ಬಾಬೂಜಿ ದೇಶದ ಹಸಿರುಕ್ರಾಂತಿ ಹರಿಕಾರ
Team Udayavani, Apr 6, 2018, 12:49 PM IST
ಕೆ.ಆರ್.ನಗರ: ಬಾಬೂಜಿ ರಾಷ್ಟ್ರಕಂಡ ಮಹಾನ್ ಸ್ವಾತಂತ್ರ್ಯ ಸೇನಾನಿ ಮತ್ತು ಹಸಿರುಕ್ರಾಂತಿ ಹರಿಕಾರ ಎಂದು ಆದಿಜಾಂಬವ ಸಂಘದ ತಾಲೂಕು ಅಧ್ಯಕ್ಷ ಲೋಕೇಶ್ ಹೇಳಿದರು. ಪಟ್ಟಣದ ಪುರಸಭೆ ವೃತ್ತದಲ್ಲಿ ತಾಲೂಕು ಆಡಳಿತ ಮತ್ತು ತಾಲೂಕು ಮಾದಿಗ ಸಂಘಟನೆಗಳು ಹಮ್ಮಿಕೊಂಡಿದ್ದ ಡಾ.ಬಾಬು ಜಗಜೀವನರಾಂ 111ನೇ ಜನ್ಮ ದಿನಾಚರಣೆಯಲ್ಲಿ ಬಾಬೂಜಿ ಪ್ರತಿಮೆಗೆ ಮಾಲಾರ್ಪಣೆ ಮಾಡಿ ಮಾತನಾಡಿದರು.
ರಾಷ್ಟ್ರಕಂಡ ಧೀಮಂತ ನಾಯಕ ಬಾಬೂಜಿ, ಹುಟ್ಟಿನಿಂದ ಹೋರಾಟ ಮನೋಭಾವದಲ್ಲೇ ಗುರುತಿಸಿಕೊಂಡವರು. ವಿದ್ಯಾರ್ಥಿ ಜೀವನದಲ್ಲಿ ಸಂಘಟನಾ ಮನೋಭಾವ ಬೆಳೆಸಿಕೊಂಡಿದ್ದ ಜಗಜೀವನ್‌ರಾಂ ಸ್ವಾತಂತ್ರ ಸಂಗ್ರಾಮದಲ್ಲಿ ಭಾಗವಹಿಸಿದ್ದಲ್ಲದೆ, ನಂತರದ ದಿನಗಳಲ್ಲಿ ಕೃಷಿ ಮಂತ್ರಿಯಾಗಿ ಕೃಷಿ ಕ್ಷೇತ್ರದಲ್ಲಿ ಹಸಿರು ಕ್ರಾಂತಿ ಮಾಡಿ ಆಹಾರ ಸಮಸ್ಯೆ ನೀಗಿಸಿದರು ಎಂದು ಹೇಳಿದರು.
ಕಾರ್ಮಿಕ ಮಂತ್ರಿಯಾಗಿ ಕಲ್ಯಾಣ ಕಾರ್ಯಕ್ರಮ ಜಾರಿಗೆ ತಂದು ಹೋರಾಟದ ಮೂಲಕ ತಮ್ಮದೇ ಛಾಪು ಮೂಡಿಸಿದ ಡಾ.ಬಾಬು ಜಗಜೀವನರಾಂ, ಅಬೇಡ್ಕರ್ ದಲಿತ ಸಮುದಾಯದ ಎರಡು ಕಣ್ಣುಗಳಿದ್ದಂತೆ. ಅವರು ಸಮಾಜದಲ್ಲಿ ಹುಟ್ಟಿದ್ದೇ ತಮ್ಮ ಪುಣ್ಯ. ಆದ್ದರಿಂದ. ಈ ಧೀಮಂತ ನಾಯಕ ಬಾಬೂಜಿ ಹಾಕಿ ಕೊಟ್ಟಿರುವ ಮಾರ್ಗದರ್ಶನದಲ್ಲಿ ತಾವುಗಳು ಸಾಗೋಣ ಎಂದರು.
ತಾಪಂ ಮಾಜಿ ಅಧ್ಯಕ್ಷ ಎಂ.ಎಚ್.ಸ್ವಾಮಿ ಮಾತನಾಡಿ, ಶೋಷಿತ, ದಲಿತ ಮತ್ತು ಹಿಂದುಳಿದ ಸಮಾಜಗಳು ಹುಟ್ಟಿನಿಂದ ಬಂದಿಲ್ಲ. ಸಾಮಾಜಿಕ ಸಂಕೋಲೆಯಲ್ಲಿ ಜಾತಿ ಹುಟ್ಟಿತು. ಮಾನವ ಮಾನವನಾಗಿ ಬದುಕುವಂತಹ ಸಂದರ್ಭವನ್ನು ನಿರ್ಮಿಸಿಕೊಟ್ಟವರು ಬಾಬೂಜಿ ಮತ್ತು ಅಂಬೇಡ್ಕರ್. ಅಗಾದ ಜಾnನ ಬೆಳಗಿದಂತಹ ಮಹಾತ್ಮರು ಹಾಕಿಕೊಟ್ಟ ದಾರಿಯಲ್ಲಿ ತಾವೆಲ್ಲರೂ ನಡೆಯೋಣ ಎಂದು ಹೇಳಿದರು.
ದಲಿತ ಮುಖಂಡ ಹನಸೋಗೆ ನಾಗರಾಜ್ ಮಾತನಾಡಿ, ದೇಶಕ್ಕೆ ಕಾನೂನು ಬೆಳಕು ನೀಡಿದ ಬಾಬೂಜಿ, ಅಂಬೇಡ್ಕರ್ ಮತ್ತು ಬಸವಣ್ಣ ಜಯಂತಿ ಆಚರಿಸಲು ರಚಿಸಿದ ಕಾನೂನುಗಳೇ ತೊಡಕಾಗುತ್ತಿವೆ. ಕಾರಣ ಈ ಜಯಂತಿಗಳು ಹೆಚ್ಚಾಗಿ ಚುನಾವಣೆ ಸಂದರ್ಭಗಳಲ್ಲೇ ಬರುತ್ತವೆ. ಆದ್ದರಿಂದ ಅವರು ಬರೆದ ಕಾನೂನುಗಳು ಎಷ್ಟು ಶ್ರೇಷ್ಠ ಎಂಬುದು ತಿಳಿಯುತ್ತದೆ ಎಂದು ಹೇಳಿದರು.
ಮಹನೀಯರ ಆದರ್ಶಗಳು ಕೇವಲ ಜಯಂತಿಗೆ ಸೀಮಿತವಾಗಬಾರದು. ಇಂದಿನ ಪಠ್ಯ ಪುಸ್ತಕಗಳಿಂದ ಇಂತಹ ನಾಯಕರ ಸಾಧನೆ ಮತ್ತು ಆದರ್ಶಗಳು ದೂರಾಗುತ್ತಿವೆ. ಸರ್ಕಾರಗಳು, ತಮ್ಮ ನಾಯಕರು ಪಠ್ಯಪುಸ್ತಕದಲ್ಲಿ ಸೇರಿಸುವ ಕೆಲಸ ಮಾಡಬೇಕು ಎಂದು ಒತ್ತಾಯಿಸಿದರು.
ತಾಪಂ ಸದಸ್ಯ ಶ್ರೀನಿವಾಸ್‌ಪ್ರಸಾದ್, ತಾಲೂಕು ಮಾದಿಗ ಸಂಘರ್ಷ ಸಮಿತಿ ಅಧ್ಯಕ್ಷ ಮಧುವನಹಳ್ಳಿ ರವಿಕುಮಾರ್, ಮುಖಂಡರಾದ ಕೆ.ಎಲ್.ಕೃಷ್ಣಯ್ಯ, ಕಾಳಯ್ಯ, ಕಂಚುಗಾರಕೊಪ್ಪಲು ಸ್ವಾಮಿ, ಹಂಪಾಪುರ ಸುರೇಶ್, ಸ್ವರಾಜ್ ಇಂಡಿಯಾದ ತಾಲೂಕು ಅಧ್ಯಕ್ಷ ಗರಡುಗಂಭದ ಸ್ವಾಮಿ, ತಹಶೀಲ್ದಾರ್ ಮಹೇಶ್‌ಚಂದ್ರ, ಪುರಸಭೆ ಮುಖ್ಯಾಧಿಕಾರಿ ನಾಗಶೆಟ್ಟಿ, ಸಮಾಜ ಕಲ್ಯಾಣ ಇಲಾಖಾ ನಿರ್ದೇಶಕ ಅಶೋಕ್ ಇದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.