![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
![Kollywood: ಖ್ಯಾತ ನಟ ಯೋಗಿ ಬಾಬು ಕಾರು ಅಪಘಾತ?: ನಟ ಹೇಳಿದ್ದೇನು?](https://www.udayavani.com/wp-content/uploads/2025/02/6-20-415x249.jpg)
Team Udayavani, May 5, 2019, 3:00 AM IST
ನಂಜನಗೂಡು: ನಗರಸಭೆಯ ಚುನಾವಣೆ ಮೇ 29 ರಂದು ನಡೆಯಲಿದೆ ಎಂದು ಪ್ರಕಟವಾಗಿದ್ದೇ ತಡ ಬಿಜೆಪಿ ಹಾಗೂ ಕಾಂಗ್ರೆಸ್ ಪಕ್ಷಗಳ ಆಕಾಂಕ್ಷಿಗಳು ಶುಕ್ರವಾರ ಮುಂಜಾನೆಯೆ ಸಂಸದ ಆರ್ ಧ್ರುವನಾರಾಯಣ ಹಾಗೂ ಮಾಜಿ ಕಂದಾಯ ಸಚಿವ ಶ್ರೀನಿವಾಸ ಪ್ರಸಾದ್ ನಿವಾಸಗಳತ್ತ ತಮ್ಮ ಬೆಂಬಲಿಗರ ದಂಡಿನೊಂದಿಗೆ ದೌಡಾಯಿಸಿ ತಮ್ಮ ಬೇಡಿಕೆಗಳನ್ನು ಮಂಡಿಸಿದ್ದಾರೆ.
ಕಳೆದ ಬಾರಿ ಪುರಸಭೆಯಾಗಿದ್ದ ನಂಜನಗೂಡು ಎರಡು ವರ್ಷಗಳ ಹಿಂದೆ ನಗರಸಭೆಯಾಗಿ ಭಡ್ತಿ ಹೊಂದಿದ್ದು, ಇದೇ ನಗರಸಭೆಯ ಪ್ರಥಮ ಚುನಾವಣೆಯಾಗಿದೆ. ಅಂದು 28 ಸ್ಥಾನಗಳಿದ್ದು, ಈಗ ಮೂರು ಸ್ಥಾನಗಳ ಹೆಚ್ಚಳದೊಂದಿಗೆ 31 ಜನ ಪ್ರತಿನಿಧಿಗಳಾಗಲು ಅವಕಾಶ ಲಭ್ಯವಾಗಿದೆ.
ಅತಂತ್ರ ಪುರಸಭೆ: ಕಳೆದ ಬಾರಿಯ ಚುನಾವಣೆಯಲ್ಲಿ ಅಂದಿನ ಕಾಂಗ್ರೆಸ್ ನೇತಾರರಾಗಿದ್ದ ಶ್ರೀನಿವಾಸ್ ಪ್ರಸಾದ ಹಾಗೂ ಸಂಸದ ಆರ್ ಧ್ರುವನಾರಾಯಣ ನೇತ್ರತ್ವದ ಕೈ ಪಕ್ಷ ಕೇವಲ 10 ಸ್ಥಾನ ಗಳಿಸಲು ಸಾಧ್ಯವಾಗಿದ್ದರೆ, ಕಳಲೆ ಕೇಶವ ಮೂರ್ತಿ ನೇತ್ರತ್ವದ ಜಾತ್ಯತೀತ ಜನತಾದಳ 9 ಸ್ಥಾನಗಳನ್ನು ಗಳಿಸಿತ್ತು. ಅಂದು ದಾಯಾದಿಗಳಾಗಿ ವಿಭಜನೆಯಾಗಿದ್ದ ಬಿಜೆಪಿ ನಾಲ್ಕು ಹಾಗೂ ಕೆಜೆಪಿ ಮೂರು ಸ್ಥಾನ ಪಡೆದಿದ್ದು ಓರ್ವರು ಪಕ್ಷೇತರರಾಗಿ ಪುರಸಭೆಯನ್ನು ಪ್ರವೇಶಿಸುವದರೊಂದಿಗೆ ಅತಂತ್ರ ಪುರಸಭೆ ಸೃಷ್ಟಿಯಾಗಿತ್ತು.
ಪಕ್ಷ ರಹಿತ ಆಡಳಿತ: ಅತಂತ್ರ ಪುರಸಭೆ ಸೃಷ್ಟಿಯಾಗಿದ್ದರೂ ಆಡಳಿತದ ಚುಕ್ಕಾಣಿ ಹಿಡಿಯಲು ಇಲ್ಲಿನ ಪಕ್ಷಗಳಲ್ಲಿ ಒಮ್ಮತ ಏರ್ಪಟ್ಟಿದ್ದರ ಫಲವಾಗಿ ಮೂರು ಪಕ್ಷಗಳ ಸಹಭಾಗಿತ್ವದಲ್ಲಿ ಅಧಿಕಾರ ಹಾಗೂ ಲಾಭಗಳನ್ನು ಹಂಚಿಕೊಂಡು ಚುನಾವಣೆಗೆ ಮಾತ್ರ ನಾವು ಪಕ್ಷ ನಂತರ ಪಕ್ಷಾತೀತ ಎಂದು ಮತದಾರರ ಮುಂದೆ ಬಹಿರಂಗಗೊಳಿಸಿದ್ದು,
ಅಂದು ಪಕ್ಷ ಇಂದು ವಿಪಕ್ಷ ಅಂದು ಪುರಸಭೆ ಚುನಾವಣೆಯಲ್ಲಿ ಅಂದಿನ ಶಾಸಕ ಹಾಗೂ ಸಚಿವ ಶ್ರೀನಿವಾಸ ಪ್ರಸಾದ್ ಮತ್ತೂ ಸಂಸದ ಆರ್ ಧ್ರುವನಾರಾಯಣ ಒಂದೆ ಪಕ್ಷದಲ್ಲಿದ್ದು ಚುನಾವಣೆ ನಡೆಸಿದ್ದರೆ ರಾಜಕೀಯದ ಏರು ಪೇರಿನಿಂದಾಗಿ ಈಗ ಪರಸ್ಪರ ವಿರೋಧ ಪಕ್ಷವಾಗಿ ಚುನಾವಣೆ ನಡೆಸಬೇಕಾಗಿದೆ.
ಅಂದು ಕಾಂಗ್ರೆಸ್ ಹಾಗೂ ಬಿಜೆಪಿ ಗೆ ವಿರುದ್ಧವಾಗಿ ಜೆಡಿಎಸ್ ಪಕ್ಷವನ್ನು ಮುನ್ನಡೆಸಿದ್ದ ಕಳಲೆಕೇಶವಮೂರ್ತಿ ಬದಲಾದ ರಾಜಕೀಯದ ಬೆಳವಣಿಗೆಯಲ್ಲಿ ಕಾಂಗ್ರೆಸ್ ಸೇರಿ ಉಪಚುನಾವಣೆಯಲ್ಲಿ ಗೆದ್ದು ಶಾಸಕರಾಗಿ ನಂತರ ಸೋತು ಮಾಜಿ ಶಾಸಕರಾಗಿ ಈಗ ಸಂಸದ ಆರ್ ಧ್ರುವನಾರಾಯಣರೊಂದಿಗೆ ಕೈ ಪಕ್ಷವನ್ನು ಸಂಘಟಿಸುವ ಸಿದ್ಧತೆಯಲ್ಲಿದ್ದಾರೆ.
ಅಂದು ಕೈ ಪಕ್ಷದ ಸವೊìಚ್ಚ ನಾಯಕರಂತಿದ್ದ ಶ್ರೀನಿವಾಸ್ ಪ್ರಸಾದ ಇಂದು ಬಿಜೆಪಿಯನ್ನು ಗೆಲ್ಲಿಸಿಕೊಳ್ಳುವ ತವಕದಲ್ಲಿದ್ದು ಜೆಡಿಎಸ್ ಮಾತ್ರ ಜಿಲ್ಲಾದ್ಯಕ್ಷ ಎನ್ ನರಸಿಂಹಸ್ವಾಮಿಯವರ ಮನೆ ಬಾಗಿಲಿನಲ್ಲಿ ನಿಂತು ಹೋರಾಡುವ ಸ್ಥಿತಿಗೆ ತಲುಪಿದೆ.
ಕರಿ ನೆರಳಿನಲ್ಲಿ ಚುನಾವಣೆ: ನಂಜನಗೂಡು ನಗರಸಭೆಯ ಪ್ರಥಮ ಚುನಾವಣೆಯು ಲೋಕಸಭಾ ಚುನಾವಣೆಯ ಕರಿ ನೆರಳಿನಲ್ಲಿ ನಡೆಯುವಂತಾಗಿದೆ. ಈ ಭಾಗದ ಟಿಕೆಟ್ ಹಂಚಿಕೆಯ ಹೊಣೆಗಾರಿಕೆ ಇರುವ ಮಾಜಿ ಸಚಿವ ಶ್ರೀನಿವಾಸ್ ಪ್ರಸಾದ್ ಹಾಗೂ ಹಾಲಿ ಸಂಸದ ಆರ್. ಧ್ರುವನಾರಾಯಣರಿಬ್ಬರೂ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಹಾಗೂ, ಕಾಂಗ್ರೆಸ್ ಪಕ್ಷದಿಂದ ಸ್ಪರ್ಧೆ ನಡೆಸಿದ್ದು ಯಾರಿಗೆ ನಂಜುಂಡೇಶ್ವರನ ಪ್ರಸಾದ ಎಂಬ ಮತದಾರರ ಗುಟ್ಟು ರಟ್ಟಾಗುವ ಮುಂಚೆಯೇ ನಗರಸಭೆಗೆ ಅಭ್ಯರ್ಥಿಗಳನ್ನು ಆಯ್ಕೆ ಮಾಡಬೇಕಾಗಿದ್ದು
ಫಲಿತಾಂಶದ ಕರಿ ನೆರಳು ಈ ಚುನಾವಣೆಯ ಮೇಲೆ ಸಾಕಷ್ಟು ಪ್ರಭಾವ ಬೀರಲಿದೆ ಎನ್ನಲಾಗಿದೆ. ಕಾಂಗ್ರೆಸ್ ಹಾಗೂ ಬಿಜೆಪಿಯಲ್ಲಿ ಪಕ್ಷದ ಅಧಿಕೃತ ಅಭ್ಯರ್ಥಿಯಾಗಲು ಸಾಕಷ್ಟು ಬಿರುಸಿನ ಸ್ಪರ್ಧೆ ನಡೆದರೆ ಜೆಡಿಎಸ್ ಮಾತ್ರ ಹಲವಡೆ ಏರಡೂ ಪಕ್ಷಗಳ ಅತೃಪ್ತರಿಗಾಗಿ ಕಾಯುವಂತಾಗಿದೆ.
ಶ್ರೀನಿವಾಸ ಪ್ರಸಾದ್ ಮತ್ತೂ ಧ್ರುವನಾರಾಯಣರ ಕ್ರಪೆ ಇದ್ದವರಿಗೆ ಆಯಾ ಪಕ್ಷದ ಬಿ ಫಾರಂ ಖಂಡಿತವಾಗಲಿದ್ದು ಅದಕ್ಕಾಗಿ ಆಕಾಂಕ್ಷಿಗಳು ಇಂದಿನಿಂದಲೇ ಅವರಿಬ್ಬರ ನಿವಾಸದತ್ತ ತೆರಳಿದ್ದಾರೆ.
Hunsur: ನೀರಿನ ಹೊಂಡಕ್ಕೆ ಬಿದ್ದು ಮಗು ಸಾವು
Mob Attack: ಉದಯಗಿರಿ ಪೊಲೀಸ್ ಠಾಣೆ ಮೇಲೆ ದಾಳಿ: ಆರೋಪಿಯ ಅಂಗಡಿ ಸಿಬಂದಿ ದುಷ್ಕೃತ್ಯ ಶಂಕೆ
80 ಸಾವಿರ ಲಂಚ ಸ್ವೀಕರಿಸುವಾಗ ಸಬ್ ಇನ್ಸ್‌ಪೆಕ್ಟರ್ ಲೋಕ ಬಲೆಗೆ
Dr G. Parameshwar: ಉದಯಗಿರಿ ಪ್ರಕರಣ: “ಬುಲ್ಡೋಜರ್’ ಕ್ರಮ ಇಲ್ಲಿ ಅಗತ್ಯವಿಲ್ಲ; ಪರಂ
ಉದಯಗಿರಿ ಪ್ರಕರಣ: ಎಷ್ಟೇ ಬಲಾಡ್ಯರಾಗಿದ್ದರೂ ಕ್ರಮ: ಡಾ. ಜಿ. ಪರಮೇಶ್ವರ್
You seem to have an Ad Blocker on.
To continue reading, please turn it off or whitelist Udayavani.