ಭಿನ್ನತೆಯ ನಡುವೆಯೂ ಏಕತೆಯ ಮಂತ್ರ
Team Udayavani, May 7, 2017, 10:34 AM IST
ಮೈಸೂರು: ನಗರದಲ್ಲಿ ಶುಕ್ರವಾರ ಆರಂಭವಾದ ಎರಡು ದಿನಗಳ ರಾಜ್ಯ ಬಿಜೆಪಿ ಕಾರ್ಯಕಾರಿಣಿ ಸಭೆಯಲ್ಲಿ ಮಾತನಾಡಿದ ನಾಯಕರೆಲ್ಲರೂ “ನಮ್ಮಲ್ಲಿ ಯಾವುದೇ ಗೊಂದಲಗಳಿಲ್ಲ, ನಾವೆಲ್ಲಾ ಒಟ್ಟಾಗಿದ್ದೇವೆ’ ಎಂದು ಏಕತೆಯ ಮಂತ್ರ ಜಪಿಸಿದರಾದರೂ ನಾಯಕರ ನಡವಳಿಕೆಗಳು ಮಾತ್ರ ನಾನೊಂದು ತೀರಾ, ನೀನೊಂದು ತೀರಾ ಎಂಬತ್ತಿತ್ತು. ಈ ಮಧ್ಯೆ, ಯಡಿಯೂರಪ್ಪ ಹಾಗೂ ಈಶ್ವರಪ್ಪ ನಡುವಿನ ಮುನಿಸು ಕಾರ್ಯಕಾರಿಣಿಯಲ್ಲೂ ಮುಂದುವರಿಯಿತು.
ಯಡಿಯೂರಪ್ಪ ಅವರು ಮೇಲುಗೈ ಸಾಧಿಸಿದರೆ, ಅವರ ವಿರುದ್ಧ ತೊಡೆತಟ್ಟಿದ್ದ ಕೆ.ಎಸ್.ಈಶ್ವರಪ್ಪ ಅವರು ಮೊದಲ ದಿನ ಅಕ್ಷರಶಃ ಏಕಾಂಗಿಯಾಗುಳಿದರು.
ಈಶ್ವರಪ್ಪ ಅವರನ್ನು ಹತ್ತಿರಕ್ಕೆ ಹೋಗಿ ಮಾತನಾಡಿಸಿದರೆ ಎಲ್ಲಿ ಯಡಿಯೂರಪ್ಪ ಅವರ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೋ ಎಂಬ ಕಾರಣಕ್ಕೆ ಯಾರೊಬ್ಬರೂ ಅವರ ಹತ್ತಿರ ಸುಳಿಯುವ ದುಸ್ಸಾಹಸ ಮಾಡಲಿಲ್ಲ. ಉದ್ಘಾಟನಾ ಸಮಾರಂಭದ ನಂತರ ಚಹಾ ವಿರಾಮದಲ್ಲೂ ಈಶ್ವರಪ್ಪ ಏಕಾಂಗಿಯಾಗಿದ್ದರು. ಈ ವೇಳೆ, ಸಂಸದ ಪ್ರತಾಪ್ ಸಿಂಹ ಹಾಗೂ ನಗರ ಬಿಜೆಪಿ ಅಧ್ಯಕ್ಷ ಡಾ.ಮಂಜುನಾಥ್ ಅವರು ಜತೆಗೂಡಿ ಮಾತನಾಡಿಸುವ ಪ್ರಯತ್ನ ಮಾಡಿದರು. ನಂತರ ಕಾರ್ಯಕಾರಿಣಿಯಿಂದ ಹೊರಗುಳಿದ ಈಶ್ವರಪ್ಪ ಅವರು, ಮುಖಂಡರೊಬ್ಬರ ಮನೆಗೆ ತೆರಳಿ ವಿಶ್ರಾಂತಿ ಪಡೆದು ಸಂಜೆ ವೇಳೆಗೆ ಸಭೆಗೆ ಬಂದರು.
ಇದಕ್ಕೂ ಮುನ್ನ ನಗರದ ಪಾತಾಳ ಆಂಜನೇಯಸ್ವಾಮಿ ದೇವಾಲಯದಲ್ಲಿ ಪೂಜೆ ಸಲ್ಲಿಸಿದ ಈಶ್ವರಪ್ಪ ಅವರು ಹೊರಬಂದ ನಂತರ ಅಲ್ಲಿದ್ದ ಕೆಲ ಕಾರ್ಯಕರ್ತರು ಮುಂದಿನ ಮುಖ್ಯಮಂತ್ರಿ ಈಶ್ವರಪ್ಪಗೆ ಜೈ ಎಂದು ಜೈಕಾರ ಕೂಗಿದ್ದು, ಕೆಲವು ನಾಯಕರಿಗೆ ಇರುಸು ಮುರುಸು ಉಂಟು ಮಾಡಿತು.
ಕಿವಿ ಹಿಂಡಿದ ಶಾಣಪ್ಪ:
ಕಾರ್ಯಕಾರಿಣಿಯ ಗೋಷ್ಠಿಯ ಸಂದರ್ಭದಲ್ಲಿ ಕಾರ್ಯಕ್ರಮ ನಿರ್ವಹಣೆ ಮಾಡುತ್ತಿದ್ದ ಸಂಸದೆ ಶೋಭಾ ಕರಂದ್ಲಾಜೆ ಅವರು ವಿಧಾನಪರಿಷತ್ ಸದಸ್ಯ ಕೆ.ಬಿ.ಶಾಣಪ್ಪ ಅವರನ್ನು ದಲಿತ ನಾಯಕರು, ಅಸ್ಪ್ರಶ್ಯತೆ ವಿರುದ್ಧ ಹೋರಾಟ ಮಾಡಿದವರು ಎಂದರು. ಇದರಿಂದ ಬೇಸರಗೊಂಡ ಶಾಣಪ್ಪ, “ಅಲ್ಲಮ್ಮಾ, ನಮ್ಮನ್ನು ಇನ್ನೂ ದಲಿತ ನಾಯಕರು ಅಂತಲೇ ಗುರುತಿಸುತ್ತೀರಲ್ಲಾ, ಬಿಜೆಪಿ ನಾಯಕರು ಎಂದೇಕೆ ಹೇಳುವುದಿಲ್ಲ’ ಎಂದು ನಯವಾಗಿಯೇ ತರಾಟೆಗೆ ತೆಗೆದುಕೊಂಡರು.
ಬಳಿಕ, ತಮ್ಮ ಮಾತಿನುದ್ದಕ್ಕೂ ಯಡಿಯೂರಪ್ಪ-ಈಶ್ವರಪ್ಪ ಅವರ ಕಿವಿಹಿಂಡಿದ ಶಾಣಪ್ಪ, ಮಿಷನ್ 150 ಸಾಧ್ಯವಾಗಬೇಕಿದ್ದರೆ ನಾಯಕರೆನಿಸಿಕೊಂಡವರು ಎಲ್ಲರನ್ನೂ ಒಟ್ಟಾಗಿ ತೆಗೆದುಕೊಂಡು ಹೋಗಬೇಕು ಎಂದರು. ತಮ್ಮ ಮಾತು ರಾಜ್ಯ ಉಸ್ತುವಾರಿ ಮುರಳೀಧರರಾವ್, ಸಹ ಪ್ರಭಾರಿ ಪುರಂದರೇಶ್ವರಿಗೆ ಅರ್ಥವಾಗಲಿ ಎಂಬ ಕಾರಣಕ್ಕೆ ಇಂಗ್ಲೀಷ್‌ನಲ್ಲಿ ಮಾತನಾಡಿ ಗಮನ ಸೆಳೆದರು.
ಕಣ್ಣೆತ್ತಿಯೂ ನೋಡದ ಬಿಎಸ್‌ವೈ
ಕಾರ್ಯಕಾರಿಣಿಯ ಉದ್ಘಾಟನಾ ಸಮಾರಂಭದ ವೇದಿಕೆಗೆ ತಡವಾಗಿ ಬಂದ ವಿಧಾನ ಪರಿಷತ್ ವಿರೋಧಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ ಅವರನ್ನು ಪಕ್ಷದ ರಾಜ್ಯ ಉಸ್ತುವಾರಿ ಮುರಳೀಧರರಾವ್, ಕೇಂದ್ರ ಸಚಿವರಾದ ಅನಂತಕುಮಾರ್, ಸದಾನಂದ ಗೌಡ ಸೇರಿದಂತೆ ವೇದಿಕೆಯಲ್ಲಿದ್ದವರೆಲ್ಲ ಎದ್ದು ನಿಂತು ಬರಮಾಡಿಕೊಂಡರು. ಆದರೆ, ಆ ಸಂದರ್ಭದಲ್ಲಿ ಕರಡು ನಿರ್ಣಯಕ್ಕೆ ಅಂತಿಮ ರೂಪ ಕೊಡುತ್ತಿದ್ದ ಬಿ.ಎಸ್.ಯಡಿಯೂರಪ್ಪ ಅವರು ಈಶ್ವರಪ್ಪ ಅವರನ್ನು ತಲೆ ಎತ್ತಿಯೂ ನೋಡಲಿಲ್ಲ. ಹೀಗಾಗಿ, ಯಡಿಯೂರಪ್ಪಗೆ ಹಸ್ತಲಾಘವ ಮಾಡಲು ಹೋಗಿದ್ದ ಈಶ್ವರಪ್ಪ ಅವರು ಕೈಮುಗಿದು ತಮ್ಮ ಸ್ಥಾನಕ್ಕೆ ಬಂದು ಕುಳಿತರು.
ಈಶ್ವರಪ್ಪ ಹೆಸರೇಳದ ಯಡಿಯೂರಪ್ಪ
ಕಾರ್ಯಕಾರಿಣಿಯ ಅಧ್ಯಕ್ಷೀಯ ಭಾಷಣದ ಸರದಿ ಬಂದಾಗ ಯಡಿಯೂರಪ್ಪ ಅವರು, ವೇದಿಕೆಯಲ್ಲಿದ್ದ ರಾಜ್ಯ ಉಸ್ತುವಾರಿ ಹಾಗೂ ಕೇಂದ್ರ ಸಚಿವರ ಹೆಸರುಗಳನ್ನಷ್ಟೇ ಹೇಳಿದರು. ಕೆ.ಎಸ್.ಈಶ್ವರಪ್ಪ ಅವರ ಹೆಸರು ಹೇಳಬೇಕಾಗುತ್ತದೆ ಎಂಬ ಕಾರಣಕ್ಕಾಗಿಯೇ ಎರಡೂ ಮನೆಯ ಪ್ರತಿಪಕ್ಷ ನಾಯಕರೇ ಎನ್ನುವ ಮೂಲಕ ಜಗದೀಶ್ ಶೆಟ್ಟರ್ ಹೆಸರನ್ನೂ ಬಿಟ್ಟು ಜಾಣ್ಮೆ ಮೆರೆದರು.
“ಸಂತೋಷ’ದ ಫ್ಲೆಕ್ಸ್ ತೆರವು:
ರಾಜೇಂದ್ರ ಕಲಾಮಂದಿರ ಎದುರಿನ ರಾಮಾನುಜ ರಸ್ತೆಯಲ್ಲಿ ಪ್ರಧಾನಿ ನರೇಂದ್ರ ಮೋದಿ, ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ, ರಾಜಾÂಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರ ಭಾವಚಿತ್ರಗಳಿದ್ದ ಫ್ಲೆಕ್ಸ್‌ಗಳಲ್ಲಿ “ಪಕ್ಷದ ಗೆಲುವಿಗೆ ಸಂತೋಷವೇ ಸೂತ್ರ ದಾರಿ’ ಎಂಬ ಅಡಿ ಬರಹ ಹಾಕಲಾಗಿತ್ತು. ಆದರೆ, ಸ್ವತ್ಛನಗರಿಯ ಹಿನ್ನೆಲೆಯಲ್ಲಿ ಸಾರ್ವಜನಿಕ ಸ್ಥಳಗಳಲ್ಲಿ ಫ್ಲೆಕ್ಸ್, ಬ್ಯಾನರ್ ಕಟ್ಟಬಾರದು ಎಂಬ ಕಾರಣಕ್ಕೆ ಇದನ್ನು ತೆರವುಗೊಳಿಸಲಾಯಿತು.
ಮಾಧ್ಯಮ ಕೇಂದ್ರ ಎತ್ತಂಗಡಿ
ಕಾರ್ಯಕಾರಿಣಿ ಆಯೋಜನೆ ಸಂದರ್ಭದಲ್ಲಿ ರಾಜೇಂದ್ರ ಕಲಾಮಂದಿರದ ಕೆಳಮಹಡಿಯ ಕೋಣೆಯಲ್ಲೇ ಮಾಧ್ಯಮ ಕೇಂದ್ರದ ವ್ಯವಸ್ಥೆ ಮಾಡಲಾಗಿತ್ತು. ಆದರೆ, ಮಾಧ್ಯಮವನ್ನು ಹೊರಗಿಡುವಂತೆ ರಾಜ್ಯ ಉಸ್ತುವಾರಿ ಮುರಳೀಧರರಾವ್ ಸೂಚನೆ ನೀಡಿದ ಹಿನ್ನೆಲೆಯಲ್ಲಿ ಉದ್ಘಾಟನಾ ಸಮಾರಂಭದ ನಂತರ ಮಾಧ್ಯಮದವರನ್ನು ಹೊರ ಕಳುಹಿಸಿ, ಕಾರ್ಯಕಾರಿಣಿಯ ವಿವರಗಳನ್ನು ಒದಗಿಸುವ ಕೆಲಸವನ್ನು ದೂರದ ಹೋಟೆಲ್‌ಗೆ ಸ್ಥಳಾಂತರಿಸಲಾಯಿತು.
– ಗಿರೀಶ್ ಹುಣಸೂರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ವಕ್ಫ್ ಆಸ್ತಿ ತಿದ್ದುಪಡಿ ವಿಚಾರದಲ್ಲಿ ಸಿಎಂ ಅಸಹಾಯಕರು: ಕುಮಾರ್ ಬಂಗಾರಪ್ಪ
Hospet: ವಕ್ಫ್ ನಿಂದ ಹಿಂದೂ – ಮುಸ್ಲಿಂ ಸಮಾಜಕ್ಕೆ ಅನ್ಯಾಯ; ರಮೇಶ್ ಜಾರಕಿಹೊಳಿ
Yadgir: ನಗರ ಪೊಲೀಸರ ಕಾರ್ಯಾಚರಣೆ… 7 ಲಕ್ಷ ರೂ. ಮೌಲ್ಯದ 22 ಬೈಕ್ ವಶ
Bidar contractor ಆತ್ಮಹ*ತ್ಯೆ ಪ್ರಕರಣ: ಸ್ವತಂತ್ರ ತನಿಖೆಗೆ ಪ್ರಿಯಾಂಕ್ ಖರ್ಗೆ ಒಲವು
Manvi; ರಾಜಲಬಂಡ ಅಣೆಕಟ್ಟೆಯಲ್ಲಿ ಕಂಡು ಬಂದ ಭಾರಿ ಗಾತ್ರದ ಮೀನುಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.