ಪ್ರಸಾದ್ ಹೇಳಿದಂತೆ ಚುನಾವಣೆ ರಾಜಕೀಯ ಮಾಡಿಲ್ಲ
Team Udayavani, Nov 3, 2019, 3:00 AM IST
ಎಚ್.ಡಿ.ಕೋಟೆ: ನಾವು ಅಭಿವೃದ್ಧಿಗಾಗಿ ರಾಜಕಾರಣ ಮಾಡಿದವರೇ ಹೊರತು, ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಹೇಳಿದಂತೆ ಚುನಾವಣೆಗಾಗಿ ರಾಜಕಾರಣ ಮಾಡಿದವರಲ್ಲ ಎಂದು ಮಾಜಿ ಸಂಸದ ಆರ್.ಧ್ರುವನಾರಾಯಣ್ ತಿಳಿಸಿದರು. ಪಟ್ಟಣದ ಮಿನಿವಿಧಾನಸೌಧದ ಶಾಸಕರ ಕಚೇರಿಯಲ್ಲಿ ಸುದ್ದಿಗೋಷ್ಠಿ ನಡೆಸಿದ ಅವರು, ತಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ಯಾವಗಲೂ ಅಭಿವೃದ್ಧಿ ರಾಜಕಾರಣ ಮಾಡಿಕೊಂಡು ಬಂದಿದ್ದೇನೆ ಎಂದು ತಿರುಗೇಟು ನೀಡಿದರು.
ಇತ್ತೀಚೆಗೆ ಸಂಸದ ವಿ.ಶ್ರೀನಿವಾಸ್ ಪ್ರಸಾದ್ ಸಂವಾದ ಕಾರ್ಯಕ್ರಮವೊಂದರಲ್ಲಿ “ಕೇವಲ ಎರಡು ಹೋಬಳಿಗಳಿಗಷ್ಟೇ ಸೀಮಿತವಾಗಿ ಸರಗೂರನ್ನು ತಾಲೂಕು ಕೇಂದ್ರವನ್ನಾಗಿ ಘೋಷಿಸುವುದು ಸರಿಯಲ್ಲ. ಜೊತೆಗೆ ಅಧಿಕಾರಾವಧಿಯಲ್ಲಿ ಘೋಷಿಸದೇ ಚುನಾವಣೆ ಘೋಷಣೆ ಅವಧಿಯಲ್ಲಿ ಮತ ಪಡೆಯುವ ಸಲುವಾಗಿ ಘೋಷಿಸಿದ್ದಾರೆ’ ಎಂಬ ಹೇಳಿಕೆಯನ್ನು ಧ್ರುವನಾರಾಯಣ ಅಲ್ಲಗೆಳೆದರು.
ಸರಗೂರು ಜನರ 35 ವರ್ಷದ ಹೋರಾಟದ ಫಲವಾಗಿ ತಾಲೂಕು ಘೋಷಣೆಯಾಗಿದೆ. ನಂಜುಂಡಪ್ಪ ವರದಿಯಂತೆ ಕರ್ನಾಟಕ ರಾಜ್ಯದಲ್ಲಿಯೇ ಅತ್ಯಂತ ದೊಡ್ಡ ಹಿಂದುಳಿದ ಎಚ್.ಡಿ.ಕೋಟೆ ತಾಲೂಕು 1618 ಚ.ಕಿ.ಮೀ. ಭೌಗೋಳಿಕ ವಿಸ್ತೀರ್ಣ ಹೊಂದಿ ಇತರೆ ತಾಲೂಕುಗಳಿಗಿಂತ 2-3 ಪಟ್ಟು ಹೆಚ್ಚಿನ ವಿಸ್ತೀರ್ಣ ಹೊಂದಿದೆ. ಎಸ್ಸಿ ಎಸ್ಟಿ ಬಹುಸಂಖ್ಯೆಯಲ್ಲಿರುವ ಉದ್ದೇಶದಿಂದ ಸರಗೂರನ್ನು ತಾಲೂಕು ಮಾಡಲಾಗಿದೆ ಎಂದರು.
ಶಾಸಕ ಅನಿಲ್ ಚಿಕ್ಕಮಾದು, ಬೋವಿ ನಿಗಮ ಮಂಡಳಿ ಮಾಜಿ ಅಧ್ಯಕ್ಷ ಜಿ.ವಿ.ಸೀತಾರಾಮ್, ಕಾಂಗ್ರೆಸ್ ಮುಖಂಡ ಹಿರೇಹಳ್ಳಿ ಸೋಮೇಶ್ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.