ಹೊಟ್ಟೆಪಾಡಿಗಾಗಿ ಭೋಪಾಲ್‌ನಿಂದ ಕೋಟೆಗೆ ವಲಸೆ
Team Udayavani, Feb 28, 2017, 1:05 PM IST
ಎಚ್.ಡಿ.ಕೋಟೆ: ಮಳೆ ಇಲ್ಲದೆ ಜೀವನ ನಿರ್ವಹಣೆ ನಡೆಸಲು ಸಾಧ್ಯವಾಗದೆ ಕೆಲಸ ಹುಡುಕಿಕೊಂಡು ಮಧ್ಯಪ್ರದೇಶದ ರಾಜಾಧಾನಿ ಭೋಪಾಲ್‌ನಿಂದ ಕಮ್ಮಾರ ಕುಟುಂಬವೊಂದು ಎಚ್.ಡಿ. ಕೋಟೆ ಪಟ್ಟಣಕ್ಕೆ ಗುಳೆ ಬಂದು ಕಬ್ಬಿಣದ ಕೆಲಸ ಮಾಡುತ್ತಿದೆ.
ಕರ್ನಾಟಕದಂತೆ ಮಧ್ಯಪ್ರದೇಶದಲ್ಲೂ ಬರಗಾಲ ತಾಂಡವವಾಡುತ್ತಿದೆ. ಸರ್ಕಾರ ಮಾಡುತ್ತಿರುವ ಬರ ನಿರ್ವಹಣೆಯಿಂದ ಜೀವನ ನಿರ್ವಹಣೆ ಮಾಡಲು ಸಾಧ್ಯವಾಗದೆ ಇಡೀ ಕುಟುಂಬವೇ ಸಾವಿರಾರು ಕಿಮೀ ದೂರ ಕೆಲಸ ಹುಡುಕಿಕೊಂಡು ಬಂದಿದೆ. ಕುಟುಂಬಕ್ಕೆ ಎಚ್.ಡಿ.ಕೋಟೆ ಮೊದಲೂ ಅಲ್ಲ ಕೊನೆಯೂ ಅಲ್ಲ. ಕಬ್ಬಣದ ಕೆಲಸ ಸಿಗುವವರೆಗೂ ಇಲ್ಲಿರುವ ಕುಟುಂಬ ನಂತರ ಮುಂದಿನ ಊರು ನೋಡುತ್ತದೆ.
ಸಾವಿರಾರು ಕಿಮೀ ದೂರದಿಂದ ಜೀವನೋಪಾಯ ಕ್ಕಾಗಿ ಪುಟಾಣಿ ಮಕ್ಕಳೊಂದಿಗೆ ಗುಳೇ ಬಂದಿರುವ ಕಬ್ಬಿಣದ ಕೆಲಸ ಮಾಡುವ ಈ ಶ್ರಮಜೀವಿಗಳಿಗೆ ಗೊತ್ತಿರುವುದು ಕುಲುಮೆ ಕೆಲಸವೊಂದೇಯಂತೆ. ಹಾಗಾಗಿ ಭೋಪಾಲ್‌ನಲ್ಲಿ ಬರಗಾಲ ಬಿದ್ದಾಗ ಕೃಷಿ ಕೆಲಸ ನಿಂತು ಹೋದಾಗ ಇವರಿಗೆ ಕೆಲಸ ಸಿಗುವುದೆಂತು. ಸ್ವಲ್ಪ ಮಳೆಯಾಗುವ ಕಡೆ ಕೆಲಸ ಹುಡುಕಿಕೊಂಡು ಬಂದಿದ್ದಾರೆ.
ಇವರು ಹೋದ ಕಡೆಗಳಲ್ಲಿ ಸ್ಥಳದಲ್ಲಿಯೇ ಕುಲುಮೆ ಹೂಡಿ ಲಾರಿ, ಬಸ್‌ಗಳ ಕಬ್ಬಿಣದ ಕಟ್ಟೆ ಪ್ಲೇಟುಗಳನ್ನು ಬಳಸಿಕೊಂಡು ನೇಗಿಲು, ಹಾರೆ, ಕೊಡಲಿ, ಪಿಕಾಶಿ, ಗುದ್ದಲಿ, ಕುಡುಗೋಲು, ಮಚ್ಚು, ಚಾಕು ಸೇರಿದಂತೆ ವಿವಿಧ ಕಬ್ಬಿಣದ ಕೃಷಿ ಪರಿಕರ ಹಾಗೂ ಗೃಹೋಪಯೋಗಿ ವಸ್ತುಗಳನ್ನು ತಯಾರಿಸುತ್ತಾರೆ. ಅದರಿಂದ ಬರುವ ಹಣದಿಂದ ಜೀವನ ಸಾಗಿಸುತ್ತಾರೆ.
ರಸ್ತೆ ಬದಿಯಲ್ಲಿರುವ ಕುಲುಮೆಗಳಲ್ಲಿ ಅವರೇ ಮಾಡುವ ವಸ್ತುಗಳ ಜೊತೆ ಹಳೆದ ವಸ್ತುಗಳಿಗೂ ಸಾಣೆ ಹಿಡಿಯುವ, ರಿಪೇರಿ ಮಾಡಿಕೊಡುವ ಕೆಲಸವನ್ನೂ ಮಾಡುತ್ತಾರೆ. ಗ್ರಾಮೀಣ ಪ್ರದೇಶದ ಜನರ ಚೌಕಾಸಿ ವ್ಯವಹಾರದ ಜೊತೆ ಇವರೂ ಚೌಕಾಸಿ ಮಾಡಿ ಬರುವ ಹಣದಲ್ಲಿ ಜೀವನ ಮಾಡಬೇಕು.
ಹೆಂಗಸರೇನೂ ಕಮ್ಮಿ ಇಲ್ಲ: ನಮ್ಮಲ್ಲಿ ಕುಲುಮೆ ಕೆಲಸಗಳನ್ನು ಪುರುಷರೇ ಮಾಡುವುದು ಹೆಚ್ಚು. ಆದರೆ ಭೋಪಾಲ್‌ನಿಂದ ಬಂದಿರುವ ಕುಟುಂಬದ ಮಹಿಳೆಯರು ಕಾದ ಕಬ್ಬಿಣಕ್ಕೆ ಸುತ್ತಿಗೆಯಿಂದ ಹಾಕುವ ಏಟುಗಳನ್ನು ನಮ್ಮ ಪುರುಷರೂ ಹಾಕುವುದು ಕಷ್ಟ ಎನ್ನುವಷ್ಟರ ಮಟ್ಟಿಗೆ ಆ ಮಹಿಳೆಯರು ಏಟು ಹಾಕುತ್ತಿರ್ತುತಾರೆ. ಕಾದ ಕಬ್ಬಿಣವು ಬಿಸಿ ಕಳೆದುಕೊಳ್ಳುವುದರೊಳಗೆ ಕಬ್ಬಿಣಕ್ಕೆ ಆಕಾರ ಕೊಡುವ ಕುಲುಮೆ ಕೆಲಸ ಹೆಚ್ಚಿನ ದೈಹಿಕ ಸಾಮರ್ಥ್ಯ ಬೇಡುವ ಕೆಲಸ. ಆ ಮಹಿಳೆಯರು ಈ ಕೆಲಸವನ್ನು ಅತ್ಯಂತ ಸಮರ್ಥವಾಗಿ ಮಾಡುತ್ತಾರೆ.
ಶಿಕ್ಷಣ ವಂಚಿತ ಮಕ್ಕಳು: ಭೂಪಾಲ್ ಕಾರ್ಮಿಕ ರೊಟ್ಟಿಗೆ ಬಂದಿರುವ ಸುಮಾರು ಪುಟಾಣಿ ಮಕ್ಕಳು ಪೋಷಕರೊಟ್ಟಿಗೆ ಬಯಲಿನಲ್ಲಿ ಆಶ್ರಯ ಪಡೆದು ಕೊಂಡಿವೆ. ಪ್ರತಿ 5-6 ದಿನಗಳಿಗೊಮ್ಮೆ ಬೇರೆಡೆ ಸ್ಥಳಾಂತರಗೊಳ್ಳುವ ಪುಟಾಣಿ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಒಂದೇ ಕಡೆ ಕನಿಷ್ಠ 3, 4 ತಿಂಗಳಾದರೂ ವಾಸ್ತವ್ಯ ಹೂಡಿದರೆ ಟೆಂಟ್ ಶಾಲೆಗಳ ಮೂಲಕ ಮಕ್ಕಳಿಗೆ ಶಿಕ್ಷಣ ನೀಡಬಹುದು.
ಆದರೆ ಪದೇಪದೆ ಸ್ಥಳಾಂತರಗೊಳ್ಳುವ ಭೋಪಾಲ್ ಮಂದಿ ಮಕ್ಕಳ ಶಿಕ್ಷಣದ ಕಡೆ ಗಮನ ಹರಿಸದಿದ್ದರೆ ಮಕ್ಕಳೂ ಕೂಡ ಶಿಕ್ಷಣ ವಂಚಿತರಾಗಿ ತಂದೆ ತಾಯಿಗಳಂತೆಯೇ ಜೀವನೋಪಾಯಕ್ಕೆ ಅಲೆಮಾರಿ ಜೀವನ ನಡೆಸಬೇಕಾಗುತ್ತದೆ. ಇದನ್ನು ಭೋಪಾಲ್‌ವುಂದಿ ಅರಿತುಕೊಳ್ಳಬೇಕಿದೆ. ಜೀವನೋಪಾಯಕ್ಕಾಗಿ ಸಾವಿರಾರು ಕಿಮೀ ದೂರದಿಂದ ಮನೆ ತೊರೆದು ಜೀವನೋಪಾಯಕ್ಕಾಗಿ ವಲಸೆ ಬಂದಿರುವ ಕುಲುಮೆ ಕಾರ್ಮಿಕರು ಸೇರಿದಂತೆ ಅವರ ಪುಟಾಣಿಗಳಿಗೆ ಭೂಮಿಯೇ ಹಾಸಿಗೆ ಆಕಾಶವೇ ಹೊದಿಕೆಯಾಗಿದೆ.
ಸರ್ಕಾರ ಎಲ್ಲರಿಗೂ ಎಷ್ಟು ಅಂತ ಸಹಾಯ ಹಸ್ತ ಚಾಚಲು ಸಾಧ್ಯ, ನಮ್ಮ ತೋಳುಗಳು ಗಟ್ಟಿಯಾಗಿವೆ ನಾವು ಎಲ್ಲಿ ಹೋದರೂ ಸರ್ಕಾರದ ಸಹಾಯ ಇಲ್ಲದೆ ಜೀವನ ನಡೆಸುತ್ತೇವೆ ಅನ್ನುವ ನಂಬಿಕೆ ನಮಗಿದೆ.
-ಗೋಧಾಬಾಯಿ
* ಎಚ್.ಬಿ.ಬಸವರಾಜು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
BBK11: ಕಣ್ಣೀರುಡುತ್ತಲೇ ಬಿಗ್ ಬಾಸ್ ಮನೆಯಿಂದ ಆಚೆ ಬಂದ ಧರ್ಮ ಕೀರ್ತಿರಾಜ್
NCP Vs NCP: ಶರದ್ ಬಣದ ವಿರುದ್ಧ 29 ಕ್ಷೇತ್ರ ಗೆದ್ದ ಅಜಿತ್ ಬಣ
Maharashtra: ಉದ್ದವ್ ಬಣದ 36 ಅಭ್ಯರ್ಥಿ ಸೋಲಿಸಿದ ಶಿಂಧೆ ಶಿವ ಸೇನೆ
Achievement: ಮಹಾಲಿಂಗಪುರದ ಬಿಸನಾಳ ಹಾಲಿನ ಡೇರಿಗೆ ಕೇಂದ್ರದ ಪ್ರಶಸ್ತಿ ಗರಿ!
PM Modi: ಜ.11ರಿಂದ 2 ದಿನ ವಿಕಸಿತ ಭಾರತ ಯುವ ನಾಯಕರ ಸಮಾವೇಶ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.