31ರಂದು ಬಿ.ವಿ.ಕಾರಂತ ರಸ್ತೆ ಅಭಿಯಾನ
Team Udayavani, Dec 29, 2020, 3:48 PM IST
ಮೈಸೂರು: ಮೈಸೂರು ರಂಗಾಯಣಕ್ಕೆ ಬಿ.ವಿ. ಕಾರಂತರ ಕೊಡುಗೆ ಅಪಾರವಾಗಿದ್ದು,ರಂಗಾಯಣದ ಮುಂಭಾಗದ ರಸ್ತೆಗೆ”ಪದ್ಮಶ್ರೀ ಬಿ.ವಿ. ಕಾರಂತ ರಸ್ತೆ’ ಎಂದು ಮಹಾ ನಗರ ಪಾಲಿಕೆ ನಾಮಕರಣ ಮಾಡಬೇಕು ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ಒತ್ತಾಯಿಸಿದರು.
ರಂಗಾಯಣದ ಶ್ರೀರಂಗ ವೇದಿಕೆಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಂಗಾಯಣವನ್ನು ಹುಟ್ಟು ಹಾಕಿದ್ದೇಬಿ.ವಿ.ಕಾರಂತರು. ಹಾಗಾಗಿ ಅವರ ಹೆಸರನ್ನುಚಿರಸ್ಥಾಯಿಯಾಗಿಸಲು ಕಲಾಮಂದಿರಮತ್ತು ರಂಗಾಯಣಕ್ಕೆ ಹೊಂದಿಕೊಂಡಿರುವ(ಹುಣಸೂರು ಮುಖ್ಯರಸ್ತೆಯಿಂದ ಕುಕ್ಕರಹಳ್ಳಿ ಕೆರೆಯ ಕಡೆಗೆ ರೈಲ್ವೆ ಗೇಟ್‌ನತನಕ) ರಸ್ತೆಗೆ ಬಿ.ವಿ.ಕಾರಂತ ಹೆಸರಿಡಬೇಕು.ನಗರಪಾಲಿಕೆಯ ಕೌನ್ಸಿಲ್ ಸಭೆಯಲ್ಲಿ ವಿಚಾರ ಪ್ರಸ್ತಾಪವಾಗಬೇಕು. ಈ ಸಂಬಂಧ ನಗರ ಪಾಲಿಕೆಗೂ ಪತ್ರ ಬರೆಯಲಾಗಿದೆ.
ಶಾಸಕ ಎಲ್.ನಾಗೇಂದ್ರ ಅವರ ಗಮನಕ್ಕೂ ತರಲಾಗಿದೆ. ಆದರೆ, ಯಾವುದೇ ಪ್ರತಿಕ್ರಿಯೆ ಬಂದಿಲ್ಲ. ಹಾಗಾಗಿ ರಂಗಾಯಣ, ಜಿಲ್ಲಾ ಹವ್ಯಾಸಿ ರಂಗಕರ್ಮಿಗಳ ವೇದಿಕೆ ಹಾಗೂಹಿರಿಯ ರಂಗಕರ್ಮಿ ರಾಜಶೇಖರ ಕದಂಬನೇತೃತ್ವದಲ್ಲಿ ಡಿ.31ರಂದು ಬೆಳಗ್ಗೆ 11 ಗಂಟೆಗೆರಂಗಾಯಣದ ಗೇಟ್‌ನ ಮುಂಭಾಗದಲ್ಲಿರಸ್ತೆ ಅಭಿಯಾನ ನಡೆಸಲಾಗುವುದು ಎಂದುತಿಳಿಸಿದರು. ಕೋವಿಡ್ ಆತಂಕದ ನಡುವೆಯೂ ರಂಗಾಯಣ ಹಲವು ಕಾರ್ಯಕ್ರಮಗಳನ್ನು ಸುರ ಕ್ಷತಾ ಕ್ರಮಗಳೊಂದಿಗೆಮಾಡಿತು. ಸಾಮಾಜಿಕ ಜಾಲತಾಣದಲ್ಲೂ ನಾಟಕ ಪ್ರಸಾರ ಮಾಡಲಾಯಿತು. ನಂತರಆಯ್ದ ಪ್ರೇಕ್ಷಕರಿಗೆ ನಾಟಕ ನೋಡಲು ಅವಕಾಶ ಮಾಡಿಕೊಟ್ಟಿತು. ಹಾಗಾಗಿ 1 ವರ್ಷದರಂಗಾಯಣದ ಚಟು ವಟಿಕೆಯ ಮಾಹಿತಿ ಹಾಗೂ ಕೋವಿಡ್ ಕಾಲದಲ್ಲಿ ಕೈಗೊಂಡ ಕಾರ್ಯಕ್ರಮಗಳನ್ನು “ಕೋವಿಡ್ ಕತ್ತಲೆಯಲ್ಲೂ ರಂಗಬೆಳಕು’ ಪುಸ್ತಕದಲ್ಲಿ ದಾಖಲಿಸುವಪ್ರಯತ್ನ ಮಾಡಲಾಗಿದೆ. ಡಿ.31ರಂದು ಸಂಜೆ3.30ಕ್ಕೆ ರಂಗಾಯಣದ ಭೂಮಿಗೀತದಲ್ಲಿ ಶಾಸಕ ಎಲ್.ನಾಗೇಂದ್ರ ಪುಸ್ತಕ ಬಿಡುಗಡೆಗೊಳಿಸುವರು. ಹಿರಿಯ ಕಲಾ ನಿರ್ದೇಶಕಶಶಿಧರ್ ಅಡಪ ಪಾಲ್ಗೊಳ್ಳುವರು. ಸಂಜೆ6.30ರಿಂದ ಮೈಸೂರು ಭಾರತೀಯ ರಂಗ ಶಿಕ್ಷಣ ಕೇಂದ್ರದ ವಿದ್ಯಾರ್ಥಿಗಳಿಂದ ಕೋಲಾಟ ಮತ್ತು ರಾಗ ಸರಾಗ ಪ್ರಾತ್ಯಕ್ಷಿಕೆ ಹಾಗೂಪುತ್ತೂರಿನ ಆಂಜನೇಯ ಮಹಿಳಾ ಯಕ್ಷಗಾನಸಂಘದ ಕಲಾತಂಡದಿಂದ ತಾಳಮದ್ದಳೆ, ಭೀಷ್ಮಾರ್ಜುನ ನಾಟಕದ ಪ್ರದ ರ್ಶನವೂ ನಡೆಯಲಿದೆ ಎಂದು ಮಾಹಿತಿ ನೀಡಿದರು.
ರಾಗ ರಂಗಾಯಣ ಎಂಬ ಶೀರ್ಷಿಕೆಯಡಿ ಪ್ರತಿ ತಿಂಗಳ ಮೊದಲ ಶನಿವಾರ ಸಂಜೆ 6.30ಕ್ಕೆತಿಂಗಳ ಸಂಗೀತ ಕಾರ್ಯಕ್ರಮ ನಡೆಸಲಾಗುತ್ತಿದ್ದು, ಜ.2ರಂದು ಸಂಜೆ 6.30ಕ್ಕೆ ಗಾಯಕಿಎಚ್.ಆರ್.ಲೀಲಾವತಿ ಚಾಲನೆ ನೀಡುವರು.ಮೊದಲ ಕಾರ್ಯಕ್ರಮ ದ.ರಾ.ಬೇಂದ್ರೆ ಕವಿತೆಗಳಗಾಯನದ ಮೂಲಕ ನಡೆಯಲಿದೆ. ಹಿರಿಯಕಲಾವಿದ ರಾಮಚಂದ್ರ ಹಡಪದ, ಗಾಯಕಿ ಶ್ವೇತ ಗಾಯನ ನಡೆಸಿ ಕೊಡಲಿದ್ದಾರೆ. ಸಾಹಿತಿಜಿ.ಪಿ.ಬಸವರಾಜು ಸಂಯೋಜಿತಕಾರ್ಯಕ್ರಮದಲ್ಲಿ ಕವಿತೆಗಳ ಗಾಯನ ಮೂಡಿಬರಲಿದೆ ಎಂದರು.ಪತ್ರಿಕಾಗೋಷ್ಠಿಯಲ್ಲಿರಂಗಾಯಣ ಜಂಟಿ ನಿರ್ದೇಶಕ ವಿ.ಎನ್. ಮಲ್ಲಿಕಾರ್ಜುನ ಸ್ವಾಮಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
JDS: ದೇವೇಗೌಡರು ಕಟ್ಟಿದ ಪಕ್ಷವನ್ನು ಕುಮಾರಸ್ವಾಮಿ ನೆಲಸಮ ಮಾಡ್ತಾವ್ರೆ: ಜಿ.ಟಿ.ದೇವೇಗೌಡ
Mysuru: ಜೆಡಿಎಸ್ ವರಿಷ್ಠರಿಗೆ ನಾನು ಬೇಡ, ನನ್ನ ಮಗ ಬೇಕಾಗಿದ್ದಾನೆ: ಜಿ.ಟಿ.ದೇವೇಗೌಡ
Congress: ಜಮೀರ್ ಬದಲಾವಣೆ ವಿಚಾರ ನನಗೆ ಗೊತ್ತಿಲ್ಲ: ಡಾ| ಜಿ. ಪರಮೇಶ್ವರ್
H.D.Kote: ಹುಲಿ ದಾಳಿಗೆ ಹೊಂಚು: ಕೂದಲೆಳೆ ಅಂತರದಲ್ಲಿ ಪಾರಾದ ಯುವಕ!
Hunsur: ರಾಜ್ಯದ ವಿವಿಧೆಡೆ ಕಳ್ಳತನ ಮಾಡಿದ್ದ ಆರೋಪಿ ಬಂಧನ
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Vijayapura: ಅಪಹರಿಸಿದ ಮಗು ಮರಳಿಸಿದ ಅಪರಿಚಿತ!: ಕಂದಮ್ಮನ ಕಿಡ್ನ್ಯಾಪ್ ಕೇಸ್ ಸುಖಾಂತ್ಯ
BBK11: ಧರ್ಮ ಬಿಗ್ ಬಾಸ್ ಆಟಕ್ಕೆ ತೊಡಕಾದ ಅಂಶಗಳೇನು? ʼಚಾಕ್ಲೇಟ್ ಹೀರೋʼ ಎಡವಿದ್ದೆಲ್ಲಿ?
Maharashtra: ಕಾಂಗ್ರೆಸ್ ಗೆ ಕೇವಲ 16 ಸ್ಥಾನ; ಕೈ ಅಧ್ಯಕ್ಷ ಸ್ಥಾನಕ್ಕೆ ಪಟೋಲೆ ರಾಜೀನಾಮೆ
Politics: ಫಡ್ನವೀಸ್ ಗೆ ಬೆಂಬಲ ನೀಡಿದ ಅಜಿತ್; ಮಹಾರಾಷ್ಟ್ರದಲ್ಲಿ ಮುಗಿಯದ ಸಿಎಂ ತಿಕ್ಕಾಟ
Video: ನೋಟಿನ ಮಾಲೆಯ ನೋಟು ಎಗರಿಸಿದ ಕಳ್ಳ… ಮದುವೆ ಬಿಟ್ಟು ಕಳ್ಳನ ಹಿಂದೆ ಓಡಿದ ವರ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.