ವ್ಯಸನಿಗಳ ಮನಪರಿವರ್ತನೆಗೆ ಶ್ರಮ
Team Udayavani, Jun 18, 2017, 12:20 PM IST
ಹುಣಸೂರು: ದುಶ್ಚಟಕ್ಕೆ ಅಂಟಿಕೊಂಡವರಿಗೆ ರಾಜ್ಯಾದ್ಯಂತ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಮೂಲಕ ಮನಪರಿವರ್ತನೆ ಮಾಡಲಾಗುತ್ತಿದೆ. ಇಲ್ಲಿ ಮನ ಪರಿವರ್ತನೆಗೊಂಡವರು ಇತರರ ಪರಿವರ್ತನೆಗೆ ಶ್ರಮಿಸಬೇಕೆಂದು ಜನಜಾಗತಿ ವೇದಿಕೆ ರಾಜ್ಯಾಧ್ಯಕ್ಷ ಸತೀಶ್ ಹೊನ್ನವಳ್ಳಿ ಮನವಿ ಮಾಡಿದರು.
ತಾಲೂಕಿನ ನಾಗಾಪುರ ಗಿರಿಜನ ಆಶ್ರಮ ಶಾಲೆಯಲ್ಲಿ ಕಳೆದ 10 ದಿನಗಳ ಕಾಲ ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ, ಜನಜಾಗತಿ ವೇದಿಕೆ, ಶ್ರೀ ಶಿರಡಿ ಸಾಯಿಬಾಬಾ ಟ್ರಸ್ಟ್, ತಾಲೂಕಿನ ಹಾಲು ಉತ್ಪಾದಕರ ಸಹಕಾರ ಸಂಘ, ಕರ್ನಾಟಕ ರಕ್ಷಣಾ ವೇದಿಕೆ, ಸಮಾಜ ಕಲ್ಯಾಣ ಮತ್ತು ಅರಣ್ಯ ಇಲಾಖೆ, ಕಿರಣ್ ಗ್ಯಾಸ್ ಏಜೆನ್ಸಿ ಕಿರಂಗೂರು, ಪ್ರಗತಿ ಬಂಧು ಸ್ವಸಹಾಯ ಸಂಘ ಹಾಗೂ ವಿವಿಧ ಸಂಘ ಸಂಸ್ಥೆಗಳ ಸಹಕಾರದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಹನಗೋಡು ಮತ್ತು ಗೋವಿಂದನಹಳ್ಳಿವಲಯದ ವತಿಯಿಂದ ಆಯೋಜಿಸಿದ್ದ 1060ನೇ ಮದ್ಯವರ್ಜನ ಶಿಬಿರದ ಸಮಾರೋಪದಲ್ಲಿ ಭಾಗವಹಿಸಿ ಮಾತನಾಡಿದರು.
ಯುವ ಪೀಳಿಗೆಯವರು ದುಶ್ಚಟಕ್ಕೆ ಬಲಿಯಾಗುತ್ತಿರುವುದನ್ನು ಮನಗಂಡ ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರು ಬೆಳ್ತಂಗಡಿ ತಾಲೂಕಿನಲ್ಲಿ ಪ್ರಥಮ ಶಿಬಿರ ಆಯೋಜಿಸಿದಾಗ ತಾಲೂಕಿನಲ್ಲಿ ಐದು ಸಾವಿರ ಮಂದಿ ಮದ್ಯದಿಂದ ಮುಕ್ತರಾಗಿದ್ದಾರೆ. ಇದರಿಂದ ಉತ್ತೇಜಿತಗೊಂಡ ಅವರು ರಾಜ್ಯಾದ್ಯಂತ ವಿವಿಧ ಸಂಘ-ಸಂಸ್ಥೆಗಳ ಸಹಕಾರದೊಂದಿಗೆ ಮದ್ಯವರ್ಜನ ಶಿಬಿರಗಳನ್ನು ಆಯೋಜಿಸಿದ್ದಾರೆ. ಈ ಮೂಲಕ ಮದ್ಯವ್ಯಸನಿಗಳನ್ನು ಮುಖ್ಯವಾಹಿನಿಗೆ ತಂದು ಆ ಕುಟುಂಬಗಳ ಅಭಿವೃದ್ಧಿಗೆ ಯತ್ನಿಸುತ್ತಿದ್ದಾರೆ ಎಂದರು.
ಸಮಾಲೋಚನೆಯಲ್ಲಿ ಭಾಗವಹಿಸಿ: ಇಲ್ಲಿ ಮದ್ಯವರ್ಜಿಸಿದವರು ಪ್ರತಿ ತಿಂಗಳು ನಡೆಯುವ ಆಪ್ತ ಸಮಾಲೋಚನಾ ಸಭೆಗಳಲ್ಲಿ ಕಡ್ಡಾಯವಾಗಿ ಭಾಗವಹಿಸಬೇಕು. ಕುಡಿತಕ್ಕೆ ಬಲಿಯಾದ ಕುಟುಂಬಗಳ ರೋಧನೆ ಇತರರಿಗೆ ತಿಳಿಯುವುದಿಲ್ಲ. ಸಂಸ್ಥೆಯು ಸಮಾಜದಲ್ಲಿನ ಎಲ್ಲ ಅನಿಷ್ಟಗಳನ್ನು ಕೊನೆಗಾಣಿಸುವ ನಿಟ್ಟಿನಲ್ಲಿ ಶ್ರಮಿಸುತ್ತಿದೆ. ಇಂತಹ ಸಮಾಜಮುಖೀ ಕಾರ್ಯಗಳಲ್ಲಿ ಎಲ್ಲರೂ ಭಾಗಿಯಾಗುವ ಮೂಲಕ ಮದ್ಯ ಮುಕ್ತ ರಾಜ್ಯ ನಿರ್ಮಿಸಲು ಶ್ರಮಿಸಬೇಕೆಂದು ಮನವಿ ಮಾಡಿದರು.
ಯೋಜನಾಧಿಕಾರಿ ತಿಮ್ಮಯ್ಯ ನಾಯ್ಕ ಮಾತನಾಡಿ, ಇಲ್ಲಿ ನಿತ್ಯ ಯೋಗ, ಧ್ಯಾನ, ಆಚಾರ-ವಿಚಾರ, ಕುಟುಂಬದಲ್ಲಿ ಸಾಮರಸ್ಯದ ಬದುಕಿನ ಬಗ್ಗೆ ತಿಳಿಸಿಕೊಡಲಾಗಿದೆ. ಮದ್ಯದಿಂದ ಮುಕ್ತರಾದವರು ಮುಂದೆಂದೂ ಕುಡಿಯುವುದಿಲ್ಲವೆಂಬ ಪ್ರತಿಜ್ಞೆ ಮಾಡಿಸಬೇಕು. ಮುಂದಿನ ಶತದಿನೋತ್ಸವವನ್ನು ಧರ್ಮಸ್ಥಳದಲ್ಲಿ ಆಚರಿಸಲು ತೀರ್ಮಾನಿಸಲಾಗಿದೆ ಎಂದರು.
ತಾಲೂಕು ಯೋಜನಾಧಿಕಾರಿ ಯಶೋಧಾ ಶೆಟ್ಟಿ ಮಾತನಾಡಿ, ಶಿಬಿರಕ್ಕಾಗಿ ದುಡಿದವರು ಹಾಗೂ ಸಹಕರಿಸಿದವರನ್ನು ಸ್ಮರಿಸಿದರು. ಶಿಬಿರಾಧಿಕಾರಿ ನಂದಕುಮಾರ್, ಆರೋಗ್ಯ ಸಹಾಯಕಿ ಜಯಲಕ್ಷ್ಮೀ, ಗುರುಪುರ ಗ್ರಾಪಂ ಅಧ್ಯಕ್ಷ ಪ್ರಶಾಂತ್, ಸದಸ್ಯ ಪೆಂಜಳ್ಳಿರಾಜು, ಶಿಕ್ಷಕಿ ಸ್ವಪ್ನಾ ಚಂದ್ರಶೇಖರ್, ಮಮತಾ ಗಣೇಶ್, ಯೋಜನೆಯ ಮೇಲ್ವಿಚಾರಕರಾದ ಶಿಲ್ಪಾ, ಅಶ್ವಿನಿ, ಸುಷ್ಮಾ, ನವಜೀವನ ಸಮಿತಿ ಪದಾಧಿಕಾರಿಗಳು ಹಾಗೂ ಸದಸ್ಯರು, ಶಿಬಿರಾರ್ಥಿಗಳು ಮತ್ತು ಅವರ ಕುಟುಂಬದವರು ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.