ಬನ್ನೂರಿಗೆ 30 ಹಾಸಿಗೆಯುಳ್ಳ ಹೆರಿಗೆ ಆಸ್ಪತ್ರೆ ಮಂಜೂರು
Team Udayavani, Jun 20, 2017, 12:54 PM IST
ತಿ.ನರಸೀಪುರ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ರಾಜ್ಯ ಸರ್ಕಾರ ಭ್ರಷ್ಟಚಾರ ಮುಕ್ತ ಹಾಗೂ ಕಳಂಕರಹಿತವಾಗಿ ನಾಲ್ಕು ವರ್ಷಗಳ ಆಡಳಿತ ಯಶಸ್ವಿಯಾಗಿ ಪೂರೈಸಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಡಾ.ಹೆಚ್.ಸಿ.ಮಹದೇವಪ್ಪ ಹೇಳಿದರು.
ತಾಲೂಕಿನ ಹೊರಳಹಳ್ಳಿ ಫಾರಂನಲ್ಲಿ ನಡೆದ ಸೋಸಲೆ ಮೊರಾರ್ಜಿ ವಸತಿ ಶಾಲೆ ಕಟ್ಟಡ ಶಂಕುಸ್ಥಾಪನೆ ಸಮಾರಂಭದಲ್ಲಿ ಬನ್ನೂರು ಕಸ್ತೂರಬಾ ಗಾಂಧಿ ವಸತಿ ಶಾಲೆಯ ವಿದ್ಯಾರ್ಥಿನಿಯರಿಗೆ ಉಚಿತ ಸಮವಸ್ತ್ರ ಮತ್ತು ಪಠ್ಯ ಪುಸ್ತಕಗಳನ್ನು ವಿತರಿಸಿ ಮಾತನಾಡಿ, ನುಡಿದಂತೆ ನಡೆಯುವ ಮೂಲಕ ಚುನಾವಣೆ ಪೂರ್ವದಲ್ಲಿ ನೀಡಿದ್ದ ಭರವಸೆಗಳೆಲ್ಲವನ್ನೂ ಈಡೇರಿಸಿದ ಕೀರ್ತಿ ಸಿಎಂ ಸಿದ್ದರಾಮಯ್ಯರಿಗೆ ಸಲ್ಲುತ್ತದೆ ಎಂದರು.
ಲೋಕೋಪಯೋಗಿ ಇಲಾಖೆ ಖಾತೆ ವಹಿಸಿಕೊಂಡ ನಂತರ ರಾಜ್ಯದ ರಸ್ತೆಗಳ ಅಭಿವೃದ್ಧಿಯಲ್ಲಿ ಹೊಸದೊಂದು ಮೈಲಿಗಲ್ಲು ಆಗಿರುವ ಬಗ್ಗೆ ಜನರೇ ಹೇಳುತ್ತಿದ್ದಾರೆ. ಉಸ್ತುವಾರಿ ಸಚಿವರಾಗಿ ಅಧಿಕಾರ ವಹಿಸಿಕೊಂಡ ನಂತರ ಜಿಲ್ಲೆಯ ಅಭಿವೃದ್ಧಿಗೂ ವೇಗ ನೀಡಲಾಗಿದೆ. ಪತ್ತೆಹಚ್ಚಿ ರೈತಪರ ಮತ್ತು ಬಡವರ ವಾದ ಯೋಜನೆಗಳನ್ನು ಮಂಜೂರು ಮಾಡಲಿಕ್ಕೆ ನಿಷ್ಠೆಯಿಂದ ದುಡಿಯುತ್ತಿದ್ದೇನೆ. ಬನ್ನೂರು ಪಟ್ಟಣಕ್ಕೆ 30 ಹಾಸಿಗೆಯುಳ್ಳ ಹೆರಿಗೆ ಆಸ್ಪತ್ರೆ ಮಂಜೂರು ಮಾಡಲಾಗಿದೆ ಎಂದು ತಿಳಿಸಿದರು.
ತಾಪಂ ಅಧ್ಯಕ್ಷ ಸಿ.ಚಾಮೇಗೌಡ ಮಾತನಾಡಿ, ಸಚಿವ ಡಾ.ಹೆಚ್.ಸಿ.ಮಹದೇವಪ್ಪ ನೂರಾರು ಶಾಶ್ವತ ಯೋಜನೆಗಳ ಮೂಲಕ ಸಾವಿರಾರು ಕೋಟಿ ರೂಗಳ ಅನುದಾನವನ್ನು ಪûಾತೀತ ಹಾಗೂ ಜಾತ್ಯತೀಯ ಭಾವನೆಯಿಂದ ನರಸೀಪುರದ ಅಭಿವೃದ್ಧಿಗೆ ಮಂಜೂರು ಮಾಡಿದ್ದಾರೆ. ಮುಂದಿನ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಸಿಎಂ ಅಭ್ಯರ್ಥಿ ಎಂದೇ ಬಿಂಬಿತರಾಗಿರುವ ಮಹದೇವಪ್ಪರ ಕೈ ಬಲಪಡಿಸುವ ಕೆಲಸವನ್ನು ಎಲ್ಲ ವರ್ಗದ ಜನರು ಮಾಡಬೇಕು ಮನವಿ ಮಾಡಿದರು.
ಕಾಂಗ್ರೆಸ್ ಯುವ ಮುಖಂಡ ಸುನೀಲ್ ಬೋಸ್, ಮಾಜಿ ಶಾಸಕ ಎಸ್.ಕೃಷ್ಣಪ್ಪ, ಜಿಪಂ ಸದಸ್ಯರಾದ ಮಂಗಳ ಮಹದೇವಸ್ವಾಮಿ, ಟಿ.ಹೆಚ್.ಮಂಜುನಾಥನ್, ತಾಪಂ ಉಪಾಧ್ಯಕ್ಷೆ ಸುಂದರಮ್ಮ, ಗ್ರಾಪಂ ಅಧ್ಯಕ್ಷೆ ಚೆನ್ನಮ್ಮ, ಉಪಾಧ್ಯಕ್ಷೆ ಮಂಜುಳ ಷಡಕ್ಷರಿ, ಪಿಕಾರ್ಡ್ ಬ್ಯಾಂಕ್ ಅಧ್ಯಕ್ಷ ಕೆ.ವಜ್ರೆàಗೌಡ, ತಾಪಂ ಸದಸ್ಯರಾದ ಆರ್.ಚಲುವರಾಜು, ರಾಮಲಿಂಗಯ್ಯ, ಕುಮುದ, ಕೆ.ಎಸ್.ಗಣೇಶ್,
ಶಿವಮ್ಮ ಮಹದೇವ, ಮಾಜಿ ಅಧ್ಯಕ್ಷ ಎಂ.ಮಲ್ಲಿಕಾರ್ಜುನಸ್ವಾಮಿ, ಕೆಪಿಸಿಸಿ ಉಪಾಧ್ಯಕ್ಷ ಹೊನ್ನನಾಯಕ, ಎಸ್ಸಿ/ಎಸ್ಟಿ ಹಿತರಕ್ಷಣಾ ಸಮಿತಿ ಸೋಸಲೆ ಮಹದೇವಸ್ವಾಮಿ, ಮೃಗಾಲಯ ಪ್ರಾಧಿಕಾರ ನಿರ್ದೇಶಕಿ ಲತಾ ಜಗದೀಶ್, ಕಿಯೋನಿಕ್ಸ್ ನಿರ್ದೇಶಕ ಉಕ್ಕಲಗೆರೆ ಬಸವಣ್ಣ, ಎಪಿಎಂಸಿ ಉಪಾಧ್ಯಕ್ಷ ಮಹದೇವಯ್ಯ, ಮಾಜಿ ಅಧ್ಯಕ್ಷ ಕಗ್ಗಲೀಪುರ ಎಂ.ರಾಜು, ಗುತ್ತಿಗೆದಾರರಾದ ಹೊಸಪುರ ಕೆ.ಮಲ್ಲು,
ಗಿರಿರಾಜ್, ಪ್ರಾಂಶುಪಾಲ ಹೆಚ್.ವಿ.ಹೇಮಕುಮಾರ, ಗ್ರಾಪಂ ಸದಸ್ಯರಾದ ಉಕ್ಕಲಗೆರೆ ರಾಜು, ಶ್ರೀನಿವಾಸಮೂರ್ತಿ, ಮಾಜಿ ಅಧ್ಯಕ್ಷ ಅಕ್ಕೂರು ಮಹೇಶ, ತಹಶೀಲ್ದಾರ್ ಬಿ.ಶಂಕರಯ್ಯ, ಕಾರ್ಯನಿರ್ವಹಕ ಅಧಿಕಾರಿ ಬಿ.ಎಸ್.ರಾಜು, ಲೋಕೋಪಯೋಗಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಆರ್.ವಿನಯ್‌ಕುಮಾರ್, ಜಿಪಂ ಎಇಇ ಎಸ್.ಸಿದ್ದರಾಜು, ಕ್ಷೇತ್ರ ಶಿಕ್ಷಣಾಧಿಕಾರಿ ಮರಿಸ್ವಾಮಿ, ಸಿಆರ್‌ಸಿ ಸೋಸಲೆ ನಾಗೇಶ್,
ಸಿಡಿಪಿಒ ಬಿ.ಎನ್.ಬಸವರಾಜು, ಸರ್ಕಾರಿ ನೌಕರರ ಸಂಘದ ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ, ಮುಖಂಡರಾದ ಪ್ರೇಮ್‌ಕುಮಾರ್, ಹದಿನಾರು ಶಿವಕುಮಾರ್, ಹೊರಳಹಳ್ಳಿ ಷಡಕ್ಷರಿ, ಎ.ಶಿವಕುಮಾರ್(ಬಡ್ಡು), ಎಂ.ಬಿ.ಚಂದ್ರಶೇಖರ, ಲಕ್ಷ್ಮೀನಾರಾಯಣ, ಶ್ರೀಕಾಂತ್, ನವೀನ್ ಬೋಸ್, ಪಿಎ ಬಸವರಾಜು, ಕೆಬ್ಬೆಹುಂಡಿ ಮಹೇಶ, ಕಲಿಯೂರು ಶಿವಣ್ಣ, ಹಾಗೂ ಇನ್ನಿತರರು ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.