ಬಾಚಹಳ್ಳಿ ವೀರಾಂಜನೇಯ ಬ್ರಹ್ಮರಥೋತ್ಸವ
Team Udayavani, Feb 25, 2019, 7:30 AM IST
ಹುಣಸೂರು: ನಗರಕ್ಕೆ ಸಮೀಪದ ಆಸ್ಪತ್ರೆ ಕಾವಲ್ ಗ್ರಾಪಂ ವ್ಯಾಪ್ತಿಯ ಬಾಚಹಳ್ಳಿ ಇತಿಹಾಸ ಪ್ರಸಿದ್ಧ ವೀರಾಂಜನೇಯಸ್ವಾಮಿ 68ನೇ ಬ್ರಹ್ಮರಥೋತ್ಸವ ವಿಜೃಂಭಣೆಯಿಂದ ಜರುಗಿತು.
ಭಾನುವಾರ ಮಧ್ಯಾಹ್ನ 1.30ಕ್ಕೆ ವೀರಾಂಜನೇಯಸ್ವಾಮಿ ಬೆಳ್ಳಿ ವಿಗ್ರಹ ಹಾಗೂ ರಾಮ ಲಕ್ಷ್ಮಣ ಸೀತೆಯ ಉತ್ಸವಮೂರ್ತಿಯನ್ನು ರಥದಲ್ಲಿ ಪ್ರತಿಷ್ಠಾಪಿಸಿ, ನಂತರ ಪೂಜೆ ಸಲ್ಲಿಸಿ, ಜಾತ್ರಾಮಾಳದಿಂದ ಸಹಸ್ರಾರು ಭಕ್ತರು ಭಕ್ತಿ-ಭಾವದಿಂದ ರಥವನ್ನು ಎಳೆದು ದೇವಸ್ಥಾನದ ಹಿಂಭಾಗಕ್ಕೆ ತಂದು ನಿಲ್ಲಿಸಿದರು.
ಸಂಜೆ ಹನುಮ ಭಕ್ತರು ರಥವನ್ನು ಸ್ವಸ್ಥಾನಕ್ಕೆ ತಂದು ನಿಲ್ಲಿಸಿದರು. ಶನಿವಾರದಿಂದಲೇ ದೇವಸ್ಥಾನದಲ್ಲಿ ವಿವಿಧ ಪೂಜಾ ಕೈಂಕರ್ಯಗಳು ನಡೆದವು. ವಧುವರರು ಹಾಗೂ ನೆರೆದಿದ್ದ ಭಕ್ತ ಸಮೂಹ ರಥಕ್ಕೆ ಹಣ್ಣು ಹವನ ಎಸೆದು ಭಕ್ತಿ ಮೆರೆದರು.
ಜಾತ್ರೆಯಲ್ಲಿ ಬಾಚಳ್ಳಿಬಯಲಿನ ರೈತರು ಹಾಗೂ ಸುತ್ತಮುತ್ತಲ ಗ್ರಾಮಸ್ಥರು ಎತ್ತಿನಗಾಡಿಯಲ್ಲಿ ಕುಟುಂಬ ಸಮೇತರಾಗಿ ಬುತ್ತಿಯೊಂದಿಗೆ ತಂಡೋಪತಂಡವಾಗಿ ಆಗಮಿಸಿ ಪೂಜೆ ಸಲ್ಲಿಸಿ ತಂದಿದ್ದ ಬುತ್ತಿಯನ್ನು ಹಂಚಿ ತಿನ್ನುವುದು ಇಲ್ಲಿನ ವಾಡಿಕೆ.
10 ಸಾವಿರಕ್ಕೂ ಹೆಚ್ಚು ಮಂದಿ ಆಂಜನೇಯಸ್ವಾಮಿ ದರ್ಶನ ಪಡೆದರು. ವಿವಿಧ ಭಜನಾ ತಂಡಗಳವರು ನಿರಂತರ ಭಜನೆ ನಡೆಸಿಕೊಟ್ಟರು. ಜಾತ್ರೆಗೆ ನೂರಕ್ಕೂ ಹೆಚ್ಚು ಜೋಡೆತ್ತುಗಳು, ಹೋರಿಗಳನ್ನು ಕಟ್ಟಲಾಗಿತ್ತು. ಭರ್ಜರಿ ವ್ಯಾಪಾರ, ವಹಿವಾಟು ನಡೆಯಿತು.
ಇಂದು ತೆಪ್ಪೋತ್ಸವ: ಸೋಮವಾರ ಬೆಳಗ್ಗೆ 10ಗಂಟೆಗೆ ಗ್ರಾಮದ ಬಳಿಯ ಉದ್ದೂರು ನಾಲೆಯಲ್ಲಿ ವೀರಾಂಜನೇಯಸ್ವಾಮಿ ತೆಪ್ಪೋತ್ಸವ ನಡೆಯಲಿದೆ. ಭಕ್ತರಿಗೆ ನಗರದ ಹನುಮ ಭಕ್ತರು ಮಧ್ಯಾಹ್ನ ಊಟದ ವ್ಯವಸ್ಥೆ ಕಲ್ಪಿಸಿದ್ದರೆ, ನಂದಿ ಟ್ರೇಡರ್ ಹಾಗೂ ಬಾಚಳ್ಳಿಯ ಜನರು ಚಿಕ್ಕಹುಣಸೂರಿನಿಂದ ಜಾತ್ರಾಮಾಳದವರೆಗೆ ಅಲ್ಲಲ್ಲಿ ಮಜ್ಜಿಗೆ-ಪಾನಕ ವಿತರಿಸಿದರು.
ಈ ವೇಳೆ ನಗರಸಭಾಧ್ಯಕ್ಷ ಎಚ್.ವೈ.ಮಹದೇವ್, ಮಾಜಿ ಶಾಸಕ ಎಚ್.ಪಿ.ಮಂಜುನಾಥ್, ಮಾಜಿ ಸಚಿವ ವಿಜಯಶಂಕರ್, ಜಾತ್ರೆ ಸಮಿತಿಯ ಲಕ್ಷ್ಮೀನಾರಾಯಣ, ಕಿಟ್ಟಪ್ಪ, ಸುಂದ್ರಣ್ಣ, ವೃತ್ತ ನಿರೀಕ್ಷಕ ಪೂವಯ್ಯ, ಎಸ್‌ಐ ಶಿವಪ್ರಕಾಶ್ ಇತರರಿದ್ದರು,.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
BGT 2024: ಐಪಿಎಲ್ ಹರಾಜಿನ ಕಾರಣಕ್ಕೆ ತಂಡ ತೊರೆದ ಆಸ್ಟ್ರೇಲಿಯಾದ ಸಹಾಯಕ ಕೋಚ್!
Manipal: ಆರ್ಯಭಟ ಪ್ರಶಸ್ತಿ ಪುರಸ್ಕೃತ, ಯಕ್ಷಗಾನ ಕಲಾವಿದ ಚೇರ್ಕಾಡಿ ಕಮಲಾಕ್ಷ ಪ್ರಭು ನಿಧನ
Hosanagar: ಶೈಕ್ಷಣಿಕ ಪ್ರವಾಸಕ್ಕೆ ತೆರಳುತ್ತಿದ್ದ ಬಸ್ ಅಪಘಾತ: 29 ಮಂದಿಗೆ ಗಾಯ
ಸವದತ್ತಿ:ರೈಲು ಮಾರ್ಗ- ಸವದತ್ತಿಗೇ ಜಾಸ್ತಿ ಲಾಭ! ಆರ್ಥಿಕ ಅಭಿವೃದ್ಧಿಗೆ ನೆರವು…
Putturu: ಠಾಣೆ ಮುಂಭಾಗದಲ್ಲಿ ಜನರ ಆಕ್ರೋಶ; ಶಾಸಕ ಅಶೋಕ್ ಕುಮಾರ್ ರೈ ಭೇಟಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.