BJP ತಳಮಟ್ಟದ ನಾಗರಿಕರ ಸಮಸ್ಯೆ ತಿಳಿಯದೆ ದೇಶ ಆಳುತ್ತಿದೆ: ಸಚಿವ ವೆಂಕಟೇಶ್
ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವ ತಂತ್ರಗಾರಿಕೆ.. ಎಚ್.ಸಿ.ಮಹದೇವಪ್ಪ, ಯತೀಂದ್ರ ತೀವ್ರ ವಾಗ್ದಾಳಿ
Team Udayavani, Mar 30, 2024, 7:57 PM IST
ಹುಣಸೂರು: ದೇಶದ ಅಧಿಕಾರದ ಚುಕ್ಕಾಣಿ ಹಿಡಿದ ಬಿಜೆಪಿಗೆ ತಳಮಟ್ಟದ ನಾಗರಿಕರ ಸಮಸ್ಯೆ ತಿಳಿಯದೆ ಧಾರ್ಮಿಕ ಭಾವನಾತ್ಮಕ ವಿಚಾರದಲ್ಲಿ ದೇಶ ಆಳುತ್ತಿದ್ದಾರೆ ಎಂದು ರೇಷ್ಮೆ ಮತ್ತು ಪಶುಸಂಗೋಪನಾ ಸಚಿವ ವೆಂಕಟೇಶ್ ಹೇಳಿದರು.
ಹುಣಸೂರು ನಗರದಲ್ಲಿ ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದರು. ಪ್ರಧಾನಿ ಮೋದಿ ದೇಶದ ನಾಗರಿಕರ ದುಖಃ ದುಮ್ಮಾನವನ್ನು ತಿಳಿಯುವ ಮನಸ್ಥಿತಿ ಇಲ್ಲದೆ ಆಡಳಿತ ನಡೆಸುತ್ತಿರುವ ಹೈಫೈ ಪ್ರಧಾನಿ. ದೆಹಲಿಯಲ್ಲಿ ಕಳೆದ ಒಂದುವರೆ ವರ್ಷದಿಂದ ಅನ್ನದಾತರು ಅಹೋರಾತ್ರಿ ಧರಣಿ ನಡೆಸುತ್ತಿದ್ದರೂ ಅವರೊಂದಿಗೆ ಮಾತುಕತೆ ನಡೆಸುವ ಮನಸ್ಥಿತಿ ಇಲ್ಲದ ವ್ಯಕ್ತಿಯಿಂದ ಅನ್ನದಾತ ಏನನ್ನು ನಿರೀಕ್ಷಿಸಲು ಸಾಧ್ಯ ಎಂದರು.
ಮೋದಿ ಸರ್ವಾಧಿಕಾರಿ ಧೋರಣೆಯಿಂದಾಗಿ ಸಂವಿಧಾನಾತ್ಮಕವಾಗಿ ನಾಗರಿಕರಿಗೆ ಸಿಕ್ಕ ಮೂಲಭೂತ ಹಕ್ಕುಗಳನ್ನು ಕಿತ್ತುಕೊಳ್ಳುವ ತಂತ್ರಗಾರಿಕೆ ನಡೆದಿದೆ. ಮಾದ್ಯಮದವರು ಮೋದಿ ಅವರನ್ನು ಓಲೈಕೆ ಮಾಡುತ್ತಿದ್ದು ನಿಜವಾದ ಪರಿಸ್ಥಿತಿ ಮತದಾರರಿಗೆ ಬಿತ್ತರಿಸುವಲ್ಲಿ ಸೋತ್ತಿದ್ದಾರೆ ಎಂದರು. ಮೋದಿ ವಿರುದ್ಧ ಧ್ವನಿ ಎತ್ತುವವರನ್ನು ಇ.ಡಿ, ಐ.ಟಿ ಇಲಾಖೆ ಚೂ ಬಿಟ್ಟು ಕತ್ತು ಹಿಸುಕುವ ಕೆಲಸ ನಡೆಸಿದೆ ಎಂದು ವಾಗ್ದಾಳಿ ನಡೆಸಿದರು.
ಜಿಲ್ಲಾ ಉಸ್ತುವಾರಿ ಸಚಿವ ಎಚ್.ಸಿ.ಮಹದೇವಪ್ಪ ಮಾತನಾಡಿ, ಸಂವಿಧಾನದಲ್ಲಿ ವ್ಯಕ್ತಿ ಪೂಜೆ ಇಲ್ಲ ಆದರೆ ಬಿಜೆಪಿ ವ್ಯಕ್ತಿ ಪೂಜೆ ಮಾಡುವ ಮೂಲಕ ಸರ್ವಾಧಿಕಾರಿ ಆಡಳಿತಕ್ಕೆ ನಾಂದಿ ಹಾಡಿದೆ ಎಂದರು. ಪ್ರಜಾಪ್ರಭುತ್ವದ ಉಳಿವಿಗೆ ಸಂವಿಧಾನದ ಮೇಲೆ ನಂಬಿಕೆ ಇರುವವರಿಗೆ ಅಧಿಕಾರ ಸಿಗಬೇಕು, ಬಿಜೆಪಿ ಜನರ ಪಕ್ಷವಲ್ಲ ಅದು ಕಾರ್ಪೋರೆಟ್ ಪಕ್ಷವಾಗಿದೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಮುಖಂಡ ಯತೀಂದ್ರ ಸಿದ್ದರಾಮಯ್ಯ, ಮೋದಿ ಸರ್ಕಾರದ ವಿರುದ್ಧ ಹರಿಹಾಯ್ದು, ಎಸಿ ಕೊಠಡಿಯಲ್ಲಿ ಕುಳಿತವರಿಗೆ ಮತ ನೀಡುವುದರಿಂದ ಶ್ರೀಸಾಮಾನ್ಯರಿಗೆ ಯಾವುದೇ ಪ್ರಯೋಜನವಿಲ್ಲ. ಬೀದಿಯಲ್ಲಿ ನಿಂತು ಹೋರಾಟ ನಡೆಸುವವರಿಗೆ ಮತ ನೀಡುವುದರಿಂದ ಜನಸಾಮಾನ್ಯರ ನೋವಿಗೆ ಸ್ಪಂದಿಸುವ ವ್ಯಕ್ತಿ ಲೋಕಸಭೆಯಲ್ಲೂ ಪ್ರತಿಧ್ವನಿಸಲು ಸಹಕಾರವಾಗಲಿದೆ ಎಂದರು.
ದೇಶದಲ್ಲಿ ಬಿಜೆಪಿ ಅತಿ ಹೆಚ್ಚಿನ ಸಂಖೆಯಲ್ಲಿ ಆಯ್ಕೆಗೊಂಡು ಮೂರನೇ ಬಾರಿ ಅಧಿಕಾರಕ್ಕೆ ಬರಲಿದೆ ಎಂದು ಕೆಲವು ಮಾಧ್ಯಮಗಳು ಬಿತ್ತರಿಸುತ್ತಿದ್ದು, ಅದು ಸತ್ಯಕ್ಕೆ ದೂರ. ಮಾಧ್ಯಮಗಳು ಸತ್ಯ ಹೇಳುತ್ತಿಲ್ಲ ಎಂದರು.
ಕೇಂದ್ರ ಸರ್ಕಾರ ಚುನಾವಣ ಬಾಂಡ್ ಹಗರಣ ಅತ್ಯಂತ ದೊಡ್ಡ ಭ್ರಷ್ಟಾಚಾರದಿಂದ ಕೂಡಿದೆ. ಎಸ್.ಬಿ.ಐ ಸುಪ್ರೀಂ ಕೋರ್ಟ್ ಗೆ ಸಲ್ಲಿಸಿರುವ ವರದಿಯಿಂದ ಭಹಿರಂಗವಾಗಿದೆ. ಈ ಎಲ್ಲಾ ಕೋಲಾಹಲ ನಡೆದಿದ್ದರೂ ಮೋದಿ ಮೌನಿಯಾಗಿದ್ದಾರೆ. ಜನರಿಗೆ ಮಾತನಾಡದ ಪ್ರಧಾನಿ ನಮಗೆ ಬೇಕೆ ? ಎಂಬ ಚರ್ಚೆ ದೇಶದಾದ್ಯಂತ ಶುರುವಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶಾಸಕ ಡಾ.ತಿಮ್ಮಯ್ಯ, ಮುಖಂಡರಾದ ಪುಷ್ಪ ಅಮರನಾಥ್, ಎಚ್.ಪಿ.ಮಂಜುನಾಥ್, ಕಾಂಗ್ರೆಸ್ ಅಭ್ಯರ್ಥಿ ಲಕ್ಷ್ಮಣ್, ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ವಿಜಯಕುಮಾರ್ ಮಾತನಾಡಿದರು. ವೇದಿಕೆಯಲ್ಲಿ ಪಕ್ಷದ ಸ್ಥಳಿಯ ಮುಖಂಡರಾದ ರಮೇಶ್, ಭಾಗ್ಯ ಸೋಮಶೇಖರ್, ಅರುಣ್, ರಾಮು,ಜಯರಾಂ. ಡಿ.ಕುನ್ನೇಗೌಡ,ಅಣ್ಣಯ್ಯ ನಾಯಕ, ಶಿರೇನಹಳ್ಳಿ ಬಸವರಾಜ್, ಪುಟ್ಟರಾಜ್ ಸೇರಿದಂತೆ ಹಲವು ಮುಖಂಡರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hunsur: ಬೈಕ್‌ನಿಂದ ಬಿದ್ದು ಹಿಂಬದಿ ಸವಾರ ಸಾವು
Actor Health: ಸ್ವಲ್ಪ ಜರುಗಿದ ದರ್ಶನ್ ಬೆನ್ನುಮೂಳೆ; ತುರ್ತಾಗಿ ಆಪರೇಷನ್ ಇಲ್ಲ: ವೈದ್ಯರು
Name Road: ರಸ್ತೆಗೆ ಸಿದ್ದರಾಮಯ್ಯ ಹೆಸರಿಟ್ಟರೇ ತಪ್ಪೇನು?: ಪ್ರತಾಪ್ ಸಿಂಹ
Hunsur: ಕೆಲ ಗ್ರಾಮಗಳಲ್ಲಿ ಒಂಟಿ ಸಲಗದ ಉಪಟಳ; ಬೆಳೆ ನಾಶ, ರೈತರು ಕಂಗಾಲು
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.