ಆನ್‌ಲೈನ್ ವಂಚನೆ ಬಗ್ಗೆ ಎಚ್ಚರದಿಂದಿರಿ
Team Udayavani, Jul 10, 2023, 3:33 PM IST
ಮೈಸೂರು: ಮಹಿಳಾ ಸಮನ್ವಯ ಸಂಸ್ಥೆ ವತಿಯಿಂದ ನಗರದ ನಂಜುಮಳಿಗೆ ವೃತ್ತದ ಸಮೀಪ ಇರುವ ಗೋಪಾಲಸ್ವಾಮಿ ಶಿಶು ವಿಹಾರ ಶಿಕ್ಷಣ ಸಂಸ್ಥೆಯಲ್ಲಿ ಭಾನುವಾರ ಆಯೋಜಿಸಿದ್ದ ಮಹಿಳಾ ಉದ್ದಿಮೆ ಉತ್ಪನ್ನಗಳ ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಎಎಸ್ಪಿ ನಂದಿನಿ ಚಾಲನೆ ನೀಡಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ಮಹಿಳೆಯರು ಆರ್ಥಿಕವಾಗಿ ಸಬಲರಾದಾಗ ಮಾತ್ರ ಸಾಧನೆ ಮಾಡಲು ಸಾಧ್ಯ. ಪುರಾತನ ಕಾಲದಿಂದಲೂ ಮಹಿಳೆಯರ ಸಾಧನೆಗೆ ಹಲವು ಅಡೆತಡೆಗಳು ಬರುತ್ತಿದೆ. ಆರ್ಥಿಕವಾಗಿ ಸಬಲರಾದ ಮಹಿಳೆಯರಿಗೆ ಹೆಚ್ಚು ಸಮಸ್ಯೆಗಳು ಕಾಡುವುದಿಲ್ಲ. ಈಗ ಮನೆ ಕೆಲಸದ ಜೊತೆಗೆ ಉದ್ಯೋಗವನ್ನೂ ಮಾಡಬೇಕಾಗುತ್ತದೆ. ಇದು ಈಗ ಅಗತ್ಯವಾಗಿದೆ ಎಂದು ವಿವರಿಸಿದರು.
ಇಂದಿನ ಪರಿಸ್ಥಿತಿಯಲ್ಲಿ ಸೈಬರ್ ಕ್ರೈಂ ಹೆಚ್ಚಾಗುತ್ತಿದೆ. ಆನ್ ಲೈನ್ ವಂಚನೆ ಪ್ರಕರಣಗಳು ಹೆಚ್ಚಾಗುತ್ತಿದೆ. ಮಹಿಳೆಯರು ಆನ್‌ಲೈನ್‌ನಲ್ಲಿ ಶಾಪಿಂಗ್ ಮಾಡುವುದು ಕೂಡ ಹೆಚ್ಚಾಗಿದೆ. ಕೆಲವು ಶಾಪಿಂಗ್ ವೆಬ್‌ಸೈಟ್‌ಗಳು ಸುಳ್ಳಾಗಿರುತ್ತದೆ. ಹಾಗಾಗಿ ಮಹಿಳೆಯರು ಆನ್‌ಲೈನ್ ಶಾಪಿಂಗ್, ವಾಟ್ಸ್‌ಆ್ಯಪ್ ಸ್ಟೇಟಸ್ ಹಾಕುವುದನ್ನು ಕಡಿಮೆ ಮಾಡಬೇಕು ಎಂದು ಹೇಳಿದರು.
ಮಹಿಳಾ ಸಮನ್ವಯ ಸಂಸ್ಥೆಯ ಸಂಚಾಲಕರಾದ ಮಮತಾ ಕಿಣವಿ, ಲಾವಣ್ಯ, ಸದಸ್ಯರಾದ ಸ್ಮಿತಾ, ಭೂಮಿಕಾ, ಯೋಗ ಶಿಕ್ಷಕಿ ಕಾಂಚನಗಂಗಾ ಇತರರು ಹಾಜರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.