ಮಾರ್ಧನಿಸಿದ ಬಾಂಗ್ಲಾ ವಲಸಿಗರ ಪ್ರಕರಣ


Team Udayavani, Feb 11, 2017, 12:19 PM IST

mys6.jpg

ನಂಜನಗೂಡು: ಸ್ಥಳೀಯರಿಗಿಲ್ಲದ ಮೂಲ ಭೂತ ಸೌಲಭ್ಯಗಳಾದ ಆಧಾರ್‌, ಪಡಿತರ ಚೀಟಿ, ಭಾಗ್ಯಲಕ್ಷ್ಮೀ ಬಾಂಡ್‌ ಸಹ ಬಾಂಗ್ಲಾದ ವಲಸಿಗರಿಗೆ ಸುಲಭವಾಗಿ ಸಿಗುತ್ತದೆ ಎಂಬ ವಿಷಯ ತಾಲೂಕು ಪಂಚಾಯಿತಿಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮತ್ತೆ ಮಾರ್ಧನಿಸಿತು.

ತಾಪಂ ಆವರಣದಲ್ಲಿ ನಡೆದ ಸಭೆಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಶಿವಣ್ಣ ವಿಷಯ ಪ್ರಾಸ್ತಾಪಿಸಿ 4 ಸಭೆಗಳಿಂದ ಕೇಳುತ್ತಿದ್ದೇನೆ. ಸ್ಥಳೀಯರಿಗೆ ಸುಲಭವಾಗಿ ಸಿಗದ ಮತದಾನದ ಹಕ್ಕು, ಪಡಿತರ ಚೀಟಿ, ಆಧಾರ ವಲಸಿಗರಿಗೆ ಸಿಕ್ಕಿದ್ದು ಹೇಗೆ? ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು. ಎಷ್ಟು ಜನ ವಲಸಿಗರಿಗೆ ಮೂಲಭೂತ ಸೌಲಭ್ಯಗಳನ್ನು ಅಕ್ರಮವಾಗಿ ನೀಡಲಾಗಿದೆ ಎಂದು ಪ್ರಶ್ನಿಸಿದ್ದಕ್ಕೆ ಉತ್ತರಿಸಲು ಅಧಿಕಾರಿಗಳು ತಡಬಡಾಯಿಸಿದರು.

ಸೌಲಭ್ಯಗಳನ್ನು ದಾಖಲೆ ಇಲ್ಲದೆ ನೀಡಲಾಗುವುದಿಲ್ಲ ಎಂಬ ಆಹಾರ ಇಲಾಖೆ ಅಧಿಕಾರಿ ರಾಜೇಂದ್ರ ಪ್ರಸಾದ್‌ ಹಾಗೂ ಮಂಜುನಾಥ ಅವರನ್ನು ಗ್ರೇಡ್‌ 2 ತಹಶೀಲ್ದಾರ್‌ ಚಿಗರಿ ಬೆಂಬಲಿಸಿದರು. ಆಗ ಮಧ್ಯ ಪ್ರವೇಶಿಸಿದ ತಾಪಂ ಸದಸ್ಯ ಸಿದ್ದರಾಜೇಗೌಡ ಹಾಗೂ ಅಧ್ಯಕ್ಷ ಮಹದೇವಪ್ಪ ತಾಲೂಕು ಕಚೇರಿಯಲ್ಲಿ ಹಣ ನೀಡಿದರೆ ಏನು ಬೇಕಾದರೂ ಸಿಗುತ್ತದೆ ಎಂದು ಕಂದಾಯ ಇಲಾಖೆಯನ್ನು ತೀವ್ರವಾಗಿ ಟೀಕಿಸಿದರು.

ಇಲ್ಲಿನ ಕೈಗಾರಿಕಾ ವಲಯದ ಪಾದರಕ್ಷೆ, ಪ್ಲೆ„ ಉಡ್‌, ಹಾಗೂ ಗ್ರಾನೆಟ್‌ ಕಾರ್ಖಾನೆಗಳಲ್ಲಿ ಸಹಸ್ರಾರು ಬಾಂಗ್ಲಾ ದೇಶಿಯರು ಅಕ್ರಮವಾಗಿ ವಾಸವಾಗಿದ್ದಾರೆ ಎಂದ ಶಿವಣ್ಣ, ತುರ್ತಾಗಿ ಪೊಲೀಸ್‌ ಹಾಗೂ ಕಂದಾಯ ಅಧಿಕಾರಿಗಳ ನೇತೃತ್ವದ ಸಮಿತಿ ರಚಿಸಿ, ಕೆಲಸಗಾರರ ಮೂಲ ಪತ್ತೆ ಹಚ್ಚಿ ಅವರಿಗೆ ನೀಡಿರುವ ಎಲ್ಲಾ ಮೂಲಭೂತ ಸೌಲಭ್ಯಗಳನ್ನು ರದ್ದು ಗೊಳಿಸಿ ಎಂದರು.

ನಮ್ಮಲ್ಲಿ ವಾಸವಿಲ್ಲ ಎಂದು ಪಿಡಿಒ ಶರಾ ಬರೆದರೆ, ತಾಲೂಕು ಮಟ್ಟದ ಅಧಿಕಾರಿಗಳು ಅಲ್ಲೆ ಅವರು ವಾಸವಿದ್ದಾರೆ ಎಂದು ದೃಢೀಕರಣ ಪತ್ರ ನೀಡುತ್ತಾರೆ. ಇದು ಹೇಗೆ ಸಾಧ್ಯ ಎಂದ ಅಧ್ಯಕ್ಷ ಮಹದೇವಪ್ಪ ಹಾಗೂ ಸದಸ್ಯ ಸಿದ್ದರಾಜೇಗೌಡ, ಇಲಾಖೆಯ ಕಾರ್ಯವೈಖರಿ ಕುರಿತು ಆಕ್ರೋಶ ವ್ಯಕ್ತ ಪಡಿಸಿದರು.

ಕಾನೂನು ಕ್ರಮಕ್ಕೆ ಅವಕಾಶವಿಲ್ಲ: ಹುಣಸನಾಳು ಗ್ರಾಮದಲ್ಲಿ ಅಂಗನವಾಡಿ ಸಹಾಯಕಿ ಆಹಾರ ಸಾಮಗ್ರಿಗಳನ್ನು ಅಕ್ರಮವಾಗಿ ಸಾಗಿಸುತ್ತಿರುವುದನ್ನು ಪತ್ತೆ ಹಚ್ಚಿದ್ದು, ಏನು ಕ್ರಮ ಕೈಗೊಳ್ಳಲಾಗಿದೆ ಎಂದು ಅಧ್ಯಕ್ಷರ ಪ್ರಶ್ನೆಗೆ ಉತ್ತರಿಸಿದ ಸಿಡಿಪಿಒ ಇಲಾಖೆ ಅಧಿಕಾರಿ ಸರೋಜಮ್ಮ, ಅವರಿಗೆ ನೋಟಿಸ್‌ ನೀಡಲಾಗಿದೆ. ಅವರ ಮೇಲೆ ಕಾನೂನು ಕ್ರಮಕ್ಕೆ ಅವಕಾಶವಿಲ್ಲ ಎಂದು ಜಾರಿಕೆಯ ಉತ್ತರ ನೀಡಿದರು. ಇದನ್ನು ಒಪ್ಪದ ತಾಪಂ ಇಒ ಅಧಿಕಾರಿ ರೇವಣ್ಣ ಕಾನೂನಿನಲ್ಲಿ ಅವಕಾಶವಿದೆ ಕ್ರಮ ಕೈಗೊಳ್ಳಿ ಎಂದರು.

ಟಾಪ್ ನ್ಯೂಸ್

Shimoga; ಈ ಸರ್ಕಾರಕ್ಕೆ ಶೀಘ್ರ ಜನ ಸರಿಯಾದ ಪಾಠ ಕಲಿಸುತ್ತಾರೆ: ಬಿ.ವೈ.ರಾಘವೇಂದ್ರ

Shimoga; ಈ ಸರ್ಕಾರಕ್ಕೆ ಶೀಘ್ರ ಜನ ಸರಿಯಾದ ಪಾಠ ಕಲಿಸುತ್ತಾರೆ: ಬಿ.ವೈ.ರಾಘವೇಂದ್ರ

10-health

Asthma: ಎತ್ತರ ಪ್ರದೇಶಗಳು ಮತು ಅಸ್ತಮಾ

Shimoga: ಪುರದಾಳು ಗ್ರಾಮದಲ್ಲಿ ಕಾಡಾನೆ ದಾಳಿ; ಬಾಳೆ-ಅಡಿಕೆ ತೋಟದಲ್ಲಿ ದಾಂಧಲೆ

Shimoga: ಪುರದಾಳು ಗ್ರಾಮದಲ್ಲಿ ಕಾಡಾನೆ ದಾಳಿ; ಬಾಳೆ-ಅಡಿಕೆ ತೋಟದಲ್ಲಿ ದಾಂಧಲೆ

9-bbk11

BBK-11: ಬಿಗ್ ಬಾಸ್ ಮನೆಗೆ ನಾಲ್ವರು ಎಂಟ್ರಿ; ಉಳಿದ ಸ್ಪರ್ಧಿಗಳು ಇವರೇನಾ?

8-health

Iron Deficiency: ರಕ್ತಹೀನತೆ ಇಲ್ಲದ ಕಬ್ಬಿಣದಂಶ ಕೊರತೆ

ಬೈಕ್‌ ನಲ್ಲಿದ್ದ ಪೊಲೀಸ್‌ ಗೆ ಡಿಕ್ಕಿ ಹೊಡೆದ ಕಾರು; ಅಕ್ರಮ ಮದ್ಯ ದಂಧೆ ಶಂಕೆ

Delhi: ಬೈಕ್‌ ನಲ್ಲಿದ್ದ ಪೊಲೀಸ್‌ ಗೆ ಡಿಕ್ಕಿ ಹೊಡೆದ ಕಾರು; ಅಕ್ರಮ ಮದ್ಯ ದಂಧೆ ಶಂಕೆ

7-social-media-2

Social Media: ಮಾನಸಿಕ ಆರೋಗ್ಯದ ಮೇಲೆ ಸಾಮಾಜಿಕ ಮಾಧ್ಯಮಗಳ ಪರಿಣಾಮ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

CM-Mysore1

MUDA Scam: ಸಿಎಂ ಸಿದ್ದರಾಮಯ್ಯ ವಿರುದ್ಧದ ಪ್ರಕರಣ ತನಿಖೆಗೆ ಲೋಕಾಯುಕ್ತದಿಂದ 4 ತಂಡ ರಚನೆ

crime (2)

Hunsur: ಹಂದಿಫಾರ್ಮ್ ನಲ್ಲಿ ಕಾರ್ಮಿಕನಿಂದ ಮ್ಯಾನೇಜರ್ ಬರ್ಬರ ಹ*ತ್ಯೆ

Mysuru-Simhasana

Mysuru Dasara: ಖಾಸಗಿ ದರ್ಬಾರ್‌ಗೆ ಸ್ವರ್ಣ ಖಚಿತ ಸಿಂಹಾಸನ ಜೋಡಣೆ

Mysore-Sidda

MUDA Case: ನ್ಯಾಯ ನನ್ನ ಪರವಿದೆ, ರಾಜಕೀಯ ಪ್ರೇರಿತ ಕೇಸ್‌ ಎದುರಿಸಿ ಗೆಲ್ಲುವೆ: ಸಿಎಂ

CM-Mysore1

MUDA Scam: ಇಂದು ಸಿಎಂ ಸಿದ್ದರಾಮಯ್ಯ ವಿರುದ್ಧ ಲೋಕಾಯುಕ್ತದಲ್ಲಿ ಎಫ್ಐಆರ್‌ ಸಾಧ್ಯತೆ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

MINCHU HULA: ತಂದೆ ಮಗನ ಸುತ್ತ ʼಮಿಂಚು ಹುಳʼ; ಅ.4ಕ್ಕೆ ತೆರೆಗೆ

MINCHU HULA: ತಂದೆ ಮಗನ ಸುತ್ತ ʼಮಿಂಚು ಹುಳʼ; ಅ.4ಕ್ಕೆ ತೆರೆಗೆ

Shimoga; ಈ ಸರ್ಕಾರಕ್ಕೆ ಶೀಘ್ರ ಜನ ಸರಿಯಾದ ಪಾಠ ಕಲಿಸುತ್ತಾರೆ: ಬಿ.ವೈ.ರಾಘವೇಂದ್ರ

Shimoga; ಈ ಸರ್ಕಾರಕ್ಕೆ ಶೀಘ್ರ ಜನ ಸರಿಯಾದ ಪಾಠ ಕಲಿಸುತ್ತಾರೆ: ಬಿ.ವೈ.ರಾಘವೇಂದ್ರ

10-health

Asthma: ಎತ್ತರ ಪ್ರದೇಶಗಳು ಮತು ಅಸ್ತಮಾ

Shimoga: ಪುರದಾಳು ಗ್ರಾಮದಲ್ಲಿ ಕಾಡಾನೆ ದಾಳಿ; ಬಾಳೆ-ಅಡಿಕೆ ತೋಟದಲ್ಲಿ ದಾಂಧಲೆ

Shimoga: ಪುರದಾಳು ಗ್ರಾಮದಲ್ಲಿ ಕಾಡಾನೆ ದಾಳಿ; ಬಾಳೆ-ಅಡಿಕೆ ತೋಟದಲ್ಲಿ ದಾಂಧಲೆ

9-bbk11

BBK-11: ಬಿಗ್ ಬಾಸ್ ಮನೆಗೆ ನಾಲ್ವರು ಎಂಟ್ರಿ; ಉಳಿದ ಸ್ಪರ್ಧಿಗಳು ಇವರೇನಾ?

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.