ಅರಸರ ಪುಣ್ಯ ಭೂಮಿಯಲ್ಲಿ ಧರ್ಮಯುದ್ದ ಆರಂಭ : ಡಾ.ಬಿ.ಜೆ.ವಿಜಯಕುಮಾರ್
ಧರ್ಮಯುದ್ದದಲ್ಲಿ ಕಾಂಗ್ರೆಸ್ ಪುಟಿದೇಳಲಿದೆ
Team Udayavani, Oct 22, 2022, 10:21 PM IST
ಹುಣಸೂರು : ಆರಸರ ಪುಣ್ಯ ಭೂಮಿ ಹುಣಸೂರು ಕ್ಷೇತ್ರದ ರಾಜಕೀಯ ಧರ್ಮಯುದ್ಧದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಪುಟ್ಟಿದೇಳಲಿದೆ ಎಂದು ಮೈಸೂರು ಜಿಲ್ಲಾ ಗ್ರಾಮಾಂತರ ಕಾಂಗ್ರೆಸ್ ಅಧ್ಯಕ್ಷ ಡಾ.ಬಿ.ಜೆ. ವಿಜಯಕುಮಾರ್ ತಿಳಿಸಿದರು.
ಹುಣಸೂರು ನಗರದ ಕಾಂಗ್ರೆಸ್ ಕಚೇರಿಯಲ್ಲಿ ಆಯೋಜಿಸಿದ್ದ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಗಳ ಸಮಿತಿಯ ಪದಾಧಿಕಾರಿಗಳ ಪದಗ್ರಹಣ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿ ಸ್ಥಳೀಯ ಸಂಸ್ಥೆಗಳಿಗೆ ರಾಜಕೀಯವಾಗಿ ಅಧಿಕಾರ ವಿಕೇಂದ್ರೀಕರಣಕ್ಕೆ ಮುನ್ನುಡಿ ಬರೆದವರು ಅಂದಿನ ಪ್ರಧಾನಿ ರಾಜೀವ್‌ಗಾಂಧಿ, ಅವರ ಹೆಸರಿನಲ್ಲಿ ರಾಜಕೀಯವಾಗಿ ಕಾರ್ಯಕರ್ತರನ್ನು ಮತ್ತೆ ರಾಜಕೀಯ ಮುನ್ನಡೆಗೆ ತರಲು ಈ ಸಂಘಟನೆಯ ಪ್ರಮುಖ ಉದ್ದೇಶವಾಗಿದೆ. ಈ ನಿಟ್ಟಿನಲ್ಲಿ ನೇಮಕಗೊಂಡ ಎಲ್ಲಾ ಪದಾಧಿಕಾರಿಗಳು ಸಕ್ರಿಯವಾಗಿ ತೊಡಗಿಸಿಕೊಂಡು ಪಕ್ಷ ಸಂಘಟನೆಗೆ ಮುಂದಾಗಬೇಕೆಂದು ಕರೆ ನೀಡಿದರು.
ರಾಜಕೀಯ ಧರ್ಮಯುದ್ದ ಆರಂಭ, ಅಧರ್ಮಕ್ಕೆ ಸೋಲು
ಹುಣಸೂರಿನಲ್ಲಿ ರಾಜಕೀಯ ಧರ್ಮಯುದ್ಧ ಆರಂಭವಾಗಿದ್ದು, ಈ ಧರ್ಮಯುದ್ಧದಲ್ಲಿ ಅಧರ್ಮಕ್ಕೆ ಸೋಲುಂಟಾಗಿ ಧರ್ಮಕ್ಕೆ ಜಯ ಸಿಗಲಿದ್ದು, ಮೂರು ಬಾರಿ ಜಯಗಳಿಸಿರುವ ಸಾಮಾಜಿಕ ಕಳಕಳಿಯುಳ್ಳ, ಸ್ನೇಹಜೀವಿ ಶಾಸಕ ಎಚ್.ಪಿ.ಮಂಜುನಾಥ್ ರಾಜಕೀಯ ಧರ್ಮ ಯುದ್ದದಲ್ಲಿ ಮತ್ತೆ ಗೆಲುವು ಸಾಧಿಸಲಿದ್ದು, ನಮ್ಮ ಪಕ್ಷದ ನಿಯಮದ ಪ್ರಕಾರ ೪ನೇ ಬಾರಿ ಶಾಸಕರಾಗಿ ಆಯ್ಕೆಯಾದರೆ ಮಂತ್ರಿ ಸ್ಥಾನ ಅಲಂಕರಿಸಲಿದ್ದಾರೆ ಎಂದು ತಿಳಿಸಿ ಹುಣಸೂರು ಉಪಚುನಾವಣೆ ಹಾಗೂ ಮೇಕೆದಾಟು ಪಾದಯಾತ್ರೆ ಸೇರಿದಂತೆ ನನ್ನ ಮೇಲೆ ಆರು ಪ್ರಕರಣಗಳನ್ನು ದಾಖಲಿಸಿದ್ದಾರೆ. ಆದರೂ ಎಂದಿಗೂ ಎದೆಗುಂದದ ನಾನು ನನ್ನನ್ನು ನಂಬಿ ಪಕ್ಷ ನೀಡಿರುವ ಮಹತ್ತರ ಜವಾಬ್ದಾರಿಯನ್ನು ನಿಭಾಯಿಸುತ್ತಿದ್ದೇನೆ, ಪದಗ್ರಹಣ ಮಾಡಿರಿವ ಪದಾಧಿಕಾರಿಗಳು ಸಹ ಯಾವುದಕ್ಕೂ ಎದೆಗುಂದದೆ ಪಕ್ಷ ಸಂಘಟನೆಯಲ್ಲಿ ಸಕ್ರಿಯ ತೊಡಗಿಸಿಕೊಳ್ಳುವಂತೆ ಕರೆ ನೀಡಿದರು.
ಶಾಸಕ ಎಚ್.ಪಿ.ಮಂಜುನಾಥ್ ಮಾತನಾಡಿ ಇತಿಹಾಸವಿರುವ ಕಾಂಗ್ರೆಸ್ ಪಕ್ಷ ದೊಡ್ಡ ಆಲದ ಮರವಿದ್ದಂತೆ, ಎಲ್ಲಸಮುದಾಯಗಳೂ ಈ ಆಲದ ಮರದ ಕೆಳಗೆ ಆಶ್ರಯ ಪಡೆದಿದ್ದೇವೆ. ಕಾರ್ಯಕರ್ತರು ಪಕ್ಷ ನಿಷ್ಠೆಯಿಂದ ತಮ್ಮ ಕರ್ತವ್ಯವನ್ನು ನಿರ್ವಹಿಸಿದರೆ ಪಕ್ಷ ಇನ್ನಷ್ಟು ಸದೃಢವಾಗಲಿದೆ. ಈ ಸಾಲಿನ ಅಧಿಕಾರಾವಧಿಯಲ್ಲಿ ಸರ್ಕಾರದ ತಾರತಮ್ಯದಿಂದ ಹೆಚ್ಚು ಅನುದಾನ ಕೊಡದೆ ತಾಲೂಕಿನ ಅಭಿವೃದ್ಧಿ ವೇಗಕ್ಕೆ ಕಡಿವಾಣ ಹಾಕಿದಂತಾಗಿದೆ. ಮುಂಬರುವ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಸಿದ್ದರಾಮಯ್ಯ ನೇತೃತ್ವದ ಸರ್ಕಾರದಲ್ಲಿ ಬಡವರು, ಶೋಷಿತರು, ನಿರ್ಗತಿಕರು, ದಲಿತರಿಗೆ ನೀಡಿದ ಭಾಗ್ಯಗಳಿಗೆ ಅನುದಾನ ನೀಡದೆ ನಿರ್ಲಕ್ಷಿಸಲಾಗಿದೆ. ಈ ಬಗ್ಗೆ ರಾಜೀವ್ ಗಾಂಧಿ ಪಂಚಾಯತ್ ರಾಜ್ ಸಂಘಟನೆಯವರು ಮನೆ ಮನೆಗೆ ತೆರಳಿ ಸರ್ಕಾರದ ವೈಫಲ್ಯಗಳನ್ನು ಮನವರಿಕೆ ಮಾಡಿಕೊಡುವ ಮೂಲಕ ಸಂಘಟನೆಗೆ ಸಮಯ ಮೀಸಲಿಡಬಢಕು. ಆಮೂಲಕ ಮತ್ತೊಮ್ಮ ಪಕ್ಷವನ್ನು ಅಧಿಕಾರಕ್ಕೆ ತರಲು ಪಣತೊಡಬೇಕೆಂದು ಮನವಿ ಮಾಡಿದರು.
ಸಮಾರಂಭದಲ್ಲಿ ನಗರಸಭೆ ಅಧ್ಯಕ್ಷೆ ಗೀತಾ ನಿಂಗರಾಜ್, ಪಂಚಾಯತ್ ರಾಜ್ ಸಂಘಟನೆಯ ಜಿಲ್ಲಾಧ್ಯಕ್ಷ ಕೋಟೆ ಮಲ್ಲೇಶ್, ತಾಲೂಕು ಅಧ್ಯಕ್ಷ ಸುರೇಶ್, ಕಾರ್ಯದರ್ಶಿ ಕೆಂಪರಾಜ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ನಾರಾಯಣ, ಕಲ್ಕುಣಿಕೆ ರಮೇಶ್, ದೇವರಾಜ್, ಡಿಸಿಸಿ ಉಪಾಧ್ಯಕ್ಷ ಎಡತಲೆ ಮಂಜಣ್ಣ, ಮಾಜಿ ಅಧ್ಯಕ್ಷ ಬಿಳಿಕೆರೆಬಸವರಾಜ್, ಉದ್ಯಮಿ ಎಚ್.ಪಿ.ಅಮರನಾಥ್, ನಾಡಪ್ಪನಹಳ್ಳಿ ರಾಜುಶಿವರಾಜೇಗೌಡ, ಗುಂಡರವಿ, ಅಜ್ಗರ್‌ಪಾಷ, ಕಲ್ಕುಣಿಕೆ ರಾಘು, ಹಗರನಹಳ್ಳಿ ಕುಮಾರ್, ಬಸವರಾಜಪ್ಪ, ಕುಮಾರಸ್ವಾಮಿ, ರಾಜೇಗೌಡ, ನಟರಾಜ್, ಶರವಣ ಸೇರಿದಂತೆ ಮುಖಂಡರು,ಕಾರ್ಯಕರ್ತರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUDA; 50:50 ಹಂಚಿಕೆ ರದ್ದು ತೀರ್ಮಾನ; ನ್ಯಾ| ದೇಸಾಯಿ ಆಯೋಗದ ವರದಿ ಬಳಿಕ ನಿವೇಶನ ವಾಪಸ್
MUDA Case: ಉತ್ತರ ತಾಳೆಯಾಗದೆ ಇದ್ದರೆ ಮತ್ತೆ ಸಿಎಂ ವಿಚಾರಣೆ: ಲೋಕಾಯುಕ್ತ ಎಸ್ಪಿ ಉದೇಶ್
MUDA Case: ಲೋಕಾಯುಕ್ತ ಪೊಲೀಸರು ಮತ್ತೆ ವಿಚಾರಣೆಗೆ ಬರಲು ಹೇಳಿಲ್ಲ: ಸಿಎಂ ಸಿದ್ದರಾಮಯ್ಯ
Hunsur: ಗೃಹಿಣಿ ನಾಪತ್ತೆ :ದೂರು ದಾಖಲು; ಪತ್ತೆಗಾಗಿ ಮನವಿ
MUDA Case: ತನಿಖೆ ಸಿಬಿಐಗೆ ವಹಿಸಲು ಹೈಕೋರ್ಟ್‌ಗೆ ಅರ್ಜಿ; ಇಂದು ವಿಚಾರಣೆ
MUST WATCH
ಹೊಸ ಸೇರ್ಪಡೆ
Washington: ಅಮೆರಿಕದ ಭರವಸೆಯಬೆಳಕು ಜೀವಂತವಿರಲಿದೆ: ಕಮಲಾ ಭಾವುಕ ಭಾಷಣ
MUDA CASE: ಸಿಎಂ, ಪತ್ನಿಗೆ ಇ.ಡಿ. ನೋಟಿಸ್?
IND Vs SA: ಇಂದಿನಿಂದ 4 ಪಂದ್ಯಗಳ ಟಿ20 ಸರಣಿ; ಸೂರ್ಯ ಪಡೆಗೆ ಸೌತ್ ಆಫ್ರಿಕಾ ಸವಾಲು
Doctor: ಸೀರೆ ಉಟ್ಟ ಸ್ತ್ರೀಯರೇ,ಪೆಟಿಕೋಟ್ ಕ್ಯಾನ್ಸರ್ ಬಗ್ಗೆ ಎಚ್ಚರವಿರಲಿ
Panaji: ವಿದೇಶಿ ಪ್ರವಾಸಿಗರ ಕಳೆದುಕೊಂಡ ಗೋವಾ: ಆರ್ಥಿಕ ಅಪಾಯದ ಭೀತಿ!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.