ಬಂಡೀಪುರ ಕಾಡಿಗಿಟ್ಟ ಬೆಂಕಿಯಿಂದ ಅಪಾರ ನಷ್ಟ


Team Udayavani, Feb 22, 2017, 12:36 PM IST

mys6.jpg

ಬೇಸಿಗೆ ಅರಣ್ಯ ಸಂಪತ್ತಿಗೆ ಆಪತ್ತಿನ ಕಾಲ. ಅರಣ್ಯ ರಕ್ಷಣೆಯ ಹೊಣೆ ಹೊತ್ತಿರುವ ಅರಣ್ಯ ಇಲಾಖೆ ಬೇಸಿಗೆ ಕಳೆಯುವವರೆಗೆ ಮೈಯೆಲ್ಲಾ ಕಣ್ಣಾಗಿಸಿಕೊಳ್ಳಬೇಕಾಗುತ್ತದೆ. ಹೀಗಾಗಿಯೇ ಬೇಸಿಗೆ ಆರಂಭಕ್ಕೂ ಮುನ್ನವೇ ಅರಣ್ಯಗಳಲ್ಲಿ ಬೆಂಕಿ ರೇಖೆ (ಫೈರ್‌ಲೇನ್‌) ಮಾಡಿಕೊಳ್ಳಲಾಗುತ್ತದೆ. ಆದರೂ ಪ್ರತಿ ವರ್ಷ ಅರಣ್ಯಗಳಿಗೆ ಬೆಂಕಿ ಬೀಳುವುದು ತಪ್ಪುತ್ತಿಲ್ಲ. ಕಾಡಿನ ಬೆಂಕಿಗೆ ಬಿದಿರು ಪರಸ್ಪರ ಉಜ್ಜುವಿಕೆಯಿಂದ ಉಂಟಾದ ಕಿಡಿ, ಸಿಡಿಲಿನ ಹೊಡೆತದಿಂದ ತಾಗಿದ ಕಿಡಿ ಕಾರಣ ಎನ್ನುವ ಮಾತುಗಳಿದ್ದರೂ ಕಾಡಿನ ಬೆಂಕಿಗೆ ಉದ್ದೇಶಪೂರ್ವಕ, ದುರುದ್ದೇಶ ಪೂರ್ವಕ ಕಾರಣಗಳು ಜನರತ್ತಲೇ ಬೊಟ್ಟು ಮಾಡುತ್ತವೆ.

ಮೈಸೂರು: ಬಂಡೀಪುರ ಹುಲಿ ಸಂರಕ್ಷಿತ ಅರಣ್ಯ ಪ್ರದೇಶದ ಕಾಡಿಗಿಟ್ಟ ಬೆಂಕಿಯಿಂದ ತೇಗ, ಬೀಟೆ, ಹೊನ್ನೆ, ಶ್ರೀಗಂಧ ಸೇರಿದಂತೆ ಕೋಟ್ಯಂತರ ಮೌಲ್ಯದ ಅಮೂಲ್ಯವಾದ ಮರುಮುಟ್ಟುಗಳು ಭಸ್ಮವಾಗಿರುವುದು ಮಾತ್ರವಲ್ಲ. ಬೆಲೆಯೇ ಕಟ್ಟಲಾಗದ ಸಾವಿರಾರು ಅಪರೂಪದ ಪ್ರಭೇದದ ಹಕ್ಕಿ, ಪಕ್ಷಿ, ಸಸ್ತನಿ ಸೇರಿದಂತೆ ಸೂಕ್ಷ್ಮಜೀವಿಗಳು ಸುಟ್ಟುಹೋಗಿವೆ ಎಂದು ವನ್ಯಜೀವಿ ಪ್ರಿಯರು ಆತಂಕ ವ್ಯಕ್ತಪಡಿಸುತ್ತಾರೆ.

ಕಾಡಿನ ಬೆಂಕಿಗಳು ಅಪಾರ ಪ್ರಮಾಣದಲ್ಲಿ ಕಾಡನ್ನು ಸುಟ್ಟು ಕರಕಲು ಮಾಡಿ ಬೆಂಗಾಡನ್ನಾಗಿಸುತ್ತದೆ. ಭಾರತದಲ್ಲಿ ಉಂಟಾಗುವ ಕಾಡಿನ ಬೆಂಕಿಗಳು ಸಾಮಾನ್ಯವಾಗಿ ನೆಲಮಟ್ಟದಲ್ಲೇ ವ್ಯಾಪಿಸುತ್ತದೆ. ಆದರೆ, ಸಮಶೀತೋಷ್ಣ ವಲಯದ ಕಾಡುಗಳಲ್ಲಿ ಉಂಟಾಗುವ ಗಗನಚುಂಬಿ ಮರದ ತುದಿ ಹೊತ್ತಿ ಉರಿಯುವ ಮುಕುಟ ಬೆಂಕಿ ನಮ್ಮ ಕಾಡುಗಳಲ್ಲಿ ಕಂಡು ಬರುವುದು ಅಪರೂಪ.

ಆದರೆ, ಕಳೆದ ಮೂರ್‍ನಾಲ್ಕು ವರ್ಷಗಳ ಸತತ ಬರ ಪರಿಸ್ಥಿತಿಯಿಂದಾಗಿ ಅರಣ್ಯ ಪ್ರದೇಶದ ಮರಗಳೆಲ್ಲ ಬೇಸಿಗೆ ಆರಂಭದಲ್ಲೇ ತರಗೆಲೆಗಳಂತೆ ಒಣಗಿ ನಿಂತಿದ್ದು, ಗಾಳಿಯ ತೀವ್ರತೆ ಹೆಚ್ಚಿದಂತೆ ಕಾಡ್ಗಿಚ್ಚು ಯಾರ ಅಳತೆಗೂ ನಿಲುಕದಂತೆ ವ್ಯಾಪಿಸುತ್ತಿದೆ ಎನ್ನುತ್ತಾರೆ ಕಳೆದ ನಾಲ್ಕು ದಿನಗಳಿಂದ ಬಂಡೀಪುರ ಅರಣ್ಯದ ವಿವಿಧ ಭಾಗಗಳಲ್ಲಿ ಉಂಟಾಗಿರುವ ಕಾಡ್ಗಿಚ್ಚಿನ ತೀವ್ರತೆ ಕಂಡಿರುವ ಪ್ರತ್ಯಕ್ಷದರ್ಶಿಗಳು.

ನಾಲ್ಕು ದಿನಗಳ ಕಾಡಿನ ಬೆಂಕಿಯಿಂದ ಉಂಟಾ ಗಿರುವ ಮರಮುಟ್ಟುಗಳ ಮೌಲಿಕ ನಷ್ಟ ಊಹಿಸಲೂ ಅಸಾಧ್ಯ. ಇದಕ್ಕಿಂತಲೂ ಮಿಗಿಲಾಗಿ ಜೈವಿಕ ಹಾಗೂ ಪರಿಸರ ವಿನಾಶವೂ ಅಗಾಧ ಪ್ರಮಾಣದಲ್ಲಾಗಿದೆ. ಕಾಡ್ಗಿಚ್ಚಿನಿಂದ ಸುಟ್ಟು ಕರಕಲಾದ ಅರಣ್ಯ ಪ್ರದೇಶಗಳು ಪುನಾ ಸಹಜ ಸ್ಥಿತಿಗೆ ಬರಲಾಗದಷ್ಟು ಭೀಕರ ಪರಿಣಾಮ ಎದುರಿಸುತ್ತವೆ.

ಇದಕ್ಕೆ ತಾಜಾ ಉದಾಹರಣೆ 2012ರಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಮತ್ತಿಗೋಡು ವಲಯದಲ್ಲಿ ಕಾಡ್ಗಿಚ್ಚಿನಿಂದ ಈ ಭಾಗದ ಅರಣ್ಯಕ್ಕೆ ಉಂಟಾದ ಗಾಯ ಇನ್ನೂ ಮಾಸಿಲ್ಲ ಎಂಬುದಕ್ಕೆ ತಾಜಾ ಉದಾಹರಣೆಯಾಗಿ ಮೈಸೂರು- ವಿರಾಜಪೇಟೆ ಹೆದ್ದಾರಿ ಬದಿಯಲ್ಲೇ ಗಗನಚುಂಬಿ ಮರಗಳು ಸುಟ್ಟು ಕರಕಲಾಗಿ ಇಂದಿಗೂ ಹಸಿರಾಗದೆ ಇರುವುದು ಕಾಡಿನ ಬೆಂಕಿಯ ನಷ್ಟದ ಅಂದಾಜನ್ನು ಹೇಳುತ್ತದೆ.

ನೆಲಮಟ್ಟದ ಬೆಂಕಿ ಮರ-ಗಿಡಗಳನ್ನೆಲ್ಲ ಭಾಗಶಃ ಸುಟ್ಟು ಅವು ಮತ್ತೆ ಚಿಗುರದಂತೆ ಮಾಡುವುದಲ್ಲದೆ, ಆ ಭಾಗದ ಕಾಡಿನಲ್ಲಿ ತರಗೆಲೆಗಳೇ ಇಲ್ಲದಂತೆ ಮಾಡಿಬಿಡುತ್ತದೆ. ನಿಧಾನಗತಿಯಲ್ಲಿ ನೆಲಮಟ್ಟದ ಅರಣ್ಯವನ್ನು ಆಹುತಿ ತೆಗೆದುಕೊಳ್ಳುವ ಬೆಂಕಿ ಅಪರೂಪದ ಪ್ರಭೇದದ ಹಕ್ಕಿ-ಪಕ್ಷಿಗಳು, ಸಸ್ತನಿಗಳು, ಸರೀಸೃಪಗಳು, ಕ್ರಿಮಿಕೀಟಗಳು ಸೇರಿದಂತೆ ಅಸಂಖ್ಯಾತ ಸೂಕ್ಷ್ಮಜೀವಿಗಳು ಸುಟ್ಟು ಹೋಗಿರುವುದಲ್ಲದೆ,

ನೆಲದಲ್ಲಿ ಗೂಡು ಕಟ್ಟುವ ಹಕ್ಕಿಗಳ ಮರಿ ಹಾಗೂ ಮೊಟ್ಟೆಗಳು, ಪ್ರಾಣಿಗಳ ಮರಿಗಳು, ನಿಧಾನಗತಿಯ ವನ್ಯಜೀವಿಗಳು, ಸರೀಸೃಪಗಳು ತಪ್ಪಿಸಿಕೊಳ್ಳುವ ದಾರಿಕಾಣದೆ ಬೆಂಕಿಗೆ ಆಹುತಿಯಾಗಿವೆ ಮಾತ್ರವಲ್ಲ, ನೆಲದ ಮೇಲೆ ಉದುರಿದ ಬೀಜಗಳನ್ನೆಲ್ಲಾ ಸುಟ್ಟು ಹಾಕಿರುವುದರಿಂದ ಈ ಭಾಗದಲ್ಲಿ ಸಸ್ಯಗಳ ಪುನರುತ್ಪತ್ತಿಯೇ ಸಾಧ್ಯವಿಲ್ಲ ದಂತಹ ಪರಿಸ್ಥಿತಿ ನಿರ್ಮಾಣವಾಗಿದೆ.

ಜತೆಗೆ ಸಸ್ಯಹಾರಿ ಪ್ರಾಣಿಗಳ ಮೇವನ್ನು ಸುಟ್ಟು ಮೇವಿಗೆ ಯೋಗ್ಯವಲ್ಲದ ಲಂಟಾನ- ಯುಪಟೋರಿಯಂ ನಂತಹ ಕಳೆಗಳು ಆವರಿಸಲು ದಾರಿ ಮಾಡಿಕೊಟ್ಟಿದೆ ಕಾಡಿನ ಈ ಬೆಂಕಿ. ಲಂಟಾನಾ- ಯುಪಟೋರಿಯಂ ನಂತಹ ಕಳೆಗಳು ಕಾಡ್ಗಿಚ್ಚಿನಿಂದ ಉಂಟಾದ ಬೂದಿಯನ್ನೇ ಉಪಯೋಗಿಸಿಕೊಂಡು ಚೆನ್ನಾಗಿ ಬೆಳೆಯುವ ಗುಣ ಹೊಂದಿರುವುದರಿಂದ ಬಂಡೀಪುರ ಅರಣ್ಯದ ಬಹುತೇಕ ಭಾಗಗಳಲ್ಲಿ ದಿಂಡಗ, ಬ್ಯಾಟೆ ಮುಂತಾದ ಸಸ್ಯಗಳೇ ಆಕ್ರಮಿಸಿವೆ. ಇದೂ ಕೂಡ ಬಂಡೀಪುರದಲ್ಲಿ ಕಾಡ್ಗಿಚ್ಚು ಅರಣ್ಯ ಇಲಾಖೆ ಸಿಬ್ಬಂದಿಯ ಅಂಕೆಗೆ ಸಿಗದೆ ವ್ಯಾಪಿಸಲು ಕಾರಣವಾಗಿದೆ ಎನ್ನುತ್ತಾರೆ ಪರಿಸರ ತಜ್ಞರು.

ವಿವಿಧ ಉದ್ದೇಶಗಳಿಗೆ…
ಸಾಮಾನ್ಯವಾಗಿ ಬೇಸಿಗೆಯ ಪ್ರಖರತೆ ಹೆಚ್ಚಾಗುವ ಫೆಬ್ರವರಿಯಿಂದ ಮೇ ತಿಂಗಳು ಉಷ್ಣ ವಲಯದ ಕಾಡುಗಳಲ್ಲಿ ತರಗೆಲೆಗಳಿಂದ ಮುಚ್ಚಿಕೊಳ್ಳುವುದರಿಂದ ಇಡೀ ಕಾಡನ್ನು ಆಹುತಿ ತೆಗೆದುಕೊಳ್ಳುತ್ತದೆ. ನಿತ್ಯ ಜೀವನಕ್ಕೆ ಅಗತ್ಯವಾದ ಉರುವಲು ಹೊಂದಿಸಲೋ, ಜಾನುವಾರುಗಳ ಮೇವಿಗಾಗಿ ಹೊಸ ಹುಲ್ಲು ಬೆಳೆಯಲಿ ಎಂಬ ಕಾರಣದಿಂದ, ಜೀವನೋಪಾಯಕ್ಕಾಗಿ ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವವರು ತರಗೆಲೆ, ಪೊದೆಗಳೆಲ್ಲಾ ನಾಶವಾದರೆ ಬೀಜಗಳು, ಜಿಂಕೆಯ ಕೊಂಬುಗಳು ಸುಲಭವಾಗಿ ಸಿಗುತ್ತವೆ ಎಂಬ ಕಾರಣಕ್ಕೋ,

ಜೇನು ಸಂಗ್ರಹಿಸುವವರು ಜೇನ್ನೋಣವನ್ನು ಓಡಿಸಲು, ಧೂಪ ಸಂಗ್ರಹಿಸುವವರು ಉದ್ದೇಶ ಪೂರ್ವಕ ಇಲ್ಲವೇ ಅಜಾಗರೂಕತೆಯಿಂದ ಕಾಡಿಗೆ ಬೆಂಕಿ ಇಡುತ್ತಾರೆ. ಕಳ್ಳ ಬೇಟೆ, ಮರ ಕಳ್ಳ ಸಾಗಣೆಗೆ ಅಡ್ಡಿಪಡಿಸುವ ಅರಣ್ಯ ಇಲಾಖೆ ಅಧಿಕಾರಿಗಳ ಮೇಲೆ ಸೇಡು ತೀರಿಸಿಕೊಳ್ಳುವ ಸಲುವಾಗಿಯೇ ಇಡುವ ಬೆಂಕಿ, ಅಜಾಗರೂಕ ಪ್ರವಾಸಿಗರು, ಅರಣ್ಯದಂಚಿನ ಗ್ರಾಮಸ್ಥರು ಬಿಸಾಡುವ ಬೀಡಿ-ಸಿಗರೆಟುಗಳ ಆರಿಸದ ತುಂಡುಗಳ ಸಣ್ಣ ಕಿಡಿಯೂ ಬೆಂಕಿಯಾಗಿ ಕಾಡನ್ನು ಆಹುತಿ ತೆಗೆದುಕೊಳ್ಳಬಲ್ಲವು.

ಬಂಡಿಪುರ ರಾಷ್ಟ್ರೀಯ ಉದ್ಯಾನವನದಲ್ಲಿ ಕಾಡ್ಗಿಚ್ಚು ಹರಡಿರುವುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಬಗ್ಗೆ ಅಧಿಕಾರಿಗಳೊಡನೆ ಚರ್ಚೆ ನಡೆಸಿ, ತನಿಖೆ ನಡೆಸಲು ಅಧಿಕಾರಿಗಳ ಸಮಿತಿ ರಚಿಸಲಾಗುವುದು.
-ಬಿ.ರಮಾನಾಥ ರೈ, ಅರಣ್ಯ ಸಚಿವ

* ಗಿರೀಶ್‌ ಹುಣಸೂರು

ಟಾಪ್ ನ್ಯೂಸ್

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

KSRTC: ಚಾರ್ಮಾಡಿ ಘಾಟಿಯಲ್ಲಿ ಕೆಟ್ಟು ನಿಂತ ಸರ್ಕಾರಿ ಬಸ್, ಪ್ರಯಾಣಿಕರಲ್ಲಿ ಆತಂಕ…!

1-frrr

L&T; ನೌಕರರು ರವಿವಾರವೂ ಕೆಲಸ ಮಾಡಬೇಕು, ವಾರಕ್ಕೆ 90 ಗಂಟೆ ಕೆಲಸ!!

1-naxal

NIA ವಿಶೇಷ ನ್ಯಾಯಾಲಯ; ಶರಣಾದ ಆರು ನಕ್ಸಲರಿಗೆ ಜ.31ರವರೆಗೆ ನ್ಯಾಯಾಂಗ ಬಂಧನ

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!

Dog Love: ಮನೆ ಮಗನಂತಿರುವ ಈ ಶ್ವಾನ ಹಸುಗಳನ್ನು ಮೇಯಿಸಲು ಎಕ್ಸ್ ಪರ್ಟ್!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

5-hunsur

Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ

MLA–Harish-gowda

Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್‌ ಗೌಡ

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಮೃತ್ಯು

Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು

Kharajola

Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ

DALAI-LAMA

ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ

MUST WATCH

udayavani youtube

ಕೇರಳದ ಉತ್ಸವದ ಆನೆ ರೌದ್ರಾವತಾರ: ಹಲವರಿಗೆ ಗಾಯ | ವಿಡಿಯೋ ಸೆರೆ

udayavani youtube

ಫೋನ್ ಪೇ ಹೆಸರಿನಲ್ಲಿ ಹೇಗೆಲ್ಲಾ ಮೋಸ ಮಾಡುತ್ತಾರೆ ನೋಡಿ !

udayavani youtube

ನಿಮ್ಮ ತೋಟಕ್ಕೆ ಬೇಕಾದ ಗೊಬ್ಬರವನ್ನು ನೀವೇ ತಯಾರಿಸಬೇಕೆ ? ಇಲ್ಲಿದೆ ಸರಳ ಉಪಾಯ

udayavani youtube

ಮೈಲಾರಲಿಂಗ ಸ್ವಾಮಿ ಹೆಸರಿನಲ್ಲಿ ಒಂಟಿ ಮನೆಗಳೇ ಇವರ ಟಾರ್ಗೆಟ್ |

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

ಹೊಸ ಸೇರ್ಪಡೆ

Firefighters rescue horse that fell into canal

Shimoga; ಕಾಲುವೆಗೆ ಬಿದ್ದ ಕುದುರೆಯನ್ನು ರಕ್ಷಣೆ ಮಾಡಿದ ಅಗ್ನಿಶಾಮಕ ಸಿಬ್ಬಂದಿ

SUNIL-KUMAR

Congress government ಗಾಂಧಿವಾದದಿಂದ‌ ಮಾವೋವಾದಕ್ಕೆ ಹೊರಳಿದೆ: ಸುನಿಲ್ ಕುಮಾರ್ ಕಿಡಿ

Katapady: ಕಾರ್ಮಿಕ ಕುಸಿದು ಬಿದ್ದು ಸಾವು

Katapady: ಕಾರ್ಮಿಕ ಕುಸಿದು ಬಿದ್ದು ಸಾವು

arrested

Delhi Police; ಬೆಂಗಳೂರಿನಲ್ಲಿ ಇಬ್ಬರು ಶಾರ್ಪ್‌ಶೂಟರ್‌ಗಳ ಬಂಧನ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Hanchikatte: ಆ್ಯಂಬುಲೆನ್ಸ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಢಿಕ್ಕಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.