ನೋಟ್ ಬ್ಯಾನ್‌ನಿಂದಾದ ನಷ್ಟ ಮೋದಿ ಭರಿಸಲಿ: ಗುಂಡೂರಾವ್
Team Udayavani, Jan 3, 2017, 11:58 AM IST
ಮೈಸೂರು: ನೋಟು ರದ್ಧತಿ ಯಿಂದ ದೇಶಕ್ಕೆ 1.28 ಲಕ್ಷ ಕೋಟಿ ರೂ. ನಷ್ಟವಾಗಿದ್ದು, ಇಂತಹ ಅವೈಜಾnನಿಕ ತೀರ್ಮಾನ ಕೈಗೊಂಡ ಪ್ರಧಾನಿ ನರೇಂದ್ರ ಮೋದಿ ಇದರ ಜವಾಬ್ದಾರಿ ಹೊರುವ ಮೂಲಕ ನಷ್ಟ ಭರಿಸುವ ಕೆಲಸ ಮಾಡಬೇಕಿದೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್ ಆಗ್ರಹಿಸಿದರು.
ನೋಟು ರದ್ದುಗೊಳಿಸಿದ ಸಂದರ್ಭದಲ್ಲಿ ಪ್ರಧಾನಿ ಮಾಡಿದ ಭಾಷಣ ಹಾಗೂ ಡಿ.31ರಂದು ಮಾಡಿದ ಭಾಷಣಕ್ಕೆ ಯಾವುದೇ ಸಂಬಂಧ ಇಲ್ಲ. ನೋಟ್‌ಬ್ಯಾನ್ ತೀರ್ಮಾನ ಕೈಗೊಂಡ ಸಂದರ್ಭದಲ್ಲಿ ಭ್ರಷ್ಟಾಚಾರ ನಿಯಂತ್ರಣ, ಕಪ್ಪುಹಣಕ್ಕೆ ಕಡಿವಾಣ ಹಾಕುವುದು ಹಾಗೂ ಭಯೋತ್ಪಾದನೆ ನಿಗ್ರಹದಿಂದ ಈ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದರು.
ಆದರೆ ಡಿ.31ರಂದು ತಮ್ಮ ಭಾಷಣದಲ್ಲಿ ಈ ಮೂರು ವಿಷಯಕ್ಕೆ ಸಂಬಂಧಿಸಿದಂತೆ ಮಾಹಿತಿ ನೀಡದೆ, ತಮ್ಮ ತಪ್ಪುನ್ನು ಮುಚ್ಚಿಕೊಳ್ಳುವ ಉದ್ದೇಶದಿಂದ ಮೋದಿ ಜನರ ದಾರಿ ತಪ್ಪಿಸಿದ್ದಾರೆ ಎಂದು ಸೋಮವಾರ ಸುದ್ದಿಗೋಷ್ಠಿಯಲ್ಲಿ ಕಿಡಿಕಾರಿದರು.ತುಘಲಕ್ ದರ್ಬಾರ್: ನೋಟ್‌ಬ್ಯಾನ್ ಬಳಿಕ ಬಿಡುಗಡೆ ಮಾಡಲಾಗಿರುವ ಹೊಸ ನೋಟುಗಳಲ್ಲಿ ಯಾವುದೇ ರೀತಿಯ ಭದ್ರತೆ ಇಲ್ಲ. ಈಗಾಗಲೇ ಗುಜರಾತ್‌ನಲ್ಲಿ ನಕಲಿ ನೋಟುಗಳನ್ನು ಮುದ್ರಿಸಲಾಗಿದೆ.
ನೋಟು ಅಮಾನ್ಯಿàಕರಣ ಹಾಗೂ ನಗದುರಹಿತ ವ್ಯವಸ್ಥೆಗೂ ಯಾವುದೇ ಸಂಬಂಧವಿಲ್ಲ. ನೋಟ್‌ಬ್ಯಾನ್ ತೀರ್ಮಾನದಿಂದ ಕೃಷಿಕರು, ಬೀದಿ ವ್ಯಾಪಾರಿಗಳು, ಜನಸಾಮಾನ್ಯರು ತೊಂದರೆ ಜತೆಗೆ ಸಾಕಷ್ಟು ನಷ್ಟ ಅನುಭವಿಸಿ ದ್ದಾರೆ. ನೋಟ್‌ಬ್ಯಾನ್ ಆಗಿ 50 ದಿನಗಳು ಕಳೆದರೂ ಇಂದಿಗೂ ಸಮಸ್ಯೆ ಬಗೆಹರಿದಿಲ್ಲಾ ಎಂದು ಟೀಕಿಸಿದ ಅವರು, ನೋಟ್‌ಬ್ಯಾನ್ ಹಿನ್ನೆಲೆಯಲ್ಲಿ ಭೀಮ್ ಹೆಸರಿನ ಮೊಬೈಲ್ ಆಪ್ ಬಿಡುಗಡೆ ಮಾಡುವ ಮೂಲಕ ಅಂಬೇಡ್ಕರ್ ಹೆಸರನ್ನು ದುರ್ಬಳಕೆ ಮಾಡಿಕೊಂಡಿದ್ದಾರೆ ಎಂದು ದೂರಿದರು.
ಸುದ್ದಿಗೋಷ್ಠಿಯಲ್ಲಿ ಶಾಸಕರಾದ ವಾಸು, ಎಂ.ಕೆ. ಸೋಮಶೇಖರ್, ಜಿಲ್ಲಾಧ್ಯಕ್ಷ ಡಾ. ಬಿ.ಜೆ. ವಿಜಯ್‌ಕುಮಾರ್, ನಗರಾಧ್ಯಕ್ಷ ಟಿ.ಎಸ್. ರವಿಶಂಕರ್ ಇನ್ನಿತರರು ಹಾಜರಿದ್ದರು.
ಆರೋಪ: ಕ್ಷಮೆಯಾಚನೆ
ನಗರದ ಜಗನ್ಮೋಹನ ಅರಮನೆಯಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಮಾವೇಶದಲ್ಲಿ ಮಾಧ್ಯಮಗಳು ಪ್ರಧಾನಿ ನರೇಂದ್ರಮೋದಿ ಮಾತಿಗೆ ಹೆಚ್ಚು ಪುಷ್ಠಿ ನೀಡುತ್ತವೆ. ನಮ್ಮ ಮಾತಿಗೆ ಪ್ರಚಾರ ನೀಡುವುದಿಲ್ಲ ಎಂದು ಆರೋಪಿಸಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್ ಗುಂಡೂರಾವ್, ಬಳಿಕ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡುವ ವೇಳೆ, ರಾಹುಲ್ ಗಾಂಧಿ ಅವರು ಮೋದಿ ಅವರ ಭ್ರಷ್ಟಾಚಾರದ ಬಗ್ಗೆ ಆರೋಪಿಸಿದ್ದರೂ, ಮಾಧ್ಯಮಗಳು ಮೋದಿ ಪರ ಪ್ರಚಾರ ಮಾಡುತ್ತಿವೆ ಎಂದರು.
ಈ ಬಗ್ಗೆ ಪತ್ರಕರ್ತರು, ನಿರ್ದಿಷ್ಟ ಮಾಧ್ಯಮದ ಹೆಸರು ಹೇಳಿ ಎಂದು ಪಟ್ಟು ಹಿಡಿದಾಗ ಕೆಲ ಆಂಗ್ಲ ವಾಹಿನಿಗಳ ಹೆಸರು ಹೇಳಿ ಜಾರಿಕೊಂಡ ದಿನೇಶ್ ಗುಂಡೂರಾವ್, ಬಳಿಕ ತಮ್ಮ ಹೇಳಿಕೆಗಾಗಿ ಕ್ಷಮೆಯಾಚಿಸಿದರು.
“ಶ್ರೀನಿವಾಸಪ್ರಸಾದ್ ತೀರ್ಮಾನ ಸರಿಯಲ್ಲ’
ಮಾಜಿ ಸಚಿವ ವಿ. ಶ್ರೀನಿವಾಸಪ್ರಸಾದ್ ಕಾಂಗ್ರೆಸ್‌ನಲ್ಲಿದ್ದ ಸಂದರ್ಭದಲ್ಲಿ ಬಿಜೆಪಿ, ಆರ್‌ಎಸ್‌ಎಸ್ ವಿರುದ್ಧ ಮಾತನಾಡಿದ್ದರು. ರಾಜಕೀಯದಲ್ಲಿ ಯಾವುದೇ ಪಕ್ಷದ ತತ್ವ – ಸಿದ್ಧಾಂತವನ್ನು ನಂಬಿದ್ದ ಸಂದರ್ಭದಲ್ಲಿ ಅದಕ್ಕೆ ವಿರುದ್ಧವಾಗಿ ಹೋಗುವುದು ಸರಿಯಲ್ಲ. ಪ್ರಸಾದ್ ಅವರಂತಹ ಹಿರಿಯ ರಾಜಕೀಯ ಮುತ್ಸದ್ದಿ ತಮ್ಮ ಸ್ವಾರ್ಥಕ್ಕಾಗಿ ಸದ್ಯ ಬಿಜೆಪಿ ಸೇರಿದ ತೀರ್ಮಾನ ಸರಿಯಲ್ಲ ಎಂದು ದಿನೇಶ್ ಗುಂಡೂರಾವ್ ಅಸಮಾಧಾನ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Black Days: ಜಮೀರ್+ ನಾಲ್ವರು ಕೊಚ್ಚೆ, ದೂರ ಇಟ್ಟಿದ್ದೇನೆ: ಎಚ್.ಡಿ.ಕುಮಾರಸ್ವಾಮಿ
Hunsur: ಅಪ್ರಾಪ್ತ ಬಾಲಕಿ ಗರ್ಭಿಣಿ ಪ್ರಕರಣ; ಯುವಕನ ಬಂಧನ
MUDA: ಇ.ಡಿ.ಯಿಂದ ಮಾಜಿ ಅಧ್ಯಕ್ಷ ಮರಿಗೌಡ ಸುದೀರ್ಘ 9 ಗಂಟೆ ವಿಚಾರಣೆ
ನನ್ನ ಮುಟ್ಟಿದರೆ ಜನ ಸುಮ್ಮನಿರಲಾರರು: ವಿಪಕ್ಷಕ್ಕೆ ಸಿಎಂ ಸಿದ್ದರಾಮಯ್ಯ ಎಚ್ಚರಿಕೆ
MUDA CASE: ಸುಳ್ಳು ಆರೋಪಗಳ ಮೇಲೆ ಇ.ಡಿ. ತನಿಖೆ: ಸಿಎಂ ಬೇಸರ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.