ಯುವಕನ ಮೇಲೆ ಕೊಲೆ ಪ್ರಯತ್ನ ತಪ್ಪಿಸ್ಥರ ವಿರುದ್ಧ ಕಾನೂನು ಜರುಗಿಸಿ: ಕೌಲನಹಳ್ಳಿ ಸೋಮಶೇಖರ್
Team Udayavani, Dec 18, 2021, 7:19 PM IST
ಪಿರಿಯಾಪಟ್ಟಣ: ತಾಲೂಕಿನ ರಾಣಿಗೇಟ್ ಹಾಡಿಯ ಬಸಪ್ಪ ಎಂಬ ಗಿರಿಜನ ಯುವಕನ ಮೇಲೆ ಗುಂಡು ಹಾರಿಸಿರುವುದು ಕಾನೂನು ಬಾಹಿರವಾಗಿದ್ದು ಶೀಘ್ರದಲ್ಲೆ ಅರಣ್ಯ ಇಲಾಖೆಯವರ ಮೇಲೆ ಎಫ್‌ಐಆರ್ ದಾಖಲಿಸುವಂತೆ ಜಿಲ್ಲಾಧಿಕಾರಿಗಳು ಪೊಲೀಸ್ ಇಲಾಖೆಗೆ ಸೂಚನೆ ನೀಡಬೇಕು ಎಂದು ಪರಿಸರ ಹೋರಾಟಗಾರ ಬಿಜೆಪಿ ಮುಖಂಡ ಕೌಲನಹಳ್ಳಿ ಸೋಮಶೇಖರ್ ಆಗ್ರಹಿಸಿದ್ದಾರೆ.
ಪಿರಿಯಾಪಟ್ಟಣದ ರಾಣಿಗೇಟ್ ಹಾಡಿಯ ಬಸಪ್ಪ ಮನೆ ಮತ್ತು ಘಟನೆ ನಡೆದ ಸ್ಥಳಗಳನ್ನು ಹಾಡಿಯ ಮುಖಂಡರೊಂದಿಗೆ ಭೇಟಿ ನೀಡಿ ಹಾಡಿಯ ಜನರೊಂದಿಗೆ ಮಾತುಕತೆ ನಡೆಸಿದರು. ಯಾವುದೆ ಅರಣ್ಯ ಇಲಾಖೆಯ ಕಾನೂನಿನಲ್ಲಿ ಮತ್ತು ಅರಣ್ಯ ಇಲಾಖೆ ಮ್ಯಾನ್ಯುಯಲ್‌ನಲ್ಲಿ ವಾಚರ್‌ಗಳು ಬಂದೂಕು ಬಳಸಲು ಅವಕಾಶ ನೀಡಿಲ್ಲ, ಶಸ್ತ್ರಕಾಯಿದೆ ಪ್ರಕಾರ ಅಕ್ರಮವಾಗಿ ಬಂದೂಕು ಚಲಾಯಿಸಿರುವುದು ಅಕ್ಷ್ಯಮ್ಮ ಅಪರಾಧವಾಗಿದೆ. ಮುಗ್ಧ ಗಿರಿಜನರನ್ನು ಬೆದರಿಸುವ ತಂತ್ರಗಾರಿಗೆ ಬ್ರೀಟಿಷರ ಕಾಲದಿಂದಲೂ ನಡೆದುಕೊಂಡು ಬಂದಿದೆ, ಇದೊಂದು ಅಮಾನವೀಯ ಪ್ರಕರಣ ಅರಣ್ಯ ಇಲಾಖೆ ಹೇಳುವಂತೆ ಗಂಧದ ಮರಕಳ್ಳತ ಮಾಡುತ್ತಿದ್ದರು ಎಂಬ ಆರೋಪ ಇದ್ದಾಗಿಯೂ ಗುಂಡುಹೊಡೆಯುವ ಅಧಿಕಾರ ವಾಚರ್‌ಗಳಿಗೆ ಇಲ್ಲವಾಗಿದೆ, ಬಂದೂಕು ಪರವಾನಗಿಯೂ ವಲಯ ಅರಣ್ಯಾಧಿಕಾರಿಗಳ ಹೆಸರಿನಲ್ಲಿ ನೀಡಲಾಗಿದ್ದು ಕೆಳಹಂತದ ನೌಕರರು ಬಂದೂಕು ಬಳೆಕೆ ಮಾಡುವಂತೆ ಯಾವುದೆ ಮ್ಯಾನ್ಯುವಲ್‌ನಲ್ಲಿ ತಿಳಿಸಲಾಗಿಲ್ಲ ಆದ್ದರಿಂದ ಶೀಘ್ರದಲ್ಲಿ ಕಾನೂನು ಮೀರಿ ಶೂಟ್ ಮಾಡಿರುವ ನೌಕರರ ವಿರುದ್ಧ ಕ್ರಮಕೈಗೊಳ್ಳುವಂತೆ ಆಗ್ರಹಿಸಿದರು.
ಕಾನೂನು ಹೋರಾಟ :
ಹಾಡಿಯ ಜನರು ಪ್ರತಿಯಾಗಿ ನೀಡಿರುವ ದೂರನ್ನು ಸ್ವೀಕರಿಸದೆ ಮೀನಾ ಮೇಷ ಎಣಿಸುತ್ತಿರುವ ಪೊಲೀಸ್ ಇಲಾಖೆಗೆ ಬಂದೂಕು ಬಳಕೆಯಾಗಿರುವುದರಿಂದ ಜಿಲ್ಲಾಧಿಕಾರಿಗಳು ಸೂಕ್ತ ಸೂಚನೆ ನೀಡಿ ಅರಣ್ಯ ಇಲಾಖೆಯವರ ವಿರುದ್ಧವು ಎಫ್‌ಐಆರ್ ದಾಖಲಿಸಬೇಕು ಇಲ್ಲದಿದ್ದಲ್ಲಿ ಈ ಬಗ್ಗೆ ಕಾನೂನು ಹೋರಾಟವನ್ನು ಕೈಗೆತ್ತಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
Gurantee Burden: ಗ್ಯಾರಂಟಿ ಕೊಟ್ಟು, ಇನ್ನೊಂದೆಡೆ ಬೆಲೆ ಹೆಚ್ಚಿಸಿ ಬರೆ: ಸಂಸದ ಕಾರಜೋಳ
ಬೈಲುಕುಪ್ಪೆಗೆ ಟಿಬೇಟಿಯನ್ನರ 14ನೇ ಧರ್ಮಗುರು ದಲೈಲಾಮಾ ಆಗಮನ
Hunsur: ಬ್ಯಾರಿಕೇಡ್ ಗೆ ಸಿಲುಕಿದ ಗಜರಾಜ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.