ಗುಜರಾತ್‌ನಲ್ಲಿ ಬಿಜೆಪಿ ಸೋಲು ಸೂಚನೆ
Team Udayavani, Dec 10, 2017, 2:10 PM IST
ಮೈಸೂರು: ಗುಜರಾತ್‌ನ ಜನತೆ ಬದಲಾವಣೆ ಬಯುಸುತ್ತಿದ್ದು, ಹೀಗಾಗಿ ಈ ಚುನಾವಣೆಯಲ್ಲಿ ಬಿಜೆಪಿ ಸೋಲುವ ಸೂಚನೆ ಇದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದರು. ಮೈಸೂರಿನ ಟಿ.ಕೆ.ಬಡಾವಣೆ ತಮ್ಮ ನಿವಾಸದಲ್ಲಿ ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿದರು.
ಬಿಜೆಪಿ ಆಡಳಿತ ಗುಜರಾತ್ ಜನರಿಗೆ ಬೇಸರ ಮೂಡಿಸಿದೆ. ಅಲ್ಲಿನ ಜನರೂ ಬದಲಾಗಿದ್ದಾರೆ. ಇದು ಗುಜರಾತ್ ಚುನಾವಣೆ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ ಎಂದ ಅವರು, ತಾವು ಗುಜರಾತ್ ಚುನಾವಣಾ ಪ್ರಚಾರಕ್ಕೆ ಹೋಗಿಲ್ಲ. ಆದರೆ, ಪಕ್ಷದ ಮುಖಂಡರು ಹಾಗೂ ಪತ್ರಿಕಾ ಮಾಧ್ಯಮದ ಮಾಹಿತಿ ಆಧರಿಸಿ ಈ ಮಾತು ಹೇಳುತ್ತಿದ್ದೇನೆ ಎಂದರು.
ಈ ಕ್ಷೇತ್ರದಿಂದ ನಿಲ್ಲಲಿ: ವರುಣಾ ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪೂರಕ ವಾತಾವರಣವಿಲ್ಲ ಎಂಬ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಹೇಳಿಕೆಗೆ ತೀಕ್ಷ್ಣ ಪ್ರತಿಕ್ರಿಯೆ ನೀಡಿದ ಅವರು, ವರುಣಾ ಕ್ಷೇತ್ರದ ಬಗ್ಗೆ ಅವರಿಗೇನು ಗೊತ್ತು, ಅವರಿಗೂ ವರುಣಾ ಕ್ಷೇತ್ರಕ್ಕೂ ಏನು ಸಂಬಂಧ ಎಂದು ಪ್ರಶ್ನಿಸಿದರು.
ಅಲ್ಲದೆ, ಈ ಕ್ಷೇತ್ರದ ಜನರ ಬಗ್ಗೆ ಗೊತ್ತಾ? ಕ್ಷೇತ್ರದ ಉಸ್ತುವಾರಿಯಾದರೆ ಕ್ಷೇತ್ರದ ಬಗ್ಗೆ ಎಲ್ಲಾ ಗೊತ್ತಾಗಿ ಬಿಡುತ್ತಾ? ಹಾಗಿದ್ದರೆ ಸದಾನಂದಗೌಡರೇ ಈ ಕ್ಷೇತ್ರದಿಂದ ನಿಲ್ಲಲಿ ಎಂದು ತಿರುಗೇಟು ನೀಡಿದರು. ತಾನು ಮೊದಲಿನಿಂದಲೂ ನಿರಂತರವಾಗಿ ರಾಜ್ಯ ಪ್ರವಾಸ ಮಾಡುತ್ತಿದ್ದು, ಡಿ.13ರಿಂದ ಅಧಿಕೃತವಾಗಿ ರಾಜಾದಂತ ಪ್ರವಾಸ ಮಾಡುತ್ತೇನೆ ಎಂದರು.
ಅಹವಾಲು ಸ್ವೀಕರಿಸಿದ ಸಿಎಂ: ನಗರದಲ್ಲಿ ವಾಸ್ತವ್ಯ ಹೂಡಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ತಮ್ಮನ್ನು ಭೇಟಿ ಮಾಡಿದ ವಿವಿಧ ತಾಲೂಕಿನ ಜನರ ಸಮಸ್ಯೆ ಆಲಿಸಿದರು. ಮುಖ್ಯಮಂತ್ರಿಗಳ ಜನತಾ ದರ್ಶನದಲ್ಲಿ ಪಾಲ್ಗೊಂಡ ಜನರು ಜೆ.ಪಿ.ನಗರದ ನಾಚನಹಳ್ಳಿ ಪಾಳ್ಯದಲ್ಲಿ ಆಶ್ರಯ ರಹಿತರಿಗೆ ನಿರ್ಮಿಸಿದ ಸಾವಿರಾರು ಮನೆಗಳಲ್ಲಿ, ಮನೆ ಮಂಜೂರಾಗದ ಜನರು ವಾಸ ಮಾಡುತ್ತಿದ್ದು, ಮಂಜೂರು ಆಗಿರುವವರಿಗೆ ಮನೆಗಳನ್ನು ಕೊಡಬೇಕೆಂದು ಮನವಿ ಸಲ್ಲಿಸಿದರು.
ನಂಜನಗೂಡು ನಿವಾಸಿ ಮಾದೇಗೌಡ, ತಾಲೂಕಿನ ಬಹುತೇಕ ಹಳ್ಳಿಗಳಲ್ಲಿ ಪಡಿತರ ಚೀಟಿಗಾಗಿ ಅರ್ಜಿ ಸಲ್ಲಿಸಿ ಅನೇಕ ದಿನಗಳಾದರೂ ರೇಷನ್ ಕಾರ್ಡ್ ಬಂದಿಲ್ಲ ಎಂದು ಮನವಿ ಸಲ್ಲಿಸಿದರು. ಬೋಗಾದಿ ಬಡಾವಣೆಗಳಿಗೆ ಮೂಲ ಸೌಕರ್ಯ ಒದಗಿಸುವಂತೆ ನಿವಾಸಿಗಳು ಮನವಿ ಸಲ್ಲಿಸಿದರು. ಒಳ ಮೀಸಲಾತಿ ಜಾರಿ ಹಾಗೂ ಮಾದಿಗ ಅಭಿವೃದ್ಧಿಗೆ ನಿಗಮ ಸ್ಥಾಪನೆಗೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ ಮಾದಿಗ ಒಕ್ಕೂಟದ ಮನವಿ ಸ್ವೀಕರಿಸಿದ ಮುಖ್ಯಮಂತ್ರಿಗಳು, ಮನವಿ ಪರಿಶೀಲಿಸುವುದಾಗಿ ಭರವಸೆ ನೀಡಿದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.