ತಡೆಗೋಡೆ ಒಡೆದು ರಸ್ತೆ ನಿರ್ಮಾಣ
Team Udayavani, Apr 11, 2018, 12:38 PM IST
ಪಿರಿಯಾಪಟ್ಟಣ: ತಾಲೂಕಿನ ಕಂಪಲಾಪುರ ಸರ್ಕಾರಿ ಶಾಲೆ ಮತ್ತು ಗ್ರಾಪಂಗೆ ಹೊಂದಿ ಕೊಂಡ ಶಾಲಾ ತಡೆಗೋಡೆ ಒಡೆದು ರಸ್ತೆ ನಿರ್ಮಿಸಲಾಗಿದೆ. ಏ.3ರಂದು ಎಂದಿನಂತೆ ಶಾಲೆ ಮುಗಿಸಿ ವಾಪಸ್ಸಾಗಿದ್ದು, ಬೆಳಗ್ಗೆ ನೋಡಿದ್ರೆ ತಡೆಗೋಡೆ ಒಡೆದು ರಸ್ತೆ ಮಾಡಲಾಗಿದೆ.
ಈ ಸಂಬಂಧ ಬಿಇಒ ಕಚೇರಿಗೆ ಮಾಹಿತಿ ನೀಡಿದ್ದು, ಪೊಲೀಸರಿಗೆ ದೂರು ನೀಡಿದ್ದೇನೆ ಎಂದು ಮುಖ್ಯಶಿಕ್ಷಕಿ ನಾಗವೇಣಿ ತಿಳಿಸಿದ್ದಾರೆ. ಪಿಡಿಒ ಕೆಂಚೇಗೌಡ ಕೂಡ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದಾರೆ. ಕೆರೆಗೆ ಹೋಗಲು ಇಲ್ಲಿ ರಸ್ತೆ ನಿರ್ಮಿಸುವ ಸಂಬಂಧ ಜನರಿಂದ ಮನವಿ ಬಂದಿದೆ.
ಗ್ರಾಪಂನಿಂದಲೇ ಈ ಸ್ಥಳದಲ್ಲಿ ರಸ್ತೆ ನಿರ್ಮಾಣ ಮಾಡಬೇಕೆಂದು ನಿರ್ಣಯ ಕೈಗೊಳ್ಳಲಾಗಿತ್ತು. ಇದರಲ್ಲಿ ಇರುವ ಮರ ತೆರವುಗೊಳಿಸಲು ಅರಣ್ಯ ಇಲಾಖೆಗೆ ಮನವಿ ಮಾಡಲಾಗಿತ್ತು. ಅಷ್ಟರಲ್ಲಿ ಏಕಾಏಕಿ ತಡೆಗೋಡೆ ಒಡೆದು ರಸ್ತೆ ನಿರ್ಮಾಣ ಮಾಡಿದ್ದಾರೆ ಎಂದು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.
ಸ್ಥಳೀಯ ರಾಜಕೀಯ ಮುಖಂಡನೊಬ್ಬ ಏ.3ರಂದು ಜೆಸಿಬಿ ತರಿಸಿಯಾರ ಅನುಮತಿ ಪಡೆಯದೇ ತಡೆಗೋಡೆ ಒಡೆದಿದ್ದಾನೆ. ಇದು ಗ್ರಾಪಂನ ಸಿಸಿ ಕ್ಯಾಮರಾಗಳಲ್ಲಿಯೂ ಸೆರೆ ಯಾಗಿದೆ. ದೂರು ಪಡೆದಿರುವ ಪೊಲೀಸರೂ ಈ ಬಗ್ಗೆ ಮೌನವಹಿಸಿದ್ದು, ಸಾûಾಧಾರ ಗಳಿದ್ದರೂ ಯಾವುದೇ ಕ್ರಮಕೈಗೊಳ್ಳದೆ ರಾಜಕೀಯ ಪ್ರಭಾವಕ್ಕೆ ಒಳಗಾಗಿ ಕಾಲಹರಣ ಮಾಡುತ್ತಿದ್ದಾರೆ.
ರಾಜಕೀಯ ಮುಖಂಡ ನೊಬ್ಬ ಈ ರೀತಿ ಸರ್ಕಾರಿ ಆಸ್ತಿಪಾಸ್ತಿ ನಷ್ಟ ಉಂಟುಮಾಡಿರುವ ಬಗ್ಗೆ ಸ್ಥಳೀಯ ಜನರು ಆಕ್ರೋಶ ವ್ಯಕ್ತಪಡಿಸಿದ್ದು, ಈ ಬಗ್ಗೆ ಕ್ರಮಕೈಗೊಳ್ಳದ ಪೊಲೀಸ್ ಇಲಾಖೆ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿ ಇದ್ದಾಗಿಯೂ ಏಕಾಏಕಿ ತಡೆಗೋಡೆ ಒಡೆದು ರಸ್ತೆ ನಿರ್ಮಿಸಿರುವುದು ಅಕ್ರಮ. ಈ ಬಗ್ಗೆ ಇನ್ನಾದರೂ ಪೊಲೀಸರು ಕ್ರಮ ಕೈಗೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Name Road Row: ಮೈಸೂರಿನ ರಸ್ತೆಗೆ ನಾಮಕರಣ ವಿಚಾರ; ಗೊಂದಲಗಳಿಗೆ ತೆರೆ ಎಳೆದ ಸಿಎಂ
Hunsur: ಕಬಿನಿ ಹಿನ್ನೀರಿನಲ್ಲಿ ನೀರು ನಾಯಿಗಳ ಚೆಲ್ಲಾಟ… ಸಫಾರಿಗರು ಖುಷ್
Hunsur: ಹುಲಿ ದಾಳಿಯಿಂದ ಹಸುವಿಗೆ ಗಾಯ
Mysuru: ರಸ್ತೆಗೆ ರಾಜಮನೆತನದ ಹೆಸರು ತೆಗೆದು ಸಿಎಂ ಹೆಸರಿಡುವುದಿಲ್ಲ: ಶಾಸಕ ಹರೀಶ್ ಗೌಡ
Hunasuru: ಬೊಲೆರೋ ವಾಹನಕ್ಕೆ ಡಿಕ್ಕಿ ಹೊಡೆದು ನದಿಗೆ ಬಿದ್ದ ಬೈಕ್ ಸವಾರ ಸ್ಥಳದಲ್ಲೇ ಮೃತ್ಯು
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.