Bilikere ಪೊಲೀಸರ ಭರ್ಜರಿ ಕಾರ್ಯಾಚರಣೆ: ಮೂವರು ಬೈಕ್ ಕಳ್ಳರ ಬಂಧನ
ಮೂರು ಪಲ್ಸರ್ ಬೈಕ್ ವಶ
Team Udayavani, Nov 3, 2023, 8:27 PM IST
ಹುಣಸೂರು: ಮೈಸೂರು ನಗರದ ವಿವಿಧೆಡೆ ಕಳ್ಳತನ ಮಾಡಿದ್ದ ಬೈಕ್ ಕಳ್ಳರನ್ನು ಬಂಧಿಸಿ, 6 ಲಕ್ಷರೂ ಬೆಲೆಬಾಳುವ ಮೂರು ಪಲ್ಸರ್ ಬೈಕ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಬಿಳಿಕೆರೆ ಠಾಣೆ ಪೊಲೀಸರು ಯಶಸ್ವಿಯಾಗಿದ್ದಾರೆ.
ಹುಣಸೂರು ನಗರದ ಸರಸ್ವತಿಪುರಂನ ಸಂದೀಪ, ತಾಲೂಕಿನ ಅಜಾದ್‌ನಗರದ ಕಿರಣ್, ಮತ್ತು ಪಿರಿಯಾಪಟ್ಟಣ ತಾಲೂಕು ಮುತ್ತೂರು ಗ್ರಾಮದ ವಿನೋದ್ ಬಂಧಿತರು.
ಜಿಲ್ಲೆಯಲ್ಲಿ ಬೈಕ್‌ಗಳ ಕಳ್ಳತನ ನಡೆಯುತ್ತಿರುವ ಬಗ್ಗೆ ಪ್ರಕರಣ ದಾಖಲಾಗುತ್ತಿರುವುದರಿಂದ ಎಸ್.ಪಿ. ಸೀಮಾಲಾಟ್ಕರ್, ಅಡಿಷನಲ್ ಎಸ್‌ಪಿ. ಡಾ.ನಂದಿನಿ ಹುಣಸೂರು ಡಿವೈಎಸ್‌ಪಿ ಗೋಪಾಲಕೃಷ್ಣ ಮಾರ್ಗದರ್ಶನದಲ್ಲಿ ಇನ್ಸ್ಪೆಕ್ಟರ್ ಲೋಲಾಕ್ಷಿ ನೇತೃತ್ವದಲ್ಲಿ ತಂಡ ರಚಿಸಿ ಪೊಲೀಸರು ಹೆದ್ದಾರಿಯಲ್ಲಿ ಹೆಚ್ಚಿನ ಗಸ್ತು ಆರಂಭಿಸಲಾಗಿತ್ತು.
ಶುಕ್ರವಾರ ಬೆಳಗಿನ ಜಾವ ಬಿಳಿಕೆರೆಯ ದಾಸ್ತಿಕೊಳದ ಬಳಿಯಲ್ಲಿ ತ್ರಿಬಲ್ ರೈಡ್‌ನಲ್ಲಿ ಬಂದ ಪಲ್ಸರ್ ಬೈಕನ್ನು ತಡೆದು ತಪಾಸಣೆ ನಡೆಸಿದ ವೇಳೆ ದಾಖಲಾತಿಯೇ ಇಲ್ಲದೆ ತೆರಳುತ್ತಿದ್ದ ಆರೋಪಿಗಳನ್ನು ಬಂಧಿಸಿದಾಗಲಷ್ಟೆ ಕಳ್ಳತನ ಮಾಡಿರುವುದು ಪತ್ತೆಯಾಗಿದೆ.
ಹೆಚ್ಚಿನ ವಿಚಾರಣೆ ನಡೆಸಿದ ವೇಳೆ ಚಾಮುಂಡಿ ಬೆಟ್ಟದಲ್ಲಿ ಎರಡು ಹಾಗೂ ಉದಯಗಿರಿಯ ರೈಲ್ವೆ ಕ್ವಾಟ್ರಸ್‌ನಲ್ಲಿ ಒಂದು ಬೈಕ್ ಕಳ್ಳತನ ಮಾಡಿರುವುದನ್ನು ಒಪ್ಪಿಕೊಂಡಿದ್ದರ ಮೇರೆಗೆ ಮೂರು ಬೈಕ್‌ಗಳನ್ನು ವಶಕ್ಕೆ ಪಡೆದು ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಬಿಳಿಕೆರೆ ಪೊಲೀಸ್‌ಠಾಣೆ ಅಪರಾಧ ವಿಭಾಗದ ಪಿ.ಎಸ್.ಐ. ಚಲುವಯ್ಯ ಸಿಬ್ಬಂದಿಗಳಾದ ಧರ್ಮಾಪುರಪ್ರಸಾಧ್, ಪ್ರತಾಪ್, ಶಿವಕುಮಾರ, ಪ್ರಸನ್ನ ಮತ್ತು ಜೀಪ್ ಚಾಲಕ ಗೋವಿಂದರಾಜು ಭಾಗವಹಿಸಿದ್ದರು. ಸಿಬ್ಬಂದಿಗಳ ಕಾರ್ಯವನ್ನು ಎಸ್.ಪಿ.ಸೀಮಾಲಾಟ್ಕರ್ ಅಭಿನಂದಿಸಿದ್ದಾರೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.