ಗಜರಾಜನಾದ ಬಂಡೀಪುರ ಅರಣ್ಯ ಉದ್ಯಾನ
Team Udayavani, Aug 10, 2023, 3:48 PM IST
ಮೈಸೂರು: ರಾಜ್ಯದಲ್ಲಿ ನಿರಂತರವಾಗಿ ಜಂಬೂ ಸಂತತಿ ವೃದ್ಧಿಸುತ್ತಿದ್ದು, ಈ ಬಾರಿಯ ಆನೆ ಗಣತಿಯಲ್ಲಿ 350 ಆನೆಗಳ ಸಂಖ್ಯೆಗೆ ಏರಿಕೆಯಾಗಿದೆ. ಈ ಮೂಲಕ ಬಂಡೀಪುರ ರಾಷ್ಟ್ರೀಯ ಉದ್ಯಾನವನ ಅಗ್ರಸ್ಥಾನ ಪಡೆದುಕೊಂಡಿದ್ದರೆ, ನಾಗರಹೊಳೆ ಹುಲಿ ಸಂರಕ್ಷಿತಾರಣ್ಯ 2ನೇ ಸ್ಥಾನದಲ್ಲಿದೆ.
ಇತ್ತೀಚೆಗೆ ಬಿಡುಗಡೆಯಾದ ಹುಲಿ ಗಣತಿ ವರದಿಯಲ್ಲಿ ರಾಜ್ಯದಲ್ಲೇ ಅತಿ ಹೆಚ್ಚು ಹುಲಿಗಳಿರುವ ಪಟ್ಟ ಹೊತ್ತಿದ್ದ ಬಂಡೀಪುರ ಹುಲಿಸಂರಕ್ಷಿತಾರಣ್ಯ ಪ್ರದೇಶವೀಗ ಅತಿಹೆಚ್ಚು ಆನೆಗಳನ್ನೂ ಹೊಂದಿರುವ ಅರಣ್ಯ ಪ್ರದೇಶ ಎಂಬ ಖ್ಯಾತಿ ಪಡೆದುಕೊಂಡಿದೆ.
ವಿಶ್ವ ಆನೆ ದಿನ (ಆ.12) ಆಚರಣೆಗೆ ಮೂರು ದಿನವಿರುವಾಗಲೇ ರಾಜ್ಯ ಮಟ್ಟದ ಆನೆ ಗಣತಿ ವರದಿ ಬಿಡುಗಡೆ ಮಾಡಲಾಗಿದ್ದು, ಅದರಲ್ಲಿ ರಾಜ್ಯದ ಎÇÉಾ ಅರಣ್ಯಗಳಿಗಿಂತ ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ ಪ್ರಥಮ ಸ್ಥಾನಕ್ಕೆ ಭಾಜನವಾಗಿದೆ. 2023ರ ಮೇ 17ರಿಂದ 19ರವರೆಗೆ 23 ವಿಭಾಗದಲ್ಲಿ ನಡೆದ ಆನೆ ಗಣತಿಯಲ್ಲಿ 5914 ರಿಂದ 6877 ಆನೆಗಳು ಕಂಡು ಬಂದಿದ್ದು, ಅದರಲ್ಲಿ ರಾಜ್ಯದ ಆನೆಗಳ ಸಂಖ್ಯೆಯಲ್ಲಿ 6,395 ಎಂದು ಗುರುತಿಸಲಾಗಿದೆ. ರಾಜ್ಯದ 5 ಹುಲಿ ಸಂರಕ್ಷಿತ ಪ್ರದೇಶ, ವನ್ಯಧಾಮ ಸೇರಿದಂತೆ 23 ವಲಯಗಳಲ್ಲಿ ನಡೆಸಿದ ಗಣತಿಯಲ್ಲಿ ಮೊದಲ ನಾಲ್ಕು ಸ್ಥಾನಗಳು ಮೈಸೂರು-ಚಾಮರಾಜನಗರ ಜಿಲ್ಲಾ ವ್ಯಾಪ್ತಿಯಲ್ಲಿರುವ ಮೂರು ಹುಲಿ ಸಂರಕ್ಷಿತ ಪ್ರದೇಶ ಹಾಗೂ ಒಂದು ವನ್ಯಧಾಮ ತನ್ನದಾಗಿಸಿಕೊಂಡಿದೆ.
ಈ ಬಾರಿಯ ಆನೆ ಗಣತಿಯು ಭಾರತೀಯ ವಿಜ್ಞಾನ ಸಂಸ್ಥೆ(ಐಐಎಸ್ಸಿ) ತಾಂತ್ರಿಕ ನೆರವಿನೊಂದಿಗೆ ಅರಣ್ಯ ಇಲಾಖೆ ಮೂರು ವಿಧಾನದಲ್ಲಿ ಗಣತಿಯನ್ನು ನಡೆಸಿತ್ತು. ಮೆ.17ರಂದು 5.0 ಚ.ಕಿ.ಮಿ ವ್ಯಾಪ್ತಿಯ ಬ್ಲಾಕ್‌ಗಳಲ್ಲಿ ಹಾಗೂ ಬೀಟ್ ಸಂಖ್ಯೆಯಲ್ಲಿ ಶೇ.30ರಿಂದ 50 ಪ್ರದೇಶದಲ್ಲಿ ನೇರ ಎಣಿಕೆ ಕಾರ್ಯ ನಡೆಸಲಾಗಿತ್ತು. ಮೇ 18ರಂದು 2 ಕಿ.ಮಿ ಉದ್ದದ ಟ್ರಾಂಜಾಕ್ಟ್ ರೇಖೆಗಳಲ್ಲಿ ಸಮೀಕ್ಷೆ ನಡೆಸಿ, ಆನೆಗಳ ಲದ್ದಿ ಆಧಾರದಲ್ಲಿ ಸಮೀಕ್ಷೆ ನಡೆಸಲಾಗಿತ್ತು. ಮೇ.19ರಂದು ಕೆರೆ, ಕಟ್ಟೆ(ವಾಟರ್ ಹೋಲ…) ಬಳಿ ಸಮೀಕ್ಷೆ ನಡೆಸಿ, ಆನೆಗಳ ಸಂಖ್ಯೆ, ಅವುಗಳ ಚಲನವಲನ, ಲಿಂಗದ ಬಗ್ಗೆ ಮಾಹಿತಿ ಕಲೆ ಹಾಕಲಾಗಿತ್ತು.
ಗಣತಿ ವೇಳೆ ಒಟ್ಟು ಗುರುತಿಸಲ್ಪಟ್ಟ 32 ವಿಭಾಗದಲ್ಲಿ ಆನೆ ಗಣತಿ ನಡೆಸಲಾಗಿತ್ತಾದರೂ, 23 ವಿಭಾಗದಲ್ಲಿ ಮಾತ್ರ ಆನೆಗಳ ಇರುವಿಕೆ ದೃಢಪಟ್ಟಿತ್ತು. ಈ 23 ವಿಭಾಗದಲ್ಲಿ 18,975 ಚದರ ಕಿ.ಮೀ. ವ್ಯಾಪ್ತಿಯ ಅರಣ್ಯ ಪ್ರದೇಶವಿದ್ದು, ಅವುಗಳಲ್ಲಿ 6,104 ಚದರ ಕಿ.ಮೀ. ವ್ಯಾಪ್ತಿಯಲ್ಲಿ ಮಾತ್ರ ಸಮೀಕ್ಷೆ ನಡೆಸಲಾಗಿತ್ತು.
ತರಬೇತಿ ಪಡೆದ ಅರಣ್ಯ ಸಿಬ್ಬಂದಿ ನಡೆಸಿದ ಈ ಆನೆ ಗಣತಿಯಲ್ಲಿ ನೇರ ಸಮೀಕ್ಷೆಯಲ್ಲಿ 2219 ಆನೆಗಳು ಗೋಚರಿಸಿದ್ದವು. ಅಂತಿಮವಾಗಿ ಮೂರು ಹಂತದ ಗಣತಿಯಲ್ಲಿ ರಾಜ್ಯದಲ್ಲಿ 5914 ರಿಂದ 6877 ಆನೆಗಳಿರಬಹುದು ಎಂದು ಅಂದಾಜಿಸಿದ್ದು, 0.34 ಸಾಂದ್ರತೆಯಂತೆ ರಾಜ್ಯದಲ್ಲಿ ಸರಾಸರಿ 6,395 ಆನೆಗಳಿವೆ ಎಂದು ಘೋಷಿಸಿದ್ದಾರೆ.
ಎಲ್ಲೆಲ್ಲಿ, ಎಷ್ಟು ಆನೆಗಳು?:
ಬಂಡೀಪುರ 1,116, ನಾಗರಹೊಳೆಯಲ್ಲಿ 831, ಮಹದೇಶ್ವರ ಬೆಟ್ಟ 706, ಬಿಳಿಗಿರಿ ರಂಗನಾಥ ಹುಲಿ ಸಂರಕ್ಷಿತ ಪ್ರದೇಶದಲ್ಲಿ 619, ಮಡಿಕೇರಿ ಪ್ರಾದೇಶಿಕ ವಿಭಾಗ 214, ಮಡಿಕೇರಿ ವನ್ಯಜೀವಿ ವಿಭಾಗದಲ್ಲಿ 113, ಹಾಸನ ವಿಭಾಗದಲ್ಲಿ 66, ವಿರಾಜಪೇಟೆ ವಿಭಾಗದಲ್ಲಿ 58 ಆನೆಗಳಿವೆ. ವರ್ಷವಾರು ಗಣತಿ ವಿವರ: 2010ರಲ್ಲಿ ನಡೆದ ಗಣತಿಯಲ್ಲಿ ಕರ್ನಾಟಕದಲ್ಲಿ 5,740 ಆನೆಗಳಿದ್ದರೆ, 2012ರ ಗಣತಿಯಲ್ಲಿ 6,072, 2017ರ ಗಣತಿಯಲ್ಲಿ 6,049 ಆನೆಗಳು ಕಂಡು ಬಂದಿದ್ದವು. ಈ ಸಾಲಿನ ಗಣತಿಯಲ್ಲಿ 6395 ಆನೆಗಳು ಕಂಡು ಬಂದಿವೆ.
ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದಲ್ಲಿನ ಸಿಬ್ಬಂದಿ ಮತ್ತು ಅಧಿಕಾರಿ ವರ್ಗದ ಪರಿಶ್ರಮದಿಂದ ಹಲವು ಹಿರಿಮೆ ಲಭಿಸಿದೆ. ಎಲ್ಲದಕ್ಕಿಂತ ಮುಖ್ಯವಾಗಿ ಅರಣ್ಯದಂಚಿನ ಗ್ರಾಮದ ಜನರ ಸಹಕಾರದಿಂದ ವನ್ಯಜೀವಿಗಳ ಸಂರಕ್ಷಣೆ ಸಾಧ್ಯವಾಗಿದೆ. ಅರಣ್ಯ ಸಂಪತ್ತಿನ ಸಂರಕ್ಷಣೆಗೆ ಕೈಗೊಂಡ ಕ್ರಮದಿಂದಾಗಿ ಹುಲಿ, ಆನೆಗಳ ಸಂಖ್ಯೆ ಹೆಚ್ಚಳಕ್ಕೆ ಕಾರಣವಾಗಿದೆ.– ಡಾ|ಪಿ. ರಮೇಶ್ ಕುಮಾರ್, ನಿರ್ದೇಶಕ, ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
ಕಲಬುರಗಿ- ಮೈಸೂರಲ್ಲಿ ನಿಮ್ಹಾನ್ಸ್ ಮತ್ತು ಡಯಾಬಿಟಾಲಜಿ ಘಟಕ ಸ್ಥಾಪನೆಗೆ ಕ್ರಮ: ಸಿಎಂ ಭರವಸೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.