Arrested: ಹಳೇ ವೈಷಮ್ಯ ಮಚ್ಚಿನಿಂದ ಹಲ್ಲೆ, ಆರೋಪಿಗಳ ಬಂಧನ
Team Udayavani, Mar 4, 2024, 10:04 AM IST
ಹುಣಸೂರು: ಕ್ಷುಲ್ಲಕ ಕಾರಣಕ್ಕೆ ಎಳನೀರು ಮಾರಾಟ ಮಾಡುವವರ ನಡುವೆ ಮಾತಿನ ಚಕಮಕಿ ನಡೆದು ಮಚ್ಚಿನಿಂದ ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ನಗರದ ಬೈಪಾಸ್ ರಸ್ತೆ ತಹಶೀಲ್ದಾರ್ ಕಚೇರಿ ಬಳಿ ನಡೆದಿದ್ದು, ಇಬ್ಬರನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ.
ನಗರದ ರಂಗನಾಥ ಬಡಾವಣೆ ನಿವಾಸಿಲೇ.ಶಿವರಾಂ ಪುತ್ರರಾದ ಸ್ವಾಮಿ ಮತ್ತು ವೆಂಕಟೇಶ್ ಬಂಧಿತರು. ಹಲ್ಲೆಗೊಳಗಾದ ಎಳನೀರು ವ್ಯಾಪಾರಿ ದಿನೇಶ್ ಮತ್ತವನ ಸಹೋದರ ವಿಜಯಮಾರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಘಟನೆ ವಿವರ:
ನಗರದ ರಂಗನಾಥ ಬಡಾವಣೆಯ ಲೇ.ಶಿವರಾಂ ಪುತ್ರರಾದ ಸ್ವಾಮಿ ಮತ್ತು ವೆಂಕಟೇಶ್ ಹಾಗೂ ವಿಜಯಕುಮಾರ್ ಮತ್ತು ದಿನೇಶ್ ನಡುವೆ ಹಳೇ ವೈಷಮ್ಯವಿದ್ದು, ಈ ಸಂಬಂಧ ಪೊಲೀಸ್ ಠಾಣೆ ಮೆಟ್ಟಿಲೇರಿದ್ದರು. ಇದರಿಂದ ಕುಪಿತಗೊಂಡಿದ್ದ ಸ್ವಾಮಿ ಹಾಗೂ ವೆಂಕಟೇಶ್‌ರವರು ವಿಜಯಕುಮಾರ್ ಎದುರಿಗೆ ಸಿಕ್ಕವೇಳೆ ದುರುಗುಟ್ಟಿ ನೋಡುವುದು ಮಾಡುತ್ತಿದ್ದ ಎನ್ನಲಾಗಿದ್ದು, ತಹಶೀಲ್ದಾರ್ ಕಚೇರಿ ಬಳಿ ದಿನೇಶ್ ಹಾಗೂ ವಿಜಯಕುಮಾರ್ ವ್ಯಾಪಾರ ನಡೆಸುತ್ತಿದ್ದ ವೇಳೆ ವಿನಾಕಾರಣ ಜಗಳ ಆರಂಭಿಸಿ ಮಾತಿನ ಚಕಮಕಿ ನಡೆದಿದೆ.
ಹಠಾತ್ತನೆ ಎಳನೀರು ಕೊಚ್ಚುವ ಮಚ್ಚು ಎತ್ತಕೊಂಡು ವಿಜಯಕುಮಾರ್ ಮೇಲೆ ಹಲ್ಲೆ ನಡೆಸಲು ಮುಂದಾದ ವೇಳೆ ಅಲ್ಲೇ ಇದ್ದ ದಿನೇಶ್ ಬಿಡಿಸಲು ಓಡಿ ಬಂದಿದ್ದಾರೆ. ಇಬ್ಬರ ಮೇಲೂ ತೀವ್ರವಾಗಿ ಹಲ್ಲೆ ನಡೆಸಿದ್ದಾರೆ. ಇಬ್ಬರಿಗೂ ಬೆನ್ನು ಹಾಗೂ ತೋಳು, ಕೈಗಳಿಗೆ ತೀವ್ರವಾದ ಗಾಯಗಳಾಗಿದ್ದು, ಹುಣಸೂರು ಆಸ್ಪತ್ರೆಗೆ ದಾಖಲಿಸಲಾಗಿದೆ.
ಆರೋಪಿಗಳ ವಿರುದ್ಧ ನಗರ ಠಾಣೆಗೆ ದೂರು ನೀಡಿದ ಮೇರೆಗೆ ಪ್ರಕರಣಕ್ಕೆ ಎಸ್.ಐ. ಮಹಮ್ಮದ್ ಹುಸೇನ್ ಪ್ರಕರಣ ದಾಖಲಿಸಿ ಆರೋಪಿಗಳನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Football;ಕೇರಳದಲ್ಲಿ ಅಂತಾರಾಷ್ಟ್ರೀಯ ಪಂದ್ಯ ಆಡಲಿರುವ ದಿಗ್ಗಜ ಲಿಯೋನೆಲ್ ಮೆಸ್ಸಿ
Delhi ಮಿತಿ ಮೀರಿದ ವಾಯು ಮಾಲಿನ್ಯ: ಸರಕಾರಿ ಕಚೇರಿಗಳ 50% ಸಿಬಂದಿಗಳಿಗೆ ಮನೆಯಿಂದಲೇ ಕೆಲಸ
Thirthahalli: ಪಾದರಕ್ಷೆ, ಮೊಬೈಲ್ ನದಿ ದಡದಲ್ಲಿಟ್ಟು ವ್ಯಕ್ತಿ ನಾಪತ್ತೆ ಪ್ರಕರಣ; ಶವ ಪತ್ತೆ
Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್
Kulgeri: ಟ್ರ್ಯಾಕ್ಟರ್ ಹಿಂಬದಿಗೆ ಬೈಕ್ ಡಿಕ್ಕಿ; ಸವಾರ ಮೃತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.