ಕೋವಿಡ್ ಭೀತಿ ಜತೆ ಹಕ್ಕಿ ಜ್ವರ: ಜಿಲ್ಲೆಯಲ್ಲಿ ಕಟ್ಟೆಚ್ಚರ
Team Udayavani, Jan 6, 2021, 1:01 PM IST
ಹಕ್ಕಿಜ್ವರ ಭೀತಿ ಹಿನ್ನೆಲೆ ನಗರದ ಖಾಲಿ ನಿವೇಶನ ದಲ್ಲಿ ಕೋಳಿ ಮರಿಗಳನ್ನು ಸುರಿದಿರುವುದು.
ಮೈಸೂರು: ಕೋವಿಡ್ ದಿಂದ ಇಡೀ ವ್ಯವಸ್ಥೆ ತತ್ತರಿಸಿದ್ದು, ಅದು ಚೇತರಿಸಿಕೊಳ್ಳುವ ಮುನ್ನವೇ ಮತ್ತೂಂದು ಭೀತಿ ಎದುರಾಗಿದೆ.ಪಕ್ಕದ ಕೇರಳ ರಾಜ್ಯದಲ್ಲಿ ಹಕ್ಕಿಜ್ವರ ಪ್ರಕರಣ ದೃಢವಾಗಿರುವ ಹಿನ್ನೆಲೆ ಮೈಸೂರು ಜಿಲ್ಲೆಯಲ್ಲೂ ತೀವ್ರ ಕಟ್ಟೆಚ್ಚರ ವಹಿಸಲಾಗಿದೆ.
ದೇಶದ ಹಿಮಾಚಲ ಪ್ರದೇಶ, ಮಧ್ಯಪ್ರದೇಶ, ರಾಜಸ್ಥಾನ ಹಾಗೂಕೇರಳ ಸೇರಿದಂತೆ ಹಲವು ರಾಜ್ಯಗಳಲ್ಲಿಹಕ್ಕಿಜ್ವರ ಪ್ರಕರಣಗಳು ದೃಢವಾಗಿರುವಬೆನ್ನಲ್ಲೆ, ಜಿಲ್ಲೆಯ ಗಡಿ ಭಾಗದಲ್ಲಿಅರಣ್ಯ ಇಲಾಖೆಯ ಅಧಿಕಾರಿಗಳಕಟ್ಟೆಚ್ಚರ ವಹಿಸುವ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡು ವಲಸೆಹಕ್ಕಿಗಳ ಮೇಲೆ ತೀವ್ರ ನಿಗಾ ಇರಿಸಿದ್ದಾರೆ. ಮೈಸೂರು ಹಾಗೂಸುತ್ತಮುತ್ತ ಇರುವ ಕೊಕ್ಕರೆಬೆಳ್ಳೂರು, ರಂಗನತಿಟ್ಟು, ಲಿಂಗಾಂಬುಧಿ ಕೆರೆ ಸೇರಿದಂತೆ ವಲಸೆ ಹಕ್ಕಿಗಳುಕಾಣಿಸಿಕೊಳ್ಳುವ ಸ್ಥಳಗಳಲ್ಲಿ ಅವುಗಳ ಚಲನವಲನಗಳ ಮೇಲೆ ಗಮನ ಇಟ್ಟಿರುವುದಾಗಿ ಅರಣ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ.
ಇದ್ದಕ್ಕಿದ್ದಂತೆ ಹಕ್ಕಿಗಳು ಮೃತಪಟ್ಟರೆ,ಅಸ್ತವ್ಯಸ್ತವಾದ ಹಕ್ಕಿಗಳುಕಂಡುಬಂದರೆ ಕೂಡಲೆ ಇಲಾಖೆಯಮೇಲಧಿಕಾರಿಗಳ ಗಮನಕ್ಕೆ ತರಬೇಕು ಎಂದು ಸ್ಥಳದಲ್ಲಿ ಕೆಲಸ ಮಾಡುವಸಿಬ್ಬಂದಿಗೆ ತಿಳಿಸಲಾಗಿದೆ.
2 ಹಕ್ಕಿಗಳ ವರದಿ ನೆಗೆಟಿವ್: ಪೆಲಿಕನ್ ಹಕ್ಕಿಗಳು ಚಳಿಗಾಲದ ವೇಳೆಗೆ ಉತ್ತರ ಭಾರತದ ಮೂಲಕ ದಕ್ಷಿಣ ಭಾರತಕ್ಕೆ ವಲಸೆ ಬಂದುಕೆಲಕಾಲ ನೆಲೆಸುತ್ತವೆ. ಹೀಗೆ ಈ ಬಾರಿಅಕ್ಟೋಬರ್ ವೇಳೆ ವಲಸೆ ಬಂದಿದ್ದಪೆಲಿಕನ್ ಹಕ್ಕಿಗಳ ಪೈಕಿಕೊಕ್ಕರೆಬೆಳ್ಳೂರಿನಲ್ಲಿ 2 ಪೆಲಿಕನ್‌ಹಕ್ಕಿಗಳು ಅನುಮಾನಾಸ್ಪದವಾಗಿಸಾವನ್ನಪ್ಪಿದ್ದವು. “ಸಾವನ್ನಪ್ಪಿದ್ದಹಕ್ಕಿಗಳಿಗೆ ಹಕ್ಕಿ ಜ್ವರ ಇತ್ತೇ ಎಂದುಮಾಡಿಸಿದ ಪರೀಕ್ಷೆಯಲ್ಲಿ ನೆಗೆಟಿವ್‌ಫಲಿತಾಂಶ ಬಂದಿದ್ದು, ಸದ್ಯಕ್ಕೆಗಾಬರಿಯಾಗುವ ಅವಶ್ಯಕತೆ ಇಲ್ಲ’ಎಂದು ಡಿಸಿಎಫ್ ಕೆ.ಸಿ.ಪ್ರಶಾಂತ್ ಕುಮಾರ್ ತಿಳಿಸಿದ್ದಾರೆ.
ಕಳೆದ ವರ್ಷ ಮಾರ್ಚ್‌ನಲ್ಲಿ ಮೈಸೂರಿನಲ್ಲಿ ಇದೇ ರೀತಿ ಹಕ್ಕಿಜ್ವರ ಪ್ರಕರಣ ಭೀತಿ ಎದುರಾಗಿದ್ದು, ಜಿಲ್ಲಾಡಳಿತ ತುರ್ತು ಕ್ರಮಗಳನ್ನು ಕೈಗೊಂಡು ಮುಂಜಾಗ್ರತಾಕ್ರಮವಾಗಿ ಸಾವಿರಾರು ಕೋಳಿಗಳನ್ನು ಸಾಯಿಸಲಾಗಿತ್ತು.
ಮೃಗಾಲಯದಲ್ಲಿ ನಿಗಾ :
ಚಾಮರಾಜೇಂದ್ರ ಮೃಗಾಲಯದಲ್ಲಿ ಹಕ್ಕಿ ಜ್ವರದ ಆತಂಕವಿಲ್ಲ ಎಂದು ಮೃಗಾಲಯ ನಿರ್ದೇಶಕ ಅಜಿತ್ ಕುಲಕರ್ಣಿ ಸ್ಪಷ್ಟನೆ ನೀಡಿದ್ದು, ನೆರೆರಾಜ್ಯ ಮಹಾರಾಷ್ಟ್ರ ಸೇರಿದಂತೆ ವಿವಿಧ ರಾಜ್ಯಗಳಲ್ಲಿ ಹಕ್ಕಿಜ್ವರ ಕಾಣಿಸಿಕೊಂಡು ಪಕ್ಷಿಗಳು ಸಾವನ್ನಪ್ಪುತ್ತಿವೆ. ನಮ್ಮ ಮೃಗಾಲಯದಲ್ಲಿ ಸಾವಿರಾರುಪಕ್ಷಿಗಳಿದ್ದು, ಹಕ್ಕಿ ಜ್ವರ ಹರಡದಂತೆ ಎಲ್ಲ ರೀತಿಯ ಮುಂಜಾಗ್ರತಾ ಕ್ರಮ ಕೈಗೊಳ್ಳಲಾಗಿದೆ. ಪ್ರವಾಸಿಗರುಮೃಗಾಲಯಕ್ಕೆ ಆಗಮಿಸುವ ಮುನ್ನ ಔಷಧಿ ಸಿಂಪಡಿಸಿರುವ ಫೂಟ್ ಮ್ಯಾಟ್‌ಗಳನ್ನು ಅಳವಡಿಸಲಾಗಿದ್ದು, ಈ ಮೂಲಕ ಮೃಗಾಲಯ ಪ್ರವೇಶಿಸಿದ್ದಾರೆ. ಪ್ರವಾಸಿಗರಿಂದ ಹಕ್ಕಿಗಳಿಗೆಹಾಗೂ ಹಕ್ಕಿಗಳಿಂದ ಪ್ರವಾಸಿಗರಿಗೆ ಹಕ್ಕಿ ಜ್ವರ ಹರಡದಂತೆಮುಂಜಾಗ್ರತೆ ಕೈಗೊಳ್ಳಲಾಗಿದೆ ಎಂದು ತಿಳಿಸಿದ್ದಾರೆ.ಈಗಾಗಲೇ ಕೇಂದ್ರ ಮೃಗಾಲಯ ಪ್ರಾಧಿಕಾರ ನೀಡಿರುವ ನಿಯಮಗಳನ್ನು ಚಾಚೂ ತಪ್ಪದೆ ಪಾಲಿಸುತ್ತಿದ್ದೇವೆ. ಮೃಗಾಲಯದ ವೈದ್ಯರು ಎಲ್ಲ ಪಕ್ಷಿಗಳ ಚಲನವಲನಗಳ ಬಗ್ಗೆ ನಿಗಾ ಇಟ್ಟಿದ್ದಾರೆ ಎಂದು ಮಾಹಿತಿ ನೀಡಿದ್ದಾರೆ.
ಹಕ್ಕಿಜ್ವರ ತಡೆಗಟ್ಟುವಿಕೆ ಸಂಬಂಧ ಕೇಂದ್ರ ಸರ್ಕಾರದಿಂದ ಬಂದಿರುವ ನಿರ್ದೇಶನ ಗಳನ್ನು ಕಟ್ಟುನಿಟ್ಟಾಗಿ ಪಾಲಿಸಲಾಗುತ್ತಿದೆ. ವಲಸೆ ಹಕ್ಕಿಗಳು ಕಾಣಿಸಿಕೊಳ್ಳುವ ಕಡೆಏನೆಲ್ಲಾ ಮಾಡಬೇಕೆಂಬುದನ್ನು ಸಿಬ್ಬಂದಿಗೆ ತಿಳಿಸಲಾಗಿದೆ. ಅನುಮಾನಾಸ್ಪದ ಘಟನೆಗಳು ಕಂಡುಬಂದಲ್ಲಿ ತಕ್ಷಣ ನಮ್ಮನ್ನು ಸಂಪರ್ಕಿಸು ವಂತೆ ಹೇಳಿದ್ದೇವೆ. – ಕೆ.ಸಿ.ಪ್ರಶಾಂತ್ ಕುಮಾರ್, ಡಿಸಿಎಫ್ ಮೈಸೂರು.
24 ಗಂಟೆಗಳ ಕಾಲ ನಮ್ಮ ವೈದ್ಯರು ಹಕ್ಕಿ ಜ್ವರ ಹರಡದಂತೆ ಮುಂಜಾಗ್ರತೆವಹಿಸುತ್ತಿದ್ದಾರೆ. ಎಲ್ಲ ಮೃಗಾಲಯಗಳಲ್ಲಿ ಹಕ್ಕಿ ಜ್ವರ ಹರಡದಂತೆ ಸಿಬ್ಬಂದಿ ಕಾರ್ಯನಿರ್ವಹಿಸುತ್ತಿದ್ದಾರೆ. ಪ್ರವಾಸಿಗರು ಆತಂಕಪಡಬೇಕಿಲ್ಲ. –ಎಲ್.ಆರ್ ಮಹಾದೇವಸ್ವಾಮಿ, ಅಧ್ಯಕ್ಷರು ಮೃಗಾಲಯ ಪ್ರಾಧಿಕಾರ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ಯೋಗಾನರಸಿಂಹಸ್ವಾಮಿ ದೇಗುಲದಲ್ಲಿ ಭಕ್ತರಿಗೆ 2 ಲಕ್ಷ ಲಡ್ಡು ವಿತರಣೆ
Mysuru: ಕೆಆರ್‌ಎಸ್ ರಸ್ತೆಗೆ “ಸಿದ್ದರಾಮಯ್ಯ ಆರೋಗ್ಯ ಮಾರ್ಗ’ ನಿಶ್ಚಿತ: ಲಕ್ಷ್ಮಣ್
Sandalwood: ಪ್ರತಿಭೆ ಪ್ರದರ್ಶಿಸಲು ಕಲಾವಿದರಿಗೆ ಸೂಕ್ತ ವೇದಿಕೆ ಅಗತ್ಯ: ನಟ ಡಾಲಿ ಧನಂಜಯ
Hunsur: ಹುತಾತ್ಮ ಧಿವಿನ್ ಅಂತಿಮ ದರ್ಶನ ಪಡೆದ ಗ್ರಾಮಸ್ಥರು
Mysuru: ಇನ್ಫೋಸಿಸ್ ಆವರಣದಲ್ಲಿ ಚಿರತೆ: ಸಿಬಂದಿಗೆ ವರ್ಕ್ ಫ್ರಂ ಹೋಂ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.