BJP ಅಯೋಧ್ಯೆಯಲ್ಲೇ ಸೋತಿದೆ, ಮೋದಿ ಆ ಮಾತು ಹೇಳಬಾರದಿತ್ತು: ವಿಶ್ವನಾಥ್
ಯದುವೀರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಹಾಕುವುದು ಬೇಡ ಅಂದಿದ್ದೆ.. ಈಗ ಏನಾಯಿತು?
Team Udayavani, Jun 5, 2024, 2:17 PM IST
ಮೈಸೂರು: ಶ್ರೀರಾಮನ ಜನ್ಮಸ್ಥಳವಾಗಿರುವ ಅಯೋಧ್ಯೆಯಲ್ಲೇ ಬಿಜೆಪಿಗೆ ಸೋಲಾಗಿದೆ.ಜನರು ಇದನ್ನು ಒಪ್ಪುವುದಿಲ್ಲ ಎಂಬುದು ಸಾಬೀತಾಗಿದೆ. ಜನರಿಗೆ ಮೂಲಭೂತ ಸೌಕರ್ಯಗಳ ಅವಶ್ಯಕತೆ ಇದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದಾರೆ ಎಂದು ವಿಧಾನಪರಿಷತ್ ಸದಸ್ಯ ಎಚ್. ವಿಶ್ವನಾಥ್ ಬುಧವಾರ ಹೇಳಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿ ನಡೆಸಿ ಮಾತನಾಡಿ ‘ಮಹಾತ್ಮಗಾಂಧಿ ಯಾರೆಂದು ಗೊತ್ತಿರಲಿಲ್ಲ ಎಂದು ಪ್ರಧಾನಿ ಮೋದಿ ಆಡಿದ ಮಾತು ಸರಿಯಲ್ಲ.ಸೂರ್ಯಚಂದ್ರ ಇರುವವರೆಗೂ ಮಹಾತ್ಮಗಾಂಧಿಯವರ ಹೆಸರು ಸ್ಥಿರವಾಗಿರುತ್ತದೆ’ ಎಂದರು.
ಅಭ್ಯರ್ಥಿ ಹಾಕುವುದು ಬೇಡ ಎಂದಿದ್ದೆ
ಯದುವಂಶದ ಯದುವೀರ್ ವಿರುದ್ಧ ಕಾಂಗ್ರೆಸ್ ಅಭ್ಯರ್ಥಿ ಹಾಕುವುದು ಬೇಡ ಎಂದು ಹೇಳಿದ್ದೆ.ಆದರೂ ಕಾಂಗ್ರೆಸ್ ನಾಯಕರು ಲಘುವಾಗಿ ತೆಗೆದುಕೊಂಡರು. ಒಕ್ಕಲಿಗರನ್ನ, ಲಿಂಗಾಯತರನ್ನ ಹಾಕುತ್ತೇವೆ ಎಂದರು. ಮಹರಾಜರಿಗೆ ಯಾವ ಜಾತಿ ಇಲ್ಲ.ಸಿಎಂ ಮೈಸೂರಿನಲ್ಲಿ 12 ದಿನ ಮಲಗಿಕೊಂಡರು.ಆದರೆ ಫಲಿತಾಂಶ ಏನಾಯಿತು ಎಂದು ಪ್ರಶ್ನಿಸಿದರು.
ಮುಖ್ಯಮಂತ್ರಿಗಳ ದುರಂಕಾರದಿಂದ ಏನೂ ಆಗುವುದಿಲ್ಲ. 136 ಸೀಟು ಗೆದ್ದು, ಗ್ಯಾರಂಟಿ ಕೊಟ್ಟು ಆಗಿದ್ದೇನು.ಸರ್ಕಾರದ ನಡವಳಿಕೆ ಬಗ್ಗೆ ಜನ ಗಮನಹರಿಸುತ್ತಾರೆ. ಏಕವಚನದಲ್ಲಿ ಮಾತನಾಡಿಸುವುದನ್ನು ಸಿಎಂ ಬಿಡಬೇಕು ಎಂದು ಸಿದ್ದರಾಮಯ್ಯ ವಿರುದ್ದ ಮತ್ತೆ ಅಸಮಾಧಾನ ಹೊರ ಹಾಕಿದರು.
ಯದುವೀರ್ ಅವರಿಗೆ ಬಹಳ ಜವಬ್ದಾರಿ ಇದೆ. ಮೈಸೂರು ಪ್ರವಾಸೋದ್ಯಮದ ಬಗ್ಗೆ ಗಮನಹರಿಸಬೇಕು. ವಿಶ್ವವಿಖ್ಯಾತ ದಸರಾ ಕುಸಿದು ಹೋಗಿದೆ. ಅದನ್ನ ವಿಶ್ವವಿಖ್ಯಾತ ಮತ್ತೆ ಮಾಡಬೇಕು. ಕೇಂದ್ರ ಪ್ರವಾಸೋದ್ಯಮ ಇಲಾಖೆಯನ್ನ ಇಲ್ಲಿಗೆ ಕರೆತರಬೇಕು. ಯಾವುದೇ ಅಲೆಯಿಂದ ಯದವೀರ್ ಆಯ್ಕೆಯಾಗಿಲ್ಲ. ಜನರ ಅಲೆಯಿಂದ ಯದುವೀರ್ ಆಯ್ಕೆಯಾಗಿದ್ದಾರೆ.ರಾಜರ ಕೊಡುಗೆಗಳನ್ನು ನಾವು ಸ್ಮರಿಸಬೇಕು’ ಎಂದರು.
‘1 ರಿಂದ 9 ಕ್ಕೆ ಬಂದಿದ್ದೇವೆ ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ, 28 ಕ್ಕೆ 28 ಗೆಲ್ಲುತ್ತೇವೆ ಎನ್ನುತ್ತಿದ್ದರು, ಯಾಕೆ ಗೆಲ್ಲಲಿಲ್ಲ? ಮೈಸೂರಿನಲ್ಲಿ ಕಾಂಗ್ರೆಸ್ ಸೋಲು ರಾಜ್ಯ ಸರಕಾರದ ಮೇಲೆ ಜನರಿಗೆ ವಿಶ್ವಾಸವಿಲ್ಲ ಎಂಬುದರ ಧ್ಯೋತಕ’ ಎಂದರು.
‘ಸಂಸತ್ತಿಗೆ ಆಯ್ಕೆಯಾಗಿರುವ ರಾಜ್ಯದ 28 ಜನರಿಗೂ ಅಭಿನಂದನೆ ಸಲ್ಲಿಸುತ್ತೇನೆ. 28 ಜನ ಸಂಸದರೂ ಕೂಡ ಪಕ್ಷಾತೀತವಾಗಿ ಕೆಲಸ ಮಾಡಬೇಕು.ಕಳೆದ ಬಾರಿ ಆಯ್ಕೆಯಾದ ಸಂಸದರು ರಾಜ್ಯದ ನೆಲ, ಜಲ, ನಾಡಿನ ಸಮಸ್ಯೆಗಳ ಕುರಿತು ಪ್ರಶ್ನೆಯನ್ನೇ ಮಾಡಲಿಲ್ಲ.ನಮ್ಮ ಅವಧಿಯಲ್ಲಿ ಕರ್ನಾಟಕದ ಯಾವುದೇ ಸಮಸ್ಯೆಗಳಿಗೆ ಒಟ್ಟಾಗಿ ಹೋರಾಟ ಮಾಡುತ್ತಿದ್ದೆವು.ಇತ್ತೀಚಿನ ದಿನಗಳಲ್ಲಿ ಒಗ್ಗಟ್ಟಿನ ಕೊರತೆಯಿದೆ.
ನಾಡಿನ ಸಮಸ್ಯೆಗಳು ಬಂದಾಗ ಈಗ ಆಯ್ಕೆಯಾಗಿರುವ ಸಂಸದರು ಆ ರೀತಿಯಾಗಬಾರದು.ಈ ಬಾರಿ ಮೂವರು ಮಾಜಿ ಸಿಎಂ ಗಳು ಸಂಸತ್ತಿಗೆ ಆಯ್ಕೆಯಾಗಿದ್ದಾರೆ.ರಾಜ್ಯದ ಸಮಸ್ಯೆಗಳನ್ನು ಬಗಹರಿಸುವ ಕೆಲಸವನ್ನು ನೀವು ಮಾಡಬೇಕು. ಮುಖ್ಯಮಂತ್ರಿಗಳಾಗಿ ಸಾಕಷ್ಟು ಅನುಭವವಿದೆ. ಎಚ್.ಡಿ. ಕುಮಾರಸ್ವಾಮಿ, ಬಸವವಾಜ ಬೊಮ್ಮಾಯಿ ಮತ್ತು ಜಗದೀಶ್ ಶೆಟ್ಟರ್ ಅವರು ನೇತೃತ್ವ ವಹಿಸಿ ಸಂಸತ್ತಿನಲ್ಲಿ ಕೇಂದ್ರ ಸರ್ಕಾರದ ಗಮನ ಸೆಳೆಯುವ ಕೆಲಸ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
BGT 2024: ಮೆಲ್ಬೋರ್ನ್ ಪಂದ್ಯಕ್ಕೂ ಟೀಂ ಇಂಡಿಯಾಗೆ ಗಾಯಾಳುಗಳ ಸಮಸ್ಯೆ
Mohali: ನಾಲ್ಕಂತಸ್ತಿನ ಕಟ್ಟಡ ಕುಸಿದು 20 ವರ್ಷದ ಯುವತಿ ಸಾವು
Vijay Hazare Trophy: ಮತ್ತೊಂದು ದಾಖಲೆ ಬರೆದ 13ರ ಹರೆಯದ ವೈಭವ್ ಸೂರ್ಯವಂಶಿ
BBMP Notice: ವಿರಾಟ್ ಕೊಹ್ಲಿ ಸಹ ಮಾಲಿಕತ್ವದ ರೆಸ್ಟೋರೆಂಟ್‌ಗೆ ಬಿಬಿಎಂಪಿ ನೋಟಿಸ್
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.