ಬಹುರೂಪಿ ರಂಗೋತ್ಸವಕ್ಕೆ ಗರಿಗೆದರಿದ ಸಿದ್ಧತೆ


Team Udayavani, Mar 10, 2022, 1:03 PM IST

ಬಹುರೂಪಿ ರಂಗೋತ್ಸವಕ್ಕೆ ಗರಿಗೆದರಿದ ಸಿದ್ಧತೆ

ಮೈಸೂರು: ನಗರದ ರಂಗಾಯಣದ ಆವರಣದಲ್ಲಿ ಮಾ.11 ರಿಂದ 20 ರವರೆಗೆ ನಡೆಯುವ “ಬಹುರೂಪಿರಾಷ್ಟ್ರೀಯ ರಂಗೋತ್ಸವ’ಕ್ಕೆ ಸಮರೋಪಾದಿಯಲ್ಲಿ ಸಿದ್ಧತೆ ನಡೆದಿದೆ.

ಒಂದು ವಾರ ರಂಗಾಸಕ್ತರಿಗೆ ರಂಗ ಪ್ರಯೋಗಗಳುಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉಣಬಡಿಸಲು ರಂಗಾಯಣದ ಆವರಣ ಮದುವಣಗಿತ್ತಿಯಂತೆಸಿಂಗಾರಗೊಳ್ಳುತ್ತಿದೆ. ವೇದಿಕೆಗಳ ವಿನ್ಯಾಸ, ಆವರಣ ಸ್ವಚ್ಛತಾ ಕಾರ್ಯ, ನಾಟಕಗಳ ತಾಲೀಮು, ಮಳಿಗೆಗಳ ನಿರ್ಮಾಣ, ಶಿಲ್ಪಗಳ ಕೆತ್ತನೆ…ಹೀಗೆ ಸಕಲ ಸಿದ್ಧತೆ ಭರ್ಜರಿಯಾಗಿ ನಡೆಯುತ್ತಿವೆ.

ಈ ಬಾರಿ ತಾಯಿ ಆಶಯದೊಂದಿಗೆ ಬಹುರೂಪಿರಂಗೋತ್ಸವವನ್ನು ರೂಪಿಸಲಾಗಿದ್ದು, “ತಾಯಿ’ಪರಿಕಲ್ಪನೆ ಅಡಿಯಲ್ಲಿ ನಾಟಕಗಳು, ಜಾನಪದ ನೃತ್ಯ,ಸಂಗೀತ, ಭಿತ್ತಿಚಿತ್ರ ಪ್ರದರ್ಶನ, ಸಿನಿಮಾ ಸೇರಿದಂತೆರಂಗೋತ್ಸವವನ್ನು ಸಿದ್ಧಗೊಳಿಸಲಾಗಿದೆ.

ಬಹುರೂಪಿ ಕುರಿತು ರಂಗ ವಿನ್ಯಾಸಕ ದ್ವಾರಕನಾಥ್‌ ನೇತೃತ್ವದಲ್ಲಿ ಹತ್ತಾರು ಕಲಾವಿದರು ಬಿಡಿಸುತ್ತಿರುವ ಪೋಸ್ಟರ್‌ಗಳನ್ನು, ಭಿತ್ತಿಚಿತ್ರಗಳನ್ನು ರಂಗಾಯಣದ ಅಂಗಳದಲ್ಲಿ ಹಾಕಲಾಗಿದೆ. ಕರಕುಶಲ, ಆಹಾರ, ತಿನಿಸು, ಪುಸ್ತಕ ಪ್ರದರ್ಶನದ ಮಾರಾಟ ಮಳಿಗೆಗಳನ್ನು ಸಿದ್ಧ ಪಡಿಸಲಾಗುತ್ತಿದೆ. ರಂಗಾಯಣ ಅಂಗಳದತುಂಬ “ರಂಗ ಸಂಭ್ರಮ’ ಮನೆ ಮಾಡಿದೆ. ವಿಶೇಷವಾಗಿ 18 ಅಡಿ ಎತ್ತರದ ತಾಯಿ ಮತ್ತುಮಗುವಿನ ಮಾದರಿಯನ್ನು ರವಿರಾಜ್‌ ಮತ್ತುವಿನಯ್‌ ಸಿದ್ಧ ಪಡಿಸುತ್ತಿದ್ದು, ಅದನ್ನು ರಂಗಾಯಣದ್ವಾರದಲ್ಲಿ ಅಳವಡಿಸಲಾಗುತ್ತದೆ. ಈ ಬಾರಿ ವಿಶೇಷರೀತಿ ತಾಯಿ ಪರಿಕಲ್ಪನೆಯಲ್ಲಿಯೇ ಬಹುರೂಪಿನ್ನುಉದ್ಘಾಟಿಸುವ ಸಂಬಂಧ ಗಣೇಶ್‌ ಮತ್ತು ನವೀನ್‌ ಆಫ್ರಿಕ ಟ್ರೀ ಮಾದರಿಯನ್ನು ನಿರ್ಮಿಸುತ್ತಿದ್ದಾರೆ.

80 ಮಳಿಗೆಗಳಿಗೆ ಸಿದ್ಧತೆ: ಕರಕುಶಲ, ಆಹಾರ, ತಿನಿಸು, ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕಾಗಿ ರಂಗಾಯಣದ ಅಂಗಳದಲ್ಲಿ ವ್ಯವಸ್ಥಿತ 80 ಮಳಿಗೆಗಳು ತಲೆ ಎತ್ತುತ್ತಿವೆ. 64 ಮಳಿಗೆಗಳನ್ನು ಕರಕುಶಲ ವಸ್ತುಗಳ ಪ್ರದರ್ಶನ ಮತ್ತು ಮಾರಾಟ ಹಾಗೂ ಪುಸ್ತಕ ಮಾರಾಟಕ್ಕೆ ಸಿದ್ಧವಾಗುತ್ತಿವೆ. ದೇಶದ ನಾನಾ ಭಾಗಗಳಿಂದ ಕುಶಲಕರ್ಮಿಗಳು ಭಾಗವಹಿಸಲಿದ್ದಾರೆ.ಇನ್ನು ದೇಸಿ ಆಹಾರ ಪದ್ಧತಿಗೋಸ್ಕರ 16ಕ್ಕೂ ಹೆಚ್ಚಿನ ಮಳಿಗೆಗಳನ್ನು ಸಿದ್ಧಪಡಿಸಲಾಗಿದೆ.

ಈ ಬಾರಿ ವಿಶೇಷವಾಗಿ ಕಲಾವಿದರೇ ರಚಿಸಿರುವ ಅನೇಕ ಚಿತ್ರಗಳನ್ನು ರಂಗಾಯಣದ ಆವರಣದಲ್ಲಿಪ್ರದರ್ಶನ ಮಾಡಲಾಗುತ್ತಿದೆ. ಪ್ರತಿದಿನ ಉತ್ಸವಕ್ಕೆಆಗಮಿಸುವ 200ರಿಂದ 250 ಕಲಾವಿದರು, ಗಣ್ಯರಿಗಾಗಿ ನಗರದ ಖಾಸಗಿ ಹೋಟೆಲ್‌ಗ‌ಳು ಹಾಗೂಸರ್ಕಾರಿ ಗೆಸ್ಟ್‌ಹೌಸ್‌ಗಳನ್ನು ಕಾಯ್ದಿರಿಸಲಾಗಿದೆ. ಗೆಸ್ಟ್‌ಹೌಸ್‌ಗಳಿಂದ ರಂಗಾಯಣಕ್ಕೆ ಕರೆತರಲು ಬಸ್‌ವ್ಯವಸ್ಥೆಯನ್ನೂ ಮಾಡಲಾಗಿದೆ ಎಂದು ರಂಗಾಯಣ ಉಪ ನಿರ್ದೇಶಕಿ ನಿರ್ಮಲಾ ಮಠಪತಿ ತಿಳಿಸಿದ್ದಾರೆ.

ವರ್ಣಚಿತ್ರ ಕಾರ್ಯಾಗಾರ: ಬಹುರೂಪಿ ಅಂಗವಾಗಿರಂಗಾಯಣದ ಅಂಗಳದಲ್ಲಿ “ಭಾವಗಳ ಬಣ್ಣದ ಬಹುರೂಪಿ ತಾಯಿ’ ಎಂಬ ಹೆಸರಿನಲ್ಲಿ ವರ್ಣಚಿತ್ರ ಕಾರ್ಯಾಗಾರ ನಡೆಯುತ್ತಿದೆ. ಕಾರ್ಯಾಗಾರದಲ್ಲಿ ಕಾವಾ ಕಾಲೇಜಿನ 5 ಮಹಿಳಾ ವಿದ್ಯಾರ್ಥಿಗಳ ಭಾಗ ವಹಿಸಿದ್ದು, ತಾಯಿಸಂಬಂಧಿಸಿದಂತೆ 5 ವಿಭಿನ್ನ ಚಿತ್ರ ಗಳನ್ನು ಬಿಡಿಸುತ್ತಿದ್ದಾರೆ.ಆ ಚಿತ್ರಗಳನ್ನು ಬಹುರೂಪಿ ಯಲ್ಲಿ ಪ್ರದರ್ಶನ ಮಾಡಲಾಗುತ್ತದೆ. ಈ ಬಾರಿ ವನರಂಗ ರಂಗವೇದಿಕೆಯನ್ನು ತನ್ನ ಹೆಸರಿನಂತೆಯೇ ರೂಪಿಸಲಾಗಿದೆ. ರಂಗವೇದಿಕೆಯಲ್ಲಿಗಿಡ, ಮರಗಳನ್ನು ಬೆಳೆಸಲಾಗಿದೆ ಎಂದು ರಂಗಾಯಣ ನಿರ್ದೇಶಕ ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.

ಕಾರಂತ ಶಿಲ್ಪರಂಗವನ ಲೋಕಾರ್ಪಣೆ :

ಬಹುರೂಪಿ ಅಂಗವಾಗಿ ರಂಗಾಯಣದ ಅಂಗಳದಲ್ಲಿ ಕಳೆದ 8 ದಿನಗಳಿಂದ ಶಿಲ್ಪಕಲಾ ಶಿಬಿರವನ್ನು ಆಯೋಜಿಸಲಾಗಿದೆ. ಶಿಬಿರದಲ್ಲಿ ಭಾಗವಹಿಸಿರುವ ಕಲಾವಿದರಾದ ಸುಭಾಷ್‌,ನವೀನ್‌, ಕೆ.ಕುಮಾರ್‌, ಯಶವಂತ, ಪುನೀತ್‌,ಸುಮನ್‌, ಆನಂದ, ಭವಾನಿ ಶಂಕರ್‌, ಲೀಲಾವತಿ ಹಾಗೂ ಜ್ಯೋತಿ ಭಾರತಿ ತಲಾ ಒಂದೊಂದುಕಲ್ಲಿನ ಶಿಲ್ಪಗಳನ್ನು ಕೆತ್ತನೆ ಮಾಡುತ್ತಿದ್ದು, ಇನ್ನುಎರಡು ದಿನಗಳಲ್ಲಿ ಪೂರ್ಣಗೊಳ್ಳಿದೆ. ಸದರಿಕಲಾಕೃತಿಗಳನ್ನು ಬಿ.ವಿ.ಕಾರಂತ ರಂಗಚಾವಡಿಮುಂಭಾಗದ ಜಾಗದಲ್ಲಿ ಪ್ರತಿಷ್ಠಾಪಿಸಲಾಗುತ್ತಿದೆ. ಜತೆಗೆ ಆ ಸ್ಥಳಕ್ಕೆ ಕಾರಂತ ಶಿಲ್ಪರಂಗವನ ಎಂದುಹೆಸರು ನಾಮಕರಣ ಮಾಡಲಾಗುತ್ತದೆ ಎಂದು ಅಡ್ಡಂಡ ಸಿ.ಕಾರ್ಯಪ್ಪ ತಿಳಿಸಿದ್ದಾರೆ.

ಮಾ.11 ರಿಂದ 20 ರವರೆಗೆ ನಡೆಯುವ “ಬಹುರೂಪಿ ರಾಷ್ಟ್ರೀಯ ರಂಗೋತ್ಸವ’ಕ್ಕೆರಂಗಾಯಣದ ಅಂಗಳದಲ್ಲಿ ಸಿದ್ಧತೆ ಭರದಿಂದ ಸಾಗಿದೆ. ಕರಕುಶಲ, ಆಹಾರ, ತಿನಿಸು,ಪುಸ್ತಕ ಪ್ರದರ್ಶನ ಮತ್ತು ಮಾರಾಟಕ್ಕಾಗಿ ರಂಗಾಯಣದ ಅಂಗಳದಲ್ಲಿ ವ್ಯವಸ್ಥಿತ 80ಮಳಿಗೆಗಳು ತಲೆ ಎತ್ತುತ್ತಿವೆ. “ತಾಯಿ’ ಪರಿಕಲ್ಪನೆ ಅಡಿಯಲ್ಲಿ ನಾಟಕಗಳು, ಜಾನಪದ ನೃತ್ಯ, ಸಂಗೀತ, ಭಿತ್ತಿಚಿತ್ರ ಪ್ರದರ್ಶನ, ಸಿನಿಮಾ ಸೇರಿದಂತೆ ರಂಗೋತ್ಸವವನ್ನು ಸಿದ್ಧಗೊಳಿಸಲಾಗಿದೆ. ಅಡ್ಡಂಡ ಸಿ.ಕಾರ್ಯಪ್ಪ, ರಂಗಾಯಣ ನಿರ್ದೇಶಕ.

ಟಾಪ್ ನ್ಯೂಸ್

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

Shimoga; Congress – Statement against Muslims: Sumoto case against KS Eshwarappa

Shimoga; ಕಾಂಗ್ರೆಸ್-ಮುಸ್ಲಿಮರ ವಿರುದ್ದ ಹೇಳಿಕೆ: ಈಶ್ವರಪ್ಪ ವಿರುದ್ದ ಸುಮೋಟೋ ಪ್ರಕರಣ

Karkala: ತಿಂಗಳ ಹಿಂದೆ ಮೃತಪಟ್ಟಿದ್ದ ಪತಿ, ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ತಿಂಗಳ ಹಿಂದೆ ಮೃತಪಟ್ಟ ಪತಿ, ಮನನೊಂದು ಆತ್ಮಹತ್ಯೆಗೆ ಶರಣಾದ ಅಂಗನವಾಡಿ ಶಿಕ್ಷಕಿ

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿಯೂ ವಿದ್ಯುತ್ ಆಘಾತದಿಂದ ಮೃ*ತ್ಯು

Karkala: ಅಣ್ಣನ ತಿಥಿಗೆ ಬಂದಿದ್ದ ತಂಗಿ ವಿದ್ಯುತ್ ಆಘಾತದಿಂದ ಮೃ*ತ್ಯು

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ

Sanju Weds Geetha 2: ಅವನು ಸಂಜು ಅವಳು ಗೀತಾ!; ಹಾಡಿನಲ್ಲಿ ಪ್ರೇಮ ಕಥನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-hunsur

Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ

1-amudaa

MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ‌ 9 ಗಂಟೆ ವಿಚಾರಣೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷ‌ಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ

MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರMUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ

MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ

FIR: ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರಿನಲ್ಲಿ ಎಫ್ಐಆರ್‌

FIR: ಸ್ನೇಹಮಯಿ ಕೃಷ್ಣ ವಿರುದ್ಧ ಮೈಸೂರಿನಲ್ಲಿ ಎಫ್ಐಆರ್‌

MUST WATCH

udayavani youtube

ಹೊಸ ತಂತ್ರಜ್ಞಾನಕ್ಕೆ ತೆರೆದುಕೊಂಡ ತುಳುನಾಡ ಕಂಬಳ

udayavani youtube

ಉಡುಪಿಯ ಶ್ರೀ ಕೃಷ್ಣ ಮಠದಲ್ಲಿ ಕಾರ್ತಿಕ ಲಕ್ಷದೀಪೋತ್ಸವ

udayavani youtube

ಪುಂಗನೂರು ತಳಿಯ ಹಾಲು ಯಾವೆಲ್ಲ ಕಾಯಿಲೆಗಳನ್ನು ಗುಣಪಡಿಸುತ್ತದೆ ?

udayavani youtube

ಪುಸ್ತಕ ನೋಡುವುದಿಲ್ಲ, ಗುರುವಿಲ್ಲ ಆದರೂ ಕಲೆ ತಾನಾಗಿಯೇ ಒಲಿದು ಬಂತು

udayavani youtube

ನನ್ನ ಎದುರು ನೀನು ಬಚ್ಚ ! ಏಕವಚದಲ್ಲಿ ಕಿತ್ತಾಡಿಕೊಂಡ ಲಾಯರ್ ಜಗದೀಶ್ & ಕುಡುಪಲಿ ನಾಗರಾಜ್

ಹೊಸ ಸೇರ್ಪಡೆ

Daali dhananjay starrer Zebra movie

Zebra: ಡಾಲಿ ಜೀಬ್ರಾಗೆ ಮೆಗಾಸ್ಟಾರ್‌ ಸಾಥ್‌

12-gundya

Subramanya: ಗುಂಡ್ಯದಲ್ಲಿ ಮಂಗಳೂರು- ಬೆಂಗಳೂರು ಹೆದ್ದಾರಿ ತಡೆ ನಡೆಸಿದ ಪ್ರತಿಭಟನಾಕಾರರು

ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಲ್ಕರ್ ಹತ್ಯೆ ಆರೋಪಿ: ಮೂಲಗಳು

Mumbai: ಲಾರೆನ್ಸ್ ಬಿಷ್ಣೋಯ್ ಹಿಟ್ ಲಿಸ್ಟ್‌ನಲ್ಲಿ ಶ್ರದ್ಧಾ ವಾಕರ್ ಹತ್ಯೆ ಆರೋಪಿ: ವರದಿ

Kiwi player will be away from Test cricket after the England series

Test: ಇಂಗ್ಲೆಂಡ್‌ ಸರಣಿಯ ಬಳಿಕ ಟೆಸ್ಟ್‌ ಕ್ರಿಕೆಟ್‌ ನಿಂದ ದೂರವಾಗಲಿದ್ದಾರೆ ಕಿವೀಸ್‌ ಆಟಗಾರ

priyanka upendra in life is beautiful movie

Priyanka Upendra: ಬ್ಯೂಟಿಫುಲ್‌ ಲೈಫ್‌ ನಲ್ಲಿ ಪ್ರಿಯಾಂಕಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.