ಚುನಾವಣೆಗೂ ಅಭಿವೃದ್ಧಿಗೂ ಸಂಬಂಧವಿಲ್ಲ


Team Udayavani, Feb 28, 2017, 12:53 PM IST

mys1.jpg

ನಂಜನಗೂಡು: ತಾಲೂಕಿನಲ್ಲಿ ಈಗ ಕೈಗೊಂಡಿರುವ ಅಭಿವೃದ್ಧಿಗೂ ಉಪಚುನಾವಣೆಗೂ ಸಂಬಂಧ ಕಲ್ಪಿಸು ವುದು ಬೇಡ ಎಂದು ಲೋಕೋಪಯೋಗಿ ಸಚಿವ ಡಾ. ಎಚ್‌.ಸಿ. ಮಹದೇವಪ್ಪ ಅಭಿಪ್ರಾಯಪಟ್ಟರು. ಸೋಮವಾರ ನಗರದ ಜೋಡಿರಸ್ತೆಯ ಬಳಿ ಸವಿತಾ ಸಮಾಜ ಹಾಗೂ ಈಡಿಗರ ಸಮು ದಾಯದ ಭವನಗಳಿಗೆ ಸಂಸದ ಆರ್‌. ಧ್ರುವ ನಾರಾಯಣರೊಂದಿಗೆ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡುತ್ತಿದ್ದರು.

ಜಾತಿರಹಿತ ಸಮಾಜ ಅಂಬೇಡ್ಕರ್‌ ಕನಸು ಅದನ್ನು ಸಾಕಾರಗೊಳಿಸಲು ಸಿದ್ದರಾಮಯ್ಯನವರ ಸರ್ಕಾರ ಅವಿರತವಾಗಿ ಶ್ರಮಿಸುತ್ತಿದೆ. ಅದರ ಅಂಗವಾಗಿಯೇ ರಾಜಾದ್ಯಂತ ಹಿಂದುಳಿದ ವರ್ಗಗಳ ಭವನಕ್ಕೆ ನಿವೇಶನ ಹಾಗೂ ಹಣ ನೀಡಲಾಗಿದೆ. ಉಪಚುನಾವಣೆಯ ಮೇಲೆ ಕಣ್ಣಿಟ್ಟು ತಾವು ಈ ಕೆಲಸ ತಾವು ಮಾಡುತ್ತಿಲ್ಲ. ತಮ್ಮ ಮಗನಿಗೆ ಇಲ್ಲಿ ಟಿಕೇಟ್‌ ತಾವು ಕೇಳಿಲ್ಲ ಎಂದು ಪ್ರತಿಪಾದಿಸಿದ ಮಹದೇವಪ್ಪ, ನನ್ನ ಕಣ್ಣು ತಾಲೂಕಿನ ಅಭಿವೃದ್ಧಿಯ ಮೇಲೆ ಮಾತ್ರ ಎಂದರು.

ದೇವಾಲಯದ ರಥಬೀದಿ, ನಗರದ ರಸ್ತೆಗಳು, ಗ್ರಾಮೀಣ ಭಾಗದ ಕುಡಿಯುವ ನೀರು, ರಸ್ತೆ ಸೇರಿದಂತೆ ತಾಲೂಕಿನ ಸಮಗ್ರ ಅಭಿವೃದ್ಧಿಗಾಗಿ ಮುಖ್ಯಮಂತ್ರಿಗಳು 600 ಕೋಟಿ ರೂ. ಗೂ ಹೆಚ್ಚ ಹಣ ನೀಡಿದ್ದಾರೆ ಎಂದ ಸಚಿವರು, ತಾವು ಹೇಳಿದ ಅಭಿವೃದ್ಧಿಗೆ ಮುಖ್ಯಮಂತ್ರಿಗಳು ಹಣ ನೀಡುತ್ತಾರೆ. ಹಾಗಂತ ತಾವು ಅವರ ಸೇವಕ ಎಂದರ್ಥವಲ್ಲ ಎಂದರು.
ಸಮಾಜದ ಅಭಿವೃದ್ಧಿ ಹಾಗೂ ಸಾಮರಸ್ಯ ಬಯಸದ ಕೆಲವರು ಇದನ್ನೇ ಅಪಾರ್ಥ ಮಾಡಿ ಕೊಂಡು ಕೀಳುಭಾಷೆಯಲ್ಲಿ ಮಾತನಾಡುತ್ತಾರೆ. ಅಂತಹ ಭಾಷೆ ನಮಗೂ ಬರುತ್ತೆ. ಅಂತಹ ಮಾತ ನಾಡುವ ಕೆಳಮಟ್ಟದಲ್ಲಿ ತಾವಿಲ್ಲ ಎಂದ ಅವರು, ತಮ್ಮ ವಿರೋಧಿಗಳ ಹೆಸರೇಳದೆ ತರಾಟಗೆ ತೆಗೆದು ಕೊಂಡರು.

ಸಂಸದ ಆರ್‌. ಧ್ರುವನಾರಾಯಣ ಮಾತನಾಡಿ, ಸವಿತಾ ಸಮಾಜ ಹಾಗೂ ಈಡಿಗರ ಸಮುದಾಯದ ಭವನಗಳಿಗೆ ತಲಾ 20 ಲಕ್ಷ ರೂ. ಮಂಜೂರಾಗಿದ್ದು ತಮ್ಮ ಸಂಸದರ ನಿಧಿಯಿಂದಲೂ ಹಣ ನೀಡುವುದಾಗಿ ಘೋಷಿಸಿದರು. ಸಮುದಾಯ ಭವನಗಳ ನಿರ್ಮಾಣಕ್ಕಿಂತಲೂ ಅವುಗಳ ಸದ್ಬಳಕೆ ಮುಖ್ಯ. ಸಮಾಜದ ಬದಲಾವಣೆಯ ಕೇಂದ್ರಗಳಾಗಿ ಈ ಭವನಗಳು ಕೆಲಸ ಮಾಡಿದಾಗ ಇವುಗಳ ನಿರ್ಮಾಣ ಸಾರ್ಥಕ ಎಂದರು.

ಸಭೆಯನ್ನುದ್ದೇಶಿಸಿ ಮಾತನಾಡಿದ ಈಡಿಗ ಸಮಾಜದ ಅಧ್ಯಕ್ಷ ಪಿ.ದೇವರಾಜು ಮಾತನಾಡಿ, ರಾಜ್ಯದ ಎಲ್ಲ ತಾಲೂಕು ಕೇಂದ್ರಗಳಲ್ಲೂ ತಮ್ಮ ಸಮಾಜಕ್ಕೆ ನಿವೇಶನ ನೀಡವಂತೆ ಕೋರಿದರು. ರಾಜ್ಯ ಸವಿತಾ ಸಮಾಜದ ಅಧ್ಯಕ್ಷ ಕೃಷ್ಣಮೂರ್ತಿ ಮಾತನಾಡಿ, ತಮ್ಮ ಸಮಾಜವನ್ನು 2ಎ ಬದಲಾಗಿ ಪ್ರವರ್ಗ 1ಎಗೆ ಬದಲಾಯಿಸುವಂತೆ ಮಾಡಿ ಕೊಡಬೇಕೆಂದು ಲೋಕೋಪಯೋಗಿ ಸಚಿವರಲ್ಲಿ ಮನವಿ ಮಾಡಿದರು.

ಜಿಪಂ ಅಧ್ಯಕ್ಷೆ ನಯಿಮಾ ಸುಲ್ತಾನ, ತಾಪಂ ಅಧ್ಯಕ್ಷ ಬಿ.ಎಸ್‌. ಮಹದೇವಪ್ಪ, ಉಪಾದ್ಯಕ್ಷ ಗೋವಿಂದ ರಾಜು, ನಗರಸಭಾ ಅಧ್ಯಕ್ಷೆ ಪುಷ್ಪಾ ಕಮಲೇಶ, ಉಪಾಧ್ಯಕ್ಷ ಪ್ರದೀಪ್‌, ಜಿಪಂ ಸದಸ್ಯೆ ಲತಾ ಸಿದ್ದಶೆಟ್ಟಿ, ಪುರಸಭೆ ಮಾಜಿ ಅಧ್ಯಕ್ಷ ಶ್ರೀಧರ್‌, ಪಿ. ಶ್ರೀನಿವಾಸ್‌, ಇಂದ್ರಾ ಮಂಜುನಾಥ, ಕಳಲೆ ಕೇಶವ ಮೂàರ್ತಿ, ಎಸ್‌ ಸಿ ಬಸವರಾಜು ಮುಂತಾದವರು ಉಪಸ್ಥಿತರಿದ್ದರು.

ಉಪ ಚುನಾವಣೆ ಪ್ರತಿಷ್ಠೆಯೂ ಅಲ್ಲ, ದಿಕ್ಸೂಚಿಯೂ ಅಲ್ಲ
ನಂಜನಗೂಡು ಉಪ ಚುನಾವಣೆ ಯಾರ ಪ್ರತಿಷ್ಠೆ ಅಥವಾ ಭವಿಷ್ಯದ ದಿಕ್ಸೂಚಿ ಅಲ್ಲವೇ ಅಲ್ಲ. ಈಗ ಮಾಡುತ್ತಿರುವುದು ಹೊಸ ಯೋಜನೆಗಳಲ್ಲ. ಹಳೆ ಯೋಜನೆಗಳಿಗೆ ಹಣ ಬಿಡುಗಡೆ ಮಾಡಿಸಿ ಕಾಮಗಾರಿ ಪ್ರಾರಂಭಿ ಸಿದ್ಧೇವೆ ಅಷ್ಟೆ. ಈ ಸಮಾರಂಭದಲ್ಲಿ ಜೆಡಿಎಸ್‌ ಹಾಗೂ ಬಿಜೆಪಿಯವರೂ ಇದ್ದಾರೆ. ಜೆಡಿಎಸ್‌ನಲ್ಲಿ ಒಬ್ಬೊಬ್ಬರನ್ನು ಬಿಟ್ಟು ಮಿಕ್ಕವರೆಲ್ಲ ಈಗ ನಮ್ಮೊಡನೇ ಸೇರಿದ್ದಾರೆ. ಚುನಾವಣೆಯಲ್ಲಿ ಯಾರಿಗಾದರೂ ಮತ ನೀಡಿ. ಆದರೆ ಅಭಿವೃದ್ಧಿಗೆ ಸಹಕರಿಸಿ. ರಾಜಕೀಯ ಚುನಾ ವಣೆಗೆ ಮಾತ್ರವಿರಲಿ. ಚುನಾವಣೆಯ ಫ‌ಲಿತಾಂಶದ ನಂತರ ಮತ್ತೆ ನಾವೆಲ್ಲ ಒಂದೇ ಎಂದು ಸಚಿವ ಮಹದೇವಪ್ಪ ಹೇಳಿದರು.

ಟಾಪ್ ನ್ಯೂಸ್

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Jarkahnad–CM-Soren

Jharkhand: ಮತ್ತೆ ಮುಖ್ಯಮಂತ್ರಿಯಾಗಿ ಜೆಎಂಎಂ ನಾಯಕ ಹೇಮಂತ್‌ ಸೊರೇನ್‌ ನ.28ಕ್ಕೆ ಪದಗ್ರಹಣ

120

Tourist place: ಲೇಪಾಕ್ಷಿ ಪುರಾಣದ ಕಥೆಯ ಕೈಗನ್ನಡಿ

yatnal

Waqf ವಿರುದ್ದ ಮಠಾಧೀಶರು,ಯತ್ನಾಳ್ ತಂಡದಿಂದ ಮತ್ತೊಂದು ಹಂತದ ಹೋರಾಟ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

GTD

Mysuru: ಜೆಡಿಎಸ್‌ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

Congress: ಜಮೀರ್‌ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್‌

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!

6-hunsur

Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

Lokayukta police: ಮುಡಾ ಮಾಜಿ ಆಯುಕ್ತ ನಟೇಶ್‌ ವಿಚಾರಣೆ

MUST WATCH

udayavani youtube

ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು

udayavani youtube

ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು

udayavani youtube

ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?

udayavani youtube

ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್‌ |

udayavani youtube

ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್

ಹೊಸ ಸೇರ್ಪಡೆ

1-maha

Mahayuti; ಮಹಾರಾಷ್ಟ್ರ ಮುಖ್ಯಮಂತ್ರಿ ನಿರ್ಧರಿಸಲು ಮಹತ್ವದ ಚರ್ಚೆ: ಯಾರಿಗೆ ಪಟ್ಟ?

MB-Patil-Mi

Railway: ಗಂಗಾವತಿ ರೈಲ್ವೆ ನಿಲ್ದಾಣಕ್ಕೆ ಅಂಜನಾದ್ರಿ ಹೆಸರು ಶಿಫಾರಸು: ಸಚಿವ ಎಂ.ಬಿ.ಪಾಟೀಲ್‌

1-kir

All-party meet: ನಾಳೆಯಿಂದ ಚಳಿಗಾಲದ ಅಧಿವೇಶ: ಸುಗಮಗೊಳಿಸಲು ಬಯಸಿದ ಸರಕಾರ

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

Uttar Pradesh: ಝಾನ್ಸಿ ಆಸ್ಪತ್ರೆ ಬೆಂಕಿ ಅವಘಡ: ಮತ್ತೆ 2 ಹಸುಗೂಸು ಸಾ*ವು

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

IPL Auction 2025: ಸೇಲ್‌ ಆದ – ಆಗದ ಪ್ರಮುಖರು.. 3ನೇ ಸುತ್ತಿನ ಸಂಪೂರ್ಣ ಪಟ್ಟಿ ಇಲ್ಲಿದೆ..

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.