ಬದನವಾಳು, ಹೊರಳವಾಡಿಯ ವೀರಶೈವರು “ಕೈ’ ವಶ
Team Udayavani, Mar 27, 2017, 12:53 PM IST
ನಂಜನಗೂಡು: ಇಲ್ಲಿನ ವಿಧಾನಸಭಾ ಕ್ಷೇತ್ರದ ಉಪ ಚುನಾವಣೆ ತಾರಕಕ್ಕೇರುತ್ತಿರುವಂತೆ ಪಕ್ಷಗಳ ಸೇರ್ಪಡೆಯೂ ಹೆಚ್ಚಾಗತೊಡಗಿದೆ. ತಾಲೂಕಿನ ಹೊರಳವಾಡಿ ಮತ್ತು ಬದನ ವಾಳು ಗ್ರಾಮದ ವೀರಶೈವ ಸಮಾಜದವರಿಂದ ಸಂಸದ ಆರ್. ಧ್ರುವನಾರಾಯಣ್ ಅವರ ನಾಯಕತ್ವದಲ್ಲಿ ಕೈ ಪಕ್ಷಕ್ಕೆ ಭಾನುವಾರ ಸೇರ್ಪಡೆಯಾದರು.|
ಸಂಸದರ ನೇತೃತ್ವದಲ್ಲಿ ಕಾಂಗ್ರೆಸ್ ಸೇರಿದ ಬದನವಾಳು ಗ್ರಾಮದ ಸತೀಶ್ ಮಾತನಾಡಿ, ನಮ್ಮ ಗ್ರಾಮಕ್ಕೆ ಮಾಜಿ ಸಚಿವರಾದ ಎಂ.ಮಹದೇವು, ಡಿ.ಟಿ.ಜಯಕುಮಾರ್, ವಿ.ಶ್ರೀನಿವಾಸ ಪ್ರಸಾದ್ ಯಾರೂ ಅಭಿವೃದ್ಧಿ ಕೆಲಸ ಮಾಡಿರಲಿಲ್ಲ. ಆದರೆ ಕಳೆದ 6 ತಿಂಗಳಿ ನಿಂದ ಕಾಂಗ್ರೆಸ್ ಸರ್ಕಾರದಿಂದ 1.5 ಕೋಟಿ ರೂಗಳ ಅನುದಾನ ಹರಿದು ಬಂದಿದ್ದು ನಾವ್ಯಾರು ಕಾಂಗ್ರೆಸ್ ವಿರೋಧಿಗಳಲ್ಲ ಎಂಬುದನ್ನು ಸಾಬೀತು ಪಡಿಸಲು ಕೈ ಪಕ್ಷಕ್ಕೆ ಸೇರುತ್ತಿದ್ದೇವೆ ಎಂದರು.
ಸಂಸದ ಆರ್. ಧ್ರುವನಾರಾಯಣ್ ಮಾತನಾಡಿ, ಸಚಿವ ಎಚ್.ಸಿ. ಮಹದೇವಪ್ಪಮುಖ್ಯಮಂತ್ರಿಗಳ ಗಮನ ಸೆಳೆದು ನಂಜನಗೂಡು ವಿಧಾನ ಸಭಾ ಕ್ಷೇತ್ರಕ್ಕೆ ಸುಮಾರು 600 ಕೋಟಿ ರೂ ಅನುದಾನ ತಂದಿದ್ದು ಪ್ರತಿಯೊಂದು ಗ್ರಾಮದಲ್ಲೂ ಅಭಿವೃದ್ಧಿ ಕೆಲಸಗಳು ನಡೆಯುತ್ತಿವೆ. ನಾನು ಸಂಸದರ ಅನುದಾನದಿಂದ ರಾಜ್ಯ ಹೆದ್ದಾರಿಗಳನ್ನು ರಾಷ್ಟ್ರೀಯ ಹೆದ್ದಾರಿಗಳನ್ನಾಗಿ ಪರಿವರ್ತನೆ ಮಾಡಿದ್ದೇನೆ.
8 ಸಾವಿರಕ್ಕೂ ಹೆಚ್ಚು ಅಸಂಘಟಿತ ಕಾರ್ಮಿಕರಿಗೆ 25 ರೂಗಳಿಗೆ 100 ಕಿ.ಮೀ. ಕ್ರಮಿಸ ಬಹುದಾದ ಇಜ್ಜತ್ ಪಾಸುಗಳನ್ನು ನೀಡಿದ್ದೇನೆ ಎಂದು ತಿಳಿಸಿದರು. ಇಷ್ಟು ರೈಲ್ವೆ ಪಾಸುಗಳು ಬೇರಾವುದೇ ಲೋಕಸಭಾ ಕ್ಷೇತ್ರದಲ್ಲಿ ವಿತರಣೆಯಾಗಿಲ್ಲ. ತಾವು ಶಾಸಕರಾಗಿದ್ದ ಅವಧಿಯಲ್ಲಿ ಬದನವಾಳು ಸೇರಿದಂತೆ ಸುಮಾರು 56 ಹಳ್ಳಿ ಗಳಿಗೆ ಕುಡಿಯುವ ನೀರಿನ ಯೋಜನೆ ತಂದಿದ್ದೇನೆ.
ಕ್ಷೇತ್ರದಲ್ಲಿ ಇನ್ನೂ ಹಲವಾರು ಅಭಿವೃದ್ಧಿ ಕೆಲಸಗಳನ್ನು ಮಾಡಿಸಲು ಕೇಶವ ಮೂರ್ತಿ ಅವರನ್ನು ಗೆಲ್ಲಿಸುವುದರ ಮೂಲಕ ಕಾಂಗ್ರೆಸ್ ಬಲಪಡಿಸಿ ಎಂದರು. ಅಭ್ಯರ್ಥಿ ಕಳಲೆ ಕೇಶವಮೂರ್ತಿ ಮಾತನಾಡಿ, ನಂಜನಗೂಡು ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ತಮ್ಮನ್ನು ಚುನಾಯಿಸಿ ಕ್ಷೇತ್ರದ ಜನತೆಯ ಸೇವೆ ಅವಕಾಶ ಮಾಡಿಕೊಡಿ ಎಂದು ಮನವಿ ಮಾಡಿದರು.
ಬದನವಾಳು ಗ್ರಾಮದ ವೀರಶೈವ ಮುಖಂಡರಾದ ನಾಗೇಂದ್ರ, ದಿಲೀಪ್, ಪ್ರದೀಪ್, ನಂದೀಶ್, ಮಹದೇವಮೂರ್ತಿ, ಸಿದ್ದರಾಜು, ಮಂಜುನಾಥ್, ಶಿವಮೂರ್ತಿ, ನಂಜುಂಡಸ್ವಾಮಿ, ಲೋಕೇಶ್, ಮಂಜು, ರಾಜಶೇಖರ ಮೂರ್ತಿ ಸತೀಶ್, ಮಲ್ಲಣ್ಣ, ನಂಜುಡಪ್ಪ, ಮಣಿಕಂಠಮೂರ್ತಿ ಕಾಂಗ್ರೆಸ್ ಸೇರ್ಪಡೆಯಾದರು.
ತಾಪಂ ಉಪಧ್ಯಕ್ಷ ಗೋವಿಂದರಾಜು, ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಮಾಜಿ ಅಧ್ಯಕ್ಷ ಎಸ್.ಸಿ. ಬಸವರಾಜು ಮಾಜಿ ಜಿಲ್ಲಾ ಪಂಚಾಯಿತಿ ಅಧ್ಯಕ್ಷ, ಕಾಂಗ್ರೆಸ್ ಮೈಸೂರು ಜಿಲ್ಲಾಧ್ಯಕ್ಷ ಡಾ. ಬಿ.ಜೆ. ವಿಜಯಕುಮಾರ್, ಉಪಾಧ್ಯಕ್ಷ ಗುರುಪಾದ ಸ್ವಾಮಿ, ಟಿಎಪಿಸಿಎಂಎಸ್ ಅಧ್ಯಕ್ಷ ಕುರಹಟ್ಟಿ ಮಹೇಶ್, ಉಪಾಧ್ಯಕ್ಷ ವಿಜಯಕುಮಾರ್, ಹೊರಳವಾಡಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಜ್ಯೋತಿ, ನಗರಸಭಾ ಸದಸ್ಯ ಸಿ.ಎಂ. ಶಂಕರ್, ಚೆಲುವರಾಜು, ಸಿದ್ದಶೆಟ್ಟಿ, ಶಾಂಭ ಮೂರ್ತಿ ಬಸವರಾಜು ಮತ್ತಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Siruguppa: ಬೈಕ್ ಮತ್ತು ಅಪರಿಚಿತ ವಾಹನದ ಮಧ್ಯೆ ಭೀಕರ ಅಪಘಾತ; ಇಬ್ಬರ ಸಾವು
Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.