ ಶ್ರೀಧರ್ ಕಂಪ್ಲಿ, ಭಾರತಿ ಎಂ. ಪ್ರಕಾಶ್ ಇದ್ದರು. ಕಾರ್ಯಕ್ರಮ ಆರಂಭಕ್ಕೂ ಮುನ್ನ ನೂರಾರು ಮಹಿಳೆಯರು ಏಕ ಕಾಲದಲ್ಲಿ “ವಾಸವಿ ನವರತ್ನ ಮಾಲಿಕಾ’ ಭಜನೆಯನ್ನು ಹಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padubidri: ನವವಿವಾಹಿತೆಗೆ ಕಿರುಕುಳ; ಪತಿಯ ಮನೆಮಂದಿ ವಿರುದ್ಧ ದೂರು
Karkala: ಗೋವಾ ಮದ್ಯ ಅಕ್ರಮ ದಾಸ್ತಾನು ಪ್ರಕರಣ; ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚನೆ
Karkala: ದ್ವೇಷ ಭಾವನೆ ಕೆರಳಿಸುವ ಆರೋಪ; ದೂರು ದಾಖಲು
PoK ಪ್ರದೇಶದಲ್ಲಿ ಚಾಂಪಿಯನ್ಸ್ ಟ್ರೋಫಿ ಪಂದ್ಯಗಳು: ಬಿಸಿಸಿಐ ನಿಂದ ತೀವ್ರ ಖಂಡನೆ
Congress: ಸರ್ಕಾರದಲ್ಲಿ ಒಬ್ಬರು ಏತಿ ಅಂದರೆ ಮತ್ತೊಬ್ಬರು ಪ್ರೇತಿ ಅಂತಾರೆ: ಆರ್.ಅಶೋಕ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.