ಆಶಾ ಕಾರ್ಯಕರ್ತೆಯರ ಸೇವೆ ಮಹತ್ವದ್ದು
Team Udayavani, Nov 3, 2017, 1:06 PM IST
ಪಿರಿಯಾಪಟ್ಟಣ: ಸರ್ಕಾರದ ಯೋಜನೆಗಳನ್ನು ತಳಹಂತದಲ್ಲಿ ಪರಿಣಾಮಕಾರಿಯಾಗಿ ಅನುಷ್ಠಾನ ಮಾಡುವ ಮಹತ್ವದ ಜವಾಬ್ದಾರಿಯನ್ನು ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರು ನಿರ್ವಹಿಸುತ್ತಿದ್ದಾರೆ ಎಂದು ಶಾಸಕ ಕೆ.ವೆಂಕಟೇಶ್ ತಿಳಿಸಿದರು.
ಪಟ್ಟಣದ ಆದಿಚುಂಚನಗಿರಿ ಸಮುದಾಯ ಭವನದಲ್ಲಿ ಆರೋಗ್ಯ ಇಲಾಖೆ ಮತ್ತು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಂಯುಕ್ತಾಶ್ರಯದಲ್ಲಿ ಸಮುದಾಯ ಸೇವಾ ಕಾರ್ಯಕರ್ತರಿಗೆ ಹಮ್ಮಿಕೊಂಡಿದ್ದ ಒಂದು ದಿನದ ಕಾರ್ಯಗಾರ ಹಾಗೂ ಗೌರವ ಸಮರ್ಪಣೆ ಉದ್ಘಾಟಿಸಿ ಮಾತನಾಡಿದರು.
ವೇತನ ನೀಡಿ: ರಾಜ್ಯ ಸರ್ಕಾರ ಅಂಗನವಾಡಿ ಕಾರ್ಯಕರ್ತೆಯರಿಗೆ 6 ಸಾವಿರ ಮಾಸಿಕ ವೇತನ ನೀಡುತ್ತಿದ್ದು, ಕೇಂದ್ರ ಸರ್ಕಾರ ಕೇವಲ 2 ಸಾವಿರ ನೀಡುತ್ತಿದೆ. ಈ ಬಗ್ಗೆ ಕೇಂದ್ರ ಸರ್ಕಾರ ಕ್ರಮ ಕೈಗೊಳ್ಳಬೇಕು. ರಾಜ್ಯ ಸರ್ಕಾರದ ಬಜೆಟ್‌ನಲ್ಲಿ ಶೇ.65 ರಷ್ಟು ಸಂಬಳಕ್ಕೆ ನೀಡಲಾಗುತ್ತಿದೆ. ಶೇ.35 ರಷ್ಟಲ್ಲಿ ಅಭಿವೃದ್ಧಿ ಮಾಡಬೇಕು ಎಂದರು.
ತಾಲೂಕು ಮಟ್ಟದ ಅಧಿಕಾರಿಗಳು ತಳಹಂತದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಮಸ್ಯೆ ಆಲಿಸಿ ಜಿಲ್ಲಾ ಸಭೆಗಳಲ್ಲಿ ಚರ್ಚಿಸಬೇಕು, ಇದನ್ನು ಸರ್ಕಾರದ ಗಮನಕ್ಕೆ ತರುವ ಪ್ರಯತ್ನ ಮಾಡಬೇಕು ಎಂದರು. ಅಧಿಕಾರಿಗಳ ಅಸಡ್ಡೆಸಲ್ಲ. ವಿಜಾnನ ಬೆಳೆದಂತೆ ಕಾಯಿಲೆಗಳು ಹೆಚ್ಚಾಗುತ್ತಿವೆ. ಹೀಗಾಗಿ ಆರೋಗ್ಯವಂತ ಸಮಾಜ ನಿರ್ಮಾಣಕ್ಕೆ ಸೇವೆ ಮತ್ತು ಸಹಕಾರ ಅಗತ್ಯವಾಗಿದೆ ಎಂದು ತಿಳಿಸಿದರು.
ಕಸಾಪ ಅಧ್ಯಕ್ಷ ಬಿ.ಎಂ.ಶಿವಸ್ವಾಮಿ, ಮಹಿಳಾ ಸಬಲೀಕರಣ ಅತೀ ಮುಖ್ಯವಾದ ಶಕ್ತಿಯಾಗಿದ್ದು ರಾಷ್ಟ್ರ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಮಹತ್ವದ್ದು. ಆದರೆ ಇಂದು ಹೆಣ್ಣಿನ ಸ್ಥಾನಮಾನಕ್ಕೆ ಧಕ್ಕೆ ತರುವಂತಹ ಕೆಲಸವಾಗುತ್ತಿದ್ದು ಕಚೇರಿ ಮತ್ತಿತರ ಕಡೆಗಳಲ್ಲಿ ಹೆಣ್ಣುಮಕ್ಕಳು ನಿರ್ಭಯವಾಗಿ ಕೆಲಸ ಮಾಡಲಾಗದ ಪರಿಸ್ಥಿತಿ ಬಂದೊದಗಿದೆ ಎಂದು ವಿಷಾದಿಸಿದರು.
ತಾಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ಎಸ್.ರಾಮುಐಲಾಪುರ, ಅಂಗನವಾಡಿ ಮತ್ತು ಆಶಾ ಕಾರ್ಯಕರ್ತೆಯರ ಹೋರಾಟಕ್ಕೆ ತಕ್ಕ ಪ್ರತಿಫಲ ಸಿಗುತ್ತಿಲ್ಲ. ಸರ್ಕಾರಗಳು ಸಂಬಳದ ವಿಚಾರದಲ್ಲಿ ಮಲತಾಯಿ ಧೋರಣೆ ಅನುಸರಿಸುತ್ತಿದ್ದೇವೆ. ಅವರಿಗೆ ಸೇವಾ ಭದ್ರತೆ ಹಾಗೂ ಸಂಬಳದಲ್ಲಿ ವಿಳಂಬವಾಗಬಾರದು. ಆಗ ಮಾತ್ರ ಗೌರವ ಸಮರ್ಪಣೆ ಸಾರ್ಥಕವೆನಿಸುತ್ತದೆ ಎಂದರು.
ಅಂಗನವಾಡಿ ಕಾರ್ಯಕರ್ತೆಯರು ಮತ್ತು ಆರೋಗ್ಯ ಇಲಾಖೆ ವತಿಯಿಂದ ಶಾಸಕ ಕೆ.ವೆಂಕಟೇಶ್, ತಾಲೂಕು ಆರೋಗ್ಯಾಧಿಕಾರಿ ನಾಗೇಶ್, ಸಿಡಿಪಿಒ ಇಂದಿರಾ ಅವರನ್ನು ಸನ್ಮಾನಿಸಲಾಯಿತು.
ಜಿಪಂ ಸದಸ್ಯರಾದ ಸಿ.ಮಣಿ, ಕೌಶಲ್ಯಾ, ತಾಪಂ ಅಧ್ಯಕ್ಷರಾದ ನಿರೂಪ, ಸದಸ್ಯರಾದ ಜಯಂತಿ, ಶಿವಮ್ಮ, ಶ್ರೀನಿವಾಸ್, ಪ್ರೀತಿ, ಮಲ್ಲಿಕಾರ್ಜುನ, ಪುರಸಭೆ ಉಪಾಧ್ಯಕ್ಷೆ ರತ್ನ, ಮಾಜಿ ಉಪಾಧ್ಯಕ್ಷ ಅಬ್ದುಲ್‌ಅಜೀಜ್, ಜಿಪಂ ಮಾಜಿ ಸದಸ್ಯರಾದ ರಹಮತ್‌ಜಾನ್‌ಬಾಬು, ಜಯಲಕ್ಷಿ, ತಾಪಂ ಮಾಜಿ ಅಧ್ಯಕ್ಷೆ ಸರಸ್ವತಿ, ಸದಸ್ಯೆ ಬಿ.ವಿ.ಅನಿತಾ, ಪಿಕಾರ್ಡ್ ಮಾಜಿ ಅಧ್ಯಕ್ಷ ಕೆ.ಹೊಲದಪ್ಪ, ಲಕ್ಷ್ಮಣೇಗೌಡ, ಮಾಜಿ ಕೃಷಿ ಸಹಾಯಕ ನಿರ್ದೇಶಕ ಚಂದ್ರೇಗೌಡ ಮತ್ತಿತರರಿದ್ದರು.
ಸರ್ಕಾರಕ್ಕೆ ಒತ್ತಡ ತನ್ನಿ: ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರಿಗೆ ಸಾಕಷ್ಟು ಸಮಸ್ಯೆಗಳಿವೆ. ಅವರಿಗೆ ನೀಡುತ್ತಿರುವ ಸಂಬಳ ಹೆಚ್ಚಾಗಬೇಕಿದೆ. ಆದರೆ, ಇದಕ್ಕೆ ಸೂಕ್ತ ಪರಿಹಾರೋಪಾಯ ಕಂಡು ಹಿಡಿಯಬೇಕಾಗಿದೆ. ಸರ್ಕಾರಗಳ ಮೇಲೆ ಒತ್ತಡ ಹೇರುವ ಪ್ರಯತ್ನ ಮುಂದುವರಿಯಲಿ. ಇದರಿಂದ ತಾತ್ಕಾಲಿಕ ಪರಿಷ್ಕರಣೆಯಾದರೂ ಆಗುತ್ತದೆ ಎಂದು ಶಾಸಕ ಕೆ.ವೆಂಕಟೇಶ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.