ವಜ್ರಮುಷ್ಠಿ ಕಾಳಗಕ್ಕೆ ಅಖಾಡ ಸಜ್ಜು
Team Udayavani, Oct 17, 2018, 11:29 AM IST
ಮೈಸೂರು: ವಿಶ್ವವಿಖ್ಯಾತ ದಸರಾ ಮಹೋತ್ಸವದ ಅಂಗವಾಗಿ ನಡೆಯುವ ವಜ್ರಮುಷ್ಠಿ ಕಾಳಗಕ್ಕೆ ದಿನಗಣನೆ ಶುರುವಾಗಿದ್ದು, ವಿಜಯದಶಮಿ ದಿನದಂದು ನಡೆಯುವ ವಜ್ರಮುಷ್ಠಿ ಕಾಳಗದಲ್ಲಿ ಸೆಣೆಸಾಡಲು ಜಟ್ಟಿಗಳು ಭಾರೀ ತಯಾರಿ ನಡೆಸಿದ್ದಾರೆ. ಅ.19ರಂದು ನಡೆಯುವ ವಜ್ರಮುಷ್ಠಿ ಕಾಳಗದ ಹಿನ್ನೆಲೆಯಲ್ಲಿ ಮಂಗಳವಾರ ಸ್ಪರ್ಧಿಗಳ ಜೋಡಿ ಕಟ್ಟಲಾಯಿತು.
ಅಂಬಾವಿಲಾಸ ಅರಮನೆ ಅವರಣದಲ್ಲಿರುವ ಗಾಯತ್ರಿದೇವಿ ದೇವಾಸ್ಥಾನದ ಆವರಣದಲ್ಲಿ ಜಟ್ಟಿ ಸಮುದಾಯದ ಹಿರಿಯರ ಸಮ್ಮುಖದಲ್ಲಿ ನಾಲ್ವರು ಜಟ್ಟಿಗಳನ್ನು ಆಯ್ಕೆ ಮಾಡಲಾಯಿತು. ವಜ್ರಮುಷ್ಠಿ ಕಾಳಗದಲ್ಲಿ ಕೇವಲ ಮೈಸೂರು, ಬೆಂಗಳೂರು, ಚಾಮರಾಜನಗರ ಹಾಗೂ ಚನ್ನಪಟ್ಟಣದ ಜಟ್ಟಿಗಳು ಮಾತ್ರ ಭಾಗವಹಿಸಲಿದ್ದಾರೆ.
ಅದರಂತೆ ಮೈಸೂರಿನ ಮಂಜುನಾಥ ಜಟ್ಟಿ, ಚಾಮರಾಜನಗರದ ಪುರುಷೋತ್ತಮ ಜಟ್ಟಿ, ಬೆಂಗಳೂರಿನ ರಾಘವೇಂದ್ರ ಜಟ್ಟಿ, ಚನ್ನಪಟ್ಟಣದ ಸಿ.ಪಿ.ವಿದ್ಯಾಧರ ಜಟ್ಟಿ ಭಾಗವಹಿಸುತ್ತಿದ್ದಾರೆ. ಇವರಲ್ಲಿ ಮೈಸೂರಿನ ಮಂಜುನಾಥ ಜಟ್ಟಿ – ಬೆಂಗಳೂರಿನ ರಾಘವೇಂದ್ರ ಜಟ್ಟಿ, ಚನ್ನಪಟ್ಟಣದ ಸಿ.ಪಿ.ವಿದ್ಯಾಧರ ಜಟ್ಟಿ-ಚಾ.ನಗರದ ಪುರುಷೋತ್ತಮ ಜಟ್ಟಿ ಮುಖಾಮುಖೀಯಾಗಲಿದ್ದಾರೆ.
ಜಟ್ಟಿಗಳಿಂದ ತಯಾರಿ: ದಸರೆಯಲ್ಲಿ ವಜ್ರಮುಷ್ಠಿ ನಡೆಯುವ ವಜ್ರಮುಷ್ಠಿ ಕಾಳಗದಲ್ಲಿ ಭಾಗವಹಿಸುವುದು ಜಟ್ಟಿಗಳ ಪಾಲಿಗೆ ಲಭಿಸುವ ಅದೃಷ್ಟ. ಈ ಹಿನ್ನೆಲೆಯಲ್ಲಿ ರಾಜವಂಶಸ್ಥರ ಸಮ್ಮುಖದಲ್ಲಿ ನಡೆಯುವ ಕಾಳಗದಲ್ಲಿ ಗೆಲ್ಲಲೇಬೇಕೆಂಬ ಉದ್ದೇಶದಿಂದ ಈಗಾಗಲೇ ಜಟ್ಟಿಗಳು ತಯಾರಿ ಆರಂಭಿಸಿದ್ದಾರೆ.
ಈ ಬಾರಿಯ ವಜ್ರಮುಷ್ಠಿ ಕಾಳಗದಲ್ಲಿ ಸ್ಪರ್ಧಿಸುತ್ತಿರುವ ನಾಲ್ವರಲ್ಲಿ ಚನ್ನಪಟ್ಟಣದ ವಿದ್ಯಾಧರ ಜೆಟ್ಟಿ ಹಾಗೂ ಬೆಂಗಳೂರಿನ ರಾಘವೇಂದ್ರ ಜಟ್ಟಿ ಇದೇ ಮೊದಲ ಬಾರಿಗೆ ಅಖಾಡದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಉಳಿದ ಇಬ್ಬರು ಜಟ್ಟಿಗಳು ಈಗಾಗಲೇ ವಜ್ರಮುಷ್ಠಿ ಕಾಳಗದಲ್ಲಿ ಭಾಗವಹಿಸಿದ್ದ ಅನುಭವ ಹೊಂದಿದ್ದಾರೆ. ನಾಲ್ವರು ಜಟ್ಟಿಗಳು ಕಳೆದ ಹಲವು ದಿನಗಳಿಂದ ಕಠಿಣ ತಯಾರಿ ನಡೆಸಿ ಕಾಳಗದಲ್ಲಿ ಸೆಣೆಸಲು ಸಜ್ಜಾಗಿದ್ದಾರೆ.
ವಜ್ರಮುಷ್ಠಿ ಕಾಳಗ: ದಸರಾ ಮಹೋತ್ಸವದ ಕೊನೆಯ ದಿನದಂದು ನಡೆಯುವ ವಿಜಯದಶಮಿಯ ಜಂಬೂಸವಾರಿಗೂ ಮುನ್ನ ಅರಮನೆ ಕಲ್ಯಾಣ ಮಂಟಪದ ಹೊರ ಆವರಣದಲ್ಲಿ ವಜ್ರಮುಷ್ಠಿ ಕಾಳಗ ನಡೆಯಲಿದೆ. ನಾಡು ಮತ್ತು ರಾಜವಂಶಸ್ಥರ ಒಳಿತಿಗಾಗಿ ನಡೆಯುವ ವಜ್ರಮುಷ್ಟಿ ಕಾಳಗವನ್ನು ಈ ಹಿಂದೆ ಸ್ಪರ್ಧೆಯ ರೀತಿಯಲ್ಲಿ ನಡೆಸಿ ಸೋಲು-ಗೆಲುವಿನ ಲೆಕ್ಕಾಚಾರದಲ್ಲಿ ನಡೆಯುತ್ತಿತ್ತು.
ಆದರೆ ಇತ್ತೀಚಿನ ದಿನಗಳಲ್ಲಿ ಇದನ್ನು ಪರಂಪರೆಯಾಗಿ ನಡೆಸಿಕೊಂಡು ಬರಲಾಗುತ್ತಿದ್ದು, ವಜ್ರಮುಷ್ಠಿ ಕಾಳಗದಲ್ಲಿ ಮುಖಾಮುಖೀಯಾಗುವ ಜಟ್ಟಿಗಳ ತಲೆಯಿಂದ ರಕ್ತ ಚಿಮ್ಮುತ್ತಿದ್ದಂತೆ ಕಾಳಗ ಮುಕ್ತಾಯಗೊಳ್ಳಲಿದೆ. ಜಟ್ಟಿ ಕಾಳಗದಲ್ಲಿ ಸೆಣೆಸಾಡುವ ಜಟ್ಟಿಗಳು ರಾಜವಂಶಸ್ಥರು, ನಾಡಿನ ಜನರ ಒಳಿತಿಗಾಗಿ ಪ್ರಾರ್ಥಿಸಿ, ಚಾಮುಂಡೇಶ್ವರಿಗೆ ರಕ್ತ ನೀಡುತ್ತೇವೆಂಬ ಉದ್ದೇಶದಿಂದ ವಜ್ರಮುಷ್ಠಿ ಕಾಳಗದಲ್ಲಿ ಭಾಗವಹಿಸುತ್ತಾರೆ.
ಆಯ್ಕೆಯಲ್ಲಿ ವಿಳಂಬ: ಈ ಬಾರಿ ವಜ್ರಮುಷ್ಠಿ ಕಾಳಗಕ್ಕೆ ಮೈಸೂರಿನಿಂದ ಭಾಗವಹಿಸಲು ಮೂವರ ನಡುವೆ ಪೈಪೋಟಿ ಉಂಟಾದ ಹಿನ್ನೆಲೆಯಲ್ಲಿ ಜಟ್ಟಿಯ ಆಯ್ಕೆಯಲ್ಲಿ ಸ್ವಲ್ಪಮಟ್ಟಿನ ವಿಳಂಬವಾಯಿತು. ವಜ್ರಮುಷ್ಠಿ ಕಾಳಗದಲ್ಲಿ ಸ್ಪರ್ಧಿಸಲು ಮೈಸೂರಿನ ಮಾಧವ ಜಟ್ಟಿ, ಬಲರಾಮ ಜಟ್ಟಿ ಹಾಗೂ ಮಧು ಜಟ್ಟಿ ಅವರು ಆಸಕ್ತಿ ತೋರಿದರು.
ಆದರೆ ಮೂವರಲ್ಲಿ ಯಾರನ್ನು ಆಯ್ಕೆ ಮಾಡಬೇಕೆಂಬ ಗೊಂದಲ ಉಂಟಾದ ಹಿನ್ನೆಲೆಯಲ್ಲಿ ಜೋಡಿ ಕಟ್ಟುವಿಕೆಯಲ್ಲಿ ಕೆಲಕಾಲ ವಿಳಂಬವಾಯಿತು. ಆದರೆ ಸಮುದಾಯದ ಹಿರಿಯರ ತೀರ್ಮಾನದಂತೆ ಅಂತಿಮವಾಗಿ ಮಂಜುನಾಥ ಜೆಟ್ಟಿ ಅವರಿಗೆ ಮೈಸೂರಿನಿಂದ ಭಾಗವಹಿಸುವ ಅವಕಾಶ ಲಭಿಸಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಬಳಂಜದ ಪುಟ್ಟ ಪೋರನ ಕೃಷಿ ಪ್ರೇಮ | ಕಸಿ ಕಟ್ಟುವಿಕೆಯಲ್ಲಿ ಬಲು ಪರಿಣಿತ ಈ 6 ನೇ ತರಗತಿ ಬಾಲಕ
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಹೊಸ ಸೇರ್ಪಡೆ
VIDEO: ಡಿವೋರ್ಸ್ ಸುದ್ದಿ ನಡುವೆ ʼಬಚ್ಚನ್ʼ ಸರ್‌ನೇಮ್ ಇಲ್ಲದೆ ಕಾಣಿಸಿಕೊಂಡ ಐಶ್ವರ್ಯಾ
Subrahmanya: ಕುಕ್ಕೆ ಜಾತ್ರೆ ನೋಡಲು ಬರುತ್ತವೆ ದೇವರ ಮೀನುಗಳು!
Puttur: ಕುಂಜಾಡಿ; ಸೇತುವೆ ಕಾಮಗಾರಿ ಪುನರಾರಂಭ
Ramanagara: ಆಸ್ಪತ್ರೆಯ ಶೌಚಾಲಯದ ಗುಂಡಿಯಲ್ಲಿ ನವಜಾತ ಶಿಶುವಿನ ಶವ ಪತ್ತೆ!
Oath: ಕೇರಳ ಸೀರೆ ತೊಟ್ಟು, ಕೈಯಲ್ಲಿ ಸಂವಿಧಾನ ಹಿಡಿದು ಪ್ರಮಾಣ ವಚನ ಸ್ವೀಕರಿಸಿದ ಪ್ರಿಯಾಂಕಾ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.