ಆಜಾದಿ ಕಿ ರೈಲ್‌ಗಾಡಿ, ಔರ್ ಸ್ಟೇಷನ್: ಟಿಪ್ಪು ಎಕ್ಸ್‌ಪ್ರೆಸ್, ಮೈಲಾರ ನಿಲ್ದಾಣಕ್ಕೆ ಗೌರವ
Team Udayavani, Jul 18, 2022, 12:01 AM IST
ಮೈಸೂರು: ದೇಶದ ಸ್ವಾತಂತ್ರ್ಯ ದಿನದ ಅಮೃತ ಮಹೋತ್ಸವ ಹಿನ್ನೆಲೆಯಲ್ಲಿ ರೈಲ್ವೇ ಸಚಿವಾಲಯ ನಡೆಸುತ್ತಿರುವ ಆಜಾದಿ ಕಿ ರೈಲ್‌ಗಾಡಿ, ಔರ್‌ಸ್ಟೇಷನ್ ಎಂಬ ಸಾಂಪ್ರದಾಯಿಕ ಸಪ್ತಾಹಕ್ಕೆ ಗುರುತಿಸಿರುವ ರೈಲು ನಿಲ್ದಾಣ ಮತ್ತು ರೈಲು ಗಾಡಿಗಳ ಪೈಕಿ ಮೈಸೂರಿನ ಟಿಪ್ಪು ಎಕ್ಸ್‌ಪ್ರೆಸ್ ಮತ್ತು ಹಾವೇರಿಯ ಮಹಾದೇವಪ್ಪ ಮೈಲಾರ ರೈಲು ನಿಲ್ದಾಣ ನಾಮನಿರ್ದೇಶನಗೊಂಡಿವೆ.
ಸೋಮವಾರ (ಜು.18) ಸಂಜೆ 4ಕ್ಕೆ ರೈಲ್ವೆ ಮಂಡಳಿಯ ರೈಲ್ವೆ ಭವನದಿಂದ ಸಾಂಪ್ರದಾಯಿಕ ಸಪ್ತಾಹವನ್ನು ರೈಲ್ವೆ ಮಂಡಳಿಯ ಅಧ್ಯಕ್ಷ ಮತ್ತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ವಿ.ಕೆ. ತ್ರಿಪಾಠಿ ಉದ್ಘಾಟಿಸಲಿದ್ದಾರೆ ಎಂದು ನೈಋತ್ಯ ರೈಲ್ವೆ ಮೈಸೂರು ವಿಭಾಗದ ವಿಭಾಗೀಯ ವಾಣಿಜ್ಯ ವ್ಯವಸ್ಥಾಪಕ ಡಾ? ಮಂಜುನಾಥ ಕನಮಡಿ ತಿಳಿಸಿದ್ದಾರೆ.
ಟಿಪ್ಪು ಎಕ್ಸ್‌ಪ್ರೆಸ್
ಬ್ರಿಟಿಷರ ವಿರುದ್ಧದ ಹೋರಾಟದಲ್ಲಿ ಹುತಾತ್ಮರಾದ ಟಿಪ್ಪುವನ್ನು ಗುರುತಿಸುವ ಸಲುವಾಗಿ ರೈಲಿಗೆ ಟಿಪ್ಪು ಎಕ್ಸ್‌ಪ್ರೆಸ್ ಎಂದು ಹೆಸರಿಸಲಾಗಿದೆ. ಸಾಂಪ್ರದಾಯಿಕ ಸಪ್ತಾಹದಲ್ಲಿ ಟಿಪ್ಪು ಸುಲ್ತಾನ್ ಹೋರಾಟದ ಸ್ಮರಣಾರ್ಥ ಸ್ಥಳೀಯ ಸ್ವಾತಂತ್ರÂ ಹೋರಾಟಗಾರರು ಅಥವಾ ಅವರ ಕುಟುಂಬ ಸದಸ್ಯರು ಮೈಸೂರು ರೈnಜ ನಿಲ್ದಾಣದಲ್ಲಿ ಟಿಪ್ಪು ಎಕ್ಸ್‌ಪ್ರೆಸ್‌ಗೆ ಬಾವುಟ ತೋರಿಸುವ ಮೂಲಕ ರೈಲಿಗೆ ಚಾಲನೆ ನೀಡಲಿದ್ದಾರೆ.
ಮೈಲಾರ ಮಹಾದೇವಪ್ಪ ನಿಲ್ದಾಣ
ಬ್ರಿಟಿಷ್ ಆಳ್ವಿಕೆ ವಿರುದ್ಧ ಕ್ರಾಂತಿಕಾರಿ ಕಾರ್ಯಗಳಿಗಾಗಿ ಮೈಲಾರ ಮಹಾದೇವಪ್ಪ ಅವರನ್ನು ಕರ್ನಾಟಕದ ಭಗತ್ ಸಿಂಗ್ ಎಂದೇ ಪ್ರಶಂಸಿಸಲಾಗಿತ್ತು. ದಂಡಿ ಮೆರವಣಿಗೆಯಲ್ಲಿ ಗಾಂಧೀಜಿಯವರೊಂದಿಗೆ ನಡೆದವರಲ್ಲಿ ಮಹಾದೇವಪ್ಪ ಮೈಸೂರು ಸಂಸ್ಥಾನದ ಏಕೈಕ ಪ್ರತಿನಿಧಿ. ಆರು ತಿಂಗಳು ಜೈಲು ಶಿಕ್ಷೆ ಬಳಿಕ ತಮ್ಮ ಕ್ರಾಂತಿಕಾರಿ ಸ್ನೇಹಿತರ ಜತೆಗೂಡಿ ಹಾವೇರಿ ಬಳಿಯ ಬ್ಯಾಡಗಿ ರೈಲು ನಿಲ್ದಾಣದ ಮೇಲೆ ದಾಳಿ ಮಾಡಿದ್ದರು. ಸಪ್ತಾಹದಲ್ಲಿ ಮಹದೇವಪ್ಪ ಮೈಲಾರ ಹಾವೇರಿ ರೈಲು ನಿಲ್ದಾಣದ ವ್ಯಾಪ್ತಿಯಲ್ಲಿರುವ ಶಾಲಾ-ಕಾಲೇಜು ಮತ್ತು ಸ್ಥಳೀಯ ಜನರನ್ನೊಳಗೊಂಡು ವಾರಪೂರ್ತಿ ಕಾರ್ಯಕ್ರಮ ನಡೆಸಲಾಗುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Naxalite: ಮುಂಡಗಾರು ಲತಾ ಸೇರಿ ಆರು ನಕ್ಸಲರು ಶೀಘ್ರ ಮುಖ್ಯವಾಹಿನಿಗೆ: ಪ್ರಕ್ರಿಯೆ ಚುರುಕು
Davanagere: ವಿಪಕ್ಷಗಳು ಆಧಾರವಿಲ್ಲದೆ ಆರೋಪ ಮಾಡಬಾರದು: ಸಿಎಂ ಸಿದ್ದರಾಮಯ್ಯ
Davanagere: ಯುವಜನೋತ್ಸವಕ್ಕೆ ಸಿಎಂ ಸಿದ್ದರಾಮಯ್ಯ ಚಾಲನೆ
Private Bus fare: ಶೀಘ್ರದಲ್ಲೇ ಖಾಸಗಿ ಬಸ್ ಪ್ರಯಾಣ ದರವೂ ಏರಿಕೆ?
Minimum Temperature: ಬೆಂಗಳೂರಿನಲ್ಲಿ ಶೀಘ್ರ 11 ಡಿಗ್ರಿ ತಾಪ?: 12 ವರ್ಷದಲ್ಲೇ ದಾಖಲೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.